ವಿಮಾನ ಅಂದ್ರೆ ಎಲ್ಲರಿಗೂ ಗೊತ್ತಿರುತ್ತದೆ ವಿಮಾನದಲ್ಲಿ ಗಗನಸಖಿಯರು ಅಂತ ಕೆಲಸ ಮಾಡುತ್ತಾರೆ. ಗಗನಸಖಿಯರ ಬಗ್ಗೆ ಕೆಲವು ಸಂಗತಿಗಳನ್ನು ಈ ಲೇಖನದ ಮೂಲಕ ತಿಳಿಯೋಣ. ಕಂಪನಿಗಳಲ್ಲಿ 1 ವರ್ಷ ಅಥವಾ 2 ವರ್ಷದ ಅಗ್ರಿಮೆಂಟ್ ಇರುತ್ತದೆ ಮುಗಿದ ಕೂಡಲೇ ಬಿಡಬಹುದು, ಸಣ್ಣ ವಿಷಯಕ್ಕೆ ರಾಜೀನಾಮೆ ಕೊಡುತ್ತೇವೆ ಆದರೆ ಗಗನಸಖಿಯರಿಗೆ ಈ ರೀತಿಯ ಆಯ್ಕೆ ಇರುವುದಿಲ್ಲ. ಕೆಲಸಕ್ಕೆ ಸೇರುವಾಗ ಇಷ್ಟು ವರ್ಷ ಕೆಲಸ ಮಾಡ್ತೀವಿ ಅಂತ ಅಗ್ರಿಮೆಂಟ್ ಮಾಡಬೇಕು ಮಧ್ಯದಲ್ಲಿ ಬಿಟ್ಟರೆ ಫೈನ್ ಕಟ್ಟಬೇಕು. ಗಗನಸಖಿಯಾದವರು ಕೆಲಸಕ್ಕೆ ಸೇರಿದ 3ವರ್ಷ ಪ್ರೆಗ್ನೆಂಟ್ ಆಗುವ ಹಾಗಿಲ್ಲ ಒಂದು ವೇಳೆ ಆದರೆ ಕೆಲಸದಿಂದ ತೆಗೆದು ಹಾಕುತ್ತಾರೆ. ಗಗನಸಖಿಯರ ಹಲ್ಲು ಯಾವಾಗಲೂ ಹೊಳೆಯುತ್ತಿರುತ್ತದೆ ಇವರ ಹಲ್ಲು ಬಿಳಿ ಇದ್ದರೆ ಮಾತ್ರ ಕೆಲಸಕ್ಕೆ ತೆಗೆದುಕೊಳ್ಳುತ್ತಾರೆ. ಇವರು ತಿಂಗಳಿನಲ್ಲಿ 90ಗಂಟೆಗಳ ಕಾಲ ವಿಮಾನದಲ್ಲಿ ಕಾಲ ಕಳೆಯುತ್ತಾರೆ ಅಂದ್ರೆ ನಾಲ್ಕು ದಿನ ವಿಮಾನದಲ್ಲೇ ಕಾಲ ಕಳೆಯುತ್ತಾರೆ. ಇವರು ಯಾವ ಕಾರಣಕ್ಕೂ ದಪ್ಪ ಆಗುವ ಹಾಗಿಲ್ಲ ಇವರಿಗೆ ಕೊಟ್ಟ ಯೂನಿಫಾರ್ಮ್ ಗೆ ಫಿಟ್ ಇರಬೇಕು. ಹುಟ್ಟುಮಚ್ಛೆ ಇದ್ದರೆ ಅಂತಹವರನ್ನು ಕೆಲಸಕ್ಕೆ ತೆಗೆದುಕೊಳ್ಳುವುದಿಲ್ಲ.
ಇವರಿಗೆ ಸ್ವಿಮ್ಮಿಂಗ್ ಬರಲೇಬೇಕು ಏಕೆಂದರೆ ವಿಮಾನ ನೀರಿನಲ್ಲಿ ಲ್ಯಾಂಡ್ ಆಗುವುದಿದ್ದರೆ ಸ್ವಿಮ್ಮಿಂಗ್ ಬೇಕಾಗುತ್ತದೆ. ಇಂಟರ್ ವ್ಯೂನಲ್ಲಿ ಸ್ವಿಮ್ಮಿಂಗ್ ಟೆಸ್ಟ್ ಮಾಡಲಾಗುತ್ತದೆ. ಇವರು 6 ತಿಂಗಳಿಗೊಮ್ಮೆ ಹೆಲ್ತ್ ಚೆಕಪ್ ಮಾಡಿಕೊಳ್ಳಬೇಕು ಎಚ್. ಐ. ವಿ ಟೆಸ್ಟ್ ಕೂಡ ಮಾಡಿಸಬೇಕು ನಂತರ ರಿಪೋರ್ಟ್ ನ್ನು ಆಫೀಸ್ ಗೆ ಸಲ್ಲಿಸಬೇಕು ಯಾವುದಾದರೂ ಖಾಯಿಲೆ ಇದ್ದರೆ ಕೆಲಸದಿಂದ ತೆಗೆದುಹಾಕುತ್ತಾರೆ. ಚೀನಾದಲ್ಲಿ ಗಗನಸಖಿಯರಿಗೆ ತರಭೇತಿ ನೀಡುತ್ತಾರೆ ಹೇಗೆ ಮಾತನಾಡಬೇಕು ಎಷ್ಟು ಮಾತನಾಡಬೇಕು ಎಂದು ಹೇಳಿಕೊಡುತ್ತಾರೆ ಅಲ್ಲದೆ ಬಾಯಲ್ಲಿ ಕಡ್ಡಿ ತಲೆಯ ಮೇಲೆ ಪುಸ್ತಕ ಇಟ್ಟುಕೊಂಡು ಅದು ಕೆಳಗೆ ಬೀಳದಂತೆ ನೋಡಿಕೊಳ್ಳಬೇಕು.
ಯಾವರೀತಿ ನಿತ್ಕೊಳ್ಳಬೇಕು ನಿಂತುಕೊಂಡಾಗ ಎರಡು ಕಾಲಿನ ಮಧ್ಯೆ ಎಷ್ಟು ಗ್ಯಾಪ್ ಇರಬೇಕು ಎನ್ನುವುದು ತರಭೇತಿ ಯಲ್ಲಿ ಹೇಳಿಕೊಡಲಾಗುತ್ತದೆ. ಯಾವರೀತಿ ಕುತ್ಕೊಳ್ಳಬೇಕು ಎಂಬುದನ್ನು ತಿಳಿಸಲಾಗುತ್ತದೆ. ಚೀನಾದಲ್ಲಿ ಇವರಿಗೆ ಮಾರ್ಷಲ್ಆರ್ಟ್ಸ್ ಹೇಳಿಕೊಡಲಾಗುತ್ತದೆ. ಇವರು 72 ದಿನಗಳ ಕಾಲ ರಜೆ ಹಾಕಬಹುದು ಇವರಿಗೆ ಒಂದು ಐಡೆಂಟಿಟಿ ಕಾರ್ಡ್ ಕೊಡಲಾಗುತ್ತದೆ ಈ ಕಾರ್ಡ್ ನಿಂದ ಯಾವ ದೇಶಕ್ಕೆ ಬೇಕಾದರೂ ವೀಸಾ ಇಲ್ಲದೆ ಕಡಿಮೆ ಖರ್ಚಿನಲ್ಲಿ ಓಡಾಡಬಹುದು. ನೋಡಲು ನಗು ನಗು