ಅಜ್ಜನ ಜೊತೆ ಆಟ ಆಡುತ್ತಿರುವ ಜೂ. ಚಿರು ಹೊಸ ವಿಡಿಯೋ

0

ಈಗ ಕೆಲವು ತಿಂಗಳುಗಳ ಹಿಂದೆ ಚಿರಂಜೀವಿ ಸರ್ಜಾ ಅವರು ತೀರಿ ಹೋದರು. ಆಗ ಮೇಘನಾ ರಾಜ್ ಅವರು 6ತಿಂಗಳ ಪ್ರಗ್ನೆಂಟ್ ಇದ್ದರು. ಈಗ ಅವರಿಗೆ ಗಂಡು ಮಗು ಹುಟ್ಟಿದೆ. ಚಿರಂಜೀವಿ ಸರ್ಜಾ ಅವರೇ ವಾಪಸ್ ಬಂದಂತೆ ಆಗಿದೆ. ಮೇಘನಾ ರಾಜ್ ಅವರ ಪುತ್ರ ನೋಡಲು ಬಹಳ ಸುಂದರವಾಗಿ ಮತ್ತು ಮುಗ್ಧನಾಗಿ ಇದ್ದಾನೆ. ಆದ್ದರಿಂದ ನಾವು ಇಲ್ಲಿ ಮೇಘನಾ ರಾಜ್ ಅವರ ಪುತ್ರನ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಿಳಿಯೋಣ.

ಮೇಘನಾ ರಾಜ್ ಅವರು ನನಗೆ ಈಗ ಗಂಡು ಮಗು ಹುಟ್ಟಿದೆ. ತಾನು ಇಷ್ಟು ದಿನಗಳ ಕಾಲ ನಿಮ್ಮ ಬಳಿ ಮಾತನಾಡಿರಲಿಲ್ಲ. ತೊಟ್ಟಿಲು ಶಾಸ್ತ್ರ ಮುಗಿದಿದೆ. ನನ್ನ ಮಗ ನನ್ನ ಮನೆಗೆ ಬಂದಿದ್ದಾನೆ. ಬಹಳ ಖುಷಿಯಾಗುತ್ತಿದೆ. ತೊಟ್ಟಿಲು ಶಾಸ್ತ್ರವನ್ನು ತವರ ಮನೆಯ ಕಡೆಯಿಂದ ಮಾಡಲಾಗುತ್ತದೆ. ಪ್ರತಿಯೊಬ್ಬರೂ ನನ್ನನ್ನು ಮತ್ತು ಚಿರುವನ್ನು ಅವರ ಕುಟುಂಬ ಎಂದು ಪ್ರೀತಿ ಮಾಡುತ್ತಾ ಬಂದಿದ್ದಾರೆ ಎಂದು ಹೇಳಿದ್ದರು. ಆದರೆ ಹಿಂದೆ ಮೇಘನಾ ರಾಜ್ ಅವರಿಗೆ ಕೊರೊನಾ ಬಂದಿತ್ತು. ಹಾಗೆಯೇ ಅವರ ಜೊತೆ ಮೇಘನಾ ರಾಜ್ ಅವರ ತಂದೆ ಮತ್ತು ತಾಯಿ ಮತ್ತು ಮಗುವಿಗೂ ಕೂಡ ಕೊರೊನಾ ಸೋಂಕು ದೃಢಪಟ್ಟಿತ್ತು.

ಆದರೆ ಎಲ್ಲರೂ ಗುಣಮುಖರಾಗಿದ್ದಾರೆ. ಮಗು ಕೂಡ ಗುಣಮುಖ ಆಗಿದೆ. ಚಿರಂಜೀವಿ ಸರ್ಜಾ ಅವರು ನಿಧಾನರಾಗಿ ಇಡೀ ಕುಟುಂಬಕ್ಕೆ ಒಂದು ಮುತ್ತನ್ನು ಕಳೆದುಕೊಂಡಂತೆ ಆಗಿತ್ತು. ನಂತರ ಮಗು ಹುಟ್ಟಿ ಒಂದು ಸಂತೋಷ ಮನೆಗೆ ಬಂದಿದೆ. ಫೆಬ್ರವರಿ 14, 2021ರಂದು ಸರಿಯಾಗಿ ರಾತ್ರಿ 12 ಗಂಟೆಗೆ ಮೇಘನಾ ಮಗನನ್ನು ಪರಿಚಯಿಸಿದ್ದಾರೆ. ಒಂದು ವಿಶೇಷವಾದ ವಿಡಿಯೋ ಮೂಲಕ ಅವರನ್ನು ತೋರಿಸಿದ್ದಾರೆ. ಆ ವಿಡಿಯೋದಲ್ಲಿ 22 ಅಕ್ಟೋಬರ್ 2017ರಂದು ನಡೆದಿದ್ದ ಮೇಘನಾ-ಚಿರು ನಿಶ್ಚಿತಾರ್ಥದ ತುಣುಕು ಹಾಗೂ ಅವರಿಬ್ಬರ ಬಾಲ್ಯದ ಫೋಟೋ ಮಗುವನ್ನು ತೋರಿಸಲಾಗಿದೆ.

ಅಷ್ಟೇ ಅಲ್ಲದೆ ಚಿರು ಎಂದಿಗೂ ನಮ್ಮನ್ನು ಅಗಲಿಲ್ಲ, ಅಗಲೋದಿಲ್ಲ ಎಂಬಂತಹ ಮಾತು ಕೂಡ ಹೇಳಲಾಗಿದೆ. ಇನ್ನು ಚಿರು ಪುತ್ರ ಕೂಡ ಹುಟ್ಟಿದ್ದು 22 ಅಕ್ಟೋಬರ್ 2020ರಂದು. ಚಿರು ಪುತ್ರನನ್ನು ನೋಡಿ ಎಲ್ಲರೂ ಖುಷಿಪಟ್ಟಿದ್ದಾರೆ. ಆತನ ನಗುವಿನ ಬಗ್ಗೆಯೇ ಹೆಚ್ಚಾಗಿ ಸೋಶಿಯಲ್ ಮೀಡಿಯಾದಲ್ಲಿ ಮಾತನಾಡುತ್ತಿದ್ದಾರೆ. ಇತ್ತೀಚೆಗಷ್ಟೇ ಚಿರು ಸರ್ಜಾ ಅವರ ಪುತ್ರ ತನ್ನ ತಾತ ಸುಂದರ್ ರಾಜ್ ಅವರ ಜೊತೆ ಆಟ ಆಡುತ್ತಿರುವ ಚಿತ್ರ ವೈರಲ್ ಆಗಿದೆ. ಹಾಗೆಯೇ ತಾತ ಸುಂದರ್ ರಾಜ್ ಮತ್ತು ಮೊಮ್ಮಗ ಫಿಶ್ ಪಾಟ್ ನೋಡುತ್ತಿರುವ ದೃಶ್ಯ ಬಹಳ ಸುಂದರವಾಗಿ ಇದೆ.

Leave A Reply

Your email address will not be published.

error: Content is protected !!