ಅಪ್ಪು ಸರಳತೆಯ ಸರದಾರ ಅನ್ನೋದಕ್ಕೆ ಈ ವಿಡಿಯೋದಲ್ಲೇ ಗೊತ್ತಾಗುತ್ತೆ

0

ನಮ್ಮನ್ನು ಅಗಲಿದ ಪುನೀತ್ ರಾಜಕುಮಾರ್ ಅವರು ತಮ್ಮದೆ ಆದ ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ಅವರ ಅಂತಿಮ ದರ್ಶನಕ್ಕೆ 25 ಲಕ್ಷಕ್ಕೂ ಅಧಿಕ ಜನರು ಭಾಗವಹಿಸಿದ್ದರು. ಅವರ ಬಗ್ಗೆ ಹಾಗೂ ಉತ್ತರ ಕರ್ನಾಟಕದ ಜನರ ಬಗ್ಗೆ ಅವರ ಮಾತುಗಳನ್ನು ಈ ಲೇಖನದ ಮೂಲಕ ತಿಳಿಯೋಣ.

ಕನ್ನಡ ಚಿತ್ರರಂಗದಲ್ಲಿ ಮಾತ್ರವಲ್ಲದೆ ದಕ್ಷಿಣ ಭಾರತದ ಕೆಲವೆ ಸ್ಟಾರ್ ನಟರಲ್ಲಿ ಪುನೀತ್ ರಾಜಕುಮಾರ್ ಅವರು ಒಬ್ಬರಾಗಿದ್ದರು. ಸ್ಯಾಂಡಲ್ ವುಡ್ ನ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ಯುವಕರ ಪಾಲಿನ ಐಕಾನ್ ಆಗಿ ಹೊರಹೊಮ್ಮಿದರು. ಪುನೀತ್ ಅವರು ಅಭಿನಯದಿಂದ, ಸ್ವಂತ ಪರಿಶ್ರಮದಿಂದ ಚಿತ್ರರಂಗದಲ್ಲಿ ಬೆಳೆದರು. ಪುನೀತ್ ರಾಜಕುಮಾರ್ ಅವರು 1975 ಮಾರ್ಚ್ 9 ರಂದು ಡಾಕ್ಟರ್ ರಾಜಕುಮಾರ್ ಹಾಗೂ ಪಾರ್ವತಮ್ಮ ರಾಜಕುಮಾರ್ ಅವರ ಮಗನಾಗಿ ಜನಿಸಿದರು.

ಪುನೀತ್ ಅವರ ಸಹೋದರರಾದ ಶಿವಣ್ಣ ಹಾಗೂ ರಾಘವೇಂದ್ರ ರಾಜಕುಮಾರ್ ಅವರು ಚಿತ್ರರಂಗದಲ್ಲಿ ಹೆಸರು ಮಾಡಿದ್ದಾರೆ. ಪುನೀತ್ ಅವರು ಚಿಕ್ಕವಯಸ್ಸಿನಲ್ಲಿ ಅವರಿಗೆ 6 ತಿಂಗಳು ಇರುವಾಗಲೆ ರಾಜಕುಮಾರ್ ಅವರ ಪ್ರೇಮದ ಕಾಣಿಕೆ ಸಿನಿಮಾದಲ್ಲಿ ನಟಿಸಿದ್ದರು. ಪುನೀತ್ ಅವರು 1991 ಡಿಸೆಂಬರ್ 1 ರಂದು ಅಶ್ವಿನಿ ಅವರನ್ನು ಮದುವೆಯಾದರು. ಈ ದಂಪತಿಗೆ ಇಬ್ಬರು ಪುತ್ರಿಯರಿದ್ದಾರೆ ಅವರ ಹೆಸರು ಧೃತಿ ಹಾಗೂ ವಂದಿತಾ. ಪಾರ್ವತಮ್ಮ ಅವರ ನೆನಪಿನಲ್ಲಿ ಪಿಆರ್ ಕೆ ಸ್ಟುಡಿಯೊ ಹಾಗೂ ಆಡಿಯೊ ಸಂಸ್ಥೆಯನ್ನು ಸ್ಥಾಪಿಸಿ ಚಿತ್ರ ನಿರ್ಮಾಣದಲ್ಲಿ ಪುನೀತ್ ಅವರು ತೊಡಗಿಸಿಕೊಂಡಿದ್ದಾರೆ. ಕಮಲ್ ಹಾಸನ್ ಅವರನ್ನು ಬಿಟ್ಟರೆ ಬಾಲನಟನಾಗಿ ಹಾಗೂ ನಟನಾಗಿ ಯಶಸ್ಸನ್ನು ಪಡೆದ ಏಕೈಕ ಕಲಾವಿದ ಪುನೀತ್ ರಾಜಕುಮಾರ್. ಎರಡು ನಕ್ಷತ್ರಗಳು, ಚಲಿಸುವ ಮೋಡಗಳು, ಬೆಟ್ಟದ ಹೂವು ಚಿತ್ರದ ಅಭಿನಯಕ್ಕೆ ಪುನೀತ್ ಅವರಿಗೆ ರಾಷ್ಟ್ರ ಪ್ರಶಸ್ತಿ ದೊರೆಯಿತು.

ಅಪ್ಪು ಎಂಬ ಸಿನಿಮಾದಲ್ಲಿ ರಕ್ಷಿತಾ ಹಾಗೂ ಪುನೀತ್ ಅವರು ಮುಖ್ಯ ಪಾತ್ರದಲ್ಲಿ ನಟಿಸಿದ್ದರು. ಈ ಚಿತ್ರ 200 ದಿನಗಳ ಕಾಲ ಪ್ರದರ್ಶನ ಕಂಡಿತು. ಆಕಾಶ, ಅಭಿ, ಮೌರ್ಯ, ಬಿಂದಾಸ್, ರಾಮ್, ರಾಜ್, ಚಕ್ರವ್ಯೂಹ, ನಟಸಾರ್ವಭೌಮ, ದೊಡ್ಮನೆ ಹುಡುಗ, ಯುವರತ್ನ ಮುಂತಾದ ಸಿನಿಮಾಗಳಲ್ಲಿ ನಟಿಸಿ ಕನ್ನಡಿಗರ ಮನ ಗೆದ್ದರು. 2012 ರಲ್ಲಿ ಪ್ರಸಿದ್ಧ ಟಿವಿ ಪ್ರದರ್ಶನ ಕನ್ನಡದ ಕೋಟ್ಯಾಧಿಪತಿ ಶೊ ನಿರೂಪಣೆ ಮಾಡಿದರು. ಕೆಲವು ಸಿನಿಮಾಗಳಿಗೆ ಹಿನ್ನಲೆ ಗಾಯಕರಾಗಿದ್ದಾರೆ. ಫ್ಯಾಮಿಲಿ ಪವರ್ ಎಂಬ ರಿಯಾಲಿಟಿ ಶೊ ಕೂಡ ಪುನೀತ್ ಅವರು ನಡೆಸಿಕೊಟ್ಟರು.

ಗಾಯಕರಾಗಿ, ನಟರಾಗಿ, ನಿರೂಪಕರಾಗಿ ಕಲಾಭಿಮಾನಿಗಳನ್ನು ರಂಜಿಸಿದ್ದಾರೆ. ಅವರು ಉತ್ತರ ಕರ್ನಾಟಕದ ಅನೇಕ ಪ್ರದೇಶಗಳಿಗೆ ಭೇಟಿ ಕೊಟ್ಟಿದ್ದರು ಅವರು ಉತ್ತರ ಕರ್ನಾಟಕದ ಜನ, ಅಲ್ಲಿಯ ಊಟ ಅವರ ಉಪಚಾರ, ಅಲ್ಲಿಯ ಭಾಷೆಯನ್ನು ಪುನೀತ್ ಅವರು ಬಹಳ ಇಷ್ಟ ಪಟ್ಟಿದ್ದರು. ಪುನೀತ್ ಅವರು ಶಿಕ್ಷಣಕ್ಕೆ ಹೆಚ್ಚಿನ ಪ್ರಾಮುಖ್ಯತೆ ಕೊಡುತ್ತಿದ್ದರು, ಪುನೀತ್ ಅವರು ಶಿವಕುಮಾರ್ ಸ್ವಾಮಿ ಅವರಿಂದ ಪ್ರೇರೇಪಿತರಾಗಿದ್ದರು. ತಮ್ಮ ಯುವರತ್ನ ಸಿನಿಮಾದ ಪಾಠಶಾಲೆ ಹಾಡು ಇಷ್ಟವಾಗುತ್ತದೆ ಎಂದು ಅವರು ಹೇಳಿಕೊಂಡಿದ್ದರು. ಅವರು ಇಂದು ನಮ್ಮೊಂದಿಗೆ ಇಲ್ಲ ಎನ್ನುವುದು ಬೇಸರದ ವಿಷಯ. ಅವರ ಆತ್ಮಕ್ಕೆ ಶಾಂತಿ ಸಿಗಲಿ ಮತ್ತೆ ಕನ್ನಡ ನಾಡಿನಲ್ಲಿ ಹುಟ್ಟಿಬರಲಿ ಎಂದು ದೇವರಲ್ಲಿ ಪ್ರಾರ್ಥಿಸೋಣ.

Leave A Reply

Your email address will not be published.

error: Content is protected !!