ಅಪ್ಪನಂತೆ ಮಗ ಕೂಡ ಖಡಕ್ ಪೊಲೀಸ್ ಆಫೀಸರ್ ಪಾತ್ರದಲ್ಲಿ ಆದಿ ಸಾಯಿಕುಮಾರ್ ಯಾವ ಸಿನಿಮಾದಲ್ಲಿ ಗೊತ್ತೇ

0

ಸಾಯಿಕುಮಾರ್ ಕನ್ನಡ ಹಾಗೂ ತೆಲುಗು ಚಿತ್ರ ರಂಗಗಳಲ್ಲಿ ಹೆಸರು ಮಾಡಿರುವ ಒಬ್ಬ ಭಾರತೀಯ ಚಿತ್ರನಟ. ಮಧ್ಯಮವರ್ಗದ ಕುಟುಂಬದಿಂದ ಬಂದಂತಹ ಸಾಯಿಕುಮಾರ್ ಅವರ ಇಡೀ ಕುಟುಂಬವೇ ನಟನೆಗೆ ತಮ್ಮನ್ನೇ ಸಮರ್ಪಿಸಿಕೊಂಡಿದೆ ಎಂದರೆ ತಪ್ಪಾಗಲಾರದು. ಬಾಲ್ಯ ಕಲಾವಿದರಾಗಿ ಡಬ್ಬಿಂಗ್ ಆರ್ಟಿಸ್ಟ್ ಆಗಿ ಕಾಣಿಸಿಕೊಂಡಿದ್ದರು ಸಾಯಿಕುಮಾರ್. ಇವರ ತಂದೆ ಕೂಡಾ ಒಬ್ಬ ಪ್ರಖ್ಯಾತ ಡಬ್ಬಿಂಗ್ ಆರ್ಟಿಸ್ಟ್ ಆಗಿದ್ದರು ಸಾಯಿಕುಮಾರ್ ಅವರು ಸಹ ತಂದೆಯನ್ನೆ ಅನುಕರಣೆ ಮಾಡಿ ಅವರೂ ಸಹ ಪ್ರಖ್ಯಾತ ಡಬಿಂಗ್ ಪರಿಣಿತ. ಕನ್ನಡದಲ್ಲಿ ಅಗ್ನಿ ಐ ಪಿ ಎಸ್ , ರಂಗಿತರಂಗ, ಲಾಕಪ್ ಡೆತ್ , ಪೊಲೀಸ್ ಸ್ಟೋರಿ ಮುಂತಾದ ಚಿತ್ರಗಳಲ್ಲಿ ಪೊಲೀಸ್ ಪಾತ್ರದಲ್ಲಿ ಅಭಿನಯ ಮಾಡಿ ತಮ್ಮದೇ ಆದ ನಟನೆಯ ಛಾಪು ಮೂಡಿಸಿದ ವ್ಯಕ್ತಿ ಸಾಯಿಕುಮಾರ್.

ತಮ್ಮ ನಟನೆಯಲ್ಲಿ ಅವರ ಮಾತುಗಳಿಂದಲೇ ಹೆಚ್ಚು ಪ್ರಸಿದ್ಧಿ ಪಡೆದು ಡೈಲಾಗ್ ಕಿಂಗ್ ಎಂದೇ ಜನಪ್ರಿಯರಾಗಿದ್ದಾರೆ ಸಾಯಿಕುಮಾರ್. ಇದೀಗ ತಂದೆಯ ಹಾಗೇ ತಾನೂ ಕೂಡಾ ಸಿನಿಮಾ ರಂಗದಲ್ಲಿ ಹೆಸರು ಮಾಡಲು ಅವರ ಮಗ ಕೂಡಾ ಸಿನಿಮಾ ರಂಗ ಪ್ರವೇಶಿಸಿದ ಆದಿ ಸಾಯಿಕುಮಾರ್ ಅಪ್ಪನಂತೆ ಖಡಕ್ ಪೊಲೀಸ್ ಅಧಿಕಾರಿಯಾಗಿ ಅಬ್ಬರಿಸಲು ಸಿದ್ಧರಾಗಿದ್ದಾರೆ. ಸಾಯಿಕುಮಾರ್ ಅವರ ಮಗ ಆದಿ ಸಾಯಿಕುಮಾರ್ ಅವರು ಪೊಲೀಸ್ ಅಧಿಕಾರಿಯಾಗಿ ನಟಿಸುತ್ತಿರುವ ಚಿತ್ರ ಯಾವುದು ಎನ್ನುವುದನ್ನು ಹಾಗೂ ಆ ಚಿತ್ರದ ಬಗ್ಗೆ ಹೆಚ್ಚಿನ ಮಾಹಿತಿಯನ್ನು ನಾವು ಈ ಲೇಖನದ ಮೂಲಕ ತಿಳಿದುಕೊಳ್ಳೋಣ.

ಬಹಳಷ್ಟು ಕಲಾವಿದರು ಹಾಗೂ ಕಲಾವಿದರ ಕುಟುಂಬದಲ್ಲಿ ಬಹುತೇಕ ಎಲ್ಲರೂ ರಂಗಭೂಮಿಯಲ್ಲಿ ಅಥವಾ ಚಿತ್ರರಂಗದಲ್ಲಿ ತಮ್ಮನ್ನು ಗುರುತಿಸಿಕೊಂಡಿದ್ದಾರೆ. ಡಾ. ರಾಜ್​​ಕುಮಾರ್ ಅವರ ಕುಟುಂಬದಿಂದ ಹಿಡಿದು ಡಾ.ವಿಷ್ಣುವರ್ಧನ್, ಅಂಬರೀಶ್, ರವಿಚಂದ್ರನ್, ದೇವರಾಜ್, ತೂಗುದೀಪ ಶ್ರೀನಿವಾಸ್, ಟೈಗರ್ ಪ್ರಭಾಕರ್​ ಸೇರಿದಂತೆ ಬಹುತೇಕ ಎಲ್ಲಾ ನಟರ ಕುಟುಂಬದಲ್ಲಿ ಒಬ್ಬರಾದರೂ ಚಿತ್ರರಂಗದಲ್ಲಿ ಗುರುತಿಸಿಕೊಂಡಿದ್ಧಾರೆ. ಅವರಲ್ಲಿ ಕೆಲವರದ್ದು ತೆರೆಯ ಹಿಂದಿನ ಕೆಲಸವಾದರೆ ಮತ್ತೆ ಕೆಲವರು ನಟನೆಯಲ್ಲಿ ತಮ್ಮನ್ನು ಗುರುತಿಸಿಕೊಂಡು ಜನಪ್ರಿಯರಾಗಿದ್ದಾರೆ.

ಅದೇ ರೀತಿ ಕನ್ನಡ, ತಮಿಳು, ಹಾಗೂ ತೆಲುಗು ಚಿತ್ರರಂಗಗಳಲ್ಲಿ ಡೈಲಾಗ್​​ ಕಿಂಗ್​ ಎಂದೇ ಹೆಸರಾಗಿರುವ ಸಾಯಿ ಕುಮಾರ್ ಅವರ​ ಕುಟುಂಬದಲ್ಲಿ ಸಹ ಆರು ಮಂದಿ ಚಿತ್ರರಂಗದಲ್ಲಿ ಸಕ್ರಿಯರಾಗಿದ್ದಾರೆ. ಸಾಯಿ ಕುಮಾರ್ ಅವರು ತಮ್ಮ ಖಡಕ್ ಡೈಲಾಗ್​​​​ ಹಾಗೂ ವಿಭಿನ್ನ ಆ್ಯಕ್ಟಿಂಗ್​​​​​​​ ಮೂಲಕ ಸಾಕಷ್ಟು ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ಸಾಯಿ ಕುಮಾರ್ ಎಂದರೆ ತಕ್ಷಣ ನೆನಪಾಗುವುದು ಅವರ ಡೈಲಾಗ್ಗಳು ಹಾಗೂ ಪೊಲೀಸ್ ಪಾತ್ರ. ಲಾಕಪ್ ಡೆತ್, ಎಮರ್ಜೆನ್ಸಿ, ಸರ್ಕಲ್ ಇನ್ಸ್ಪೆಕ್ಟರ್, ಪೊಲೀಸ್ ಸ್ಟೋರಿ, ಅಗ್ನಿ ಐಪಿಎಸ್, ಪೊಲೀಸ್ ಬೇಟೆ, ಅಂಡರ್ವರ್ಲ್ಡ್, ಇಂಡಿಪೆಂಡೆನ್ಸ್ ಡೇ, ಲಾ ಅ್ಯಂಡ್ ಆರ್ಡರ್, ಬೆಂಗಳೂರು ಬಂದ್ ಸೇರಿ ಬಹಳ ಸಿನಿಮಾಗಳಲ್ಲಿ ಸಾಯಿ ಕುಮಾರ್ ಪೊಲೀಸ್ ಅಧಿಕಾರಿ ಪಾತ್ರದಲ್ಲಿ ನಟಿಸಿದ್ದಾರೆ.

ಸಾಯಿ ಕುಮಾರ್​ ಅವರ ಸಹೋದರರು ರವಿಶಂಕರ್ ಹಾಗೂ ಅಯ್ಯಪ್ಪ ಶರ್ಮ ಕೂಡಾ ಚಿತ್ರರಂಗದಲ್ಲಿ ಗುರುತಿಸಿಕೊಂಡಿದ್ದಾರೆ. ಅಷ್ಟೇ ಅಲ್ಲದೇ ಇದೀಗ ಇವರ ಪುತ್ರ ಆದಿ ಕೂಡಾ ಸಿನಿಮಾರಂಗದಲ್ಲಿದ್ಧಾರೆ. 10 ವರ್ಷಗಳ ಹಿಂದೆ ಟಾಲಿವುಡ್​​​ಗೆ ಎಂಟ್ರಿ ನೀಡಿದ ಆದಿ, ಈಗಾಗಲೇ ಅನೇಕ ತೆಲುಗು ಸಿನಿಮಾಗಳಲ್ಲಿ ನಟಿಸಿದ್ದಾರೆ. ಆದಿ ಸಾಯಿಕುಮಾರ್ 2011 ರಲ್ಲಿ ‘ಪ್ರೇಮ ಕಾವಾಲಿ’ ಚಿತ್ರದ ಮೂಲಕ ಚಿತ್ರರಂಗಕ್ಕೆ ಬಂದರು. ಇದಾದ ನಂತರ ಲವ್ಲಿ, ಸುಕುಮಾರುಡು, ಗಾಳಿಪಟಂ, ರಫ್, ನೆಕ್ಸ್ಟ್​ ನುವ್ವೇ, ಬುರ್ರಕಥಾ, ಆಪರೇಷನ್ ಗೋಲ್ಡ್ ಫಿಷ್ ಚಿತ್ರಗಳಲ್ಲಿ ನಟಿಸಿದ್ದಾರೆ.

ಇತ್ತೀಚೆಗೆ ಬಿಡುಗಡೆಯಾದ ಆದಿ ಸಾಯಿಕುಮಾರ್ ಅಭಿನಯದ ಶಶಿ ಚಿತ್ರದ ಒಕೆ ಒಕ್ಕ ಲೋಕಂ ನುವ್ವೆ ಹಾಡಂತೂ ಬಹಳ ಫೇಮಸ್ ಆಗಿದೆ. ಸದ್ಯಕ್ಕೆ ಜಂಗಲ್, ಕಿರಾತಕ, ಅಮರನ್ ಈ ಮೂರು ಬ್ಲಾಕ್ ಸಿನಿಮಾಗಳು ಆದಿ ಕೈಯ್ಯಲ್ಲಿವೆ. ಈ ಸಿನಿಮಾಗಳಲ್ಲಿ ಅಮರನ್ ಇನ್ ದಿ ಸಿಟಿ ಚಾಪ್ಟರ್-1 ಮುಹೂರ್ತ ಇತ್ತೀಚೆಗೆ ನೆರವೇರಿದ್ದು ಆದಿ, ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದಾರೆ. ಈ ಚಿತ್ರದಲ್ಲಿ ಅವರು ಖಡಕ್ ಪೊಲೀಸ್ ಆಫೀಸರ್ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಸಾಯಿ ಕುಮಾರ್, ತಮ್ಮ ಪುತ್ರನ ಸಿನಿಮಾಗೆ ಕ್ಲ್ಯಾಪಿಂಗ್ ಮಾಡುವ ಮೂಲಕ ಶುಭ ಹಾರೈಸಿದ್ದಾರೆ. ಬ್ಲಾಕ್ ಚಿತ್ರದಲ್ಲಿ ಕೂಡಾ ಆದಿ ಪೊಲೀಸ್ ಅಧಿಕಾರಿ ಪಾತ್ರದಲ್ಲಿ ನಟಿಸುತ್ತಿದ್ದಾರೆ.

ಬಾಲವೀರ್ ನಿರ್ದೇಶಿಸುತ್ತಿರುವ ಅಮರನ್ ಚಿತ್ರವನ್ನು ಎಸ್ವಿಆರ್ ಪ್ರೊಡಕ್ಷನ್ಸ್ ನಿರ್ಮಿಸುತ್ತಿದೆ. ಈ ಚಿತ್ರದಲ್ಲಿ ಸಾಯಿ ಕುಮಾರ್ ಕೂಡಾ ನಟಿಸುತ್ತಿರುವುದು ವಿಶೇಷ. ಆದರೆ ಅವರು ಯಾವ ಪಾತ್ರದಲ್ಲಿ ನಟಿಸುತ್ತಿದ್ದಾರೆ ಎಂಬ ವಿಚಾರವನ್ನು ಇದುವರೆಗೂ ಚಿತ್ರತಂಡ ರಿವೀಲ್ ಮಾಡಿಲ್ಲ. ಬಾಲಿಕಾ ವಧು ಖ್ಯಾತಿಯ ಅವಿಕಾ ಈ ಚಿತ್ರದಲ್ಲಿ ಪತ್ರಿಕೋದ್ಯಮ ವಿದ್ಯಾರ್ಥಿನಿಯಾಗಿ ನಟಿಸುತ್ತಿದ್ದಾರೆ. ಇದೀಗ ಆದಿ ಸಾಯಿ ಕುಮಾರ್​​ ಕೂಡಾ ಅಪ್ಪನಂತೆ ತೆರೆ ಮೇಲೆ ಖಡಕ್ ಪೊಲೀಸ್ ಅಧಿಕಾರಿಯಾಗಿ ಅಬ್ಬರಿಸಲು ಹೊರಟಿದ್ದಾರೆ. ಅಮರನ್, ಸಸ್ಪೆನ್ಸ್​​​-ಥ್ರಿಲ್ಲರ್ ಚಿತ್ರವಾಗಿದ್ದು ಕಾರ್ತಿ ವಲ್ಲಭನ್ ಎಂಬ ಪೊಲೀಸ್ ಅಧಿಕಾರಿ ಪಾತ್ರದಲ್ಲಿ ಆದಿ ನಟಿಸುತ್ತಿದ್ದಾರೆ. ಇತ್ತೀಚೆಗೆ ಚಿತ್ರತಂಡ ಆದಿ ಪೊಲೀಸ್ ಕಾಸ್ಟ್ಯೂಮ್​​​​​​​ನಲ್ಲಿರುವ ಪೋಸ್ಟರ್ ಬಿಡುಗಡೆ ಮಾಡಿದೆ. ಆದಿ ಸಾಯಿ ಕುಮಾರ್ ಪೊಲೀಸ್ ಅಧಿಕಾರಿಯಾಗಿ ತೆರೆ ಮೇಲೆ ಹೇಗೆ ಅಬ್ಬರಿಸಲಿದ್ದಾರೆ ಎಂಬುದನ್ನು ನೋಡಲು ಅಭಿಮಾನಿಗಳು ಕಾಯುತ್ತಿದ್ದಾರೆ.

Leave A Reply

Your email address will not be published.

error: Content is protected !!