ಸ್ನೇಹಿತರ ನಿಮಗೆಲ್ಲರಿಗೂ ತಿಳಿದಿರಬಹುದು ಪುರಾಣ ಶಾಸ್ತ್ರಗಳ ಪ್ರಕಾರ ಶನಿದೇವ ಸೂರ್ಯದೇವನ ಪುತ್ರ ಆಗಿರುತ್ತಾನೆ. ಈತ ಶಕ್ತಿಯ ವಿಚಾರಕ್ಕೆ ಬಂದರೆ ಸೂರ್ಯದೇವನಿಗಿಂತ ಶಕ್ತಿಶಾಲಿಯಾಗಿರುತ್ತಾನೆ. ಇನ್ನು ಒಂದು ವೇಳೆ ಶನಿ ತನ್ನ ವಕ್ರದೃಷ್ಟಿಯನ್ನು ನಿಮ್ಮ ಮೇಲೆ ಬೀರಿದರೆ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಒಂದುವರೆ ವರ್ಷದಿಂದ ಏಳುವರೆ ವರ್ಷದವರೆಗೆ ಕೂಡ ಆತನ ವಕ್ರದೃಷ್ಟಿಗೆ ನೀವು ಗುರಿಯಾಗಬೇಕಾಗುತ್ತದೆ. ಇನ್ನು ಶನಿವಾರ ಎನ್ನುವುದು ಶನಿ ದೇವನಿಗೆ ವಿಶೇಷವಾಗಿ ಅರ್ಪಿಸಲ್ಪಟ್ಟ ದಿನವಾಗಿರುತ್ತದೆ. ಹೀಗಾಗಿ ಈ ದಿನ ಯಾವ ಕೆಲಸವನ್ನು ಮಾಡಬಾರದು ಎಂಬುದನ್ನು ಇಂದಿನ ಲೇಖನಿಯಲ್ಲಿ ನಿಮಗೆ ತಿಳಿಸಲು ಹೊರಟಿದ್ದೇವೆ.
ಶನಿವಾರದ ದಿನ ಯಾವುದೇ ಕಬ್ಬಿಣದ ವಸ್ತುಗಳನ್ನು ಖರೀದಿಸಬಾರದು ಎನ್ನುವ ವಾಡಿಕೆ ಇದೆ ಯಾಕೆಂದರೆ ಒಂದು ದಿನ ಶನಿದೇವನಿಗೆ ಕಬ್ಬಿಣದಿಂದ ಮಾಡಿದಂತಹ ಸಿಂಹಾಸನವನ್ನು ಯಾರು ತಂದು ಕೊಟ್ಟಾಗ ಆತನ ಮೇಲೆ ಕೋಪದಿಂದ ತನ್ನ ವಕ್ರದೃಷ್ಟಿಯನ್ನು ಬೀರಿದ್ದ. ಇನ್ನು ಶನಿವಾರದ ದಿನ ವಿಶೇಷವಾಗಿ ಮತ್ತೊಂದು ವಸ್ತುವನ್ನು ಖರೀದಿಸಲೇಬಾರದು ಎನ್ನುವ ಪ್ರತೀತಿ ಇದೆ. ಹೌದು ಅದೇನೆಂದರೆ, ಪ್ರಾಣಿಗಳ ಚರ್ಮದಿಂದ ಮಾಡಿರುವ ಯಾವುದೇ ವಸ್ತುಗಳನ್ನು ಶನಿವಾರದ ದಿನದಂದು ಖರೀದಿಸಬಾರದು ಇದರಿಂದ ಶನಿ ಕೋಪಗೊಳ್ಳುತ್ತಾನೆ ಎಂಬುದಾಗಿ ಮಾತಿದೆ.
ಯಾವುದೇ ರೀತಿಯ ಎಣ್ಣೆಯನ್ನು ಶನಿವಾರದ ದಿನದಂದು ಖರೀದಿಸಬಾರದು ಎನ್ನುವ ನಿಯಮವು ಕೂಡ ಇದೆ. ಸಾಮಾನ್ಯವಾಗಿ ಶನಿವಾರದಂದು ಶನಿ ದೇವರಿಗೆ ಸಾಸಿವೆ ಎಣ್ಣೆಯನ್ನು ದೀಪದಲ್ಲಿ ಹೊತ್ತಿಸಿದರೆ ಪ್ರಸನ್ನನಾಗುತ್ತಾನೆ ಎಂಬ ಮಾತಿದೆ ಆದರೆ ಎಣ್ಣೆಯನ್ನು ಅವತ್ತೇ ಖರೀದಿಸಬೇಕು ಎನ್ನುವ ನಿಯಮ ಯಾವುದು ಇಲ್ಲ. ಹೀಗಾಗಿ ಶನಿವಾರವನ್ನು ಹೊರತುಪಡಿಸಿ ಎಣ್ಣೆಯನ್ನು ಬೇರೆ ಯಾವುದೇ ದಿನ ಬೇಕಾದರೂ ಖರೀದಿಸಿ.
ಇದ್ದಿಲನ್ನು ಯಾವತ್ತೂ ಕೂಡ ಹೊರಗಿನಿಂದ ಮನೆಯ ಒಳಗೆ ತರಬಾರದು ಎನ್ನುವ ಮಾತಿದೆ. ಅದರಲ್ಲೂ ವಿಶೇಷವಾಗಿ ಶನಿವಾರದ ದಿನದಂದು ಈ ಕೆಲಸವನ್ನು ಯಾವತ್ತೂ ಕೂಡ ಮಾಡಬಾರದು. ಮನೆಯನ್ನು ಸ್ವಚ್ಛಗೊಳಿಸುವ ಪೊರಕೆ ಹಾಗೂ ಆಹಾರದ ರುಚಿಯನ್ನು ಹೆಚ್ಚಿಸುವ ಉಪ್ಪು ಎರಡನ್ನು ಕೂಡ ಶನಿವಾರದ ದಿನದಂದು ಯಾವತ್ತೂ ಕೂಡ ಖರೀದಿಸಬಾರದು ಎನ್ನುವ ನಿಯಮ ಜ್ಯೋತಿಷ್ಯ ಶಾಸ್ತ್ರದಲ್ಲಿ ಈಗಾಗಲೇ ಉಲ್ಲೇಖವಾಗಿದೆ. ಹೀಗಾಗಿ ನಿಮ್ಮ ಜೀವನದಲ್ಲಿ ಈ ವಿಚಾರಗಳನ್ನು ತಪ್ಪದೇ ಪಾಲಿಸಿ ಹಾಗೂ ಶನಿದೇವರ ವಕ್ರದಷ್ಟಿಯಿಂದ ಪಾರಾಗಿ.