ಎಲ್,ಹೆಚ್,ಬಿ ಕೋಚಸ್ ಮತ್ತು ಐ,ಸಿ,ಎಫ್ ಕೋಚಸ್ ಬಗ್ಗೆ ಮಾಹಿತಿ ಈ ಕೆಳಗಿನಂತೆ ತಿಳಿಯೋಣ. ಐ,ಸಿ,ಎಫ್(integral coach factory) ಕೋಚಸ್ ಎಂದರೆ ICF ಕೋಚ್ ಗಳು ನಮ್ಮ ಭಾರತದ ಬಹುಪಾಲು ಮುಖ್ಯ ರೈಲು ಮಾರ್ಗಗಳಲ್ಲಿ ಬಳಸಲಾಗುವ ಕನ್ವೇಷನಲ್ ಪ್ಯಾಸೆಂಜರ್ ಕೋಚ್ ಗಳಾಗಿವೆ. ಈ ICF ಕೋಚ್ ಡಿಸೈನ್ ಅನ್ನು ನಮ್ಮ ಭಾರತದ ಚೆನ್ನೈನಲ್ಲಿ ಇರೋ ಇಂಟಿಗ್ರಲ್ ಕೋಚ್ ಫ್ಯಾಕ್ಟರಿ ಡೆವಲಪ್ ಮಾಡುತ್ತೆ. ಮೊದಲ ICF ಕೋಚ್ ಅನ್ನು ಆಗಿನ ಪ್ರಧಾನ ಮಂತ್ರಿ ಜವಾಹರಲಾಲ್ ನೆಹರೂ ಅವರು ಅಕ್ಟೋಬರ್ 2, 1955 ರಂದು ಫ್ಲಾಗ್ ಮಾಡಿದ್ದರು ಮತ್ತು ಕೊನೆಯ ICF ಕೋಚ್ ಅನ್ನು ಹಿರಿಯ ಟೆಕ್ನೀಷಿಯನ್ ಆದ ಶ್ರೀ ಭಾಸ್ಕರ,ಪಿ ಅವರು ಜನವರಿ 19, 2018 ರಂದು ರೈಲ್ವೆ ಮಂಡಳಿಯ ಅಧ್ಯಕ್ಷ ಅಶ್ವನಿ ಲೋಹಾನಿಯವರ ಉಪಸ್ಥಿತಿಯಲ್ಲಿ ಫ್ಲಾಗ್ ಆಫ್ ಮಾಡಿದರು.
ಎಲ್,ಹೆಚ್,ಬಿ ಕೋಚಸ್ (linke hofamann busch) ಎಂದರೆ ಈ LHB ಕೋಚಸ್ ಕೂಡ ನಮ್ಮ ಇಂಡಿಯನ್ ರೈಲ್ವೆಸ್ನ್ ಪ್ಯಾಸೆಂಜರ್ ಕೋಚಸ್ ಆಗಿವೆ. ಆದರೆ ಈ ಕೋಚಸ್ ಅನ್ನು ಜರ್ಮನಿಯ ಲಿಂಕ್ ಹಾಲ್ಫಮನ್ ಬುಶ್ ಅನ್ನೋ ಮ್ಯಾನಿಫ್ಯಾಕ್ಚರಿಂಗ್ ಫ್ಯಾಕ್ಟರಿ ಡೆವಲಪ್ ಮಾಡುತ್ತೇ. ಫಾರ್ಮರ್ ಯೂನಿಯನ್ ರೈಲ್ವೆ ಮಿನಿಸ್ಟರ್ ಆದ ಪಿಯುಷ್ ಗೋಯಲ್ ಅವರು ಮಾರ್ಚ್ 17, 2020 ರಂದು ರಾಜ್ಯಸಭಾದಲ್ಲಿ ಹೇಳಿದ ಪ್ರಕಾರ 2009 ರಿಂದ 2014 ರ ವರೆಗೆ ಸುಮಾರು 1, 866 ಮಾರ್ಡನ್ LHB ಕೋಚಸ್ ಅನ್ನ ಮ್ಯಾನಿಫ್ಯಾಕ್ಚರ್ ಮಾಡಿದ್ದಾರೆ,
ಆದರೆ 2014 ರಿಂದ 2019 ರ ವರೆಗೆ ಸುಮಾರು 9,932 LHB ಕೋಚಸ್ ಅನ್ನ ಮ್ಯಾನಿಫ್ಯಾಕ್ಚರ್ ಆಗಿವೆ ಎಂದು ಹೇಳಿದ್ದರು. ಹಾಗೆ ಈ LHB ಕೋಚ್ ಗಳು ICF ಕೋಚ್ ಗಳಿಗಿಂತ ಹೆಚ್ಚು ಸುರಕ್ಷಿತ ಎಂದು ಗೋಯಲ್ ಅವರು ತಿಳಿಸಿದ್ದಾರೆ. ಮತ್ತು ಕಳೆದ ಮೂರು ವರ್ಷಗಳಿಂದ ಈ ICF ಕೋಚ್ ಗಳ ಮ್ಯಾನಿಫ್ಯಾಕ್ಚರಿಂಗ್ ಕೂಡ ನಿಲ್ಲಿಸಲಾಗಿದೆ.
ಈಗ LHB ಮತ್ತು ICF ಕೋಚ್ ಗಳ ನಡುವಿನ ವ್ಯತ್ಯಾಸವನ್ನು ತಿಳಿಯೋಣ.
LHB ಕೋಚ್ ಗಳು ICF ಕೋಚ್ ಗಳಿಗಿಂತ ಹೆಚ್ಚಿನ ವೇಗದಲ್ಲಿ ಚಲಿಸಬಲ್ಲವು. ಎಲ್,ಹೆಚ್,ಬಿ ಕೋಚ್ ಗಳಿಗೆ ಗರಿಷ್ಠ ಅನುಮತಿಸುವ ವೇಗವು 160 km ಪರ್ ಹವರ್ ಆಗಿದೆ. ಆದರೆ ICF ಕೋಚ್ ಗಳು ಗರಿಷ್ಠ 110 km ಪರ್ ಹವರ್ ಅಲ್ಲಿ ಮಾತ್ರ ಪ್ರಯಾಣಿಸಲು ಅನುಮತಿಸಲಾಗಿದೆ.
LHB ಕೋಚ್ ಗಳು ಟೆಲಿಸ್ಕೋಪಿಕ್ ವಿರೋಧಿಯಾಗಿದ್ದು ಅಂದ್ರೆ ಆ್ಯಂಟಿ ಟೆಲಿಸ್ಕೋಪಿಕ್ ಆಗಿದ್ದು ಅಪಘಾತದ ಸಮಯದಲ್ಲಿ ಈ ಕೋಚ್ ಗಳು ಪಕ್ಕದ ಕೋಚ್ ಗಳಿಗೆ ನುಸುಳುವುದಿಲ್ಲಾ. LHB ಕೋಚ್ ಗಳು ಘರ್ಷಣೆ ಮತ್ತು ಹಳಿತಪ್ಪಿದಾಗ ಮುಂದಿನ ಕೋಚ್ ಗಳಿಗೆ ಏರುವುದಿಲ್ಲ ಎಕೆಂದರೆ ಇವು ಸೆಂಟರ್ ಬಫರ್ ಕಪ್ಲಿಂಗ್ ಅನ್ನು ಬಳಸುತ್ತಾರೆ.
ಆದರೆ ಈ ICF ಕೋಚ್ ಗಳಲ್ಲಿ ಡುಯಲ್ ಬಫರ್ ಸಿಸ್ಟಂ ಅನ್ನು ಬಳಸುತ್ತಾರೆ ಆದ್ದರಿಂದ ಅಪಘಾತಗಳಾದಗ ಒಂದು ಭೋಗಿ ಮೇಲೆ ಮತ್ತೊಂದು ಬೋಗಿ ಏರಿ ಹೆಚ್ಚು ಪ್ರಾಣ ನಷ್ಟವನ್ನು ಉಂಟು ಮಾಡುತ್ತದೆ. LHB ಕೋಚ್ ಗಳು ಕನ್ವೆಂಷನಲ್ ICF ಕೋಚ್ ಗಳಿಗಿಂತ 1.7 ಮೀಟರ್ ಉದ್ದವಿರುತ್ತದೆ ಆದ್ದರಿಂದ ಇದರಲ್ಲಿ ಸಿಟಿಂಗ್ ಕ್ಯಾಪಾಸಿಟಿ ಕೂಡ ಜಾಸ್ತಿ ಇರುತ್ತದೆ. LHB ಕೋಚ್ ಗಳು ಫಿಯಾಟ್ ಬೋಗಿಗಳನ್ನು ಹೊಂದಿದ್ದು ICF ಕೋಚ್ ಗಳಿಗಿಂತ ಕಡಿಮೆ ಚಲಿಸುವ ಭಾಗಗಳನ್ನು ಹೊಂದಿದೆ. ಈ ಕೋಚ್ ಗಳಲ್ಲಿ ಹವ ನಿಯಂತ್ರಣವು ಹೆಚ್ಚಿನ ಸಾಮರ್ಥ್ಯವನ್ನು ಹೊಂದಿರುತ್ತದೆ.