ಈರುಳ್ಳಿ ಅಡುಗೆಗೆ ಅಷ್ಟೇ ಅಲ್ಲ ಸಂಗಾತಿಯೊಂದಿಗೆ ಹೆಚ್ಚು ಸಮಯ ಕಳೆಯಲು ಕೂಡ ಸಹಕಾರಿ

0

ಅಡುಗೆಗೆ ಬಳಸುವ ಈರುಳ್ಳಿಯನ್ನು ಸೇವಿಸುವುದರಿಂದ ದೇಹಕ್ಕೆ ಆಗುವ ಹಲವು ಪ್ರಯೋಜನಗಳನ್ನು ಈ ಲೇಖನದ ಮೂಲಕ ತಿಳಿಯೋಣ. ಈರುಳ್ಳಿಯನ್ನು ಪ್ರತಿದಿನ ಅಡುಗೆಗೆ ಬಳಸುತ್ತಾರೆ. ಇದು ಅಡುಗೆಯ ರುಚಿಯನ್ನು ಹೆಚ್ಚಿಸುವುದಲ್ಲದೆ ಔಷಧೀಯ ಗುಣವನ್ನು ಹೊಂದಿದೆ. ಮಕ್ಕಳಿಗೆ ಕಾಡುವ ಕಫಕ್ಕೆ 5-10 ಈರುಳ್ಳಿ ರಸಕ್ಕೆ 10 ಗ್ರಾಂ ಕಲ್ಲುಸಕ್ಕರೆ ಸೇರಿಸಿ ನಿಯಮಿತವಾಗಿ ಸೇವಿಸಿದರೆ ಕಫ ನಿವಾರಣೆಯಾಗುತ್ತದೆ. ಹಸಿ ಅಥವಾ ಬೇಯಿಸಿದ ಈರುಳ್ಳಿಯನ್ನು ಸೇವಿಸುವುದರಿಂದ ಹೊಟ್ಟೆ ಶುದ್ಧವಾಗಿ ಜೀರ್ಣಕ್ರಿಯೆ ಹೆಚ್ಚುತ್ತದೆ.

ಮಹಿಳೆಯರಿಗೆ ಮುಟ್ಟಿನ ಸಮಯದಲ್ಲಿ ಹೆಚ್ಚು ರಕ್ತಸ್ರಾವ ಆಗುತ್ತಿದ್ದರೆ ಬಿಳಿ ಈರುಳ್ಳಿಯ ರಸವನ್ನು ಸೇವಿಸಿದರೆ ರಕ್ತಸ್ರಾವ ಕಡಿಮೆಯಾಗುತ್ತದೆ. ಬಿಳಿ ಈರುಳ್ಳಿ ರಸಕ್ಕೆ ಸ್ವಲ್ಪ ಅರಿಶಿಣವನ್ನು ಸೇರಿಸಿ ಚರ್ಮದ ತುರಿಕೆ, ಕಜ್ಜಿಯ ಮೇಲೆ ಲೇಪನ ಮಾಡಿದರೆ ವಾಸಿಯಾಗುತ್ತದೆ. ವಸಡಿನಿಂದ ರಕ್ತಸ್ರಾವವಾಗುತ್ತಿದ್ದರೆ ಈರುಳ್ಳಿಯನ್ನು ನುಣ್ಣಗೆ ಅರೆದು ವಸಡಿಗೆ ಹಚ್ಚಿದರೆ ರಕ್ತಸ್ರಾವ ನಿಲ್ಲುತ್ತದೆ. 20ಮಿಲಿ ಈರುಳ್ಳಿ ರಸಕ್ಕೆ ನೀರು ಮತ್ತು ಉಪ್ಪನ್ನು ಸೇರಿಸಿ ಸೇವಿಸಿದರೆ ಹೊಟ್ಟೆ ಉಬ್ಬರ, ನೋವು ಶಮನವಾಗುತ್ತದೆ.

ಮೂಲವ್ಯಾಧಿಗೆ ಒಂದು ಈರುಳ್ಳಿಯನ್ನು ಜಜ್ಜಿ ಅರೆದು ಲೇಪನ ಮಾಡಿದರೆ ಕಡಿಮೆಯಾಗುತ್ತದೆ. ಈರುಳ್ಳಿಯನ್ನು ನೀರಿನಲ್ಲಿ ಅರೆದು ಬಿಳಿ ಮಚ್ಚೆಗೆ ಲೇಪನ ಮಾಡಿದರೆ ನಿಯಂತ್ರಣಕ್ಕೆ ಬರುತ್ತದೆ. ಈರುಳ್ಳಿಯ ಸೇವನೆಯಿಂದ ಹೃದಯದ ಆರೋಗ್ಯ ಹೆಚ್ಚುತ್ತದೆ. ಕ್ಯಾನ್ಸರ್ ಉಂಟುಮಾಡುವ ರೋಗಾಣುಗಳ‌ ವಿರುದ್ಧ ಈರುಳ್ಳಿ ಹೋರಾಡುತ್ತದೆ. ಪ್ರತಿದಿನ ಈರುಳ್ಳಿ ಸೇವಿಸುವುದರಿಂದ ರಕ್ತದೊತ್ತಡವನ್ನು ಕಡಿಮೆ ಮಾಡುತ್ತದೆ. ತಲೆ ಹೊಟ್ಟಿಗೆ ಈರುಳ್ಳಿ ರಾಮಬಾಣವಾಗಿದೆ. ಸಾಮಾನ್ಯ ಶೀತ ಮತ್ತು ಜ್ವರದ ಸಮಯದಲ್ಲಿ ಈರುಳ್ಳಿ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ.

ಹಲವು ಕಾಯಿಲೆಯಿಂದ ಉಂಟಾಗುವ ಉರಿಯೂತ ಮತ್ತು ನೋವನ್ನು ಈರುಳ್ಳಿ ಶಮನ ಮಾಡುತ್ತದೆ. ಅಲರ್ಜಿ, ಆಸ್ತಮಾ, ಸಂಧಿವಾತದ ಸಮಸ್ಯೆಗಳಿಗೆ ಈರುಳ್ಳಿ ಪರಿಹಾರವಾಗಿದೆ. ನಮ್ಮ ದೇಹದಲ್ಲಿ ರೋಗನಿರೋಧಕ ಶಕ್ತಿಯನ್ನು ಈರುಳ್ಳಿ ಹೆಚ್ಚಿಸುತ್ತದೆ. ಈರುಳ್ಳಿಯಲ್ಲಿ ವಿಟಮಿನ್ ಸಿ ಹೆಚ್ಚಿದ್ದು ಇದರ ಸೇವನೆ ಆರೋಗ್ಯಕ್ಕೆ ಒಳ್ಳೆಯದು. ಡಯಾಬಿಟಿಸ್ ನಿಯಂತ್ರಿಸುವ ಸಾಮರ್ಥ್ಯ ಈರುಳ್ಳಿಗಿದೆ. ಜೇನು ಹುಳು ಕಚ್ಚಿದಾಗ ಈರುಳ್ಳಿ ರಸವನ್ನು ಹಚ್ಚಿದರೆ ನೋವು ನಿವಾರಣೆಯಾಗುತ್ತದೆ.

ಮುಖದ ಮೇಲಿನ ಕಲೆ ನಿವಾರಿಸಲು ಈರುಳ್ಳಿ ರಸ ಮತ್ತು ಜೇನುತುಪ್ಪವನ್ನು ಸೇರಿಸಿ ಹಚ್ಚಬೇಕು. ಈರುಳ್ಳಿ ರಸಕ್ಕೆ ಜೇನುತುಪ್ಪ ಸೇರಿಸಿ ಸೇವಿಸಿದರೆ ಕೆಮ್ಮು ನಿವಾರಣೆಯಾಗುತ್ತದೆ. ಲೈಂ,ಗಿಕ ಸಮಸ್ಯೆಗಳಿಗೂ ಈರುಳ್ಳಿ ಸೇವಿಸುವುದು ಒಳ್ಳೆಯದು. ಈರುಳ್ಳಿ ಸೇವಿಸುವುದರಿಂದ ಮೂತ್ರ ಸಂಬಂಧಿ ಸಮಸ್ಯೆಯು ನಿವಾರಣೆಯಾಗುತ್ತದೆ.‌ ಈ ಮಾಹಿತಿಯನ್ನು ಎಲ್ಲರಿಗೂ ತಿಳಿಸಿ ಈರುಳ್ಳಿಯನ್ನು ಹೆಚ್ಚು ಸೇವಿಸಿ.

Leave A Reply

Your email address will not be published.

error: Content is protected !!