ಕಡಿಮೆ ಬಂಡವಾಳ ಒಳ್ಳೆ ಲಾಭ ಇರುವ ಈ ಬಿಸಿನೆಸ್ ನಿಮ್ಮೂರಿನಲ್ಲಿ ಕೂಡ ಮಾಡಬಹುದು

0

ಸಾಮನ್ಯವಾಗಿ ಎಲ್ಲರೂ ತನಗೆ ಸರ್ಕಾರಿ ನೌಕರಿ ಸಿಗಳಿ ಎಂದು ಆಸೆ ಪಡುವುದು, ಬಯಸುವುದು ಹೆಚ್ಚು. ಕೆಲವೊಮ್ಮೆ ಅದೆಷ್ಟೋ ಕಾರಣಗಳಿಂದ ನಾವು ಬಯಸಿದಂತಹ ಸರ್ಕಾರಿ ಕೆಲಸ ಸಿಗುವುದೇ ಇಲ್ಲಾ. ಸರ್ಕಾರಿ ಕೆಲಸ ಸಿಗಲಿಲ್ಲ ಎಂದು ಜೀವನದಲ್ಲಿ ಬೇರೆ ಆಯ್ಕೆ ಇಲ್ಲವೇ ಇಲ್ಲ ಎಂದು ಜಿಗುಪ್ಸೆ ಹೊಂದುವ ಜನರು ಒಂದು ಕಡೆ ಆದರೆ ಅಜ್ಜ ನೆಟ್ಟಿದ ಆಲದ ಮರಕ್ಕೆ ನೇಣು ಬಿಗಿದುಕೊಳ್ಳದೆ ತಮ್ಮ ಸ್ವಂತ ಕಾಲಮೇಲೆ ನಿಲ್ಲುವ ಪ್ರಯತ್ನ ಮಾಡುವ ಜನ ಇನ್ನೊಂದು ಕಡೆ.

ಇವರು ಜೀವನದಲ್ಲಿ ಸರ್ಕಾರಿ ಕೆಲಸ ಸಿಗದೇ ಹೋದರೆ ಏನೂ ನಾವ್ ಸ್ವಂತವಾಗಿ ಏನಾದರೂ ಬಿಸ್ನೆಸ್ ಆರಂಭ ಮಾಡಿ ಲಾಭ ಗಳಿಸುತ್ತೇವೆ ಎಂದು ಯಾವುದಾದರೂ ಬಿಸ್ನೆಸ್ ಆರಂಭ ಮಾಡುತ್ತಾರೆ. ಆದರೂ ಇದರಲ್ಲಿ ಕೂಡಾ ಕೆಲವರಿಗೆ ತಾನು ಯಾವ ಬಿಸ್ನೆಸ್ ಮಾಡಬಹುದು? ಯಾವ ಬಿಸ್ನೆಸ್ ಗೆ ಎಷ್ಟು ಬಂಡವಾಳ ಹೂಡಿಕೆ ಮಾಡಬೇಕು ಎನ್ನುವ ಗೊಂದಲ ಇದ್ದೇ ಇರುತ್ತದೆ. ಅಂತಹ ಆತ್ಮ ವಿಶ್ವಾಸ ಹೊಂದಿದ ಹಾಗೂ ಆಕಾಂಕ್ಷಿ ವ್ಯಕ್ತಿಗಳಾಗಿ ಈ ಲೇಖನದಲ್ಲಿ ಒಂದು ಉತ್ತಮ ಬಿಸ್ನೆಸ್ ಆರಂಭ ಮಾಡುವುದು ಹೇಗೆ? ಎನ್ನುವುದರ ಕುರಿತಾಗಿ ಮಾಹಿತಿಯನ್ನು ತಿಳಿಸಿಕೊಡುತ್ತೇವೆ.

ಈ ಬಿಸ್ನೆಸ್ ನಿಮಗೆ ಹೆಚ್ಚು ಲಾಭವನ್ನು ಗಳಿಸಿಕೊಡುವುದರ ಜೊತೆಗೆ ಮಾರುಕಟ್ಟೆಯಲ್ಲಿ ಕಡಿಮೆ ಪೈಪೋಟಿಯನ್ನು ನೀಡುತ್ತದೆ. ಈ ಬಿಸ್ನೆಸ್ ಏನೂ ಅಂದ್ರೆ PP ವೋವನ್ ಬ್ಯಾಗ್ ಬಿಸ್ನೆಸ್. ಅಂದರೆ ಪ್ಲಾಸ್ಟಿಕ್ ಚೀಲಗಳ ತಯಾರಿಕೆ. ಸಾಮಾನ್ಯವಾಗಿ ಇದರ ಬಳಕೆ ಹೆಚ್ಚಾಗಿಯೇ ಇರುತ್ತದೆ ಹಾಗೂ ಇದರ ಬಳಕೆ ಕೂಡಾ ಎಲ್ಲರಿಗೂ ತಿಳಿದೇ ಇದೆ. ಸಾಮಾನ್ಯವಾಗಿ ಇಂತಹ ಚೀಲಗಳನ್ನು ದವಸ ಧಾನ್ಯಗಳನ್ನು ಶೇಖರಣೆ ಮಾಡುವ ಸಲುವಾಗಿ ಬಳಕೆ ಮಾಡಲಾಗುತ್ತದೆ.

ಇದಕ್ಕೆ ಉತ್ತಮ ಬೇಡಿಕೆ ಕೂಡಾ ಇರುವುದರಿಂದ ಈ ಬಿಸ್ನೆಸ್ ಆರಂಭ ಮಾಡಿದರೆ ಉತ್ತಮ ಲಾಭವನ್ನೇ ಗಳಿಸಬಹುದು. ಹಾಗಿದ್ದರೆ ಈ ಬಿಸ್ನೆಸ್ ಆರಂಭ ಮಾಡುವುದು ಹೇಗೆ ಎಂದು ನೋಡೋಣ. ಈ ಬಿಸ್ನೆಸ್ ಗಾಗಿ ನಿಮಗೆ ಪ್ರಿಂಟಿಂಗ್ ಮಶೀನ್, ಕಟ್ಟಿಂಗ್ ಮಶೀನ್ ಹಾಗೂ ಸ್ಟಿಚಿಂಗ್ ಮಶೀನ್ ಅಂದ್ರೆ ಹೊಲಿಗೆ ಯಂತ್ರ ಬೇಕು. ಇನ್ನೂ ಇದಕ್ಕೆ ಕಚ್ಚಾ ವಸ್ತುಗಳು ಏನೆಲ್ಲಾ ಬೇಕು? ಎಂದು ನೋಡುವುದಾದರೆ, HDPE ಅಥವಾ PP ರೋಲ್ ಬೇಕು. ಪ್ರಿಂಟಿಂಗ್ ಇಂಕ್ ಹಾಗೂ ದಾರ ಕೂಡಾ ಬೇಕು.

ಇನ್ನೂ ಇದರ ಬಳಕೆ ಮಾಡಿ ಚೀಲ ತಯಾರಿಸುವುದು ಹೇಗೆ? ಎಂದು ನೋಡುವುದಾದರೆ, HDPE ಮತ್ತು PP ರೋಲ್ ಇವುಗಳನ್ನು ಮಶೀನ್ ನಲ್ಲಿ ಸೆಟ್ ಮಾಡಬೇಕು ಹಾಗೇ ನಂತರ ಮಶೀನ್ ಸ್ಟಾರ್ಟ್ ಮಾಡಿ, ಚೀಲಗಳ ಮೇಲೆ ನೀವು ಇಡಬೇಕಾದ ಹೆಸರನ್ನು ಹಾಗೂ ಅದಕ್ಕೆ ಬೇಕಾದ ಬಣ್ಣಗಳನ್ನು ಆಯ್ಕೆ ಮಾಡಿ ಸೆಟ್ ಮಾಡಿ ಅಪ್ಲೈ ಮಾಡಬೇಕು. ಹೀಗೆ ಮಾಡಿದಾಗ ಬ್ಯಾಗ್ ಸಿದ್ಧವಾಗುತ್ತದೆ ನಂತರ ಇದನ್ನು ಸ್ಟಿಚ್ ಮಾಡಿ ಮಾರಾಟ ಮಾಡಬಹುದು.

ಈ ಚೀಲಗಳನ್ನು ಯಾವ ಗಾತ್ರದಲ್ಲಿ ಬೇಕಿದ್ದರೂ ಸಿದ್ಧಮಾಡಬಹುದು. ಇನ್ನೂ ಈ ಬಿಸ್ನೆಸ್ ಇಂದ ನಿಮಗೆ ಎಷ್ಟು ಲಾಭ ಸಿಗಬಹುದು ಎಂದು ನೋಡುವುದಾದರೆ, ಹದಿನೈದರಿಂದ ಇಪ್ಪತ್ತು ಪರ್ಸೆಂಟ್ ಅಷ್ಟು ಲಾಭ ಗಳಿಸಬಹುದು. ಇದರಲ್ಲಿ ಮಾರ್ಕೆಟಿಂಗ್ ಬಹಳ ಮುಖ್ಯವಾಗಿರುತ್ತದೆ. ಹೊಲ್ಸೆಲ್ ಡೀಲರ್ ಆಗಿ ಕೂಡಾ ಮಾರ್ಕೆಟಿಂಗ್ ಮಾಡಬಹುದು. ದೊಡ್ದ ದೊಡ್ದ ಫುಡ್ ಇಂಡಸ್ಟ್ರಿ , ಅಕ್ಕಿ, ಸಕ್ಕರೆ ಕಾರ್ಖಾನೆ ಗಳಿಗೆ ಇಂತಹ ಚೀಲಗಳನ್ನು ಮಾರಾಟ ಮಾಡಬಹುದು. ಈ ಬಿಸ್ನೆಸ್ ನ ಮಶೀನ್ ಹಾಗೂ PP ರೋಲ್ ಇವುಗಳ ಬಗ್ಗೆ ತಿಳಿಯಲು ಈ ವಿಡಿಯೋ ನೋಡಿ.

ಶಿರಡಿ ಸಾಯಿಬಾಬಾ ಜ್ಯೋತಿಷ್ಯ ಶಾಸ್ತ್ರಂ ನಂಬಿ ಕರೆ ಮಾಡಿದವರಿಗೆ ವಿಶೇಷ ಸಾಂತ್ವಾನ, ಸಮಸ್ಯೆ ಸಮಸ್ಯೆ ಸಮಸ್ಯೆ ಚಿಂತಿಸಬೇಡಿ, ಅಸಾಧ್ಯವಾದದ್ದು ಇಲ್ಲಿ ಸಾಧ್ಯ ಸಮಸ್ಯೆಗಳಾದ ವಿದ್ಯೆ ಉದ್ಯೋಗ ವ್ಯಾಪಾರ ಆರೋಗ್ಯ ದಾಂಪತ್ಯ ಗಂಡ-ಹೆಂಡತಿಯರ ಕಲಹ ಪ್ರೀತಿಯಲ್ಲಿ ನಂಬಿ ಮೋಸ ಇಷ್ಟಪಟ್ಟವರು ನಿಮ್ಮಂತೆ ಆಗಲು ಕೋರ್ಟ್ ಕೇಸ್ ಜಮೀನು ಸ್ತ್ರೀ ಮತ್ತು ಪುರುಷ ವಶೀಕರಣ ಶತ್ರು ಕಾಟ ಮಾಟ-ಮಂತ್ರ ಇನ್ನು ಮುಂತಾದ ಸಮಸ್ಯೆಗಳಿಗೆ ಅತಿ ಶೀಘ್ರದಲ್ಲಿ ಪರಿಹಾರಅಸಾಧ್ಯ ಆಗುವ ಸಮಸ್ಯೆಗಳಿಗೆ ಸಾಧ್ಯವಾಗಿ ತೋರಿಸುವುದು ಶ್ರೀ ಶಿರಡಿ ಸಾಯಿಬಾಬಾ ಜ್ಯೋತಿಷ್ಯಶಾಸ್ತ್ರನಿಮ್ಮ ನಂಬಿಕೆಗೆ ಇಲ್ಲಿ ಮೋಸವಿಲ್ಲ 9611844430

Leave A Reply

Your email address will not be published.

error: Content is protected !!