ಈ ಸಿನಿಮಾ ನಟಿಯರ ನಿಜವಾದ ಹೆಸರೇನು ಗೋತ್ತಾ? ನೀವು ತಿಳಿಯದ ರಿಯಲ್ ಹೆಸರು ಇಲ್ಲಿದೆ

0

ಸಿನಿಮಾಗಳಲ್ಲಿ ನಟಿಸುವ ಸ್ಟಾರ್ ನಟ ನಟಿಯರ ಬಗ್ಗೆ ತಿಳಿದುಕೊಳ್ಳುವ ಕುತೂಹಲ ಸಾಮಾನ್ಯವಾಗಿ ಕಲಾಭಿಮಾನಿಗಳಲ್ಲಿ ಇರುತ್ತದೆ. ಕೆಲವು ನಟಿಯರ ನಿಜವಾದ ಹೆಸರಿನ ಬಗ್ಗೆ ಈ ಲೇಖನದ ಮೂಲಕ ತಿಳಿಯೋಣ.

ಚಿತ್ರರಂಗದಲ್ಲಿ ಅನೇಕ ಸ್ಟಾರ್ ನಟಿಯರು ಹಲವು ಸಿನಿಮಾಗಳಲ್ಲಿ ನಟಿಸಿ ಜನರ ಮನಸನ್ನು ಗೆದ್ದಿದ್ದಾರೆ. ಅವರ ನಿಜವಾದ ಹೆಸರನ್ನು ತಿಳಿದುಕೊಳ್ಳುವ ಕುತೂಹಲ ಸಾಮಾನ್ಯವಾಗಿ ಎಲ್ಲಾ ಸಿನಿ ಪ್ರಿಯರಿಗೂ ಇರುತ್ತದೆ. ಕಲ್ಪನಾ ಅವರು ತಮ್ಮ ನಟನೆಯಿಂದ ಅಭಿಮಾನಿ ಬಳಗವನ್ನು ಹೊಂದಿದ್ದಾರೆ, ಅವರ ನಿಜವಾದ ಹೆಸರು ಶರತ್ ಲತಾ. ಹೆಸರಿನಂತೆ ಸುಂದರವಾಗಿರುವ ಸೌಂದರ್ಯ ಅವರ ಹೆಸರು ಸೌಮ್ಯ ಸತ್ಯನಾರಾಯಣ್. ಕುರುಬನ ರಾಣಿ ಸಿನಿಮಾದ ನಟಿ ನಗ್ಮಾ ಅವರ ಹೆಸರು ನಂದಿತಾ ಅರವಿಂದ್ ಮೊರಾರ್ಜಿ.

ಸ್ನೇಹ ಅವರ ಹೆಸರು ಸುಹಾಸಿನಿ ರಾಜಾರಾಂ ನಾಯ್ಡು. ರಾಜಕುಮಾರ್ ಅವರ ಜೊತೆ ಅನೇಕ ಸಿನಿಮಾಗಳಲ್ಲಿ ನಟಿಸಿದ ಮಾಧವಿ ಅವರ ಹೆಸರು ವಿಜಯಲಕ್ಷ್ಮಿ. ಸಿಲ್ಕ್ ಸ್ಮಿತಾ ಅವರ ಹೆಸರು ವಿಜಯಲಕ್ಷ್ಮಿ. ಪುನೀತ್ ಅವರ ಸಿನಿಮಾದಲ್ಲಿ ಅಮ್ಮನ ಪಾತ್ರ ಮಾಡಿದ ರೋಜಾ ಅವರ ಹೆಸರು ಶ್ರೀ ಲತಾ. ಸುಂಟರಗಾಳಿ ಸಿನಿಮಾ ಖ್ಯಾತಿಯ ರಕ್ಷಿತಾ ಅವರ ಹೆಸರು ಶ್ವೇತಾ. ಧಾರಾವಾಹಿಯಿಂದ ಸಿನಿಮಾ ಲೋಕಕ್ಕೆ ಕಾಲಿಟ್ಟ ರಚಿತಾ ರಾಮ್ ಅವರ ಹೆಸರು ಬಿಂದಿಯಾ ರಾಮ್. ದೀಪಾ ಸನ್ನಿಧಿ ಅವರ ಹೆಸರು ರಹಸ್ಯ. ಮುಂಗಾರು ಮಳೆ ಸಿನಿಮಾದಿಂದ ಚಿತ್ರರಂಗಕ್ಕೆ ಎಂಟ್ರಿ ನೀಡಿದ ಪೂಜಾ ಗಾಂಧಿ ಅವರ ಹೆಸರು ಸಂಜನಾ ಗಾಂಧಿ. ಸಿನಿಮಾ ಹಾಗೂ ರಾಜಕೀಯದಲ್ಲಿ ಗುರುತಿಸಿಕೊಂಡ ರಮ್ಯಾ ಅವರ ಹೆಸರು ದಿವ್ಯ ಸ್ಪಂದನ.

ದರ್ಶನ್ ಅವರ ಸಿನಿಮಾಗಳಲ್ಲಿ ಮಿಂಚಿದ ನವ್ಯಾ ನಾಯರ್ ಅವರ ಹೆಸರು ಧಾನ್ಯ ವೀಣಾ. ಮೋಹಿನಿ ಅವರ ಹೆಸರು ಮಹಾಲಕ್ಷ್ಮಿ. ಕೆಲವು ಸಿನಿಮಾಗಳಲ್ಲಿ ನಟಿಸಿ ಫೇಮಸ್ ಆದ ಭಾಮಾ ಅವರ ಹೆಸರು ರೇಖಿತ ರಾಜೇಂದ್ರ ಕೃಪ. ಭಾವನ ಅವರ ಹೆಸರು ಕಾರ್ತಿಕ ಮೆನನ್. ಪಂಚ ಭಾಷಾ ನಟಿ ಪ್ರಿಯಾಮಣಿ ಅವರ ಹೆಸರು ಪ್ರಿಯಾ ವಾಸುದೇವ್ ಮನಿಯ್ಯರ್. ಕನ್ನಡದ ಅನೇಕ ಸಿನಿಮಾಗಳಲ್ಲಿ ಕಾಣಿಸಿಕೊಂಡ ನಟಿ ಮೀರಾ ಜಾಸ್ಮಿನ್ ಅವರ ಹೆಸರು ಜಾಸ್ಮಿನ್ ಮೇರಿ ಜೋಸೆಫ್. ಟಗರು ಸಿನಿಮಾ ನಟಿ ಮಾನ್ವಿತಾ ಹರೀಶ್ ಅವರ ಹೆಸರು ಶ್ವೇತಾ ಕಾಮತ್.

ಹರಿಪ್ರಿಯಾ ಅವರ ಹೆಸರು ಶ್ರುತಿ. ತಮ್ಮ ಭಾವನಾತ್ಮಕ ನಟನೆಯಿಂದ ಜನರನ್ನು ಗೆದ್ದ ಶ್ರುತಿ ಅವರ ಹೆಸರು ಗಿರಿಜಾ. ಲೇಡಿ ಟೈಗರ್ ನಂತೆ ಸಿನಿಮಾಗಳಲ್ಲಿ ಘರ್ಜಿಸಿದ ಮಾಲಾಶ್ರೀ ಅವರ ಹೆಸರು ಶ್ರೀ ದುರ್ಗಾ. ರೇಖಾ ವೇದವ್ಯಾಸ್ ಅವರ ಹೆಸರು ಅಕ್ಷರಾ. ಚೆಲುವಿನ ಚಿತ್ತಾರದ ಬೆಡಗಿ ಅಮೂಲ್ಯ ಅವರ ಹೆಸರು ಮೌಲ್ಯ. ಅಧಿತಿ ಪ್ರಭು ಅವರ ಹೆಸರು ಸುಧಿಪನ. ಒವೀಯ ಅವರ ಹೆಸರು ಹೆಲೆನ್ ನೆಲ್ಸನ್. ನಿಮ್ಮ ಮೆಚ್ಚಿನ ನಟಿಯರ ನಿಜವಾದ ಹೆಸರುಗಳನ್ನು ತಿಳಿಯಿರಿ.

Leave A Reply

Your email address will not be published.

error: Content is protected !!