ಆಸ್ಪತ್ರೆಯಲ್ಲಿದ್ದ ನಟ ಗೋವಿಂದೇಗೌಡ ಪರಿಸ್ಥಿತಿ ಗಂಭೀರ ಏನಾಗಿದೆ ನೋಡಿ

0

ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಜನಪ್ರಿಯ ಕಾಮಿಡಿ ಕಾರ್ಯಕ್ರಮ ಕಾಮಿಡಿ ಕಿಲಾಡಿಗಳು ಖ್ಯಾತಿಯ ಗೋವಿಂದೇ ಗೌಡ ಅಲಿಯಾಸ್ ಜಿಜಿ ಅವರಿಗೆ ಚಿತ್ರೀಕರಣದ ವೇಳೆ ಅಪಘಾತವಾಗಿದ್ದು ಜಿಜಿ ಅವರ ಆರೋಗ್ಯದ ಬಗ್ಗೆ ನಟ ಜಗ್ಗೇಶ್ ಟ್ಟೀಟ್ ಮಾಡಿದ್ದಾರೆ. ಹಾಸ್ಯ ಕಲಾವಿದರಾದ ಗೋವಿಂದೇ ಗೌಡ ಚಿತ್ರೀಕರಣದ ವೇಳೆ ಗಾಯಗೊಂಡು, ಬೆಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ನಿಜಕ್ಕೂ ಹಾಸ್ಯ ಕಲಾವಿದ ಗೋವಿಂದೆ ಗೌಡ ಅವರಿಗೆ ಆಗಿರುವುದಾದರೂ ಏನು? ಅವರ ಆರೋಗ್ಯದ ಸ್ಥಿತಿ ಈಗ ಹೇಗಿದೆ ಎನ್ನುವುದರ ಕುರಿತಾಗಿ ನಾವು ಈ ಲೇಖನದ ಮೂಲಕ ತಿಳಿದುಕೊಳ್ಳೋಣ.

‘ಕಾಮಿಡಿ ಕಿಲಾಡಿಗಳು’ ರಿಯಾಲಿಟಿ ಶೋ ಇದು ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ , ಈಗಲೂ ಪ್ರಸಾರವಾಗುವ ಜನಪ್ರಿಯ ರಿಯಾಲಿಟಿ ಶೋ ಎನ್ನುವುದು ಇಡೀ ಕನ್ನಡದ ಜನತೆಗೆ ತಿಳಿದ ವಿಷಯ. ಕಾಮಿಡಿ ಕಿಲಾಡಿಗಳು ಶೋ ಮುಗಿದ ಬಳಿಕ ಅಲ್ಲಿಂದ ಸಾಕಷ್ಟು ಪ್ರತಿಭೆಗಳು ನಮ್ಮ ಕನ್ನಡ ಚಿತ್ರರಂಗಕ್ಕೆ ದೊರೆತಿದ್ದಾರೆ. ಶಿವರಾಜ್ ಕೆ ಆರ್ ಪೇಟೆ, ನಯನ, ಗೋವಿಂದೇ ಗೌಡ, ದಿವ್ಯಾ ಹೀಗೆ ಮುಂತಾದವರು ಸಿನಿಮಾದಲ್ಲಿ ನಟನೆ ಮಾಡುವ ಮೂಲಕ ತಮ್ಮ ಜೀವನವನ್ನು ಕಟ್ಟಿಕೊಂಡಿದ್ದಾರೆ. ಅವರಲ್ಲಿ ಒಬ್ಬರಾದ ನಟ ಜಿಜಿ ಅಲಿಯಾಸ್ ಗೋವಿಂದೇ ಗೌಡ ಇವರು ಚಿತ್ರೀಕರಣದ ಸಮಯದಲ್ಲಿ ಅಪಘಾತವಾಗಿ, ಬಿಜಿಎಸ್ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ.

ಮೂಲಗಳ ಪ್ರಕಾರ ಚಿತ್ರೀಕರಣದ ಸಂದರ್ಭದಲ್ಲಿ ನಟ ಗೋವಿಂದೇ ಗೌಡ ಅವರಿಗೆ ಕಾರಿನ ದೃಶ್ಯ ಚಿತ್ರೀಕರಣ ಮಾಡುವ ಸಂದರ್ಭದಲ್ಲಿ ಅಪಘಾತ ಉಂಟಾಗಿದ್ದು ಹೊಟ್ಟೆಗೆ ತೀರಾ ಪೆಟ್ಟು ಬಿದ್ದಿರುವುದು ತಿಳಿದು ಬಂದಿದೆ. ನಂತರ ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಸರಿಯಾದ ಸಮಯಕ್ಕೆ ಸೂಕ್ತ ಚಿಕಿತ್ಸೆ ಕೂಡಾ ಅವರಿಗೆ ದೊರಕಿದೆ ಹಾಗಾಗಿ ಯಾವುದೇ ರೀತಿಯ ಪ್ರಾಣಾಪಾಯ ಉಂಟಾಗಲಿಲ್ಲ. ಇವರಿಗೆ ಚಿಕಿತ್ಸೆ ನೀಡುತ್ತಿರುವ ವೈದ್ಯರು ಹೇಳುವ ಪ್ರಕಾರ ಗೋವಿಂದೇ ಗೌಡ ಅವರಿಗೆ ಈಗ ಯಾವುದೇ ರೀತಿಯ ಅಪಾಯ ಇಲ್ಲ ಚೇತರಿಸಿಕೊಳ್ಳುತ್ತ ಇದ್ದಾರೆ ಎಂದು ಹೇಳಿದ್ದಾರೆ. ಆಸ್ಪತ್ರೆಯಲ್ಲಿ ಜಿಜಿ ಅವರನ್ನು ಭೇಟಿ ಮಾಡಿದ ನಟ ಜಗ್ಗೇಶ್ ‘ಈಗ ತಾನೇ ಗೋವಿಂದೇ ಗೌಡನನ್ನು ಭೇಟಿ ಮಾಡಿದೆ. ರಾಯರ ಆಶೀರ್ವಾದಿಂದ ಕ್ಷೇಮವಾಗಿದ್ದಾನೆ,’ ಎಂದು ಹೇಳಿದ್ದಾರೆ. ಈ ಸಂದರ್ಭದಲ್ಲಿ ನಿರ್ದೇಶಕ ಯೋಗರಾಜ್‌ ಭಟ್ ಹಾಗೂ ಜೀ ವಾಹಿನಿಯ ಶರಣಯ್ಯ ಇದ್ದರು ಎನ್ನಲಾಗಿದೆ. 

ಯೋಗರಾಜ್‌ ಭಟ್ ನಿರ್ದೇಶನ ‘ಆದ್ದರಿಂದ’ ಚಿತ್ರದಲ್ಲಿ ಗೋವಿಂದೇ ಗೌಡ ಮತ್ತು ಅವರ ಪತ್ನಿ ದಿವ್ಯಾ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಅವಘಡ ನಡೆದಿರುವುದು ಯಾವ ಸೆಟ್‌ನಲ್ಲಿ ಎಂಬ ನಿಖರವಾದ ಮಾಹಿತಿ ಲಭ್ಯವಾಗಿಲ್ಲ. ಹಾಗೂ ಜಗ್ಗೇಶ್ ಹೊರತು ಪಡಿಸಿ, ಕಾಮಿಡಿ ಕಿಲಾಡಿಗಳು ತಂಡ ಹಾಗೂ ಇನ್ನಿತರ ಕಲಾವಿದರಿಂದ ಯಾವ ಮಾಹಿತಿಯೂ ಹೊರಬಂದಿಲ್ಲ. ಕಾಮಿಡಿಕಿಲಾಡಿ ನಟ GG ಗೋವಿಂದೆಗೌಡನಿಗೆ ಚಿತ್ರಿಕರಣ ಸಮಯದಲ್ಲಿ ಅಪಘಾತವಾಗಿ BGS ಆಸ್ಪತ್ರೆಯಲ್ಲಿ ದಾಖಲಾಗಿರುವ ದಯಮಾಡಿ ಅವನಿಗೆ ಏನು ಆಗದಂತೆ ನೀವು ಪ್ರಾರ್ಥನೆ ಮಾಡಿ. ದಯವಿಟ್ಟು ಅವನಿಗೆ ಏನೂ ಆಗದಂತೆ ನೀವು ಪ್ರಾರ್ಥನೆ ಮಾಡಿ. ನಾನು ಗಣಪತಿಗೆ ಪ್ರಾರ್ಥಿಸಿ ಆಸ್ಪತ್ರೆಗೆ ಹೊರಟೆ,’ ಎಂದು ಜಗ್ಗೇಶ್ ಟ್ಟೀಟ್ ಮಾಡಿದ್ದಾರೆ.

Leave A Reply

Your email address will not be published.

error: Content is protected !!