ಅಪ್ಪು ಮಾಡುತ್ತಿದ್ದ ಗ್ರಾನೈಟ್ ಬಿಸಿನೆಸ್ ಬಗ್ಗೆ ಅವತ್ತು ತಿಳಿಸಿದ ಸತ್ಯ ಏನು ಗೊತ್ತಾ

0

ಪುನೀತ್ ರಾಜಕುಮಾರ್ ಕನ್ನಡ ಚಿತ್ರರಂಗದಲ್ಲಿ ಬಾಲನಟನಾಗಿ ನಟಿಸುವ ಮೂಲಕ ಚಿತ್ರರಂಗಕ್ಕೆ ಪಾದರ್ಪಣೆಯನ್ನ ಮಾಡಿದ್ದರು. ನಂತರ ಹಲವಾರು ಸಿನಿಮಾಗಳಲ್ಲಿ ನಾಯಕನಟನಾಗಿ ನಟಿಸುವ ಮೂಲಕ ಅಪಾರ ಅಭಿಮಾನಿ ಬಳಗವನ್ನು ಗಳಿಸಿಕೊಂಡಿದ್ದರು ಆದರೆ ಅಕಾಲಿಕವಾಗಿ ನಮ್ಮನ್ನೆಲ್ಲ ಅಗಲಿದ ಪುನೀತ್ ರಾಜಕುಮಾರ್ ಅವರ ಅಗಲಿಕೆಯ ಸುದ್ದಿಯನ್ನು ಇಂದಿಗೂ ಯಾರಿಂದಲೂ ಅರಗಿಸಿಕೊಳ್ಳುವುದಕ್ಕೆ ಸಾಧ್ಯವಿಲ್ಲ. ಅವರು ಇಂದಿಗೂ ನಮ್ಮೊಂದಿಗೆ ಇದ್ದಾರೆ ಎನ್ನುವ ಭಾವನೆಯಲ್ಲಿಯೇ ಎಲ್ಲರೂ ಬದುಕುತ್ತಿದ್ದಾರೆ.

ಅಪ್ಪು ಅವರು ಒಬ್ಬ ಪರಿಪೂರ್ಣ ವ್ಯಕ್ತಿ ತಮ್ಮ ಜೀವನದಲ್ಲಿ ಯಾವುದೇ ಕೆಟ್ಟ ಕೆಲಸವನ್ನು ಮಾಡದವರು. ಬಾಲನಟನಾಗಿ ಕೆಲವು ಸಿನಿಮಾಗಳಲ್ಲಿ ನಟಿಸಿದರು ಬೆಳೆಯುತ್ತ ಬೆಳೆಯುತ್ತ ಅವರಿಗೆ ಸಿನಿಮಾರಂಗದಲ್ಲಿ ಒಲವು ಕಡಿಮೆಯಾದ ಕಾರಣ ತಮ್ಮದೇ ಆದ ಉದ್ಯಮವನ್ನು ಪ್ರಾರಂಭಿಸಬೇಕು ಎಂಬ ಒಲವನ್ನು ಹೊಂದಿದ್ದರು. ಅದರಂತೆ ಸಿನಿಮಾವನ್ನು ಕೈಬಿಟ್ಟು ಸ್ನೇಹಿತರ ಸಲಹೆಯಂತೆ ಗ್ರಾನೈಟ್ ಬಿಜಿನೆಸ್ ಪ್ರಾರಂಭಿಸುತ್ತಾರೆ ಆಗ ಅವರಿಗೆ ಇಪ್ಪತ್ತು ಇಪ್ಪತ್ತೊಂದು ವರ್ಷ ವಯಸ್ಸು. ಆ ಸಮಯದಲ್ಲಿ ಅವರಿಗೆ ಆಗದ ಕೆಲವರು ಇವರ ಹೆಸರನ್ನು ಕೆಡಿಸುವುದಕ್ಕಾಗಿ ಕೆಲವು ಅಪಪ್ರಚಾರವನ್ನು ಮಾಡುತ್ತಾರೆ. ಆ ಕುರಿತು ಪುನೀತ್ ರಾಜಕುಮಾರ್ ಅವರು ಸಂದರ್ಶನವೊಂದರಲ್ಲಿ ಏನು ಹೇಳಿದ್ದಾರೆ ಎಂಬುದನ್ನು ನಾವು ಇಂದು ತಿಳಿದುಕೊಳ್ಳೋಣ.

ಪುನೀತ್ ರಾಜಕುಮಾರ್ ಅವರು ಗ್ರಾನೆಟ್ ಬಿಜಿನೆಸ್ ಅನ್ನ ಪ್ರಾರಂಭಿಸಿದ ಸಮಯದಲ್ಲಿ ಅವರ ಕುರಿತಾದಂತಹ ಅಪಪ್ರಚಾರಗಳು ಹರಿದಾಡಿದ್ದು ಅವರ ಫೋಟೋಗಳು ಪೇಪರ್ಗಳಲ್ಲಿ ಬಂದಿದ್ದವು. ಪುನೀತ್ ರಾಜಕುಮಾರ್ ಅವರು ಕಾನೂನುಬಾಹಿರವಾಗಿ ಉದ್ಯಮವನ್ನು ಮಾಡುತ್ತಿದ್ದಾರೆ ಎಂದು ಸುದ್ದಿ ಹರಡಿತ್ತು. ಆಸಮಯದಲ್ಲಿ ರಾಜಕುಮಾರ್ ಅವರು ಪುನೀತ್ ರಾಜಕುಮಾರ್ ಅವರಿಗೆ ಉದ್ಯೋಗವನ್ನು ಕೈಬಿಡುವಂತೆ ಹೇಳಿದ್ದರು. ಆದರೆ ಪುನೀತ್ ರಾಜಕುಮಾರ್ ಅವರಿಗೆ ಅವರ ಉದ್ಯಮದ ಬಗೆಯಲ್ಲಿ ನಂಬಿಕೆ ಇತ್ತು ಹಾಗಾಗಿ ಅವರ ಮನಸ್ಸಿಗೆ ತಾನು ಮಾಡುತ್ತಿರುವ ಉದ್ಯಮ ಕಾನೂನುಬಾಹಿರವಾಗಿ ಇದ್ದರೆ ಅದನ್ನು ಸರಿ ಪಡಿಸಿ ಕೊಳ್ಳುವುದಕ್ಕೆ ಕಾನೂನಿನ ನೀತಿ ನಿಯಮಗಳಿವೆ ಆದರೆ ಈ ರೀತಿ ಪತ್ರಿಕೆಯಲ್ಲಿ ಬೇಡದಿರುವ ಸುದ್ದಿಯನ್ನು ಹಾಕುವುದು ಸರಿಯಲ್ಲ ಎಂಬ ವಿಚಾರ ಅವರ ಮನಸ್ಸಿನಲ್ಲಿ ಬಂದಿತ್ತು.

ಆ ಸಮಯದಲ್ಲಿಯೇ ಡಾಕ್ಟರ್ ರಾಜಕುಮಾರ್ ಅವರು ಕೂಡ ಅಪಹರಣವಾಗಿದ್ದು ಅದಕ್ಕೂ ಇವರ ಉದ್ಯಮಕ್ಕೂ ಸಂಬಂಧವಿದೆ ಎನ್ನುವ ರೀತಿಯಲ್ಲಿ ಸುದ್ದಿಗಳು ಹರಡಿದವು. ಇದರಿಂದ ಪುನೀತ್ ರಾಜಕುಮಾರ್ ಅವರ ಮನಸ್ಸಿಗೆ ತುಂಬಾ ನೋವಾಗಿತ್ತಂತೆ. ಇವರಿಗೆ ತಮ್ಮದೇ ಆದ ಏನಾದರೂ ಒಂದನ್ನು ಸಾಧಿಸಬೇಕು ಎಂಬ ಆಸೆ ಇತ್ತು ಆ ಸಮಯದಲ್ಲಿ ಈ ರೀತಿಯ ಸುದ್ದಿಗಳು ಹರಿದಾಡಿದ್ದವು. ಇವರಿಗೆ ಸಿನಿಮಾರಂಗಕ್ಕೆ ಬರುವ ಆಸೆ ಇರಲಿಲ್ಲ ಆದರೆ ಹೊರಗಡೆ ಇವರ ಉದ್ಯಮದ ಕುರಿತು ಇಲ್ಲಸಲ್ಲದ ಪ್ರಚಾರ ನಡೆಯುತ್ತಿರುವಾಗ ರಾಜಕುಮಾರ್ ಅವರು ಇವರಿಗೆ ಉದ್ಯಮವನ್ನು ಕೈಬಿಡುವಂತೆ ಮತ್ತು ಸಿನಿಮಾರಂಗದಲ್ಲಿ ತೊಡಗುವಂತೆ ಸಲಹೆಯನ್ನು ನೀಡುತ್ತಾರೆ. ತಂದೆಯ ಮಾತಿಗೆ ಬೆಲೆ ನೀಡಿ ಪುನೀತ್ ರಾಜಕುಮಾರ್ ಅವರು ಗ್ರಾನೈಟ್ ಬಿಸಿನೆಸ್ ಕೈಬಿಟ್ಟು ಸಿನಿಮಾ ರಂಗದಲ್ಲಿ ತಮ್ಮನ್ನು ತೊಡಗಿಸಿಕೊಳ್ಳುತ್ತಾರೆ. ನಂತರ ಕರ್ನಾಟಕದ ಮನೆ ಮಗನಾಗಿ ಖ್ಯಾತಿ ಪಡೆಯುತ್ತಾರೆ. ಕರ್ನಾಟಕದ ಮನೆ ಮನಗಳಲ್ಲಿ ಎಂದಿಗೂ ಅವರ ನೆನಪು ಅಚ್ಚ ಹಸಿರಾಗಿರುತ್ತದೆ. Video Credit For Kannada Picchar

Leave A Reply

Your email address will not be published.

error: Content is protected !!
Footer code: