ಕಲರ್ಸ್ ಕನ್ನಡದಲ್ಲಿ ಮೊದಲು ಅಗ್ನಿಸಾಕ್ಷಿ ಧಾರಾವಾಹಿ ಬರುತ್ತಿತ್ತು. ಅದರಲ್ಲಿ ಸಿದ್ಧಾರ್ಥ್ ಎಂಬ ಪಾತ್ರವನ್ನು ವಿಜಯಸೂರ್ಯ ಅವರು ಮಾಡಿದ್ದರು. ಅಂದಿನಿಂದ ವಿಜಯ್ ಸೂರ್ಯ ಅವರು ತುಂಬಾ ಪ್ರಖ್ಯಾತಿ ಪಡೆದಿದ್ದಾರೆ.  ನೋಡಿದ ಪ್ರತಿಯೊಂದು ಹುಡುಗಿಯರು ಅವರ ಅಂದಕ್ಕೆ ಆಕರ್ಷಿತರಾಗುವಂತೆ ವಿಜಯ್ ಸೂರ್ಯ ಅವರು ಇದ್ದಾರೆ. ಹಾಗೆಯೇ ಇವರಿಗೆ ಒಬ್ಬ ಸಹೋದರ ಕೂಡ ಇದ್ದಾರೆ. ಆದ್ದರಿಂದ ನಾವು ಇಲ್ಲಿ ವಿಜಯ್ ಸೂರ್ಯ ಅವರ ಕುಟುಂಬದ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಿಳಿಯೋಣ.

ಅವರ ತಂದೆಯ ಹೆಸರು ನಾಗರಾಜ್. ಇವರ ತಾಯಿಯ ಹೆಸರು ಲಲಿತಾಂಬ. ಇವರಿಗೆ ಒಬ್ಬ ಸಹೋದರ ಕೂಡ ಇದ್ದಾರೆ. ಅವರು ತಮ್ಮ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣವನ್ನು ಕ್ಲಾರೆನ್ಸ್ ಪಬ್ಲಿಕ್ ಸ್ಕೂಲ್ ನಲ್ಲಿ ಪಡೆದರು. ತನ್ನ ಪದವಿ ಪೂರ್ವ ಶಿಕ್ಷಣವನ್ನು ಬೆಂಗಳೂರಿನ ಯುನಿವರ್ಸಿಟಿಯಲ್ಲಿ ಪಡೆದರು. ಪದವಿ ಪೂರ್ವ ನಂತರ ಶಿಕ್ಷಣಕ್ಕೆ ವಿದಾಯ ಹೇಳಿದ ಇವರು ಮುಂಬೈಯ ಸುಭಾಷ್ ಗೈರವರ ಫಿಲಂ ಸ್ಕೂಲ್ ವಿಸ್ಲಿಂಗ್ ವುಡ್ಸ್ ಅಕಾಡೆಮಿಯಲ್ಲಿ ನಟನೆಯ ಪದವಿಯನ್ನು ಪಡೆದರು. ನಂತರದಲ್ಲಿ ವಿಜಯ್ ಸೂರ್ಯ ಅವರು ಅಗ್ನಿಸಾಕ್ಷಿ ಧಾರಾವಾಹಿಯಿಂದ ಬಹಳ ಪ್ರಖ್ಯಾತರಾಗಿದ್ದಾರೆ. ಅಗ್ನಿಸಾಕ್ಷಿ ಧಾರಾವಾಹಿಯಲ್ಲಿ ಸನ್ನಿಧಿ ಎಂಬ ಪಾತ್ರದಲ್ಲಿ ವೈಷ್ಣವಿ ಅವರು ನಟಿಸಿದ್ದರು.

ಇವರ ಜೋಡಿ ಎಂದರೆ ಎಲ್ಲರಿಗೂ ಬಹಳ ಇಷ್ಟವಾಗಿತ್ತು. ಇವರ ದೃಶ್ಯಗಳು ಬಂತು ಎಂದರೆ ಯಾರೂ ಸಹ ಆ ದೃಶ್ಯವನ್ನು ಮಿಸ್ ಮಾಡದೇ ನೋಡುತ್ತಿದ್ದರು. ಆಗ ವಿಜಯ್ ಸೂರ್ಯ ಅವರಿಗೆ ವಿವಾಹವಾಗಿರಲಿಲ್ಲ. ಹಾಗೆಯೇ ಇವರು ಸಿನಿಮಾಗಳನ್ನು ಸಹ ಮಾಡಿದ್ದಾರೆ. ಮೊದಲು ಪ್ರೇಮಲೋಕ ಎಂಬ ಸಿನಿಮಾವನ್ನು ಮಾಡಿದ್ದಾರೆ. ನಂತರದಲ್ಲಿ ಇಷ್ಟಕಾಮ್ಯ ಎಂಬ ಸಿನಿಮಾವನ್ನು ಮಾಡಿದ್ದಾರೆ. ಫೆಬ್ರವರಿ 14 2019 ರಂದು ವಿಜಯ್ ಸೂರ್ಯ ರವರು ಚೈತ್ರಾ ಎಸ್ ರವರನ್ನು ವಿವಾಹವಾದರು. ಇವರು ಕೂಡ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಚೈತ್ರಾ ಅವರು ಸಾಫ್ಟ್ ವೇರ್ ಉದ್ಯೋಗಿಯಾಗಿದ್ದು ವಿಜಯ್ ಸೂರ್ಯ ಅವರ ದೂರದ ಸಂಬಂಧಿಯಾಗಿದ್ದಾರೆ.

ವಿಜಯ್ ಸೂರ್ಯ ಅವರಿಗೆ ಎರಡೂ ಕೆನ್ನೆಯಲ್ಲಿ ಗುಳ್ಳೆಗಳು ಬೀಳುತ್ತವೆ. ಆದ್ದರಿಂದ ಅವರಿಗೆ ಗುಳಿ ಕೆನ್ನೆ ಇರುವ ಹುಡುಗಿಯನ್ನೇ ವಿವಾಹವಾಗಬೇಕು ಎಂದು ಆಸೆಪಟ್ಟಿದ್ದರು. ಹಾಗೆಯೇ ಗುಳಿಕೆನ್ನೆ ಇರುವ ಹುಡುಗಿಯೇ ಅವರಿಗೆ ಸಿಕ್ಕಿದ್ದಾಳೆ. ಈಗ ಅವರಿಬ್ಬರಿಗೆ ಒಂದು ಗಂಡು ಮಗು ಆಗಿದೆ. ಆ ಗಂಡು ಮಗು ಬಹಳ ಮುದ್ದಾಗಿದೆ. ವಿಶೇಷವೆಂದರೆ ಈ ಮಗುವಿಗೂ ಸಹ ಕೆನ್ನೆಯಲ್ಲಿ ಗುಳ್ಳೆಗಳು ಬೀಳುತ್ತವೆ. ಇವರು ತಮ್ಮ ಮಗನ ಮತ್ತು ಕುಟುಂಬದ ಜೊತೆ ಇರುವ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಾಕಿದ್ದಾರೆ. ಫೋಟೋಗಳಲ್ಲಿ ಮೂವರಿಗೂ ಇರುವ ಗುಳಿಕೆನ್ನೆ ಬಹಳ ಸುಂದರವಾಗಿ ಕಾಣುತ್ತದೆ.

By admin

Leave a Reply

Your email address will not be published. Required fields are marked *

error: Content is protected !!
Footer code: