ಈ 5 ರಾಶಿಯ ಹುಡುಗಿಯರು ಗಂಗೆಯಂತೆ ಪವಿತ್ರವಾಗಿರುತ್ತಾರೆ

0

ಗಂಗೆಯಷ್ಟು ಪರಮ ಪವಿತ್ರವಾದ ನದಿ ಇನ್ನೊಂದಿಲ್ಲ. ಗಂಗೆಯಲ್ಲಿ ಏನೇ ಹಾಕಿದರೂ ಅದು ಪ್ರಸಾದಕ್ಕೆ ಸಮವಾಗುತ್ತದೆ ಎನ್ನುವುದು ನಮ್ಮ ನಂಬಿಕೆಯಾಗಿದೆ. ಗಂಗಾ ಸ್ನಾನಕ್ಕೆ ಸಮವಾದ ಇನ್ನೊಂದು ಆಚರಣೆ ಇಲ್ಲ‌. ಗಂಗೆಯೆಂದರೆ ಅಷ್ಟು ಪುನೀತ ಭಾವ ನಮಗಿದೆ. ಪವಿತ್ರವಾದ ಎಲ್ಲ ವಸ್ತುಗಳನ್ನು, ಪವಿತ್ರ ಸ್ವರೂಪರಾದ ಮನುಷ್ಯರನ್ನು ನಾವು ಗಂಗೆಗೆ ಹೋಲಿಸಿ ಮಾತಾನಾಡುತ್ತೇವೆ. ಅಂತಹ ಪರಮ ಪವಿತ್ರ ಜಾತಕವನ್ನು ಯಾರು ಹೊಂದಿರುತ್ತಾರೋ ಅವರು ಬಹಳ ಅದೃಷ್ಟವಂತರಾಗುತ್ತಾರೆ.

ನಾವು ಹೆಣ್ಣನ್ನು ಲಕ್ಷ್ಮೀ ದೇವಿಯಂತೆ ಕಾಣುತ್ತೇವೆ. ಹೆಣ್ಣಿನ ಮನಸ್ಸು ಗಂಗೆಯಷ್ಟೇ ಪವಿತ್ರ ಹಾಗೂ ಗಂಗೆಯಂತೆ ವಿಶಾಲವಾಗಿ ಇರಲಿ ಎಂದು ಬಯಸುತ್ತೇವೆ. ಇಂತಹ ಹೆಣ್ಣನ್ನು ಸಂಗಾತಿಯಾಗಿ ಪಡೆಯುವುದು ಸಹ ಅದೃಷ್ಟವೇ ಆಗಿದೆ. ಮನಸ್ಸಿನಲ್ಲಿ ಚೂರು ಕಲ್ಮಷವನ್ನು ಇಟ್ಟುಕೊಳ್ಳದೆ ಎಲ್ಲರನ್ನು ತನ್ನವರೆಂದು ಕಾಣುವ ಮನಸ್ಥಿತಿ ಹೊಂದಿರುವುದು ಸಣ್ಣ ಮಾತಲ್ಲ. ಅಂತಹ ಹೆಣ್ಣು ಅಪರೂಪದಲ್ಲಿ ಅಪರೂಪವಾಗಿದೆ. ಅಂತಹ ಹೆಣ್ಣುಮಕ್ಕಳು ಯಾವ ರಾಶಿಯಲ್ಲಿ ಜನಿಸುತ್ತಾರೆ ಎನ್ನುವುದನ್ನು ತಿಳಿಸುತ್ತೇನೆ ಬನ್ನಿ.

ಗಂಗೆಯಷ್ಟೇ ಶುಭ್ರವಾಗಿ ಇರುವಂತರು ಈ ಐದು ರಾಶಿಯಲ್ಲಿ ಹುಟ್ಟಿದಂತಹ ಹೆಣ್ಣು ಮಕ್ಕಳು‌. ಇವರಿಗೆ ಕಪಟವೆನ್ನುವುದು ತಿಳಿದಿರುವುದಿಲ್ಲ‌. ಇವರು ಸದಾ ಕಾಲಾ ಇನ್ನೊಬ್ಬರ ಒಳಿತನ್ನೇ ಬಯಸುತ್ತಾರೆ. ಕಷ್ಟಗಳು ಏನೇ ಬರಲಿ ಅವೆಲ್ಲವು ತಮಗೆ ಇರಲಿ ಎಂದುಕೊಳ್ಳುವ ಚಿನ್ನದಂತಹ ಹುಡುಗಿಯರು ಈ ರಾಶಿಯವರು. ಇವರಿಂದ ಯಾರಿಗೂ ಸಹ ತೊಂದರೆಯಾಗುವುದಿಲ್ಲ. ಇವರು ತಮ್ಮ ಪಾಡಿಗೆ ಇರುವಂತವರು. ಇವರು ಎಲ್ಲರನ್ನು ಪ್ರೀತಿಯಿಂದ ಕಾಣುತ್ತಾರೆ.

ಈ ಐದು ರಾಶಿಯಲ್ಲಿ ಹುಟ್ಟಿದಂತಹ ಹೆಣ್ಣುಮಕ್ಕಳಿಗೆ ಮೋಸ ವಂಚನೆಗಳೆಂದರೆ ಏನೆಂಬುದೇ ತಿಳಿದಿರುವುದಿಲ್ಲ. ಹಾಲಿನಷ್ಟು ಪರಿಶುದ್ಧವಾದ ಮನಸ್ಸಿನವರು ಇವರು. ಇವರು ಸೇರಿದ ಮನೆಯು ನಂದಗೋಕುಲದಂತೆ ಸದಾ ನಗುವಿನಿಂದ ಕೂಡಿರುತ್ತದೆ. ಇಂತಹ ಹೆಣ್ಣು ಮನೆಯ ಸೊಸೆಯಾಗುವುದಕ್ಕೂ ಮನೆಯವರು ಪುಣ್ಯ ಮಾಡಬೇಕಿರುತ್ತದೆ. ಹಾಗಿದ್ದರೆ ಆ ಐದು ರಾಶಿಗಳು ಯಾವವು ಎಂದು ತಿಳಿಯೋಣವೇ?

ಮೊದಲನೆಯದಾಗಿ ಮೇಷ ರಾಶಿ. ಇವರು ಸತ್ಯಪ್ರಿಯರು. ಯಾವುದೇ ಕಾರಣಕ್ಕೂ ಇವರು ಸುಳ್ಳನ್ನು ಹೇಳುವುದಿಲ್ಲ. ಇವರಿಗೆ ಸುಳ್ಳನ್ನು ಕಂಡರೆ ಆಗುವುದಿಲ್ಲ. ಇವರು ಹೇಗಾದರೂ ಮಾಡಿ ಸತ್ಯಕ್ಕೆ ಜಯ ಸಿಗುವಂತೆ ಮಾಡುತ್ತಾರೆ. ಎರಡನೇಯದು ಮಿಥುನ ರಾಶಿ. ಮಿಥುನ ರಾಶಿಯವರು ಬಹಳ ಪ್ರಾಮಾಣಿಕರು. ಇವರು ಪ್ರೀತಿಯಲ್ಲಿ ಬಹಳ ನಿಷ್ಠೆಯಿಂದ ಇರುತ್ತಾರೆ‌. ಹಾಗಾಗಿ ಇವರ ಪ್ರೀತಿಯನ್ನು ಪಡೆದವರು ಅದೃಷ್ಟವಂತರು ಎನ್ನಬಹುದು.

ಮೂರನೆಯದಾಗಿ ಕುಂಭರಾಶಿ. ಇವರು ಸಂಗಾತಿಯೊಂದಿಗೆ ಯಾವುದನ್ನು ಮುಚ್ಚಿ ಇಡುವುದಿಲ್ಲ. ಹಾಗಾಗಿ ಈ ರಾಶಿಯವರೊಂದಿಗೆ ಮದುವೆಯಾದಲ್ಲಿ ವಿವಾಹ ನಂತರದ ಜೀವನವು ಬಹಳ ಸುಖಕರವಾಗಿರುತ್ತದೆ. ಇವರು ಯಾರನ್ನು ನೋಯಿಸುವುದಿಲ್ಲ. ಮುಂದಿನದು ವೃಶ್ಚಿಕ ರಾಶಿ. ಇವರು ಬಹಳ ಒಳ್ಳೆಯ ಮನಸ್ಸಿನವರು. ಇವರಿಂದ ಯಾರಿಗೂ ನೋವು ಸಿಗುವುದಿಲ್ಲ. ಇವರು ತಮ್ಮ ಪ್ರೀತಿಗಾಗಿ ಎಷ್ಟು ವರ್ಷ ಬೇಕಾದರೂ ಕಾಯುತ್ತಾರೆ ವಿನಃ ಬೇರೆಯವರನ್ನು ಮದುವೆಯಾಗುವುದಿಲ್ಲ.

ಐದನೆಯದು ಮಕರ ರಾಶಿ. ಮಕರ ರಾಶಿಯಲ್ಲಿ ಜನಿಸಿದವರ ಮಾತುಗಳು ಬಹು ಮೃದುವಾಗಿರುತ್ತದೆ. ಇವರು ತಮ್ಮ ಸುತ್ತಲಿನವರಿಗೆ ನೋವಾದರೂ ಅದು ತಮಗೆ ನೋವಾದಂತೆ ಭಾವಿಸುತ್ತಾರೆ. ಹಾಗೂ ಇವರಿಗೆ ಬೇರೆಯವರನ್ನು ನೋಯಿಸುವಂತೆ ಮಾತನಾಡಲೂ ಬರುವುದಿಲ್ಲ. ಎಲ್ಲರನ್ನು ಒಂದೇ ರೀತಿಯಿಂದ ನೋಡುತ್ತಾರೆ. ಇವರು ತಾವು ಪ್ರೀತಿಸುವವರ ಬೆಂಬಲಕ್ಕೆ ಸದಾ ನಿಲ್ಲುತ್ತಾರೆ. ಎಂದಿಗೂ ಪ್ರೀತಿಸುವವರನ್ನು ಬಿಟ್ಟು ಹೋಗುವುದಿಲ್ಲ.

ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ ಫೋನಿನ ಮೂಲಕ ಪರಿಹಾರ 9880444450 ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 600 ವರ್ಷಗಳ ಹಳೆಯ 108 ಜ್ಯೋತಿಷ್ಯ ಮಂತ್ರಗಳಿಂದ, ಮದುವೆ ಸಂತಾನ, ದಾಂಪತ್ಯ, ಪ್ರೇಮ ವಿಚಾರ, ಮಾನಸಿಕ, ಗೃಹಶಾಂತಿ, ವಿದ್ಯೆ, ಅರೋಗ್ಯ, ವಿದೇಶ ಪ್ರಯಾಣ, ಹಣಕಾಸು, ವ್ಯಾಪಾರ ಉದ್ಯೋಗ, ಕೋರ್ಟ್ ಕೇಸು, ಸಾಲಬಾದೆ, ಮಾಟಬಾದೆ, ಶತೃಕಾಟ, ಅಷ್ಟೇ ಅಲ್ಲದೆ ರಾಜಯೋಗ ವಶ, ಅಖಂಡ ರಾಜಯೋಗವಶಗಳು ಇನ್ನಿತರ ಕಠಿಣ ನಿಗೂಢ ಹಾಗೂ ಗುಪ್ತ ಸಮಸ್ಯೆಗಳಿಗೆ ಸಲಹೆ ಮತ್ತು ಪರಿಹಾರ ಶತಸಿದ್ಧ.ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ 9880444450 ಮೈಸೂರ್ ಸರ್ಕಲ್ (ಸಿರ್ಸಿ ಸರ್ಕಲ್) ಚಾಮರಾಜಪೇಟೆ ಬೆಂಗಳೂರು

Leave A Reply

Your email address will not be published.

error: Content is protected !!