WhatsApp Group Join Now
Telegram Group Join Now

ಕನ್ನಡ ಸಿನಿಮಾರಂಗದ ಒಬ್ಬ ಯುವರತ್ನ ವಾದಂತಹ ಪುನೀತ್ ರಾಜಕುಮಾರ್ ಅವರು ಮಾಡಿರುವಂತಹ ಒಳ್ಳೆಯ ಕೆಲಸವನ್ನು ಇನ್ನಾರು ಮಾಡುವುದಕ್ಕೆ ಸಾಧ್ಯವಿಲ್ಲ. ಸಾಮಾನ್ಯವಾಗಿ ಬಹುತೇಕರು ತಾನಾಯಿತು ತನ್ನ ಕುಟುಂಬ ವಾಯಿತು ಎಂದು ಇರುತ್ತಾರೆ ಆದರೆ ಪುನೀತ್ ರಾಜಕುಮಾರ್ ಅವರು ಮಾತ್ರ ಅನೇಕ ಜನರ ಬಾಳಿಗೆ ಬೆಳಕಾಗಿದ್ದರು. ಯಾರಾದರು ಅವರೆದುರಿಗೆ ಕಷ್ಟ ಎಂದು ಹೇಳಿಕೊಂಡರೆ ಅವರ ಕಷ್ಟವನ್ನು ಪರಿಹರಿಸುತ್ತಿದ್ದರು.

ಇದೀಗ ಅವರ ಮರಣದ ನಂತರ ಅನೇಕರು ಪುನೀತ್ ರಾಜಕುಮಾರ್ ಅವರು ಅವರಿಗೆ ಮಾಡಿರುವ ಸಹಾಯವನ್ನು ಸಮಾಜಕ್ಕೆ ತಿಳಿಸುತ್ತಿದ್ದಾರೆ ಅದೇ ರೀತಿ ಬೆಂಗಳೂರಿನಲ್ಲಿ ಒಬ್ಬ ಆಟೋ ಚಾಲಕ ತನಗೆ ಪುನೀತ್ ರಾಜಕುಮಾರ್ ಅವರು ಆಟೋ ಕೊಡಿಸುವುದರ ಕುರಿತು ಹೇಳಿಕೊಂಡಿದ್ದನ್ನು ಅವರು ಮಾಡಿರುವ ಸಹಾಯವನ್ನು ಜೀವ ಇರುವವರೆಗೂ ಮರೆಯುವುದಿಲ್ಲ ಎಂದು ಹೇಳಿದ್ದಾರೆ.

ಮಕ್ಕಳು ಓದುವಂತಹ ಪಠ್ಯಪುಸ್ತಕಗಳಲ್ಲಿ ಪುನೀತ್ ರಾಜಕುಮಾರ್ ಅವರ ಬದುಕಿಗೆ ಸಂಬಂಧಿಸಿದ ವಿಷಯಗಳನ್ನು ಅಳವಡಿಸಬೇಕು ಎಂದು ಹೇಳಿದರು. ಇವತ್ತಿನವರೆಗೂ ಅನೇಕರು ಕಣ್ಣಿಗೆ ಕಾಣದ ದೇವರಿಗೆ ಕೈಯನ್ನು ಮುಗಿಯುತ್ತಾರೆ ಆದರೆ ಪುನೀತ್ ರಾಜಕುಮಾರ್ ಅವರು ಅನೇಕರಿಗೆ ದೇವರ ರೂಪದಲ್ಲಿ ಸಹಾಯವನ್ನು ಮಾಡಿದ್ದಾರೆ.

ಅನೇಕ ಅನಾಥ ಮಕ್ಕಳಿಗೆ ವೃದ್ಧರಿಗೆ ದಾರಿದೀಪವಾಗಿದ್ದರು ಅವರಿಗೆ ಒಂದು ಬದುಕನ್ನು ಕಟ್ಟಿಕೊಟ್ಟಿದ್ದರು. ಅವರು ವಿಧಿವಶರಾಗಿದ್ದಾರೆ ಎಂಬ ವಿಷಯವನ್ನು ಅರಗಿಸಿಕೊಳ್ಳುವುದಕ್ಕೆ ತುಂಬಾ ಕಷ್ಟವಾಗುತ್ತದೆ ಅವರು ನಮ್ಮ ನಡುವೆ ಎಂದಿಗೂ ಇರುತ್ತಾರೆ. ಪುನೀತ್ ರಾಜಕುಮಾರ್ ಅವರು ಬಡವರಿಂದ ಹಿಡಿದು ಭಿಕ್ಷುಕರವರೆಗೂ ಎಲ್ಲರಿಗೂ ಬೆಲೆ ಕೊಡುತ್ತಿದ್ದರು. ಅನೇಕ ಜನರು ತೋರಿಕೆಗಾಗಿ ಕೆಲವೊಂದು ಕಾರ್ಯಗಳನ್ನು ಮಾಡುತ್ತಾರೆ ಆದರೆ ಪುನೀತ್ ರಾಜಕುಮಾರ್ ಅವರು ಮಾಡಿರುವಂತಹ ಸೇವೆಗಳು ಒಂದು ಕೈಯಲ್ಲಿ ಕೊಟ್ಟಿರುವುದು ಇನ್ನೊಂದು ಕೈಯಿಗೆ ಗೊತ್ತಾಗುತ್ತಿರಲಿಲ್ಲ.

ಪುನೀತ್ ರಾಜಕುಮಾರ್ ಅವರು ಬಡವರಿಗೆ ಅನಾಥರಿಗೆ ದೇವತಾ ಮನುಷ್ಯರಾಗಿದ್ದರು. ಅವರು ತಮ್ಮಕಣ್ಣುಗಳನ್ನು ದಾನ ಮಾಡುವ ಮೂಲಕ ಮರಣದ ನಂತರವೂ ಸಾರ್ಥಕತೆಯನ್ನು ಮೆರೆದು ಅನೇಕರಿಗೆ ಆದರ್ಶವಾಗಿದ್ದಾರೆ. ಅವರು ಮಾಡಿರುವ ಕೆಲಸಗಳು ಅವರು ಸದಾ ನಮ್ಮ ನಡುವೆ ಜೀವಂತವಾಗಿರುವಂತೆ ಮಾಡುತ್ತವೆ.

ಪುನೀತ್ ರಾಜಕುಮಾರ್ ಅವರು ಬಹುಮುಖ ಪ್ರತಿಭೆಯಾಗಿದ್ದರು ಅಂತಹ ಪ್ರತಿಭಾನ್ವಿತನನ್ನು ಕಳೆದುಕೊಂಡು ಕನ್ನಡ ಚಿತ್ರರಂಗ ತುಂಬಾ ದುಃಖವನ್ನು ಅನುಭವಿಸುತ್ತಿದೆ. ಅವರು ಮಾಡಿರುವಂತಹ ಸಿನಿಮಾಗಳು ಕೂಡ ಜನರ ಬದುಕಿನಲ್ಲಿ ಒಂದು ಉತ್ತಮ ಬದಲಾವಣೆಯನ್ನೂ ಉಂಟುಮಾಡುವಂತಹ ಸಂದೇಶವನ್ನು ನೀಡುತ್ತದೆ. ಅಂತಹ ವ್ಯಕ್ತಿ ನಮ್ಮ ನಡುವೆ ಇಲ್ಲ ಎನ್ನುವುದು ನಿಜಕ್ಕೂ ನಂಬಲಾರದ ಸತ್ಯವಾಗಿದೆ. video credit sindura studio

WhatsApp Group Join Now
Telegram Group Join Now

By

Leave a Reply

Your email address will not be published. Required fields are marked *

error: Content is protected !!
Footer code: