ಹೊಸ ವರ್ಷದಲ್ಲಿ ಹಲವು ಗ್ರಹಗಳು ತಮ್ಮ ಪಥವನ್ನು ಬದಲಾಯಿಸಿವೆ. ಕರ್ಮಫಲದಾತ, ನ್ಯಾಯದ ದೇವರು ಶನಿದೇವ ಕೂಡ ಇದೇ ತಿಂಗಳಿನಲ್ಲಿ ರಾಶಿ ಪರಿವರ್ತನೆ ಮಾಡಲಿದ್ದಾನೆ. ಕ್ರೂರ ಗ್ರಹ, ನ್ಯಾಯದ ದೇವರು, ಕರ್ಮಗಳಿಗೆ ತಕ್ಕ ಫಲ ನೀಡುವವನು ಎಂದೇ ಖ್ಯಾತಿ ಪಡೆದಿರುವ ಶನಿದೇವನು ಜನವರಿ 17 ರಂದು ಕುಂಭ ರಾಶಿಯನ್ನು ಪ್ರವೇಶಿಸಲಿದ್ದಾನೆ.
ವಿಶೇಷವೆಂದರೆ ಮೂರು ದಶಕಗಳ ಬಳಿಕ ಶನಿಯು ತನ್ನದೇ ಆದ ಕುಂಭ ರಾಶಿಗೆ ಪ್ರವೇಶಿಸುತ್ತಿರುವುದು ಕೆಲವು ರಾಶಿಯವರಿಗೆ ಭರ್ಜರಿ ಅದೃಷ್ಟವನ್ನು ಕರುಣಿಸಿದರೆ, ಕೆಲವು ರಾಶಿಯವರಿಗೆ ಶನಿ ಕಾಟ ಆರಂಭವಾಗಲಿದೆ. ಹಾಗಿದ್ದರೆ ತುಲಾ ರಾಶಿಯವರಿಗೆ ಶನಿಯ ಫಲ ಹೇಗಿದೆ ಎಂದು ಈ ಲೇಖನದಲ್ಲಿ ನೋಡೋಣ.
ಶನಿಯು ಮೂರು ದಶಕಗಳ ಬಳಿಕ ತನ್ನದೇ ಆದ ಕುಂಭ ರಾಶಿಯನ್ನು ಪ್ರವೇಶಿಸಲಿದ್ದಾನೆ. 2023ರ ಜನವರಿ 17 ರಂದು ಕುಂಭ ರಾಶಿಗೆ ಪ್ರವೇಶಿಸಲಿರುವ ಶನಿ ದೇವನು ಹದಿನೈದು ದಿನಗಳ ಒಳಗೆ ಅಂದರೆ 2023ರ ಜನವರಿ 30ರಂದು ಅಸ್ತಮಿಸಲಿದ್ದಾನೆ. ಸುಮಾರು ಒಂದು ತಿಂಗಳಿಗೂ ಹೆಚ್ಚು ಸಮಯ ಇದೇ ಸ್ಥಿತಿಯಲ್ಲಿರುವ ಶನಿಯು ಬಳಿಕ ಮಾರ್ಚ್ 6, 2023ರಂದು ಉದಯಿಸಲಿದ್ದಾನೆ. 2023ರಲ್ಲಿ ಶನಿ ರಾಶಿ ಪರಿವರ್ತನೆಯು ಈ ರಾಶಿಯವರಿಗೆ ಬಹಳಷ್ಟು ಪ್ರಯೋಜನಗಳನ್ನು ಹೊತ್ತು ತರಲಿದೆ.
ಈ ಸಮಯದಲ್ಲಿ ಶನಿಯ ಆಶೀರ್ವಾದದಿಂದ ಈ ರಾಶಿಯ ಜನರು ಶಿಕ್ಷಣ ಮತ್ತು ವೃತ್ತಿ ಬದುಕಿನಲ್ಲಿ ಅಪಾರ ಪ್ರಯೋಜನವನ್ನು ಪಡೆಯಲಿದ್ದಾರೆ. ವ್ಯಾಪಾರಸ್ಥರಿಗೂ ಉತ್ತಮ ಸಮಯ ಇದಾಗಿದ್ದು ಹಣಕಾಸಿನ ಸ್ಥಿತಿ ಉತ್ತಮಗೊಳ್ಳಲಿದೆ. ಹೊಸ ಮನೆ, ವಾಹನ ಖರೀದಿ ಯೋಗವೂ ಇದೆ. ಆದಾಗ್ಯೂ ಶನಿ ರಾಶಿ ಪರಿವರ್ತನೆಯ ಪರಿಣಾಮದಿಂದಾಗಿ ನಿಮ್ಮ ಆರೋಗ್ಯವು ಹದಗೆಡಬಹುದು.
ನಿಮ್ಮ ಆದಾಯಕ್ಕಿಂತ ಖರ್ಚು ಹೆಚ್ಚಾಗಬಹುದು. ಆದರೆ ಬೇಸರಗೊಳ್ಳುವ ಅಗತ್ಯವಿಲ್ಲ ನಿಮ್ಮ ಮಾತು ಮಧುರವಾಗಿದ್ದರೆ ಹಲವು ಸಮಸ್ಯೆಗಳನ್ನು ತಪ್ಪಿಸಬಹುದು. ಶನಿಯ ಸಂಕ್ರಮಣದ ಫಲವಾಗಿ ತುಲಾ ರಾಶಿಯವರ ಮೇಲೆ ಶನಿಯ ಪ್ರಭಾವ ದೂರವಾಗುತ್ತದೆ. ಶನಿಯ ಬದಲಾವಣೆಯು ತುಲಾ ರಾಶಿಯವರಿಗೆ ಆದಾಯವನ್ನು ಹೆಚ್ಚಿಸುತ್ತದೆ.
ವ್ಯಾಪಾರಸ್ಥರಿಗೆ ಲಾಭವಾಗಲಿದೆ. ಉದ್ಯೋಗದ ನಿರೀಕ್ಷೆಯಲ್ಲಿರುವವರಿಗೆ ಒಳ್ಳೆಯ ಸುದ್ದಿ ಸಿಗಬಹುದು. ಆದಾಗ್ಯೂ ನಿಮ್ಮ ವೈಯಕ್ತಿಕ ಜಾತಕವನ್ನು ಉತ್ತಮ ಜೋತಿಷ್ಯ ಶಾಸ್ತ್ರಜ್ಞರ ಬಳಿ ಪರಿಶೀಲಿಸಿಕೊಳ್ಳುವುದು ಒಳ್ಳೆಯದು.