ಒಬ್ಬ ಮನುಷ್ಯನಿಗೆ ಗಾಳಿ, ನೀರು, ಆಹಾರ ಎಷ್ಟು ಮುಖ್ಯವೊ ತನ್ನ ವಂಶ ಮುಂದುವರೆಯುವುದು ಕೂಡ ಅಷ್ಟೆ ಮುಖ್ಯವಾಗಿರುತ್ತದೆ. ಮದುವೆಯಾದ ದಂಪತಿಗಳಿಗೆ ಎಷ್ಟು ವರ್ಷವಾದರೂ ಮಕ್ಕಳಾಗುವುದಿಲ್ಲ ಇದಕ್ಕೆ ಕಾರಣ ಕೇವಲ ಮಹಿಳೆಯಲ್ಲ, ಪುರುಷರಲ್ಲಿ ವೀರ್ಯ ಸಮಸ್ಯೆ ಕಂಡುಬಂದರೂ ಮಕ್ಕಳಾಗುವುದಿಲ್ಲ. ಹಾಗಾದರೆ ವೀರ್ಯ ಸಮಸ್ಯೆಗೆ ಕೆಲವು ಮನೆಮದ್ದು ಹಾಗೂ ಸಲಹೆಗಳನ್ನು ಈ ಲೇಖನದ ಮೂಲಕ ತಿಳಿಯೋಣ.
ಮದುವೆಯಾಗಿ ಬಹಳ ವರ್ಷಗಳಾದರೂ ಮಕ್ಕಳು ಆಗದೆ ಇದ್ದರೆ ಹೆಣ್ಣನ್ನು ಸಮಾಜ ಬಂಜೆ ಎಂದು ದೂಷಿಸುತ್ತದೆ ಆದರೆ ಇದರಲ್ಲಿ ಪುರುಷರ ಪಾತ್ರವೂ ಮುಖ್ಯವಾಗಿದೆ. ಇತ್ತೀಚಿನ ದಿನಗಳಲ್ಲಿ ಆಧುನಿಕ ಜೀವನ ಶೈಲಿ, ಆಹಾರ ಪದ್ಧತಿಯಿಂದಾಗಿ ಪುರುಷರಲ್ಲಿ ವೀರ್ಯ ಕಡಿಮೆಯಾಗಿ ಇನಪರ್ಟಿಲಿಟಿಗೆ ಹೊಡೆತ ಬೀಳುತ್ತಿದೆ ಇದರಿಂದಾಗಿ ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ದಾಂಪತ್ಯ ಜೀವನದಲ್ಲಿ ನೆಮ್ಮದಿ ಇಲ್ಲದಂತಾಗುತ್ತದೆ. ಕೆಲವೊಮ್ಮೆ ವಿಚ್ಛೇದನ ಆಗುವ ಸಾಧ್ಯತೆಗಳಿರುತ್ತವೆ.
ಗೋಡಂಬಿ, ಬಾದಾಮಿ ಹಾಗೂ ಶೇಂಗಾದಲ್ಲಿ ಹೈ ಪ್ರೊಟೀನ್ ಹಾಗೂ ವಿಟಮಿನ್ಸ್ ಇರುವುದರಿಂದ ಆರೋಗ್ಯಕ್ಕೆ ಒಳ್ಳೆಯದು ಪುರುಷರಲ್ಲಿ ವೀರ್ಯ ಪ್ರಮಾಣವನ್ನು ಹೆಚ್ಚಿಸುತ್ತದೆ. ಗೋಡಂಬಿ, ಬಾದಾಮಿ ಹಾಗೂ ಶೇಂಗಾವನ್ನು ನೆನೆ ಹಾಕಿ ಜ್ಯೂಸ್ ರೀತಿ ಮಾಡಿ ಬೆಲ್ಲವನ್ನು ಸೇರಿಸಿ ಕುಡಿಯಬೇಕು. ಅಶ್ವಗಂಧ ಚೂರ್ಣವನ್ನು ಸಾಮಾನ್ಯವಾಗಿ ಎಲ್ಲರೂ ಕೇಳಿರುತ್ತಾರೆ.
ಅಶ್ವಗಂಧ ಚೂರ್ಣವನ್ನು ನರ ದೌರ್ಬಲ್ಯ, ವೀರ್ಯ ಕ್ಷೀಣತೆ ಮೊದಲಾದ ಸಮಸ್ಯೆಗಳಿಗೆ ಬಳಸಲಾಗುತ್ತದೆ. ಒಣ ಖರ್ಜೂರವನ್ನು ಹಾಲಿನೊಂದಿಗೆ ಮಿಶ್ರಣ ಮಾಡಿ ಕುಡಿಯಬೇಕು. ಬೆಲ್ಲ ಮತ್ತು ತುಪ್ಪದ ಸರಿಯಾಗಿ ಮಿಶ್ರಣ ಮಾಡಿ ಸೇವಿಸಬೇಕು. ಕೆಮಿಕಲ್ ಸೇರಿಸದ ಬೆಲ್ಲ ಹಾಗೂ ಹಸುವಿನ ಶುದ್ಧ ತುಪ್ಪವನ್ನು ಸೇವಿಸುವುದರಿಂದ ರಸಾಯನ ಚಿಕಿತ್ಸೆಯಾಗಿ ವೀರ್ಯ ವೃದ್ಧಿಯಾಗುತ್ತದೆ.
ಪ್ರತಿದಿನ ಒಂದು ಲೋಟ ಹಾಲನ್ನು ಕುಡಿಯಬೇಕು ಹಾಲು ಶುಕ್ರ ಅಂದರೆ ವೀರ್ಯವನ್ನು ವೃದ್ಧಿ ಮಾಡುವ ಶಕ್ತಿ ಹೊಂದಿದೆ. ಪ್ರತಿದಿನ ಪುರುಷರು ಹಾಲನ್ನು ಕುಡಿಯುವ ಪದ್ಧತಿಯನ್ನು ರೂಢಿಸಿಕೊಳ್ಳಬೇಕು. ಜಂಕ್ ಫುಡ್, ಬೇಕರಿ ಫುಡ್ ಗಳನ್ನು ಸೇವಿಸಬಾರದು. ಪೋಷಕಾಂಶಗಳು ಹೆಚ್ಚಿರುವ ಆಹಾರವನ್ನು ಸೇವಿಸಬೇಕು ಜೊತೆಗೆ ಮದ್ಯಪಾನ, ಧೂಮಪಾನ ಹಾಗೂ ಮಾದಕ ವಸ್ತುಗಳನ್ನು ಸೇವನೆ ಮಾಡಬಾರದು ಇದರಿಂದ ಆರೋಗ್ಯಕ್ಕೆ ಒಳ್ಳೆಯದಲ್ಲ. ಕೆಲವೊಮ್ಮೆ ಉತ್ತಮ ಆಹಾರವನ್ನು ಸೇವಿಸುತ್ತಿದ್ದರೂ ಅವರ ವೀರ್ಯ ಉತ್ಪತ್ತಿ ಮಾಡುವ ಜೀವಕೋಶಗಳ ಮೇಲೆ ಅವಲಂಬಿತವಾಗಿರುತ್ತದೆ.
ಥೈರಾಯ್ಡ್ ಸಮಸ್ಯೆ ಇರುವವರಿಗೆ ವೀರ್ಯ ಸಮಸ್ಯೆ ಕಂಡುಬರುತ್ತದೆ. ವೀರ್ಯ ಉತ್ಪತ್ತಿ ಮಾಡುವ ಹಾರ್ಮೋನ್ ಸಮಸ್ಯೆ ಇದ್ದರೂ ವೀರ್ಯ ಸಮಸ್ಯೆ ಕಂಡುಬರುತ್ತದೆ. ದಿನನಿತ್ಯ ತೆಗೆದುಕೊಳ್ಳುವ ಆಹಾರ, ದೈನಂದಿನ ಚಟುವಟಿಕೆಗಳನ್ನು ಕೂಡ ಅವಲಂಬಿಸಿದೆ. ಒಟ್ಟಿನಲ್ಲಿ ಉತ್ತಮ ಆಹಾರವನ್ನು ಸೇವಿಸುತ್ತಾ ಆರೋಗ್ಯವನ್ನು ಕಾಪಾಡಿಕೊಳ್ಳುವ ಮೂಲಕ ವೀರ್ಯವನ್ನು ಹೆಚ್ಚಿಸಿಕೊಳ್ಳಬೇಕು.