ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ನೇಮಕಾತಿ ನಡೆಯುತ್ತಿದ್ದು ಎ ಆರ್ ಟಿ ಕೇಂದ್ರ ಸಿ ವಿ ರಾಮನ್ ಸಾರ್ವಜನಿಕ ಆಸ್ಪತ್ರೆ ಇಂದಿರಾ ನಗರ ಬೆಂಗಳೂರು ಇಲ್ಲಿ ನೇಮಕಾತಿ ನಡೆಯುತ್ತಿದೆ. ಈ ಕುರಿತು ಇಲಾಖೆಯಿಂದ ಪ್ರಕಟಣೆ ಹೊರಬಿದ್ದಿದ್ದು ಈ ಪ್ರಕಟಣೆಯಲ್ಲಿ ಏನಿದೆ ಎಂಬುದರ ಕುರಿತಾದ ಸಂಪೂರ್ಣ ಮಾಹಿತಿಯನ್ನು ನಾವಿಂದು ನಿಮಗೆ ತಿಳಿಸಿಕೊಡುತ್ತೇವೆ.

ಸರ್ ಸಿ ವಿ ರಾಮನ್ ಸಾರ್ವಜನಿಕ ಆಸ್ಪತ್ರೆ ಇಂದಿರಾನಗರ ಬೆಂಗಳೂರು ಇಲ್ಲಿನ ಎ ಆರ್ ಟಿ ಕೇಂದ್ರದಲ್ಲಿ ಖಾಲಿ ಇರುವ ಔಷಧ ವಿತರಕರು ಮತ್ತು ಶುಶ್ರೂಷಕರು ಹುದ್ದೆಯನ್ನು ಗುತ್ತಿಗೆ ಆಧಾರದ ಮೇಲೆ ತುಂಬಲು ಜನವರಿ ಐದು ಎರಡು ಸಾವಿರದ ಇಪ್ಪತ್ತೆರಡರಂದು ಹನ್ನೆರಡು ಗಂಟೆಯಿಂದ ಒಂದು ಗಂಟೆಯವರೆಗೆ ನೇರ ಸಂದರ್ಶನವನ್ನು ನಿಗದಿಪಡಿಸಲಾಗಿದೆ. ಹುದ್ದೆಯ ವಿವರವನ್ನು ನೋಡುವುದಾದರೆ ಹುದ್ದೆಯ ಹೆಸರು ಔಷಧಿ ವಿತರಕರು ಖಾಲಿ ಇರುವ ಹುದ್ದೆಗಳ ಸಂಖ್ಯೆ ಒಂದು. ಈ ಹುದ್ದೆಗೆ ಸಂಬಂಧಿಸಿದಂತೆ ಸಂದರ್ಶನದಲ್ಲಿ ಭಾಗವಹಿಸುವ ಅಭ್ಯರ್ಥಿಗಳ ವಿದ್ಯಾರ್ಹತೆ ಯಾವುದಾಗಿರಬೇಕು ಎಂದರೆ ಬ್ಯಾಚುರಲ್ ಆಫ್ ಫಾರ್ಮಸಿ ಅಥವಾ ಡಿಪ್ಲೋಮಾ ಇನ್ ನರ್ಸಿಂಗ್ ಜೊತೆಗೆ ಮೂರು ವರ್ಷಗಳ ಅನುಭವ ಇರಬೇಕು.

ಈ ಹುದ್ದೆಗೆ ಆಯ್ಕೆಯಾದ ಅಭ್ಯರ್ಥಿಗೆ ಮಾಸಿಕ ವೇತನ ಹದಿಮೂರು ಸಾವಿರ ರೂಪಾಯಿ ಇರುತ್ತದೆ. ಎರಡನೇಯ ಹುದ್ದೆಯ ಹೆಸರು ಶುಶ್ರೂಷಕರು ಇಲ್ಲಿ ಖಾಲಿ ಇರುವ ಹುದ್ದೆಗಳ ಸಂಖ್ಯೆ ಒಂದು ಈ ಹುದ್ದೆಯ ಸಂದರ್ಶನದಲ್ಲಿ ಭಾಗವಹಿಸುವ ಅಭ್ಯರ್ಥಿಗಳು ಬಿಎಸ್ಸಿ ನರ್ಸಿಂಗ್ ಅಥವಾ ಡಿಪ್ಲೊಮಾ ಇನ್ ನರ್ಸಿಂಗ್ ಮುಗಿಸಿರಬೇಕು ಜೊತೆಗೆ ಎರಡು ವರ್ಷ ಅನುಭವವನ್ನು ಹೊಂದಿರಬೇಕು. ಆಯ್ಕೆಯಾದ ಅಭ್ಯರ್ಥಿಗೆ ಮಾಸಿಕ ವೇತನ ಹದಿಮೂರು ಸಾವಿರ ರೂಪಾಯಿ ಇರುತ್ತದೆ. ಸಂದರ್ಶನದಲ್ಲಿ ಒಂದುವೇಳೆ ಬಿ ಫಾರ್ಮ ಅಭ್ಯರ್ಥಿಗಳು ಲಭ್ಯವಿಲ್ಲದ ಪಕ್ಷದಲ್ಲಿ ಡಿ ಫಾರ್ಮ ಮೂರು ವರ್ಷ ಅನುಭವವಿರುವ ಅಭ್ಯರ್ಥಿಗಳನ್ನು ಪರಿಗಣಿಸಲಾಗುವುದು.

ಸಂದರ್ಶನದಲ್ಲಿ ಭಾಗವಹಿಸುವ ಅಭ್ಯರ್ಥಿಗಳು ವಿದ್ಯಾರ್ಹತೆಯ ಮೂಲ ಪ್ರಮಾಣ ಪತ್ರ ಮತ್ತು ಜೆರಾಕ್ಸ್ ಪ್ರತಿಯನ್ನು ಸಂದರ್ಶನದ ವೇಳೆ ಸಲ್ಲಿಸಬೇಕು. ಈ ಸಂದರ್ಶನದಲ್ಲಿ ಭಾಗವಹಿಸುವ ಅಭ್ಯರ್ಥಿಗಳ ವಯೋಮಿತಿ ಅರವತ್ತೈದು ವರ್ಷ ಮೀರಿರಬಾರದು. ಸಂದರ್ಶನ ನಡೆಯುವ ಸ್ಥಳ ಸಿವಿ ರಾಮನ್ ಸಾರ್ವಜನಿಕ ಆಸ್ಪತ್ರೆ ಇಂದಿರಾನಗರ ಬೆಂಗಳೂರು. ನೀವು ಕೂಡ ಮೇಲೆ ತಿಳಿಸಿರುವ ವಿದ್ಯಾರ್ಹತೆಯನ್ನು ಹೊಂದಿದ್ದು ಉದ್ಯೋಗಕ್ಕಾಗಿ ಹುಡುಕಾಟ ನಡೆಸುತ್ತಿದ್ದರೆ ಈ ಸಂದರ್ಶನದಲ್ಲಿ ಭಾಗವಹಿಸಿ ಉದ್ಯೋಗವನ್ನು ಪಡೆದುಕೊಳ್ಳಬಹುದಾಗಿದೆ. ಈ ಮಾಹಿತಿಯನ್ನು ನೀವು ತಿಳಿದುಕೊಳ್ಳುವುದರ ಜೊತೆಗೆ ನಿಮ್ಮ ಪರಿಚಿತರಿಗು ತಿಳಿಸಿರಿ.

           

By admin

Leave a Reply

Your email address will not be published. Required fields are marked *

error: Content is protected !!
Footer code: