ಅಪ್ಪು ಕುರ್ಚಿಯಲ್ಲಿ ಈಗ ಅಶ್ವಿನಿಪುನೀತ್ ಏನ್ ಮಾಡ್ತಿದಾರೆ ನೋಡಿ ವೀಡಿಯೊ

0

ಕನ್ನಡ ಚಿತ್ರರಂಗದ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ನಮ್ಮೊಂದಿಗಿಲ್ಲ ಎನ್ನುವುದನ್ನು ನಂಬಲು ಈಗಲೂ ಆಗುವುದಿಲ್ಲ ಹೀಗಿರುವಾಗ ಪುನೀತ್ ಅವರ ಪತ್ನಿ ಹಾಗೂ ಅವರ ಮಕ್ಕಳಿಗೆ ಎಷ್ಟು ಕಷ್ಟವಾಗಿರಬಹುದು. ಪುನೀತ್ ಪತ್ನಿ ಅಶ್ವಿನಿ ಪುನೀತ್ ರಾಜಕುಮಾರ್ ಅವರು ಈಗ ಏನು ಮಾಡುತ್ತಿದ್ದಾರೆ ಎನ್ನುವುದನ್ನು ತಿಳಿದುಕೊಳ್ಳುವ ಕುತೂಹಲ ಅಭಿಮಾನಿಗಳಿಗೆ ಇರುವುದು ಸಹಜ. ಅಶ್ವಿನಿ ಅವರು ಏನು ಮಾಡುತ್ತಿದ್ದಾರೆ ಎಂಬುದನ್ನು ಈ ಲೇಖನದಲ್ಲಿ ನೋಡೋಣ.

ನಮ್ಮ ಕನ್ನಡ ಚಿತ್ರರಂಗದ ಅಪರೂಪದ ಮಾಣಿಕ್ಯ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ಹೃದಯಾಘಾತದಿಂದ ಹಠಾತ್ತನೆ ನಿಧನರಾಗಿರುವುದು ನಮ್ಮೆಲ್ಲರಿಗೂ ದುಃಖದ ಸಂಗತಿಯಾಗಿದೆ. ಪುನೀತ್ ಅವರ ನಿಧನದ ನಂತರ ಅವರ ಪತ್ನಿ ಅಶ್ವಿನಿ ಪುನೀತ್ ಅವರು ಏನು ಮಾಡುತ್ತಿದ್ದಾರೆ, ಮನೆಯಲ್ಲಿಯೇ ಇದ್ದಾರಾ, ಅವರ ಮನಸ್ಥಿತಿ ಹೇಗಿದೆ ಎಂಬುದು ಎಲ್ಲರಿಗೂ ಕಾಡುವ ಪ್ರಶ್ನೆಯಾಗಿದೆ. ಪುನೀತ್ ರಾಜಕುಮಾರ್ ಅವರು ಬಹಳ ಪ್ರೀತಿಯಿಂದ ನಡೆಸುತ್ತಿರುವ ಪ್ರೊಡಕ್ಷನ್ ಹೌಸ್ ಪುನೀತ್ ಮರಣದ ನಂತರ ನಡೆಯುತ್ತದೆಯಾ ಎಂದು ಹಲವರು ಕೇಳುತ್ತಿದ್ದರು.

ಅಶ್ವಿನಿ ಪುನೀತ್ ಅವರು ಪ್ರತಿದಿನ ತಮ್ಮ ಪತಿ ನಡೆಸುತ್ತಿರುವ ವಜ್ರೇಶ್ವರಿ ಕಂಬೈನ್ಸ್ ಸಂಸ್ಥೆಗೆ ಹೋಗಿ ಪುನೀತ್ ಅವರಂತೆ ಕಾರ್ಯ ನಿರ್ವಹಿಸುತ್ತಿದ್ದಾರೆ ಅಲ್ಲದೆ ಅವರು ಧೈರ್ಯ ತೆಗೆದುಕೊಂಡು ಅಪ್ಪು ಅವರ ಕನಸನ್ನು ನನಸು ಮಾಡುವತ್ತ ಹೆಜ್ಜೆ ಹಾಕಿದ್ದಾರೆ. ಪುನೀತ್ ಅವರ ನೆನಪಿನಲ್ಲಿ ಅವರ ಭಾವಚಿತ್ರದೊಂದಿಗೆ ಹಿಮಾಲಯದಿಂದ ಮೂರುವರೆ ಸಾವಿರ ಕಿಲೋಮೀಟರ್ ಸೈಕಲ್ ಸವಾರಿ ಮಾಡಿದ ಪುನೀತ್ ಅಭಿಮಾನಿ ಗುರುಪ್ರಸಾದ್ ಅವರನ್ನು ಅಶ್ವಿನಿ ಅವರು ಜನವರಿ 24 ರಂದು ಭೇಟಿ ಮಾಡಿದರು. ಪುನೀತ್ ಮರಣದ ನಂತರ ಅಶ್ವಿನಿ ಅವರು ಕಾಣಿಸಿಕೊಂಡಿರಲಿಲ್ಲ ಇದೀಗ ವಜ್ರೇಶ್ವರಿ ಕಂಬೈನ್ಸ್ ಆಫೀಸ್ ನಲ್ಲಿ ಕಾಣಿಸಿಕೊಂಡಿದ್ದಾರೆ ಅಲ್ಲದೆ ಪುನೀತ್ ಅವರ ಅಭಿಮಾನಿಯೊಬ್ಬರನ್ನು ಭೇಟಿ ಮಾಡಿದರು.

ಪುನೀತ್ ಅವರು ಪ್ರೀತಿಯಿಂದ ಬೆಳೆಸಿದ ವಜ್ರೇಶ್ವರಿ ಕಂಬೈನ್ಸ್ ಆಫೀಸ್ ನಲ್ಲಿ ತಮ್ಮ ಛೇಂಬರ್ ನಲ್ಲಿ ಕುಳಿತ ಅಶ್ವಿನಿ ಅವರನ್ನು ನೋಡಿದರೆ ಪುನೀತ್ ಅವರನ್ನೆ ನೋಡಿದ ಹಾಗೆ ಆಗುತ್ತದೆ ಅವರನ್ನು ನೋಡಿದಷ್ಟೆ ಸಂತೋಷ ಆಗುತ್ತದೆ. ಅಶ್ವಿನಿ ಅವರು ಕುಳಿತುಕೊಳ್ಳುವ ಸೀಟಿನ ಹಿಂಬದಿ ಪಾರ್ವತಮ್ಮ ರಾಜಕುಮಾರ್ ಅವರ ಫೋಟೊ ಇದೆ ಫೋಟೋ ಎದುರು ಅಶ್ವಿನಿ ಅವರು ಕುಳಿತು ಕಾರ್ಯ ನಿರ್ವಹಿಸುತ್ತಾರೆ. ಅಶ್ವಿನಿ ಅವರು ಪುನೀತ್ ಅಭಿಮಾನಿ ಗುರುಪ್ರಸಾದ್ ಅವರಿಗೆ ಅಪ್ಪು ಬಳಸುತ್ತಿದ್ದ ಕನ್ನಡಕವನ್ನು ಉಡುಗೊರೆಯಾಗಿ ಕೊಟ್ಟು ಆಶೀರ್ವದಿಸಿದ್ದಾರೆ

ಅಷ್ಟೇ ಅಲ್ಲದೆ ಗುರು ಪ್ರಸಾದ್ ಅವರು ಸವಾರಿ ಮಾಡಿದ ಸೈಕಲ್ ಮೇಲೆ ಹಾಗೂ ಸೈಕಲ್ ಮೇಲಿನ ಪುನೀತ್ ಅವರ ಫೋಟೊ ಮೇಲೆ ಅಶ್ವಿನಿ ಪುನೀತ್ ರಾಜಕುಮಾರ್ ಎಂದು ಆಟೋಗ್ರಾಫ್ ಹಾಕಿಕೊಟ್ಟಿದ್ದಾರೆ. ಬಹಳ ದಿನಗಳ ನಂತರ ಅಪ್ಪು ಅವರ ಸೀಟಿನಲ್ಲಿ ಅಶ್ವಿನಿ ಅವರನ್ನು ನೋಡಿ ಅಪ್ಪು ಅಭಿಮಾನಿಗಳು ಖುಷಿಯಾಗಿದ್ದಾರೆ. ವಜ್ರೇಶ್ವರಿ ಕಂಬೈನ್ಸ್ ಅನ್ನು ಅಶ್ವಿನಿ ಹಾಗೂ ಇಬ್ಬರು ಮಕ್ಕಳು ಧೃತಿ ಹಾಗೂ ವಂದಿತಾ ಮುನ್ನೆಡಿಸಿಕೊಂಡು ಹೋಗಬೇಕು ಎಂದು ನಿರ್ಧಾರ ಮಾಡಿರುವುದು ಮೆಚ್ಚುಗೆಯ ವಿಷಯ ಅವರಿಗೆ ದೇವರು ಶಕ್ತಿ ಕೊಡಲಿ ಎಂದು ಆಶಿಸೋಣ.

Leave A Reply

Your email address will not be published.

error: Content is protected !!
Footer code: