ಇದೆ ನೋಡಿ ಭಾರತದ ಕೊನೆಯ ಹಳ್ಳಿ ಅಷ್ಟಕ್ಕೂ ಈ ಹಳ್ಳಿ ಹೇಗಿದೆ ಇಲ್ಲಿರುವ ಮನೆಗಳು ಎಷ್ಟು ಗೋತ್ತಾ ಇದರ ಸಂಪೂರ್ಣ ಮಾಹಿತಿ

0

ನಾವಿಂದು ನಿಮಗೆ ಭಾರತದ ಕೊನೆಯ ಹಳ್ಳಿ ಯಾವುದು ಹಾಗೂ ಯಾಕೆ ಅದನ್ನ ಕೊನೆಯ ಹಳ್ಳಿ ಎಂದು ಕರೆಯುತ್ತಾರೆ ಎಂಬುದನ್ನ ತಿಳಿಸಿಕೊಡುತ್ತೇವೆ. ಈ ಹಳ್ಳಿಯ ಮೂಲಕವೇ ಪಾಂಡವರು ಸ್ವರ್ಗಕ್ಕೆ ಹೋದರು ಎಂದು ನಂಬಲಾಗಿದೆ ಇದೇ ಹಳ್ಳಿಯ ಒಂದು ಗುಹೆಯಲ್ಲಿ ಮಹರ್ಷಿ ವ್ಯಾಸರು ಮಹಾಭಾರತವನ್ನು ರಚಿಸಿದರು ಎಂದು ನಂಬಲಾಗಿದೆ ನಿಜಕ್ಕೂ ಈ ಹಳ್ಳಿ ಹಲವಾರು ನಿಗೂಢ ರಹಸ್ಯಗಳನ್ನು ಹಾಗೂ ಕುತೂಹಲವನ್ನು ಹೊಂದಿದೆ. ಹಾಗಾದರೆ ಆ ಹಳ್ಳಿ ಯಾವುದು ಎಲ್ಲಿದೆ ಹೇಗಿದೆ ಎಂಬುದರ ಕುರಿತಾದ ಸಂಪೂರ್ಣ ಮಾಹಿತಿಯನ್ನು ನಾವಿಂದು ನಿಮಗೆ ತಿಳಿಸಿಕೊಡುತ್ತೇವೆ.

ಈ ಗ್ರಾಮದಲ್ಲಿ ಕೇವಲ ನಲವತ್ತು ಮನೆಗಳಿವೆ ಹಾಗೂ ನೂರರಿಂದ ನೂರಾ ಇಪ್ಪತ್ತು ಜನರು ವಾಸಿಸುತ್ತಾರೆ ಅಂತಹ ಒಂದು ಪುಟ್ಟ ಗ್ರಾಮವಿದು. ಇಲ್ಲಿ ಹೆಚ್ಚಾಗಿ ಮಹಿಳೆಯರೇ ಇದ್ದಾರೆ ಅವರೇ ತಮ್ಮ ಹೊಲ ಮನೆಗಳನ್ನು ನೋಡಿಕೊಳ್ಳುತ್ತಾರೆ ಹೆಚ್ಚಾಗಿ ಈ ಗ್ರಾಮದ ಗಂಡಸರು ಚಮೋಲಿ ಎಂಬ ಪಟ್ಟಣಕ್ಕೆ ಕೆಲಸ ಮಾಡುವುದಕ್ಕೆ ಹೋಗುತ್ತಾರೆ ವಾರಕ್ಕೊಮ್ಮೆ ಹಳ್ಳಿಗೆ ಬರುತ್ತಾರೆ. ಇಲ್ಲಿ ಶೀತ ಹೆಚ್ಚಿರುವ ಕಾರಣ ಈ ಸ್ಥಳವು ಆರು ತಿಂಗಳುಗಳ ಕಾಲ ಹಿಮದಿಂದ ಆವೃತವಾಗಿರುತ್ತದೆ ಆ ಕಾರಣದಿಂದಾಗಿ ಅಲ್ಲಿ ವಾಸಿಸುವ ಜನರು ಚಳಿಗಾಲದ ಪ್ರಾರಂಭದ ಮೊದಲು ಕೆಳಗಿರುವ ಚಮೋಲಿ ಜಿಲ್ಲೆಗೆ ತೆರಳುತ್ತಾರೆ. ಈ ಗ್ರಾಮದಲ್ಲಿ ಕೇವಲ ಒಂದೇ ಒಂದು ಶಾಲೆ ಇದೆ ಇದು ಆರು ತಿಂಗಳು ಇಲ್ಲಿದ್ದರೆ ಇನ್ನಾರು ತಿಂಗಳು ಚಮೋಲಿ ಪಟ್ಟಣಕ್ಕೆ ವರ್ಗಾವಣೆಯಾಗುತ್ತದೆ. ಇಂತಹ ಅದ್ಭುತ ಸ್ಥಳವೇ ಉತ್ತರಕಾಂಡ ರಾಜ್ಯದ ಚಮೋಲಿ ಜಿಲ್ಲೆಯ ಮಾನ ಗ್ರಾಮ. ಮಾನ ಗ್ರಾಮವನ್ನು ಭಾರತದ ಕೊನೆಯ ಹಳ್ಳಿ ಎಂದು ಅಧಿಕೃತವಾಗಿ ಗುರುತಿಸಲಾಗಿದೆ.

ಉತ್ತರಕಾಂಡನ ಚಾರ್ ಧಾಮಕ್ಕೆ ಹೋದಾಗ ಭದ್ರಿನಾಥನ ದರ್ಶನವನ್ನು ಮಾಡಿಕೊಂಡು ಎಲ್ಲಾ ಪ್ರವಾಸಿಗರು ಹಾಗೂ ಭಕ್ತಾದಿಗಳು ಭಾರತದ ಕೊನೆಯ ಹಳ್ಳಿಯಾದ ಮಾನಕ್ಕೆ ಭೇಟಿ ನೀಡುತ್ತಾರೆ. ಉತ್ತರಕಾಂಡದಲ್ಲಿ ಮೂರು ಸಾವಿರದ ಎರಡು ನೂರು ಮೀಟರ್ ಎತ್ತರದಲ್ಲಿ ಚಮೋಲಿ ಜಿಲ್ಲೆಯಲ್ಲಿರುವ ಮಾನ ಗ್ರಾಮವು ಸರಸ್ವತಿ ನದಿಯ ದಡದಲ್ಲಿದೆ ಮತ್ತು ಕೇಂದ್ರವಾದ ಭದ್ರಿನಾಥನಿಂದ ಕೇವಲ ಐದು ಕಿಲೋಮೀಟರ್ ದೂರದಲ್ಲಿದೆ. ಈ ಸುಂದರವಾದ ಚಿಕ್ಕಗ್ರಾಮ ಭಾರತ ಹಾಗೂ ಚೀನಾ ಗಡಿಯಿಂದ ಕೇವಲ ಹದಿನಾಲ್ಕು ಕಿಲೋ ಮೀಟರ್ ದೂರದಲ್ಲಿದೆ.

ರಾಂಪ ಜಾತಿಯ ಜನರು ಈ ಗ್ರಾಮದಲ್ಲಿ ಹೆಚ್ಚಾಗಿ ವಾಸಿಸುತ್ತಾರೆ ಈ ಹಳ್ಳಿಯ ಬಗ್ಗೆ ಹಿಂದೆ ಬಹಳ ಕಡಿಮೆ ತಿಳುವಳಿಕೆ ಇತ್ತು. ಇತ್ತೀಚಿಗೆ ಸುಸಜ್ಜಿತವಾದ ರಸ್ತೆಗಳ ನಿರ್ಮಾಣದಿಂದ ಪ್ರವಾಸಿಗರು ಭಾರತದ ಕೊನೆಯ ಹಳ್ಳಿಯಾದ ಈ ಗ್ರಾಮವನ್ನು ಭೇಟಿ ನೀಡಲು ಇಚ್ಚಿಸುತ್ತಾರೆ. ಈ ಗ್ರಾಮವನ್ನು ಯಾಕೆ ಭಾರತದ ಕೊನೆಯ ಹಳ್ಳಿ ಎಂದು ಕರೆಯುತ್ತಾರೆ ಭಾರತದ ಗಡಿ ಭಾಗದಲ್ಲಿ ಒಂದೊಂದು ಹಳ್ಳಿಗಳಿವೆ ಅವುಗಳನ್ನು ಭಾರತದ ಕೊನೆಯ ಹಳ್ಳಿ ಎಂದು ಕರೆಯಬಹುದು ಎಂದು ಕೆಲವರು ಹೇಳಬಹುದು ಆದರೆ ಮಾನ ಭಾರತದ ಉತ್ತರದ ತುದಿಯಲ್ಲಿ ಅತಿ ಎತ್ತರದಲ್ಲಿ ಅಂದರೆ ಮೂರು ಸಾವಿರದ ಎರಡು ನೂರು ಮೀಟರ್ ಎತ್ತರದಲ್ಲಿ ಹಾಗೂ ಭಾರತ ಮತ್ತು ಚೀನಾದ ನಡುವೆ ಕೊನೆಯ ಹಳ್ಳಿಯಾಗಿ ಹಾಗೂ ಗಡಿಯಲ್ಲಿ ಅತಿ ಹತ್ತಿರವಾಗಿರುವ ಅಂತಹ ಒಂದು ಹಳ್ಳಿಯಾಗಿದೆ.

ಈ ಕಾರಣದಿಂದ ಮಾನವನ್ನು ಭಾರತದ ಕೊನೆಯ ಹಳ್ಳಿ ಎಂದು ಅಧಿಕೃತವಾಗಿ ಘೋಷಿಸಲಾಗಿದೆ ಇಲ್ಲಿಗೆ ಬರುವ ಪ್ರವಾಸಿಗರು ಖಂಡಿತವಾಗಿ ಭೀಮಾ ಫುಲ್ ಗೆ ಭೇಟಿ ನೀಡುತ್ತಾರೆ ಆ ಸೇತುವೆಯ ಮಾರ್ಗದ ಮೂಲಕವಾಗಿ ಪಾಂಡವರು ಸ್ವರ್ಗಕ್ಕೆ ಹೋದರು ಎಂದು ನಂಬಲಾಗುತ್ತದೆ. ಇಲ್ಲಿ ಎರಡು ಬೆಟ್ಟಗಳಿದ್ದವು ಅದರ ನಡುವೆ ಕಂದಕವಿತ್ತು ಅದನ್ನು ದಾಟಲು ತುಂಬಾ ಕಷ್ಟವಾಗಿತ್ತು ಆಸಮಯದಲ್ಲಿ ಭೀಮನು ಅಲ್ಲಿ ಎರಡು ದೊಡ್ಡ ಬಂಡೆಗಳನ್ನು ಹಾಕುವ ಮೂಲಕ ಸೇತುವೆಯನ್ನು ನಿರ್ಮಿಸುತ್ತಾನೆ. ಇಂದಿಗೂ ಜನರು ಆ ಹಾದಿಯನ್ನು ಸ್ವರ್ಗಕ್ಕೆ ಹೋಗುವ ಮಾರ್ಗ ಎಂದೇ ಪರಿಗಣಿಸುತ್ತಾರೆ. ಮಾನ ಗ್ರಾಮದಲ್ಲಿಯೇ ವ್ಯಾಸ ಗುಹೆ ಎಂಬ ಒಂದು ಪ್ರಾಚೀನ ಗುಹೆ ಇದೆ ಈ ಗುಹೆ ಐದು ಸಾವಿರ ವರ್ಷಗಳ ಹಳೆಯ ಗುಹೆಯಾಗಿದೆ. ಇದೇ ಗುಹೆಯಲ್ಲಿಯೇ ವೇದವ್ಯಾಸರು ವೇದಗಳನ್ನು ನಾಲ್ಕು ಭಾಗಗಳನ್ನಾಗಿ ವಿಂಗಡಿಸಿ ಇದೇ ಜಾಗದಲ್ಲಿ ಮಹಾಭಾರತದ ಗ್ರಂಥವನ್ನು ರಚನೆ ಮಾಡಿದರು ಎಂದು ನಂಬಲಾಗಿದೆ.

ವ್ಯಾಸ ಮುನಿಗಳು ಗಣೇಶನಿಗೆ ಗ್ರಂಥವನ್ನು ಬರೆಯುವುದಕ್ಕೆ ವಿನಂತಿಸಿಕೊಳ್ಳುತ್ತಾರೆ ಗಣಪತಿಯು ಒಪ್ಪಿಗೆ ನೀಡಿ ಮಹಾಭಾರತವನ್ನ ರಚಿಸುವುದಕ್ಕೆ ಪ್ರಾರಂಭಿಸುತ್ತಾರೆ ಹೀಗೆ ಬರೆಯುವ ಸಂದರ್ಭದಲ್ಲಿ ಸರಸ್ವತಿ ನದಿಯು ಭೋರ್ಗರೆಯುವ ದಕ್ಕೆ ಪ್ರಾರಂಭಿಸುತ್ತದೆ ಹಾಗೂ ವ್ಯಾಸರಿಗೆ ಮಹಾಭಾರತವನ್ನು ರಚಿಸುವುದಕ್ಕೆ ತೊಂದರೆಯನ್ನುಂಟುಮಾಡುತ್ತದೆ. ಆಗ ಮುನಿಗಳು ಸದ್ದು ಮಾಡದಂತೆ ಸರಸ್ವತಿ ದೇವಿಗೆ ಕೇಳಿಕೊಳ್ಳುತ್ತಾರೆ ಆದರೆ ಸರಸ್ವತಿದೇವಿ ವ್ಯಾಸರ ಮಾತನ್ನು ಕೇಳುವುದಿಲ್ಲ ಇದರಿಂದ ಕ್ರೋಧಗೊಂಡ ವ್ಯಾಸರಾಯರು ಸರಸ್ವತಿ ನದಿಗೆ ಗುಪ್ತಗಾಮಿನಿಯಾಗಿ ಹರಿಯುವಂತೆ ಶಾಪವನ್ನು ನೀಡುತ್ತಾರೆ. ಈ ಕಾರಣದಿಂದ ಅಲ್ಲೇ ಉಗಮವಾದ ಸ್ಥಳದಿಂದ ಸ್ವಲ್ಪ ದೂರದಲ್ಲಿ ಸರಸ್ವತಿ ನದಿ ಗುಪ್ತವಾಗಿ ಹರಿಯುತ್ತದೆ ಈ ನದಿಯು ಮುಂದೆ ಎಲ್ಲಿ ಹೋಯಿತು ಹೇಗೆ ಮಾಯವಾಗಿತ್ತದೆ ಎಂಬುದು ಯಾರಿಗೂ ಗೊತ್ತಾಗುವುದಿಲ್ಲ. ಅದೇ ಕಾರಣದಿಂದ ಸರಸ್ವತಿ ನದಿಯನ್ನು ಗುಪ್ತಗಾಮಿನಿ ಎಂದು ಕರೆಯಲಾಗುತ್ತದೆ ಯಾಕೆಂದರೆ ನದಿ ಎಲ್ಲಿ ಹರಿಯುತ್ತದೆ ಎಂಬುದು ಯಾರಿಗೂ ಸಹ ತಿಳಿಯುವುದಿಲ್ಲ. ಇದೇ ಸ್ಥಳದಲ್ಲಿ ಸರಸ್ವತಿ ದೇವಾಲಯ ಕೂಡ ಇದೆ ಈ ದೇವಾಲಯದ ಮುಂದೆ ಸರಸ್ವತಿ ನದಿಯು ಕಾಣುವುದಿಲ್ಲ.

ಅಲ್ಲಿಂದ ಮುಂದೆ ವಸುದರ ಜಲಪಾತ ಸಿಗುತ್ತದೆ. ಭೀಮ ಫೂಲ್ ದಿಂದ ಕೇವಲ ಐದು ಕಿಲೋಮೀಟರ್ ದೂರದಲ್ಲಿರುವ ಒಂದು ಅದ್ಭುತ ಜಲಪಾತವಾಗಿದೆ. ಈ ಜಲಪಾತ ನಾಲ್ಕುನೂರು ಅಡಿಗಳ ಎತ್ತರದಿಂದ ಬೀಳುತ್ತದೆ ಹಾಗೂ ಈ ಜಲಪಾತದ ನೀರು ಮುತ್ತು ಬೀಳುವ ಹಾಗೆ ಕಾಣುತ್ತದೆ. ಈ ಜಲಪಾತದಲ್ಲಿ ಭಕ್ತರು ಸ್ನಾನ ಮಾಡುವುದಕ್ಕೆ ಇಚ್ಚಿಸುತ್ತಾರೆ ಆದರೆ ಯಾರಾದರೂ ಪಾಪಮಾಡಿದರೆ ಇಲ್ಲಿ ನೆನೆಯುವುದಿಲ್ಲ ಎಂಬ ನಂಬಿಕೆ ಇದೆ. ಈ ಗ್ರಾಮದ ಮತ್ತೊಂದು ವಿಶೇಷತೆ ಏನು ಎಂದರೆ ಇಲ್ಲಿ ಮನೆಗಳಲ್ಲಿಯೇ ಮಧ್ಯವನ್ನು ತಯಾರು ಮಾಡಲಾಗುತ್ತದೆ

ಹೆಚ್ಚಾಗಿ ಈ ಗ್ರಾಮದಲ್ಲಿ ಅಕ್ಕಿಯಿಂದ ಮದ್ಯವನ್ನು ತಯಾರಿಸುತ್ತಾರೆ ಹಾಗೂ ಬಂದ ಪ್ರವಾಸಿಗರಿಗೂ ಅದರ ರುಚಿಯನ್ನು ತೋರಿಸುತ್ತಾರೆ. ಇಲ್ಲಿ ಹೆಚ್ಚಾಗಿ ಮನೆಗಳು ಮರಗಳಿಂದ ಮಾಡಲ್ಪಟ್ಟಿವೆ ಜನರು ಮಹಡಿಯಲ್ಲಿ ವಾಸಿಸಿದರೆ ಅವರ ಸಾಕುಪ್ರಾಣಿಗಳು ಕೆಳಗಡೆ ವಾಸಿಸುತ್ತವೆ. ಮಾನದಲ್ಲಿ ಹಲವಾರು ಚಹಾದ ಅಂಗಡಿಗಳಿವೆ ಅವುಗಳಿಗೆ ಭಾರತದ ಕೊನೆಯ ಚಹಾದ ಅಂಗಡಿ ಎಂದು ಬೋರ್ಡುಗಳನ್ನು ಹಾಕಲಾಗಿದೆ. ಹಾಗಾಗಿ ಪ್ರವಾಸಿಗರು ಈ ಅಂಗಡಿಗಳಿಗೆ ಭೇಟಿ ನೀಡಿ ಫೋಟೋಗಳನ್ನು ತೆಗೆದುಕೊಳ್ಳುವುದು ಸರ್ವೇಸಾಮಾನ್ಯವಾಗಿದೆ.

ಇಲ್ಲಿ ಬೋಜ ಪತ್ರಗಳು ಹೆಚ್ಚಾಗಿ ಕಂಡುಬರುತ್ತವೆ ಬೋಜ ಪತ್ರಗಳನ್ನ ಹಿಂದೆ ಗುರುಗಳು ವೇದ ಪುರಾಣಗಳನ್ನು ಬರೆಯುವುದಕ್ಕೆ ಬಳಸುತ್ತಿದ್ದರು ಎಂದು ನಂಬಲಾಗಿದೆ ಹಾಗೆಯೇ ವೇದವ್ಯಾಸರು ಕೂಡ ಇಲ್ಲಿ ಸಿಗುವಂತಹ ಭೋಜಪತ್ರಗಳನ್ನ ಬಳಸಿ ಮಹಾಭಾರತವನ್ನು ರಚಿಸಿದ್ದರೆಂದು ನಂಬಲಾಗಿದೆ. ಮಾನ ಗ್ರಾಮ ತನ್ನಲ್ಲಿ ದೊರೆಯುವ ಗಿಡಮೂಲಿಕೆಗಳಿಗೆ ಬಹಳಷ್ಟು ಪ್ರಸಿದ್ಧಿಯಾಗಿದೆ. ಇಲ್ಲಿ ಕಂಡುಬರುವ ಎಲ್ಲಾ ಗಿಡಗಳು ಆರೋಗ್ಯಕ್ಕೆ ಪ್ರಯೋಜನಕಾರಿಯಾಗಿದೆ ಅವುಗಳಿಂದ ಹಲವಾರು ಆಯುರ್ವೇದ ಔಷಧಗಳನ್ನು ತಯಾರಿಸಲಾಗುತ್ತದೆ.

ಮಾನ ಗ್ರಾಮದ ಗ್ರಾಮಸ್ಥರು ಭಾರತ ಹಾಗೂ ಚೀನಾ ನಡುವಿನ ಯುದ್ಧದ ಸಮಯದಲ್ಲಿ ಸೈನ್ಯವನ್ನು ಹಾಗೂ ದೇಶದ ಪ್ರತಿ ಹಂತವನ್ನು ಬೆಂಬಲಿಸಿದ್ದಾರೆ ಭದ್ರತಾಪಡೆಗಳಿಂದ ತರಬೇತಿಯನ್ನು ಕೂಡ ಪಡೆಯುತ್ತಿದ್ದಾರೆ. ಅಗತ್ಯವಿದ್ದರೆ ತಾವು ಸೇನೆಯೊಂದಿಗೆ ಸೇರಿಕೊಂಡು ಹೋರಾಡುವುದಾಗಿ ಇಲ್ಲಿನ ಮಹಿಳೆಯರು ಪ್ರತಿಜ್ಞೆಯನ್ನು ಮಾಡಿದ್ದಾರೆ. ಇದಿಷ್ಟು ನಾವು ನಿಮಗೆ ತಿಳಿಸುತ್ತಿರುವ ಭಾರತದ ಕೊನೆಯ ಹಳ್ಳಿಯಾದ ಮಾನದ ಬಗೆಗಿನ ಕುತೂಹಲಕಾರಿ ಸಂಗತಿಯಾಗಿದೆ. ಈ ಮಾಹಿತಿಯನ್ನು ನೀವು ತೆಗೆದುಕೊಳ್ಳುವುದರೊಂದಿಗೆ ನಿಮ್ಮ ಸ್ನೇಹಿತರು ಹಾಗೂ ಪರಿಚಿತರೊಂದಿಗೆ ಹಂಚಿಕೊಳ್ಳಿರಿ.

Leave A Reply

Your email address will not be published.

error: Content is protected !!
Footer code: