ಇತ್ತೀಚಿನ ಕಾಲಗಳಲ್ಲಿ ನಡೆಯುತ್ತಿರುವ ಸಾಮಾಜಿಕ ಜಾಲತಾಣಗಳ ಬಳಕೆಯ ಕುರಿತಂತೆ ಖಂಡಿತವಾಗಿಯೂ ಸತ್ಯಾಂಶವನ್ನು 100 ಚಿತ್ರ ತಂಡ 100% ಹೊರಹಾಕಿದೆ. ಸೋಶಿಯಲ್ ಮೀಡಿಯಾ ಬಳಕೆ ಕಡಿಮೆ ಬಳಸಿದರೆ ವರ ಆದರೆ ಅಗತ್ಯಕ್ಕಿಂತ ಹೆಚ್ಚಾಗಿ ಬಳಸಿದರೆ ಅದರಲ್ಲೂ ಮುಖ್ಯವಾಗಿ ಹೆಣ್ಣುಮಕ್ಕಳು ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಇಂತಹ ನಯವಂಚಕರ ಜಾಲಗಳಲ್ಲಿ ಸಿಕ್ಕಿ ಬೀಳುತ್ತಿದ್ದಾರೆ ಇದರ ಕುರಿತಂತೆ ಎಚ್ಚರ ವಹಿಸಬೇಕಾಗಿರುವುದು ಅಗತ್ಯ. ಹೀಗೆ ಇಂತಹ ಸತ್ಯಕ್ಕೆ ಹತ್ತಿರವಾಗಿರುವ ಅಂತಹ ಅಂಶಗಳನ್ನು ಹೇಳಲು ಹೊರಟಿದೆ 100 ಚಿತ್ರತಂಡ.
ಹೆಣ್ಣು ಮಕ್ಕಳು ಸಾಮಾನ್ಯವಾಗಿ ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಾರೆ. ಆದರೆ ಇದನ್ನೇ ಉಪಯೋಗಿಸಿಕೊಳ್ಳುವ ಕೆಲವು ನಯವಂಚಕರು ಅವರ ಖಾಸಗಿ ಜೀವನದಲ್ಲಿ ಕೂಡ ಕಾಲಿಡಲು ಪ್ರಯತ್ನಿಸುತ್ತಾರೆ ಹಾಗೂ ಹಲವಾರು ತೊಂದರೆ ಉಪಟಳಗಳನ್ನು ನೀಡುತ್ತಾರೆ. ಇದನ್ನು ಬೆನ್ನತ್ತಿ ಪೊಲೀಸರು ತನಿಖೆಗೆ ಹೊರಡುತ್ತಾರೆ. ಆದರೆ ಪೊಲೀಸ್ ಇಲಾಖೆಯಲ್ಲಿ ಕೂಡ ಕೆಲವೊಮ್ಮೆ ಭ್ರಷ್ಟಾಚಾರಿಗಳು ಇರುತ್ತಾರೆ. ಆದರೆ ರಮೇಶ್ ಅರವಿಂದ್ ರವರು 100 ಚಿತ್ರದಲ್ಲಿ ಖಡಕ್ ಪೊಲೀಸ್ ಆಫೀಸರ್ ಆಗಿ ಇಂತಹ ಕಾಣದ ವ್ಯಕ್ತಿಯ ಹಿಂದೆ ಹೋಗುವ ರೋಮಾಂಚನ ಕಥೆಯುಳ್ಳ ಚಿತ್ರ 100. ಖಂಡಿತವಾಗಿ ಪ್ರತಿಯೊಬ್ಬರು ಕೂಡ ನೋಡಲೇಬೇಕಾದಂತಹ ಬಹುಮೂಲ್ಯ ಚಿತ್ರವಾಗಿದೆ.
ಇನ್ನು ನಿರ್ಮಾಪಕ ಎಂ ರಮೇಶ್ ರೆಡ್ಡಿ ಅವರು ಇಂತಹ ಒಳ್ಳೆಯ ಚಿತ್ರಕ್ಕೆ ಬಂಡವಾಳ ಹೂಡಿರುವುದು ಕ್ಕಾಗಿ ಅವರಿಗೆ ಸಲಾಂ ಹೇಳಲೇಬೇಕು. ಕನ್ನಡ ಚಿತ್ರರಂಗಕ್ಕೆ ಇಂತಹ ಒಳ್ಳೆಯ ಸಂದೇಶ ಒಳ್ಳೆಯ ಚಿತ್ರ ನೀಡಿದ್ದಕ್ಕಾಗಿ ನಿರ್ದೇಶಕ ಹಾಗೂ ನಟ ರಮೇಶ್ ಅರವಿಂದ್ ರವರಿಗೆ ಧನ್ಯವಾದಗಳನ್ನು ಹೇಳಲೇಬೇಕು. ಚಿತ್ರವನ್ನು ನೋಡಿರುವ ಪ್ರತಿಯೊಬ್ಬ ಪ್ರೇಕ್ಷಕರು ಕೂಡ ಈ ಚಿತ್ರಕ್ಕೆ 4 ಸ್ಟಾರ್ ರೇಟಿಂಗ್ ಅನ್ನು ನೀಡಿಯೇ ನೀಡುತ್ತಾರೆ. ಚಿತ್ರದ ಕಥೆ ನಿಮ್ಮ ಮನಸ್ಸಿಗೆ ಹತ್ತಿರವಾಗುವುದುರಲ್ಲಿ ಎರಡು ಮಾತಿಲ್ಲ. ಹೀಗಾಗಿ ತಪ್ಪದೆ 100 ಚಿತ್ರವನ್ನು ನಿಮ್ಮ ನೆಚ್ಚಿನ ಚಿತ್ರಮಂದಿರಗಳಲ್ಲಿ ವೀಕ್ಷಿಸಿ.