WhatsApp Group Join Now
Telegram Group Join Now

ಕೆಲವರಿಗಂತೂ ಮನೆಯಲ್ಲಿ, ಆಫೀಸಲ್ಲಿ ಕೆಲಸದ ಗಡಿಬಿಡಿಯಲ್ಲಿ ಓಡಾಡಲಿಕ್ಕೆ ಸಮಯವೇ ದೊರೆಯುವುದಿಲ್ಲ. ಆಲಸ್ಯ ಹಾಗೂ ಶಾರೀರಿಕ ಶ್ರಮವಿಲ್ಲದ ಜೀವನ ಅನೇಕ ರೋಗಗಳಿಗೆ ಆಹ್ವಾನ ನೀಡುತ್ತದೆ. ಶಾರೀರಿಕ ಶ್ರಮದಿಂದ ನಮ್ಮ ಆರೋಗ್ಯ ವೃದ್ಧಿಸುತ್ತದೆ. ಬೆಳಗಿನ ನಡಿಗೆಯಿಂದ ಆರೋಗ್ಯ ವೃದ್ಧಿಸುವುದು ಮಾತ್ರವಲ್ಲ, ನೀವು ದಿನಪೂರ್ತಿ ಲವಲವಿಕೆಯಿಂದ ಇರುವಿರಿ.

ಹಾಗೆಯೇ ರಾತ್ರಿ ಕಣ್ತುಂಬಾ ನಿದ್ದೆ ಮಾಡುವಿರಿ. ಬೆಳಗಿನ ಕೇವಲ ಮೂವತ್ತು ನಿಮಿಷದ ನಡಿಗೆ ನಿಮ್ಮ ಆರೋಗ್ಯವನ್ನು ಕಾಪಾಡುತ್ತದೆ ಎನ್ನುವ ವಿಷಯ ಎಲ್ಲಾ ನಮಗೆ ತಿಳಿದೇ ಇದೆ. ಆದರೆ ನಾವು ಪ್ರತೀ ನಿತ್ಯ ವಾಕಿಂಗ್ ಆರಂಭ ಮುನ್ನ ನಮ್ಮ ದಿನನಿತ್ಯದ ಶೌಚದ ಕೆಲಸ ಎಷ್ಟು ಸಮಯದಲ್ಲಿ ಆಗಬೇಕು? ವಾಕಿಂಗ್ ಆರಂಭ ಮಾಡುವುದಕ್ಕೂ ಮುನ್ನ ಎಷ್ಟು ಪ್ರಮಾಣ ನೀರು ಕುಡಿಯಬೇಕು ಹಾಗೂ ಏನೆಲ್ಲಾ ಮಾಡಬೇಕು? ಮಾಡಬಾರದು ಎನ್ನುವುದನ್ನು ನಾವು ಈ ಲೇಖನದ ಮೂಲಕ ತಿಳಿದುಕೊಳ್ಳೋಣ.

ಸಾಮಾನ್ಯವಾಗಿ ಎಲ್ಲರೂ ಬೆಳಿಗ್ಗೆ ವಾಕಿಂಗ್ ಅಥವಾ ಜಾಗಿಂಗ್ ಗೆ ಅಂತಾ ಹೋಗುತ್ತಾರೆ. ಆದರೆ ಹೋಗುವ ಸಮಯ ಮಾತ್ರ ವಾಹನಗಳ ಸಂಚಾರ ಆರಂಭ ಆದ ನಂತರ. ಅಂದರೆ ಎಂಟು ಗಂಟೆ ಹೀಗೆಲ್ಲ ವಾಕಿಂಗ್ ಅಥವಾ ಜಾಗಿಂಗ್ ಹೋಗುವ ಜನರನ್ನು ನಾವು ಕಾಣುತ್ತೇವೆ. ಆದರೆ ಈ ಸಮಯದಲ್ಲಿ ಅದಾಗಲೇ ವಾಹನಗಳ ಸಂಚಾರ ಪೂರ್ತಿಯಾಗಿ ಅಲ್ಲದೆ ಇದ್ದರೂ ಸುಮಾರು ವಾಹನ ದಟ್ಟಣೆ ಇದ್ದೇ ಇರುತ್ತದೆ ಈ ಸಮಯದಲ್ಲಿ ನಾವು ವಾಕಿಂಗ್ ಅಥವಾ ಜಾಗಿಂಗ್ ಹೋದಾಗ ಅದರಿಂದ ನಮಗೆ ಯಾವುದೇ ರೀತಿಯ ಪ್ರಯೋಜನವೂ ಬರುವುದಿಲ್ಲ.

ನಗರಗಳಲ್ಲಿ ಶುದ್ಧವಾದ ಗಾಳಿ ಸಿಗುವುದು ಈಗಂತೂ ಕನಸಿನ ಮಾತೇ ಆಗಿದೆ. ಹಾಗಿದ್ದಾಗ ನಾವು ಆದಷ್ಟು ಶುದ್ಧವಾದ ಗಾಳಿ ಸಿಗುವ ಸಮಯ ಅಂದರೆ, ವಾಹನಗಳ ಸಂಚಾರ ಹೆಚ್ಚಾಗಿ ಆಗುವ ಮೊದಲೇ ನಮ್ಮ ವಾಕಿಂಗ್ ಅಥವಾ ಜಾಗಿಂಗ್ ಮುಗಿಸಿಕೊಳ್ಳಬೇಕು. ಹಾಗಿದ್ದರೆ ಜಾಗಿಂಗ್ ಅಥವಾ ವಾಕಿಂಗ್ ಅನ್ನು ಯಾವ ಸಮಯದಲ್ಲಿ ಮಾಡಬೇಕು? ಮೊದಲು ನಾವು ಬ್ರಾಹ್ಮೀ ಮುಹೂರ್ತದಲ್ಲಿ ಏಳಬೇಕು.

ಆಯಸ್ಸಿನ ಇಚ್ಛೆ ಇರುವ ವ್ಯಕ್ತಿ ಬ್ರಾಹ್ಮೀ ಮುಹೂರ್ತದಲ್ಲಿ ಏಳಬೇಕು ಎಂದು ಹೇಳುತ್ತಾರೆ. ಬ್ರಾಹ್ಮೀ ಮುಹೂರ್ತದಲ್ಲಿ ಎಳುವುದರಿಂದ ನಮ್ಮ ಆರೋಗ್ಯ ಚೆನ್ನಾಗಿ ಇರುತ್ತದೆ. ಬ್ರಾಹ್ಮೀ ಮುಹೂರ್ತ ಎಂದರೆ, ಸೂರ್ಯೋದಯಕ್ಕೆ ಮುಕ್ಕಾಲು ಗಂಟೆ ಮೊದಲು ಏಳಬೇಕು. ಅಂದರೆ ಈ ಬ್ರಾಹ್ಮೀ ಮುಹೂರ್ತದ ಸಮಯ ಸರಿಸುಮಾರು ಬೆಳಗಿನ ನಾಲ್ಕೂವರೆ ಇಂದ ಐದು ವರೆ. ಈ ಸಮಯದಲ್ಲಿ ಎದ್ದು ನಮ್ಮ ದಿನನಿತ್ಯದ ಶೌಚದ ಕಾರ್ಯ ಮುಗಿಸಿ ಬ್ರಷ್ ಮಾಡಿ ನೀರು ಕುಡಿಯಬೇಕು.

ಆಯುರ್ವೇದದ ಪ್ರಕಾರ, ಹಾಗೇ ಸುಮ್ಮನೆ ನೀರು ಕುಡಿದು ವಾಕಿಂಗ್ ಶುರು ಮಾಡೋಣ ಅಂದರೆ ಅದರಿಂದ ಪ್ರಯೋಜನ ಇರುವುದಿಲ್ಲ. ಸೂರ್ಯೋದಯಕ್ಕೆ ಮೊದಲು ಮುಕ್ಕಾಲು ಲೀಟರ್ ಅಷ್ಟು ನೀರನ್ನು ಕುಡಿಯಬೇಕು. ಇದರಿಂದ ನಾವು ಹಲವಾರು ಕಾಯಿಲೆಗಳಿಂದ ನಮ್ಮ ದೇಹವನ್ನು ದೂರ ಇಡಬಹುದು. ಇದನ್ನು ಆಯುರ್ವೇದದಲ್ಲಿ ರೋಗವನ್ನು ತಡೆಗಟ್ಟುವ ಒಂದು ವಿಧಾನವಾಗಿ ಹೇಳಿದ್ದಾರೆ ಹಾಗಾಗಿ ಏನಾದರೂ ರೋಗ ಇರುವವರು ಮೊದಲು ವೈದ್ಯರ ಸಲಹೆಯನ್ನು ಪಡೆಯಬೇಕು. ಇನ್ನು ಯಾವುದೇ ರೋಗ ಇಲ್ಲದವರು ಮುಕ್ಕಾಲು ಲೀಟರ್ ಅಷ್ಟು ಉಗುರು ಬೆಚ್ಚನೆಯ ನೀರು ಕುಡಿಯಬೇಕು ಅಥವಾ ಹೊಟ್ಟೆ ತುಂಬುವಷ್ಟು ನೀರು ಕುಡಿಯಬೇಕು.

ಹಾಗೇ ನೀರು ಕುಡಿದು ತಕ್ಷಣ ವಾಕಿಂಗ್ ಅಥವಾ ಜಾಗಿಂಗ್ ಗೆ ಹೋಗುವುದು ಸರಿಯಲ್ಲ. ನೀರು ಕುಡಿದಾದ ನಂತರ ಹತ್ತರಿಂದ ಹದಿನೈದು ನಿಮಿಷಗಳ ಕಾಲ ಬಿಟ್ಟು ನಂತರ ವಾಕಿಂಗ್ ಅಥವಾ ಜಾಗಿಂಗ್ ಹೋಗುವುದು ಉತ್ತಮ. ಮತ್ತು ಹೋಗುವ ಮೊದಲು ಸ್ವಲ್ಪ ಪ್ರಾಣಾಯಾಮ ಮಾಡಿದರೆ ಇನ್ನೂ ಒಳ್ಳೆಯದು. ಪ್ರಾಣಾಯಾಮ ಮಾಡುವಾಗ ನಮ್ಮ ದೇಹದಲ್ಲಿ ಬೆವರು ಬರುವಂತಹ ಆಸನಗಳನ್ನು ಮೊದಲು ಮಾಡಬೇಕು ಎಂದು ಯೋಗದಲ್ಲಿ ಹೇಳಲಾಗಿದೆ. ಹೀಗೆ ಮಾಡಿದರೆ ನಮ್ಮ ದೇಹವನ್ನು ನಾವು ಆರೋಗ್ಯವಾಗಿ ಇಟ್ಟುಕೊಳ್ಳಬಹುದು.

ಶಿರಡಿ ಸಾಯಿಬಾಬಾ ಜ್ಯೋತಿಷ್ಯ ಶಾಸ್ತ್ರಂ ನಂಬಿ ಕರೆ ಮಾಡಿದವರಿಗೆ ವಿಶೇಷ ಸಾಂತ್ವಾನ, ಸಮಸ್ಯೆ ಸಮಸ್ಯೆ ಸಮಸ್ಯೆ ಚಿಂತಿಸಬೇಡಿ, ಅಸಾಧ್ಯವಾದದ್ದು ಇಲ್ಲಿ ಸಾಧ್ಯ ಸಮಸ್ಯೆಗಳಾದ ವಿದ್ಯೆ ಉದ್ಯೋಗ ವ್ಯಾಪಾರ ಆರೋಗ್ಯ ದಾಂಪತ್ಯ ಗಂಡ-ಹೆಂಡತಿಯರ ಕಲಹ ಪ್ರೀತಿಯಲ್ಲಿ ನಂಬಿ ಮೋಸ ಇಷ್ಟಪಟ್ಟವರು ನಿಮ್ಮಂತೆ ಆಗಲು ಕೋರ್ಟ್ ಕೇಸ್ ಜಮೀನು ಸ್ತ್ರೀ ಮತ್ತು ಪುರುಷ ವಶೀಕರಣ ಶತ್ರು ಕಾಟ ಮಾಟ-ಮಂತ್ರ ಇನ್ನು ಮುಂತಾದ ಸಮಸ್ಯೆಗಳಿಗೆ ಅತಿ ಶೀಘ್ರದಲ್ಲಿ ಪರಿಹಾರಅಸಾಧ್ಯ ಆಗುವ ಸಮಸ್ಯೆಗಳಿಗೆ ಸಾಧ್ಯವಾಗಿ ತೋರಿಸುವುದು ಶ್ರೀ ಶಿರಡಿ ಸಾಯಿಬಾಬಾ ಜ್ಯೋತಿಷ್ಯಶಾಸ್ತ್ರನಿಮ್ಮ ನಂಬಿಕೆಗೆ ಇಲ್ಲಿ ಮೋಸವಿಲ್ಲ 9611844430

WhatsApp Group Join Now
Telegram Group Join Now

By

Leave a Reply

Your email address will not be published. Required fields are marked *

error: Content is protected !!
Footer code: