WhatsApp Group Join Now
Telegram Group Join Now

ಸೂರ್ಯ ತಮಿಳಿನ ಸ್ಟಾರ್ ನಟರು ಎಂಬುದು ಪ್ರತಿಯೊಬ್ಬರಿಗೂ ಸಹ‌ ತಿಳಿದಿರುವ ವಿಷಯ. ಇತ್ತೀಚೆಗೆ ಬಿಡುಗಡೆಗೊಂಡು ಸೂಪರ್ ಡೂಪರ್ ಹಿಟ್ ಆದ ಚಲನಚಿತ್ರ ತಮಿಳಿನ ವಿಕ್ರಂ. ಈ ಚಿತ್ರ ನೋಡಿದ ಪ್ರತಿಯೊಬ್ಬರಿಗೂ ಕಮಲ್ ಹಾಸನ್, ವಿಜಯ್ ಸೇತುಪತಿ ಹಾಗೂ ಫಹಾದ್ ಫಾಸಿಲ್ ಅವರ ನಟನೆ ಇಷ್ಟವಾಗದೇ ಇರದು. ಮೊದಲಿನಿಂದಲೂ ಸಹ ಕ್ರೇಜ್ ಹುಟ್ಟಿಸಿದ್ದ‌ ಈ ಸಿನಿಮಾ ಬಿಡುಗಡೆಯಾಗಿ ಬ್ಲಾಕ್ ಬಸ್ಟರ್ ಆಗಿದ್ದು ತಿಳಿದಿದೆ.

ಈ ಚಿತ್ರದ ಕ್ಲೈಮ್ಯಾಕ್ಸ್ ನಲ್ಲಿ ಬರುವ ರೋಲೆಕ್ಸ್ ಪಾತ್ರ ನೋಡಿದ‌ ಪ್ರತಿಯೊಬ್ಬರೂ ಹುಬ್ಬೇರಿಸಿದ್ದು ಸುಳ್ಳಲ್ಲ. ನಾಯಕ ನಟನಾಗಿ ಇದುವರೆಗೂ ಕಾಣಿಸಿಕೊಂಡಿದ್ದ ಸೂರ್ಯ ಅವರನ್ನು ರೋಲೆಕ್ಸ್ ಪಾತ್ರದಲ್ಲಿ‌ ನೋಡಿದ ಪ್ರತಿಯೊಬ್ಬರೂ ಸಹ‌ ರೋಲೆಕ್ಸ್ ಪಾತ್ರದ ಅಭಿಮಾನಿಗಳಾಗಿದ್ದಾರೆ‌ ಎಂದರೆ ತಪ್ಪಾಗಲಾರದು. ಇಂತಹ ಸೂರ್ಯ ಅವರ ಬಗ್ಗೆ ಹಲವು ಕುತೂಹಲಕರ ಮಾಹಿತಿಗಳು ನಿಮಗಾಗಿ ಇಲ್ಲಿವೆ.

ನಟ ಸೂರ್ಯ ಅವರ ಮೊದಲ ಹೆಸರು ಸರವಣನ್ ಶಿವಕುಮಾರ್. 1975 ಜುಲೈ 23 ರಂದು ಚೆನ್ನೈನಲ್ಲಿ ಜನಿಸಿದ ಇವರ ತಂದೆ ಸಹ 70 ರ ದಶಕದ ತಮಿಳಿನ ನಾಯಕ ನಟರಲ್ಲಿ‌ ಒಬ್ಬರು. ಇನ್ನು ಸೂರ್ಯ ಅವರಿಗೆ ಕಾರ್ತಿ ಎಂಬ ಸಹೋದರ ಹಾಗೂ ಬೃಂದ ಎಂಬ ಸಹೋದರಿಯಿದ್ದು ಇವರ ತಮ್ಮ ಕಾರ್ತಿ ಅವರೂ ಸಹ‌ ತಮಿಳಿನ ಖ್ಯಾತ ನಾಯಕ ನಟ ಎಂಬುದು ಎಲ್ಲರಿಗೂ ತಿಳಿದಿರುವ ವಿಷಯ. ಮೊದಲಿಗೆ ತಾನೊಬ್ಬ ಗಾರ್ಮೆಂಟ್ಸ್ ಉದ್ಯಮಿಯಾಗಬೇಕೆಂದು ಕನಸು ಕಂಡಿದ್ದ ಸೂರ್ಯ ಅವರಿಗೆ ಅವರ ತಂದೆ ಚಿತ್ರರಂಗಕ್ಕೆ ಕರೆತರುತ್ತಾರೆ.

ತಮ್ಮ ಮೊದಲ ಚಿತ್ರದ ಚಿತ್ರೀಕರಣದಲ್ಲಿ ಬಹಳಷ್ಟು ಟೇಕ್ ಗಳನ್ನು ತೆಗೆದುಕೊಳ್ಳುತ್ತಿದ್ದ‌ ಸೂರ್ಯ ಅವರಿಗೆ ಈ ಚಿತ್ರದ ನಿರ್ದೇಶಕರು ಎಲ್ಲರ ಮುಂದೆ ಬೈದು ಅವಮಾನಿಸುತ್ತಾರೆ. ಆದರೆ ಇದನ್ನು ಮುಂದೆ ಹಠವಾಗಿ ತೆಗೆದುಕೊಂಡ ಸೂರ್ಯ ಅವರು ತಮಗೆ ಬರುವ ಪಾತ್ರಗಳಿಗಾಗಿ ಬಹಳವೇ ತಯಾರಿ ಮಾಡಿಕೊಂಡು ತಮಗೆ ಸಿಕ್ಕ‌ ಪಾತ್ರಗಳಿಗೆ ನ್ಯಾಯ ಒದಗಿಸಲು ಶುರು ಮಾಡಿದರು. ಬರು ಬರುತ್ತಾ ಅಜಿತ್ ಹಾಗೂ ವಿಜಯ್ ಅವರಿಗೆ ಮಾಡಬೇಕಿದ್ದ ಸಿನಿಮಾಗಳು ಕಾರಣಾಂತರಗಳಿಂದ ಸೂರ್ಯ ಅವರ ಪಾಲಾದವು ಹಾಗೂ ಈ ಪಾತ್ರಗಳಿಗೆ ನ್ಯಾಯ ಒದಗಿಸಿ ಈ ಚಿತ್ರಗಳು ಸೂಪರ್ ಡೂಪರ್ ಹಿಟ್ ಆಗಲು ಪ್ರಮುಖ ಕಾರಣಗಳಲ್ಲಿ‌ ಒಬ್ಬರಾದರು.

ಇದಾದ ಬಳಿಕ ತಮ್ಮ ಪಾತ್ರಗಳನ್ನು ಬಹಳ ಹುಷಾರಿನಿಂದ ಆಯ್ದುಕೊಂಡ ಸೂರ್ಯ ಅವರು ಸೂರಾರೈ ಪೊಟ್ರು ಜೈ ಭೀಮ್ ನಂತಹ ಚಿತ್ರಗಳನ್ನು ಒಪ್ಪಿಕೊಂಡು ಈ ಚಿತ್ರಗಳು ರಾಷ್ಟ್ರೀಯ ಮಟ್ಟದಲ್ಲಿ ಮನ್ನಣೆ ಪಡೆದವು ಹಾಗೂ ಇವುಗಳನ್ನು ಚಿತ್ರರಸಿಕರು ಬಹಳವೇ ಇಷ್ಟಪಟ್ಟರು. ನಂತರ ವಿಕ್ರಂ ಚಿತ್ರದಲ್ಲಿನ‌ ರೋಲೆಕ್ಸ್ ಪಾತ್ರದ ಮೂಲಕ ಎಲ್ಲರ‌ ಹುಬ್ಬೇರುವಂತೆ ಮಾಡಿದ ಸೂರ್ಯ ಅವರು ಇತ್ತೀಚೆಗೆ ನಮ್ಮ ಪವರ್ ಸ್ಟಾರ್ ಪುನೀತ್ ಅವರ ಪುನೀತ ಪರ್ವ ಕಾರ್ಯಕ್ರಮದಲ್ಲಿ ಭಾಗವಹಿಸಿ ಪ್ರಕಾಶ್ ರೈ‌ ಹಾಗೂ ಯಶ್ ಅವರೊಡನೆ ಕೈ ಜೋಡಿಸಿ ಅಪ್ಪು ಅವರ ಹೆಸರಿನಲ್ಲಿ ಆಂಬುಲೆನ್ಸ್ ನೀಡುವುದಾಗಿ ಹಹೇಳಿದ್ದಾರೆ ಈ ವೇಳೆ ನಟ ಸೂರ್ಯ ಕೂಡ ಆಂಬ್ಯುಲೆನ್ಸ್ ನೀಡುವ ಮೂಲಕ ತಮ್ಮ ಸಹಾಯ ಹಸ್ತ ಚಾಚಿದ್ದಾರೆ.

WhatsApp Group Join Now
Telegram Group Join Now

By

Leave a Reply

Your email address will not be published. Required fields are marked *

error: Content is protected !!
Footer code: