ಈ ನಟರಲ್ಲಿ ಯಾವ ನಟ ದುಬಾರಿ ಬೆಲೆಯ ಕಾರು ಹಾಗೂ ಮನೆ ಇದೆ ಗೊತ್ತಾ

0

ಮನೆ ಕಟ್ಟುವುದು ಬಹುತೇಕರ ಎಲ್ಲರ ಕನಸು. ದುಡ್ಡಿಗೆ ತಕ್ಕ ವಿಭಿನ್ನ ಮನೆಯನ್ನು ನಿರ್ಮಿಸಬಹುದು. ಚಿತ್ರ ನಟರ ಮನೆ ನೋಡಲು ಸುಂದರವಾಗಿ, ಭವ್ಯವಾಗಿರುತ್ತದೆ. ನಮ್ಮ ಸ್ಯಾಂಡಲ್ ವುಡ್ ನ ಸ್ಟಾರ್ ನಟರ ಮನೆಯ ಅಂದಾಜು ಬೆಲೆಯನ್ನು ಈ ಲೇಖನದಲ್ಲಿ ನೋಡೋಣ.

ಸ್ಯಾಂಡಲ್ ವುಡ್ ನ ಸ್ಟಾರ್ ನಟರಲ್ಲಿ ಯಾವ ನಟ ಅತ್ಯಂತ ದುಬಾರಿ ಮನೆಯನ್ನು ಹೊಂದಿದ್ದಾರೆ ಎಂಬುದನ್ನು ತಿಳಿಯುವ ಕುತೂಹಲ ಅಭಿಮಾನಿಗಳಲ್ಲಿ ಇರುತ್ತದೆ. ಪ್ರತಿಷ್ಠಿತ ಆಕಾಶ್ ರಿಯಲ್ ಎಸ್ಟೇಟ್ ಸಂಸ್ಥೆಯೊಂದು ಸ್ಯಾಂಡಲ್ ವುಡ್ ನಟರು ಹೊಂದಿರುವ ಮನೆಯ ಬಗ್ಗೆ ಸರ್ವೆ ಮಾಡಿದೆ. ಸರ್ವೆಯು ಮನೆಯ ಬೆಲೆ, ಮನೆ ಇರುವ ಏರಿಯಾ, ಮನೆಯನ್ನು ಯಾವ ರೀತಿ ಕಟ್ಟಲಾಗಿದೆ ಎಂಬುದಕ್ಕೆ ಸಂಬಂಧಿಸಿದೆ. ಕನ್ನಡ ಚಿತ್ರರಂಗದ 10 ಸ್ಟಾರ್ ನಟರ ಮನೆಯ ಸರ್ವೆ ಮಾಡಲಾಗಿದೆ.

ಕನ್ನಡ ಚಿತ್ರರಂಗದ ಕ್ರೇಜಿ ಸ್ಟಾರ್ ರವಿಚಂದ್ರನ್ ಅವರ ಮನೆಯ ಬೆಲೆ ಅಂದಾಜು 1.5 ಕೋಟಿ ರೂಪಾಯಿ ಆಗಿದೆ. ಭರ್ಜರಿ, ಅದ್ದೂರಿ ಸಿನಿಮಾ ಮೂಲಕ ಧೂಳೆಬ್ಬಿಸಿದ ಧ್ರುವ ಸರ್ಜಾ ಅವರ ಮನೆಯ ಬೆಲೆ 1.7 ಕೋಟಿ ರೂಪಾಯಿ. ಗೋಲ್ಡನ್ ಸ್ಟಾರ್ ಗಣೇಶ್ ಅವರು ಕನ್ನಡ ಚಿತ್ರರಂಗದ ಸ್ಟಾರ್ ನಟರಲ್ಲಿ ಒಬ್ಬರು. ಅವರ ಮನೆಯ ಅಂದಾಜು ಬೆಲೆ 2.4 ಕೋಟಿ ರೂಪಾಯಿ. ಕನ್ನಡ ಚಿತ್ರರಂಗದ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಕನ್ನಡ ಟಾಪ್ ನಟರಲ್ಲಿ ಒಬ್ಬರು, ಅವರ ಮನೆಯ ಅಂದಾಜು ಬೆಲೆ 2.5 ಕೋಟಿ ರೂಪಾಯಿ.

ಕನ್ನಡ ಚಿತ್ರರಂಗದಲ್ಲಿ ಕಿಚ್ಚ ಸುದೀಪ್ ಅವರು ಪ್ರಾಮುಖ್ಯತೆ ಹೊಂದಿದ ನಟರಾಗಿದ್ದಾರೆ. ಅವರ ಮನೆಯ ಅಂದಾಜು ಬೆಲೆ 3 ಕೋಟಿ ರೂಪಾಯಿ. ಪುನೀತ್ ಅವರು ಕನ್ನಡ ಚಿತ್ರರಂಗದ ಅಪ್ಪು ಎಂದೆ ಫೇಮಸ್ ಆಗಿದ್ದರು. ಅವರು ನಮ್ಮನ್ನು ಬಿಟ್ಟು ಅಗಲಿರುವುದು ಇವತ್ತಿಗೂ ದುಃಖ ತರುತ್ತದೆ. ಅವರು ಬೆಂಗಳೂರಿನಲ್ಲಿ ಭರ್ಜರಿ ಮನೆ ಕಟ್ಟಿದ್ದಾರೆ ಅವರ ಮನೆಯ ಅಂದಾಜು ಬೆಲೆ 3.8 ಕೋಟಿ ರೂಪಾಯಿ.

ಹ್ಯಾಟ್ರಿಕ್ ಹೀರೊ ಶಿವಣ್ಣ ಕನ್ನಡದ ಟಾಪ್ ನಟರಲ್ಲಿ ಇವರು ಕೂಡ ಒಬ್ಬರು ಇವರ ಮನೆಯ ಅಂದಾಜು ಬೆಲೆ 4.9 ಕೋಟಿ ರೂಪಾಯಿ. ರಿಯಲ್ ಸ್ಟಾರ್ ಉಪೇಂದ್ರ ಅವರು ವಿಭಿನ್ನ ಕಥೆಯನ್ನು ಇಟ್ಟುಕೊಂಡು ವಿಭಿನ್ನ ಶೈಲಿಯಲ್ಲಿ ನಟಿಸುತ್ತಾರೆ. ಅವರ ಮನೆಯ ಅಂದಾಜು ಬೆಲೆ 6 ಕೋಟಿ ರೂಪಾಯಿ. ಇಂದಿಗೂ ಅದೆ ಯಂಗ್ ಎಂಡ್ ಎನರ್ಜಿಟಿಕ್ ಆಗಿರುವ ರಮೇಶ್ ಅರವಿಂದ್ ಅವರ ಮನೆಯ ಅಂದಾಜು ಬೆಲೆ 6.5 ಕೋಟಿ ರೂಪಾಯಿ. ರಾಕಿಂಗ್ ಸ್ಟಾರ್ ಯಶ್ ಅವರ ಕನ್ನಡ ಚಿತ್ರರಂಗದ ಟಾಪ್ ನಟರಾಗಿದ್ದಾರೆ ಅವರು ಇತ್ತೀಚಿಗೆ ಮನೆಯನ್ನು ಖರೀದಿಸಿದ್ದಾರೆ ಮನೆಯ ಬೆಲೆ ಬರೋಬ್ಬರಿ 9 ಕೋಟಿ ರೂಪಾಯಿ. ಸ್ಯಾಂಡಲ್ ವುಡ್ ನ ಸ್ಟಾರ್ ನಟರ ಮನೆಯು ಬಹಳ ಸುಂದರವಾಗಿದೆ. ನಿಮಗೆ ಯಾವ ನಟರ ಮನೆ ಇಷ್ಟವಾಯಿತು ನೋಡಿ.

Leave A Reply

Your email address will not be published.

error: Content is protected !!