WhatsApp Group Join Now
Telegram Group Join Now

ಭಾರತದ ಅತಿದೊಡ್ಡ ಜಲಾಶಯಗಳಲ್ಲಿ ಒಂದೆನಿಸಿರುವ ಪೆರಿಯಾರ್ ನದಿಗೆ ಅಡ್ಡಲಾಗಿ ಕಟ್ಟಿರುವ ಡ್ಯಾಮ್ ಇಡುಕ್ಕಿ ಡ್ಯಾಮ್ ಈ ಅಣೆಕಟ್ಟು ಎರಡು ಪರ್ವತಗಳ ನಡುವೆ ನಿಂತಿದೆ ಕೇರಳದ ಕುರಾವನ್ ಮತ್ತು ಕುರತಿ ಬೆಟ್ಟಗಳ ನಡುವಿನ ಕಂದರದಲ್ಲಿ ಪೆರಿಯಾರ್ ನದಿಯಲ್ಲಿ ಇದನ್ನು ನಿರ್ಮಿಸಲಾಗಿದೆ.ಅತಿ ಎತ್ತರದ ಕಮಾನು ಅಣೆಕಟ್ಟುಗಳಲ್ಲಿ ಒಂದಾಗಿರುವುದು ಮಾತ್ರವಲ್ಲದೆ ಮೂರನೇ ಅತಿ ಎತ್ತರದ ಕಮಾನು ಅಣೆಕಟ್ಟಾಗಿದೆ.

ಇದು ಒಂದು ಸುಂದರವಾದ ಬೆಟ್ಟದ ಪಟ್ಟಣವಾಗಿದ್ದು ಸುಂದರವಾದ ಕಾಡಿನ ಕಣಿವೆಗಳು ಮತ್ತು ತೊರೆಗಳಿಂದ ಕೂಡಿದೆ ಇಡುಕ್ಕಿ ಕೇರಳದ ಪ್ರಸಿದ್ಧ ಪ್ರವಾಸಿ ಕೇಂದ್ರವಾಗಿದೆ ಸ್ಥಳೀಯ ಉಪಭಾಷೆಗಳಲ್ಲಿ ಕುರಾವನ್ ಎಂದರೆ ಬುಡಕಟ್ಟು ಮತ್ತು ಕುರತಿ ಅವರ ಸಂಗಾತಿಯಾಗಿದೆ ಮಲಾ ಎಂಬುದು ಪರ್ವತದ ಸ್ಥಳೀಯ ಪದವಾಗಿದೆ ನಾವು ಈ ಲೇಖನದ ಮೂಲಕ ಇಡುಕ್ಕಿ ಡ್ಯಾಮ್ ಬಗ್ಗೆ ತಿಳಿದುಕೊಳ್ಳೋಣ.

ನೀರಾವರಿ ಹಾಗೂ ವಿದ್ಯುತ್ ಶಕ್ತಿಗಾಗಿ ಮಾಡಲಾಗಿರುವ ಒಂದೊಂದು ಡ್ಯಾಮಗಳು ಒಂದೊಂದು ಇತಿಹಾಸವನ್ನು ಹೇಳುತ್ತದೆ .ನಮ್ಮ ಭಾರತದಲ್ಲಿ ಮೊಟ್ಟ ಮೊದಲ ಹಾಗೂ ಏಕೈಕ ಆರ್ಚ್ ಡ್ಯಾಮ್ ಎಂಬ ಹೆಗ್ಗಳಿಯನ್ನು ಹೊಂದಿರುವ ಡ್ಯಾಮ್ ಅಂದರೆ ಇಡುಕ್ಕಿ ಡ್ಯಾಮ್ ಆಗಿದೆ ಐದು ಕೇರಳ ರಾಜ್ಯದ ಇಡುಕ್ಕಿ ತಾಲೂಕಿನಲ್ಲಿರುವ ಡ್ಯಾಮ್ ಆಗಿದೆ ಈ ಡ್ಯಾಮ್ ಎಂಟು ನೂರಾ ಎಪ್ಪತ್ತೆರಡು ಮೀಟರ್ ಎತ್ತರವಾಗಿದೆ. ಹಾಗೂ ಒಂಬೈ ನೂರಾ ಇಪ್ಪತ್ತೈದು ಮೀಟರ್ ಎತ್ತರವಾಗಿದೆ ಇರುವ ಪುರತಿ ಎಂಬ ಕಡಿದಾದ ಬೆಟ್ಟದ ಮಧ್ಯದಲ್ಲಿ ಹರಿಯುತ್ತದೆ ಹಾಗೂ ಪೇರಿಯಾನ ನದಿಗೆ ಅಡ್ಡಲಾಗಿ ಕಟ್ಟಲಾಗಿದೆ ಏಷ್ಯಾದಲ್ಲಿರುವ ಅತಿ ಎತ್ತರದ ಆರ್ಚ್ ಡ್ಯಾಮ್ ಗಳ ಪೈಕಿ ಇಡುಕ್ಕಿ ಡ್ಯಾಮ್ ಸಹ ಒಂದಾಗಿದೆ ಈ ಡ್ಯಾಮ್ ಅನ್ನು ನೀರಾವರಿ ಹಾಗೂ ವಿದ್ಯುತ್ ಶಕ್ತಿ ಉತ್ಪಾದನೆ ಗಾಗಿ ಬಳಸಲಾಗುತ್ತಿದೆ ಸುಮಾರು ಎಪ್ಪತ್ತು ಪಾಯಿಂಟ್ ಐದು ಟಿ ಎಂಸಿ ನೀರನ್ನು ಸಂಗ್ರಹಿಸಿ ಇಟ್ಟುಕೊಳ್ಳುವ ಸಾಮರ್ಥ್ಯವನ್ನು ಹೊಂದಿದೆ ಒಂದು ಸಾವಿರದ ಇನ್ನೂರು ಅಡಿ ಉದ್ದವನ್ನು ಹೊಂದಿದೆ .

ಈ ಡ್ಯಾಮ್ ನಿಂಡ ಏಳು ನೂರು ಮೇಘಾ ವ್ಯಾಟ್ ವಿದ್ಯುತ್ ಶಕ್ತಿಯನ್ನು ಉತ್ಪಾದನೆ ಮಾಡಲಾಗುತ್ತದೆ ಅರವತ್ತು ಕಿಲೋಮೀಟರ್ ಅಷ್ಟು ಜಲಾಶಯವನ್ನು ಒಳಗೊಂಡಿದೆ ಸಾವಿರದ ಒಂಬೈನುರ ಹತ್ತೊಂಬತ್ತ ರಲ್ಲಿ ಕುರುವಾನ್ ಹಾಗೂ ಕುರುತಿ ಬೆಟ್ಟಗಳ ಮಧ್ಯದಲ್ಲಿ ಹರಿಯುತ್ತಿರುವ ಪೇರಿಯಾನ್ ನದಿಗೆ ಅಣೆಕಟ್ಟನ್ನು ಕಟ್ಟಬೇಕು ಎನ್ನುವ ಕಲ್ಪನೆಯು ಇಟಾಲಿಯನ್ ಎಂಜಿನಿಯರ್ ಆಗಿದ್ದ ಜ್ಯಾಕೊಪ್ ಅವರಿಗೆ ಸಲ್ಲುತ್ತದೆ.

ತಮ್ಮ ಮನಸಿನಲ್ಲಿ ಬಂದ ಯೋಜನೆಯನ್ನು ಸರ್ಕಾರಕ್ಕೆ ಸಲ್ಲಿಸುತ್ತಾರೆ ಆದರೆ ಆ ಸಮಯದಲ್ಲಿ ಅವರ ಯೋಜನೆಯನ್ನು ತಿರಸ್ಕರಿಸುತ್ತಾರೆ ಒಂದು ಸಾವಿರದ ಇಂಬೈನುರ ಇಪ್ಪತ್ತೆರಡರಲ್ಲಿ ಡಬ್ಲ್ಯೂ ಜಾನ್ ಹಾಗೂ ಅವರ ಸ್ನೇಹಿತ ಎ ಸಿ ಥಾಮಸ್ ಎನ್ನುವರು ಕಡಿದಾದ ಬೆಟ್ಟಗಳ ಮಧ್ಯದಲ್ಲಿ ಡ್ಯಾಮ್ ಮಾಡುವುದರಿಂದ ವಿದ್ಯುತ್ ಉತ್ಪಾದಿಸಬಹುದು ಎಂಬ ಚರ್ಚೆಯನ್ನು ಮಾಡಿದರು ಆದರೆ ಅವರ ಚರ್ಚೆಗೆ ಫಲ ಸಿಗಲಿಲ್ಲ ಮುಂದೆ ಸಾವಿರದ ಓಂಬೈ ನೂರಾ ಮೂವತ್ತೆರಡರಲ್ಲಿ ಡಬ್ಲ್ಯೂ ಜೆ ಜಾನ್ ತಿರುವಾಂಕೂರು ಸರ್ಕಾರಕ್ಕೆ ಈ ಪ್ರದೇಶದಲ್ಲಿ ಡ್ಯಾಮ್ ಕಟ್ಟುವ ವಿಷಯದ ಬಗ್ಗೆ ಪ್ರಸ್ತಾವನೆಯನ್ನು ಸಲ್ಲಿಸಿದರು .

ನಂತರ ಸಾವಿರದ ಓಂಬೈ ನೂರಾ ಮೂವತ್ತೈದರಲ್ಲಿ ನಾರಾಯಣ್ ಪಿಲ್ಲೆಯವರು ಡ್ಯಾಮ್ ನಿರ್ಮಾಣ ಮಾಡಬೇಕು ಎಂದು ಸರಕಾರಕ್ಕೆ ಮನವಿ ಮಾಡಿದರು ಇವರ ಮಾತನ್ನು ಆಲಿಸಿದ ನಂತರ ಸಾವಿರದ ಓಂಬೈ ನೂರಾ ಮೂವತ್ತೇಳಕ್ಕೆ ಇಟಾಲಿಯನ್ ಎಂಜಿನಿಯರ್ ಅವರು ಡ್ಯಾಮ್ ಕಟ್ಟಲು ನಿರ್ಧರಿಸಿದರು ಹಾಗೂ ಯಾರು ಕೂಡ ಡ್ಯಾಮ್ ಕಟಲು ಆಸಕ್ತಿ ತೋರಿಸಲಿಲ್ಲ ಇದರ ಪರಿಮಾಣ ಸಾಕಷ್ಟು ವರ್ಷದ ವರೆಗೆ ಡ್ಯಾಮ್ ಕಟ್ಟುವ ಆಲೋಚನೆ ಅಲ್ಲಿಯೇ ನಿತ್ತಿತು.

ಸ್ವಾತಂತ್ರ್ಯ ಬಂದ ನಂತರ ಸಾವಿರದ ಓಂಬೈ ನೂರಾ ಐವತ್ತಾರಕ್ಕೆ ಭಾರತ ಸರ್ಕಾರ ಡ್ಯಾಮ್ ಕಟ್ಟಲು ಮುಂದೆ ಬರುತ್ತದೆ ಆ ಸಮಯದಲ್ಲಿ ಇಡುಕ್ಕಿ ಡ್ಯಾಮ್ ಕಟ್ಟಲು ಸಮಗ್ರ ಮಾಹಿತಿಯನ್ನು ಪಡೆದುಕೊಂಡಿತು ಸಾವಿರದ ಓಂಬೈ ನೂರಾ ಅರವತ್ತೊಂದರಲ್ಲಿ ಒಂದು ಯೋಜನೆಯನ್ನು ಹಾಕಿತು ನಂತರ ಸಾವಿರದ ಓಂಬೈ ನೂರಾ ಅರವತ್ತು ಮೂರರಲ್ಲಿ ಈ ಅಣೆಕಟ್ಟನ್ನು ಕಟ್ಟಲು ಭಾರತ ಸರ್ಕಾರ ಅನುಮತಿಯನ್ನು ನೀಡಿತು ಮುಂದೆ ಸಾವಿರದ ಓಂಬೈ ನೂರಾ ಅರವತ್ತೆ0ಟರಲ್ಲಿ ಏಪ್ರಿಲ್ ಮೂವತ್ತು ಅಣೆಕಟ್ಟಿನ ನಿರ್ಮಾಣ ಕಾರ್ಯವು ಪ್ರಾರಂಭಗೊಂಡಿತು .

ಕೆನಡಾ ಸರ್ಕಾರದ ನೆರವಿನೊಂದಿಗೆ ಡಾ ಡಿ ಬಾಬು ಅವರ ನೇತೃತ್ವದಲ್ಲಿ ನಿರ್ಮಾಣ ಕಾರ್ಯ ಆರಂಭ ಗೊಂಡ ಡ್ಯಾಮ್ ಸಾವಿರದ ಓಂಬೈ ನೂರಾ ಎಪ್ಪತ್ಮೂರರಲ್ಲಿ ನೀರನ್ನು ಸಂಗ್ರಹಿಸಿ ಇಡುವ ಸಾಮರ್ಥ್ಯವನ್ನು ಪಡೆದುಕೊಂಡಿತು ನಂತರ ಮೂರು ವರ್ಷದ ನಂತರ ಅಂದಿನ ಪ್ರಧಾನ ಮಂತ್ರಿಯಾಗಿದ್ದ ಇಂದಿರಾ ಗಾಂಧಿಯವರು ಈ ಅಣೆಕಟ್ಟಿನಲ್ಲಿ ಜನರೇಟರ್ ಸೆಂಟರ್ ಅನ್ನು ಉದ್ಘಾಟನೆ ಮಾಡಿದರು.

ಈ ಡ್ಯಾಮ್ ಗಳಲ್ಲಿ ಇರುವ ಕಮಾನನ್ನು ಕಾಂಕ್ರೀಟ್ ನಿಂದ ಮಾಡಲಾಗಿದೆ ಡ್ಯಾಮ್ ಅನ್ನು ಕೆಳಗಡೆಯಿಂದ ನೀಡಲು ವಿ ಆಕಾರದಲ್ಲಿ ಇದೆ ಬೇರೆ ಆಣೆಕಟ್ಟಿನ ತರ ನೀರು ಹೊರ ಹೋಗಲು ಯಾವುದೇ ಕವಾಟ ಗಳು ಇಲ್ಲ ಭದ್ರತೆಯ ಕಾರಣದಿಂದ ಮೊದಲು ಡ್ಯಾಮ್ ನೋಡಲು ಅನುಮತಿ ನೀಡುತ್ತಿರಲಿಲ್ಲ ಅತ್ಯಂತ ಸುಂದರವಾದ ಪ್ರಾಕೃತಿಕ ಸೌಂದರ್ಯವನ್ನು ಒಳಗೊಂಡಿದೆ. ಮೊದಲು ಓಣಂ ಹಬ್ಬದ ಪ್ರಯುಕ್ತ ಒಂದು ವಾರದ ವರೆಗೆ ಮಾತ್ರ ಸಾರ್ವಜನಿಕರಿಗೆ ಪ್ರವೇಶ ಕಲ್ಪಿಸಿದರು ನಂತರ ಒಂದು ತಿಂಗಳ ವರೆಗೆ ಅನುಮತಿ ನೀಡಿದರು ಈ ಡ್ಯಾಮ್ ನೋಡಲು ತುಂಬಾ ಸುಂದರವಾಗಿದೆ .

WhatsApp Group Join Now
Telegram Group Join Now

By

Leave a Reply

Your email address will not be published. Required fields are marked *

error: Content is protected !!
Footer code: