ಜಾರ್ಖಂಡ್ ನಲ್ಲಿ ಹೇಮಂತ್ ಸೊರೆನ್ ನೇತೃತ್ವದ ಜಾರ್ಖಂಡ್ ಮುಕ್ತಿ ಮೋರ್ಚಾ (JMM) ಸರ್ಕಾರ ಅಧಿಕಾರಕ್ಕೆ ಬಂದು ಇಂದಿಗೆ ಸರಿಯಾಗಿ ಎರಡು ವರ್ಷಗಳಾದವು ಈ ಹಿನ್ನಲೆಯಲ್ಲಿ ಮಹತ್ವದ ಘೋಷಣೆ ಮಾಡಲಾಗಿದೆ.
ಸದ್ಯ ದೇಶದಲ್ಲಿ ಪೆಟ್ರೋಲ್ – ಡೀಸೆಲ್ ಬೆಲೆ ಅಧಿಕವಾಗಿದೆ. 27 ಕ್ಕೂ ಹೆಚ್ಚು ರಾಜ್ಯಗಳಲ್ಲಿ ಪೆಟ್ರೋಲ್ ದರ ಲೀಟರ್ ಗೆ 100 ರೂಪಯಿ ಇದೆ. ದೀಪಾವಳಿ ಹಬ್ಬದ ಮುನ್ನಾದಿನ ಅಂದರೆ ನವೆಂಬರ್ 4 ರಂದು ಕೇಂದ್ರ ಸರ್ಕಾರ ಪೆಟ್ರೋಲ್ ಡೀಸೆಲ್ ಮೇಲಿನ ಅಬಕಾರಿ ಸುಂಕವನ್ನು ಕಡಿತ ಮಾಡಿದ ಮೇಲೆ ಬೆಲೆಯಲ್ಲಿ ಸ್ಥಿರತೆ ಕಾಯ್ದುಕೊಂಡಿದೆ. ಕೇಂದ್ರ ಸರ್ಕಾರ ಅಬಕಾರಿ ಸುಂಕವನ್ನು ಕಡಿತಗೊಳಿಸಿದ ನಂತರ ಹಲವು ರಾಜ್ಯಗಳು ಸಹ ವ್ಯಾಟ್ ಕಡಿತಗೊಳಿಸಿದ್ದವು. ಆದರೆ ಇದೀಗ ಜಾರ್ಖಂಡ್ ಸರ್ಕಾರ ಒಂದು ಮಹತ್ವದ ಘೋಷಣೆ ಮಾಡಿದೆ. ಪೆಟ್ರೋಲ್ ಬೆಲೆಯಲ್ಲಿ 25 ರೂಪಾಯಿ ಕಡಿತಗೊಳಿಸುವುದಾಗಿ ಮುಖ್ಯಮ೦ತ್ರಿ ಹೇಮಂತ್ ಸೊರೆನ್ ಇಂದು ಘೋಷಸಿದ್ದಾರೆ.
ಟ್ವಿಟ್ ಮಾಡಿರುವ ಮುಖ್ಯಮಂತ್ರಿ ಕಾರ್ಯಾಲಯ, ಪೆಟ್ರೋಲ್ ಡೀಸೆಲ್ ಬೆಲೆ ನಿರಂತರಾಗಿ ಏರಿದ ಹಿನ್ನಲೆಯಲ್ಲಿ ಬಡವರಿಗೆ ಮಾದ್ಯಮ ವರ್ಗದವರಿಗೆ ಹೊರೆಯಾಗುತ್ತಿದೆ. ಹಾಗೂ 2022 ರ ಜನವರಿ 26 ರಂದು ದ್ವಿಚಕ್ರವಾಹನ ಸವಾರರಿಗೆ ಮಾತ್ರ ಅನ್ವಯ ಆಗುವಂತೆ ಪೆಟ್ರೋಲ್ ಬೆಲೆಯಲ್ಲಿ ಪ್ರತಿ ಲೀಟರ್ ಗೆ 25 ರೂ ಕಡಿತಗೊಳಿಸಲಾಗುವುದು ಎಂದು ತಿಳಿಸಿದ್ದಾರೆ.
ಪೆಟ್ರೋಲ್ ಬೆಲೆ ಕಡಿತದ ಲಾಭವನ್ನು ರೇಷನ್ ಕಾರ್ಡ್ ಹೊಂದಿರುವವರು ಮಾತ್ರ ಪಡೆಯಬಹುದು. ಈ ಯೋಜನೆಯಲ್ಲಿ ಪೆಟ್ರೋಲ್ ಖರೀದಿಗಾಗಿ ಬಿ,ಪಿ,ಎಲ್ ರೇಷನ್ ಕಾರ್ಡ್ ಹೊಂದಿರುವ ಪ್ರತಿಯೊಬ್ಬರಿಗೂ 250 ರೂ ಸಬ್ಸಿಡಿ ದೊರೆಯಲಿದೆ. ಪೆಟ್ರೋಲ್ ಖರೀದಿಸಿದ ಬಳಿಕ ಸಬ್ಸಿಡಿ ಫಲಾನುಭವಿಗಳ ಬ್ಯಾಂಕ್ ಅಕೌಂಟ್ ಗೆ ಜಮೆಯಾಗಲಿದೆ ಈ ಯೋಜನೆಯಿಂದ 62 ಲಕ್ಷ ಜನರಿಗೆ ಲಾಭ ದೊರೆಯಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.