ಮಹಾಶಿವರಾತ್ರಿಯ ಪುರಾಣಗಳು ಮತ್ತು ಶಿವರಾತ್ರಿ ಹಬ್ಬವನ್ನು ಹೇಗೆ ಮಾಡಬೇಕು, ಯಾರು ಮಾಡಬಾರದು ಎನ್ನುವ ಮಾಹಿತಿಯನ್ನು ಇದರಲ್ಲಿ ನಾವು ತಿಳಿದುಕೊಳ್ಳಬಹುದು.
ಭಾರತದ ಹಿಂದೂಗಳ ಪ್ರಮುಖ ಹಬ್ಬಗಳಲ್ಲಿ ಒಂದಾಗಿರುವ ಮಹಾಶಿವರಾತ್ರಿ ಬಗ್ಗೆ ಅನೇಕ ಪೌರಾಣಿಕ ಕಥೆಗಳಿವೆ. ಶಿವನು ಪಾರ್ವತಿಯನ್ನು ಮದುವೆಯಾದ ದಿನವೇ ಶಿವರಾತ್ರಿ ಅಂತ ಕೆಲವು ಕಡೆ ಉಲ್ಲೇಖವಾಗಿದೆ ಇನ್ನು ಕೆಲವರು ಶಿವ ಮತ್ತು ರಾಕ್ಷಸರ ನಡುವೆ ಸಮುದ್ರ ಮಂತನ ನಡೆದು ಶಿವ ಉದ್ಭವವಾದಾಗ ಶಿವ ಅದನ್ನು ಕುಡಿದ ಆ ವಿಷಾ ಶಿವನ ಗಂಟಲಿನೊಳಗೆ ಇಳಿಯದಂತೆ ಪಾರ್ವತಿ ತಡೆದಳು ಅಂತ ಹೇಳುತ್ತಾರೆ.
ಈ ಬಾರಿ ಶಿವರಾತ್ರಿಯನ್ನು ಫೆಬ್ರವರಿ 18 ರಂದು ಆಚರಿಸಲಾಗುತ್ತದೆ ಈ ದಿನ ಶಿವನಿಗೆ ಕಬ್ಬಿನರಸ, ಹಸಿ ಹಾಲು ತುಪ್ಪವನ್ನು ಅರ್ಪಣೆ ಮಾಡಬೇಕು. ಅಲ್ಲದೆ ಈ ದಿನ ಶಿವನ ನೆಚ್ಚಿನ ವಸ್ತುಗಳಾದ ಬಿಲ್ವಪತ್ರೆ ಮತ್ತು ಬಾಂಗ್ ಅನ್ನು ಅರ್ಪಣೆ ಮಾಡುವುದರಿಂದ ಶಿವನ ಕೃಪೆಗೆ ಪಾತ್ರರಾಗುತ್ತೀರಾ. ಈ ದಿನ ದಾನ ಧರ್ಮಗಳನ್ನು ಮಾಡುವುದು ಕೂಡ ಬಹು ಮುಖ್ಯವಾದದ್ದು ಬಡವರಿಗೆ ಆಹಾರ ಮಕ್ಕಳಿಗೆ ಹಾಲು ಹಾಗೂ ಸಿಹಿ ತಿಂಡಿಗಳನ್ನು ದಾನ ಮಾಡುವುದರಿಂದ ಕಷ್ಟಗಳು ನಿವಾರಣೆಯಾಗುತ್ತವೆ ಎನ್ನುವ ನಂಬಿಕೆ ಇದೆ ಇದರ ಜೊತೆಗೆ ಈ ದಿನ ಅನ್ನದಾನ ಮಾಡುವುದು ಕೂಡ ತುಂಬಾ ಒಳ್ಳೆಯದು.
ಶಿವರಾತ್ರಿಯಂದು ಭಕ್ತರು ಮುಂಜಾನೆ ಎದ್ದು ನದಿಯಲ್ಲಿ ಸ್ನಾನವನ್ನು ಮಾಡಬೇಕು ನದಿಯಲ್ಲಿ ಸ್ನಾನ ಮಾಡಲು ಆಗದಿರುವವರು ಮನೆಯಲ್ಲಿ ಸ್ನಾನ ಮಾಡುವಾಗ ಸ್ವಲ್ಪ ಎಳ್ಳನ್ನು ಹಾಕಿ ಕುದಿಸಿ ಆ ನೀರಿನಲ್ಲಿ ಸ್ನಾನ ಮಾಡಿ. ನಂತರ ಮಡಿ ವಸ್ತ್ರವನ್ನು ಧರಿಸಿ ಶಿವನ ದೇವಾಲಯಕ್ಕೆ ಭೇಟಿ ನೀಡಬೇಕು ಶಿವನಿಗೆ ಹಾಲು ಜೇನಿನ ಅಭಿಷೇಕವನ್ನು ಮಾಡಿಸಿ ಹೂವು ಹಣ್ಣುಗಳನ್ನ ಅರ್ಪಿಸಿ ಶಿವ ಮಂತ್ರಗಳನ್ನು ಪಟ್ಟಿಸಿ ಇದರಿಂದ ನೀವು ಶಿವನ ಕೃಪೆಗೆ ಪಾತ್ರರಾಗಬಹುದು. ವಿವಾಹಿತ ಮಹಿಳೆ ತನ್ನ ಗಂಡ ಮಕ್ಕಳಿಗೆ ಒಳ್ಳೆಯದಾಗಲಿ ಇನ್ನು ಉದ್ದೇಶದಿಂದ ಈ ವ್ರತವನ್ನು ಮಾಡುತ್ತಾರೆ. ಅವಿವಾಹಿತ ಹೆಣ್ಣು ಮಕ್ಕಳು ಶಿವನಂತ ಗಂಡ ಸಿಗಲಿ ಅಂತ ಸಂಕಲ್ಪ ಮಾಡಿಕೊಂಡು ಉಪವಾಸವಿದ್ದು ಭಗವಾನ್ ಶಿವನನ್ನ ಆರಾಧಿಸುತ್ತಾರೆ. ಉಪವಾಸ ಮಾಡುವುದರಿಂದ ದೇಹದಲ್ಲಿರುವ ಕಲ್ಮಶವನ್ನು ಹೊರಹಾಕುತ್ತದೆ.
ಮಹಾ ಶಿವರಾತ್ರಿ ಉಪವಾಸ ಮಾಡುವಾಗ ಉಪ್ಪನ್ನು ಸೇವಿಸಬಾರದು. ಯಾರಾದರೂ ಅನಾರೋಗ್ಯದಿಂದ ಬಳಲುತ್ತಿದ್ದರೆ ಅಥವಾ ಗರ್ಭಿಣಿ ಮಹಿಳೆ ವಯಸ್ಸಾದ ವ್ಯಕ್ತಿಯಾಗಿದ್ದರೆ ಅವರು ಉಪವಾಸದಲ್ಲಿ ಫಲಹಾರ ಮತ್ತು ಉಪ್ಪನ್ನು ಬಳಸಬಹುದು. ಉಪವಾಸ ಮಾಡುವ ವ್ಯಕ್ತಿ ನಿದ್ರೆ ಮಾಡಬಾರದು ಮತ್ತು ಶಿವನ ಆರಾಧನೆ ಮಾಡಬೇಕು. ಗಂಡ ಹೆಂಡತಿ ಇಬ್ಬರೂ ಸೇರಿ ವ್ರತ ಮಾಡುವುದರಿಂದ ಜೀವನ ಚೆನ್ನಾಗಿರುತ್ತೆದೆ. ಮನಸ್ಸಿನಲ್ಲಿ ಕೆಟ್ಟ ಆಲೋಚನೆ ತುಂಬಿಕೊಂಡ ವ್ರತವನ್ನು ಮಾಡಬಾರದು. ಮುಟ್ಟಾದ ಸಮಯದಲ್ಲಿ ಮಹಿಳೆಯರು ವ್ರತವನ್ನು ಮಾಡಬಾರದು. ಮಹಾಶಿವರಾತ್ರಿ ವ್ರತವನ್ನು ಪ್ರಮುಖವಾಗಿ ಕನ್ಯೆಯರು ಮಾಡಬೇಕು ಶಿವರಾತ್ರಿ ವ್ರತವನ್ನು ಸರಿಯಾಗಿ ಮಾಡಿದರೆ ಅಶ್ವಮೇಧ ಯಾಗ ಮಾಡುವುದಕ್ಕಿಂತ ಹೆಚ್ಚು ಫಲಗಳನ್ನು ಪಡೆಯುತ್ತೀರಿ.