WhatsApp Group Join Now
Telegram Group Join Now

ರೈತನನ್ನು ಭಾರತದ ಬೆನ್ನೆಲುಬು ಎನ್ನಲಾಗುತ್ತದೆ. ಆದರೆ ರೈತನಿಗೆ ಎದುರಾಗುವ ಸಮಸ್ಯೆಗಳನ್ನು ಯಾರೂ ಗಂಭೀರವಾಗಿ ತೆಗೆದುಕೊಳ್ಳುವುದಿಲ್ಲ. ಇತ್ತೀಚೆಗೆ ರಸಗೊಬ್ಬರದ ಬೆಲೆ ಭಾರಿ ಏರಿಕೆಯಾಗಿದೆ. ರಸಗೊಬ್ಬರಗಳ ಬೆಲೆ ಏರಿಕೆಯ ಕುರಿತು ಈ ಲೇಖನದಲ್ಲಿ ತಿಳಿಯೋಣ.

ಭಾರತದಲ್ಲಿ ಪೆಟ್ರೋಲ್, ಡೀಸೆಲ್ ದರ ಎರಡರಿಂದ ಮೂರು ರೂಪಾಯಿ ಏರಿದರೆ ಸಾಕು ಮಾಧ್ಯಮಗಳು ಇಡೀ ದೇಶವೇ ಅಲ್ಲೋಲ ಕಲ್ಲೋಲ ಆಗುವಂತೆ ಪ್ರಸಾರ ಮಾಡುತ್ತವೆ. ರೈತರು ಉಪಯೋಗಿಸುವ ರಸಗೊಬ್ಬರದ ಬೆಲೆ ಏಳು ನೂರೂ ರೂಪಾಯಿ ಏರಿದರೂ ಕೂಡ ಸುದ್ದಿಯಾಗುವುದಿಲ್ಲ. ಒಂದು ಡಿಎಪಿ ಚೀಲಕ್ಕೆ ಏಳು ನೂರು ರೂಪಾಯಿ ಏರಿಸಿದರೆ ಬಡರೈತರು ಇದನ್ನು ಉಪಯೋಗಿಸಲು ಸಾಧ್ಯವಾಗುವುದಿಲ್ಲ. ಏಕೆಂದರೆ ಇದು ಒಂದು ಚೀಲದ ಮಾತಲ್ಲ ಒಂದು ಸಣ್ಣ ರೈತ ಐದು ಎಕರೆ ಜಮೀನಿಗೆ ಎಕರೆಗೆ ನಾಲ್ಕು ಚೀಲದಂತೆ ಕೊಂಡುಕೊಳ್ಳುವುದಾದರೆ ಇಪ್ಪತ್ತು ಚೀಲವನ್ನು ಹದಿನಾಲ್ಕು ಸಾವಿರ ರೂಪಾಯಿಯಷ್ಟು ಹೆಚ್ಚಿನ ಹಣವನ್ನು ನೀಡಬೇಕಾಗುತ್ತದೆ. ರಸಗೊಬ್ಬರಗಳ ಬೆಲೆ ಯಾವಾಗಲೂ ಮುಂಗಾರು ಪ್ರಾರಂಭದ ವೇಳೆ ಅಂದರೆ ಜೂನ್ ನಲ್ಲಿ ಏರಿಕೆ ಆಗುತ್ತಿತ್ತು. ಸಾಮಾನ್ಯವಾಗಿ ಜೂನ್ ಜುಲೈ ಸಮಯದಲ್ಲಿ ಐವತ್ತರಿಂದ ನೂರು ರೂಪಾಯಿ ಏರಿಕೆಯಾಗುತ್ತಿತ್ತು ಆದರೆ ಈ ಬಾರಿ ಪ್ರತಿ ಚೀಲಕ್ಕೆ ಏಳುನೂರು ರೂಪಾಯಿ ಏರಿಕೆಯಾಗಿದೆ.

ರಾಸಾಯನಿಕ ಗೊಬ್ಬರಕ್ಕೆ ಬೇಕಾಗುವ ಕಚ್ಚಾ ವಸ್ತುಗಳ ಬೆಲೆ ಮಿತಿಮೀರಿ ಏರಿಕೆಯಾಗಿದೆ. ಈ ಕಚ್ಚಾ ವಸ್ತುಗಳನ್ನು ಚೀನಾ, ಆಫ್ರಿಕಾ ಮತ್ತಿತರ ದೇಶಗಳಿಂದ ಆಮದು ಮಾಡಿಕೊಳ್ಳಲಾಗುತ್ತದೆ. ಕಚ್ಚಾ ವಸ್ತುಗಳು ಅಂದರೆ ಇಲ್ಲಿ ಮುಖ್ಯವಾಗಿ ಫಾಸ್ಪರಿಕ್ ಆಮ್ಲಗಳನ್ನು ಬ್ಯಾರಲ್ ಗಳ ಮೂಲಕ ಆಮದು ಮಾಡಿಕೊಳ್ಳಲಾಗುತ್ತದೆ. ಇಲ್ಲಿ ಪ್ರತಿ ಬ್ಯಾರಲ್ ಗೆ ನಾಲ್ಕುನೂರು ಡಾಲರ್ ಇದ್ದ ಬೆಲೆ ಈಗ ಎಂಟು ನೂರು ಡಾಲರ್ ದಾಟಿದೆ ಅಂದರೆ ಇದರ ಬೆಲೆ ದ್ವಿಗುಣಗೊಂಡಿದೆ. ಈ ಕಾರಣದಿಂದ ಗೊಬ್ಬರಗಳ ಉತ್ಪಾದನಾ ವೆಚ್ಚ ಹೆಚ್ಚಳವಾಗಿದೆ. ರಸಗೊಬ್ಬರಗಳ ಬೆಲೆ ಏರಿಸುವುದು ಅನಿವಾರ್ಯವಾಗಿದೆ ಎಂದು ಗೊಬ್ಬರ ತಯಾರಿಕಾ ಕಂಪೆನಿಗಳು ಹೇಳಿಕೊಂಡಿದೆ. ಕೇಂದ್ರ ಸರ್ಕಾರ ರಸಗೊಬ್ಬರಗಳ ಬಳಕೆಯನ್ನು ಕಡಿಮೆ ಮಾಡಲು ಪರೋಕ್ಷವಾಗಿ ಬೆಲೆ ಏರಿಕೆ ಮಾಡುತ್ತಿದೆ ಎನ್ನುವ ಮಾತು ಕೂಡ ಕೇಳಿ ಬರುತ್ತಿದೆ. ಆಮದು ಮಾಡಿಕೊಳ್ಳುವ ಬೆಲೆಯ ಆಧಾರದ ಮೇಲೆ ರಸಗೊಬ್ಬರದ ಬೆಲೆ ನಿಗದಿ ಮಾಡಲಾಗುತ್ತದೆ. ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಈ ಪ್ರಮಾಣದಲ್ಲಿ ಬೆಲೆ ಏರಿಕೆ ಆಗಿದೆ ಎನ್ನಲಾಗಿದೆ.

ಯಾವ್ಯಾವ ರಸಗೊಬ್ಬರಗಳ ಬೆಲೆ ಎಷ್ಟಾಗಿದೆ ಎಂದು ನೋಡುವುದಾದರೆ, ಡಿಎಪಿ ಗೊಬ್ಬರ ಒಂದು ಸಾವಿರದ ಇನ್ನೂರು ರೂಪಾಯಿಯ ಆಸುಪಾಸಿನಲ್ಲಿದ್ದ ಬೆಲೆ ಈಗ ಒಂದು ಸಾವಿರದ ಒಂಬಯ್ನೂರು ರೂಪಾಯಿ ಆಗಿದೆ. ಎನ್ ಪಿಕೆ ಹತ್ತು ಇಪ್ಪತ್ತಾರು ಇಪ್ಪತ್ತಾರು ಎನ್ನುವ ಗೊಬ್ಬರದ ಬೆಲೆ ಒಂದು ಸಾವಿರದ ಒಂದು ನೂರಾ ಐವತ್ತರಿಂದ ಸಾವಿರದ ಒಂದುನೂರಾ ಎಪ್ಪತೈದು ರೂಪಾಯಿ ಇದ್ದ ಬೆಲೆ ಈಗ ಒಂದು ಸಾವಿರದ ಏಳು ನೂರಾ ಎಪ್ಪತ್ತೈದಕ್ಕೆ ಏರಿಕೆಯಾಗಿದೆ. ಎನ್ ಪಿಕೆ 12 32 16 ಬೆಲೆ ಒಂದು ಸಾವಿರದ ಇನ್ನೂರು ರೂಪಾಯಿಂದ ಒಂದು ಸಾವಿರದ ಎಂಟುನೂರು ರೂಪಾಯಿಗೆ ಏರಿಕೆಯಾಗಿದೆ. ಎನ್ ಪಿಕೆ 20 20 20 ಇದರ ಬೆಲೆ ಒಂಬಯ್ನೂರು ರೂಪಾಯಿಂದ ಒಂದು ಸಾವಿರದ ಮುನ್ನೂರಾ ಐವತ್ತು ರೂಪಾಯಿಗೆ ಏರಿಕೆಯಾಗಿದೆ. ಈ ರೀತಿಯಲ್ಲಿ ಬೆಲೆ ಹೆಚ್ಚಾದರೆ ರೈತರು ರಸಗೊಬ್ಬರಗಳ ಬಳಕೆಯನ್ನು ಕಡಿಮೆ ಮಾಡಿ ಸಾವಯವ ಗೊಬ್ಬರ ಬಳಸುವುದು ಉತ್ತಮ.

WhatsApp Group Join Now
Telegram Group Join Now

By

Leave a Reply

Your email address will not be published. Required fields are marked *

error: Content is protected !!
Footer code: