ಮಾತು ಮನಸ್ಸಿನ ಭಾವನೆ ಹಾಗೂ ಅನಿಸಿಕೆಯನ್ನು ಬಿತ್ತರಿಸುತ್ತದೆ ಮೌನ ಎನ್ನುವುದು ಸಾಕಷ್ಟು ಸಂಗತಿಗಳನ್ನು ಹಿಡಿದಿಡುತ್ತದೆ ಮನಸ್ಸಿಗೆ ಅನಿಸಿದ್ದನ್ನು ಹೇಳುವುದು ಸುಲಭ ಆದರೆ ಮನಸ್ಸು ಬಯಸಿದ್ದನ್ನು ನಿಯಂತ್ರಿಸುವುದು ಮೌನ. ಮೌನದಿಂದ ಪರಿಸ್ಥಿತಿಯನ್ನು ನಿಯಂತ್ರಿಸುವುದು ಅಷ್ಟು ಸುಲಭದ ಮಾತಲ್ಲ. ಮನಸ್ಸು ಸಾವಿರ ಸಂಗತಿಯನ್ನು ಬಯಸುತ್ತದೆ ಹಾಗಂತ ಸಂಗತಿಯನ್ನು ಎಲ್ಲೆಂದರಲ್ಲಿ ಹೇಳುವುದಕ್ಕೆ ಆಗುವುದಿಲ್ಲ. ಮನಸ್ಸೇ ಹಾಗೆ ಏನನ್ನು ಬಯಸುತ್ತದೆ ಇನ್ನೇನನ್ನೋ ಬಿತ್ತರಿಸುತ್ತದೆ ನಂತರ ಅದರ ಪರಿಣಾಮಗಳೇ ಬೇರೆಯಾಗಿರುತ್ತದೆ.
ನಾವಿಂದು ಮಾತು ಮೌನದ ಬಗ್ಗೆ ಚಾಣಕ್ಯ ಅವರು ಏನು ಹೇಳಿದ್ದಾರೆ ಎಂಬುದನ್ನು ತಿಳಿದುಕೊಳ್ಳೋಣ. ಎಂತಹ ಸಂದರ್ಭದಲ್ಲಿ ನಾವು ಮೌನವಾಗಿರಬೇಕು ಮೌನವಾಗಿದ್ದರೆ ಯಶಸ್ಸು ಸಿಗುತ್ತದೆ ಎನ್ನುವ ವಿಚಾರವನ್ನು ಚಾಣಕ್ಯ ಅವರು ಹೇಳಿದ್ದಾರೆ. ಆ ವಿಚಾರಗಳು ಯಾವುದು ಎಂದರೇ ಸೂಕ್ತ ವಿಷಯದ ಬಗ್ಗೆ ತಿಳಿಯದೆ ಇರುವಾಗ. ಎಲ್ಲರೂ ಎಲ್ಲ ವಿಷಯಗಳ ಬಗ್ಗೆ ತಿಳಿದುಕೊಂಡಿರುವುದಕ್ಕೆ ಸಾಧ್ಯವಿಲ್ಲ ಯಾರಾದರೂ ಒಬ್ಬ ವ್ಯಕ್ತಿ ಗಂಭೀರ ವಿಷಯದ ಕುರಿತು ಮಾತನಾಡುತ್ತಿರುವಾಗ ಅದನ್ನು ಕೇಳುವಂತಹ ಶಕ್ತಿ ಮೊದಲಿರಬೇಕು. ನಮಗೆ ತಿಳಿಯದೆ ಇರುವಂತಹ ವಿಷಯ ತಿಳಿದಿದೆ ಎಂದು ಎಲ್ಲಾ ರೀತಿಯಲ್ಲಿ ತೋರಿಸುವುದಕ್ಕೆ ಅರ್ಥವಿಲ್ಲದ ಮಾತುಗಳನ್ನು ಆಡುವುದಕ್ಕೆ ಹೋಗಬಾರದು ಆ ಸಮಯದಲ್ಲಿ ಮೌನವಾಗಿರುವುದು ಉತ್ತಮ ಮಾರ್ಗ.
ಬೇರೆಯವರಿಗೆ ನೋವುಂಟು ಮಾಡುವ ಬದಲು ಮೌನ ವಹಿಸಬೇಕು ಮನಸ್ಸಿಗೆ ಬಂದಂತಹ ಮಾತನ್ನು ಒಮ್ಮೆಲೆ ಹೇಳುವುದರಿಂದ ಎದುರು ಇರುವಂತಹ ವ್ಯಕ್ತಿಗೆ ನೋವಾಗಬಾರದು ನಮ್ಮ ಮಾತುಗಳು ಇತರರ ಭಾವನೆಗಳಿಗೆ ನೋವು ಅಥವಾ ಬೇಸರವನ್ನು ಉಂಟುಮಾಡುತ್ತದೆ ಎನ್ನುವಾಗ ಆದಷ್ಟು ಮೌನದಿಂದ ಇರುವುದು ಉತ್ತಮ. ಅನುಚಿತ ಮಾತುಗಳನ್ನು ಹೇಳಬೇಕು ಎನ್ನುವ ಸಂದರ್ಭ ಬಂದಾಗ ಮಾತನಾಡದೆ ಮೌನವಾಗಿರುವುದು ಲೇಸು. ಆಡುವ ಮಾತಿನಲ್ಲಿ ದಯೆ ಪ್ರೀತಿ ಸೃಜನಶೀಲತೆಯ ಶಕ್ತಿ ಇದ್ದರೆ ಅದು ವ್ಯಕ್ತಿಯ ಪ್ರತಿಷ್ಠೆಯನ್ನು ಹಾಗೂ ಮಟ್ಟವನ್ನು ಎತ್ತರಕ್ಕೆ ತೆಗೆದುಕೊಂಡು ಹೋಗುತ್ತದೆ.
ಕೇಳುವ ಸಮಯ ಬಂದಾಗ ಮೌನವಾಗಿರಿ ಎಂದು ಹೇಳುತ್ತಾರೆ ಆಚಾರ್ಯ ಚಾಣಕ್ಯ. ಸಾಮಾನ್ಯವಾಗಿ ನಾವು ಮಾತನಾಡುವುದು ಎಂದರೆ ನಿರರ್ಗಳವಾಗಿ ಮನಸ್ಸಿಗೆ ಬಂದಂತೆ ಮಾತನಾಡುತ್ತಿರುತ್ತೇವೆ ಆದರೆ ನಾವು ಬೇರೆಯವರ ಮಾತನ್ನು ಕೇಳಬೇಕು ಎಂದಾಗ ಅದು ಅತ್ಯಂತ ಕಷ್ಟದ ಸಂಗತಿಯಾಗುತ್ತದೆ. ಏನು ಹೇಳುತ್ತಾರೆ ಎಂದು ಕೇಳುವ ವ್ಯವಧಾನ ನಮ್ಮಲ್ಲಿ ಇರುವುದಿಲ್ಲ ನಮ್ಮ ಎದುರಿಗೆ ಇರುವ ವ್ಯಕ್ತಿ ಯಾವುದೋ ಸಂಗತಿಯ ಬಗ್ಗೆ ಒಂದಿಷ್ಟು ಮಾತನಾಡುತ್ತಿದ್ದರೆ ಅಥವಾ ಅವರಿಗಿರುವ ಜ್ಞಾನವನ್ನು ವ್ಯಕ್ತಪಡಿಸುತ್ತಿದ್ದಾರೆ ಎಂದಾಗ ಅದನ್ನ ತಾಳ್ಮೆಯಿಂದ ಕೇಳಿಸಿಕೊಳ್ಳಬೇಕು ಆ ಸಮಯದಲ್ಲಿ ನಾವು ಸಲ್ಲದ ಮಾತುಗಳನ್ನು ಹೇಳುವ ಬದಲು ಆದಷ್ಟು ಮೌನವಹಿಸಿ ಕೇಳುವುದು ಉತ್ತಮ.
ನಿಮ್ಮ ಮಾತು ಜನರಮೇಲೆ ಕೆಟ್ಟದಾಗಿ ಪ್ರತಿಫಲಿಸುತ್ತಿದರೆ ಮೌನವಾಗಿರಿ ಎಂದು ಹೇಳುತ್ತಾರೆ ಆಚಾರ್ಯ ಚಾಣಕ್ಯ ಅವರು. ಕೆಲವರು ಜನರು ಸಮೂಹದಲ್ಲಿ ಅಥವಾ ಆಪ್ತರೊಂದಿಗೆ ಇರುವಾಗ ಸಾಕಷ್ಟು ತಮಾಷೆ ಹಾಗೂ ಹಾಸ್ಯಸ್ಪದ ಪದಗಳನ್ನು ಹೇಳುತ್ತಾರೆ ಅದು ಇತರರಿಗೆ ಇಷ್ಟವಾಗದೇ ಹೋಗಬಹುದು ಅಂತಹ ಸಂದರ್ಭದಲ್ಲಿ ಸೂಕ್ಷ್ಮವಾಗಿ ಗಮನಿಸುವ ಅರ್ಥೈಸಿಕೊಳ್ಳುವ ಕೌಶಲ್ಯ ನಮ್ಮಲ್ಲಿರಬೇಕು. ನಾವು ಹೇಳುವ ಮಾತು ಅಥವಾ ಶಬ್ದಗಳು ಇತರರಿಗೆ ಕಳಪೆ ಅಥವಾ ಅಸಹ್ಯವನ್ನು ಹುಟ್ಟಿಸುತ್ತವೆ ಎಂದಾಗ ಆದಷ್ಟು ಮೌನದ ವರ್ತನೆಯನ್ನು ತೋರಿಸುವುದು ಸೂಕ್ತ ಇದರಿಂದ ಸಾಕಷ್ಟು ಅನುಚಿತ ಭಾವನೆಗಳನ್ನು ನಿಯಂತ್ರಣದಲ್ಲಿ ಇಟ್ಟಂತೆ ಆಗುತ್ತದೆ.
ಸುಳ್ಳು ಹೇಳಬೇಕಾಗಿ ಬಂದಾಗ ಮೌನವಾಗಿರಿ ಎಂದು ಹೇಳುತ್ತಾರೆ ಆಚಾರ್ಯ ಚಾಣಕ್ಯ. ಸುಳ್ಳು ಹೇಳುವುದು ಸುಲಭ ಆದರೆ ಆ ಸುಳ್ಳನ ಮುಚ್ಚುವುದಕ್ಕೆ ಮತ್ತೆ ಮತ್ತೆ ಸುಳ್ಳನ್ನು ಹೇಳಬೇಕಾಗುತ್ತದೆ ಸುಳ್ಳನ್ನು ಎಂದಿಗೂ ಮರೆಮಾಚಿಸುವುದಕ್ಕೆ ಸಾಧ್ಯವಿಲ್ಲ. ಒಂದಲ್ಲ ಒಂದು ಬಾರಿ ಸತ್ಯದ ಬೆಳಕಿಗೆ ತಲೆತಗ್ಗಿಸಿ ನಿಲ್ಲಬೇಕಾಗುತ್ತದೆ ಹಾಗಾಗಿ ನೀನು ಸುಳ್ಳು ಹೇಳುವ ಸಮಯ ಸಂದರ್ಭ ಎದುರಾದಾಗ ಸುಳ್ಳು ಹೇಳುವ ಬದಲು ಮೌನವಾಗಿರಿ ಎಂದು ಹೇಳುತ್ತಾರೆ. ಸುಳ್ಳು ಹೇಳಿ ಪರಿಸ್ಥಿತಿ ಬಿಗಡಾಯಿಸುವುದಕ್ಕಿಂತ ಮೌನವಾಗಿ ಪರಿಸ್ಥಿತಿಯನ್ನು ಶಾಂತಗೊಳಿಸುವುದು ಉತ್ತಮ ಎಂದು ಹೇಳುತ್ತಾರೆ ಆಚಾರ್ಯ ಚಾಣಕ್ಯ.
ಮಾತುಗಳು ಸ್ನೇಹವನ್ನ ಹಾಳು ಮಾಡುವಂತಿದ್ದರೆ ಮೌನವಾಗಿರಿ ಎಂದು ಹೇಳುತ್ತಾರೆ ಆಚಾರ್ಯ ಚಾಣಕ್ಯ. ಸ್ನೇಹ ಎನ್ನುವುದು ಒಂದು ರೀತಿಯ ಸುಂದರವಾದ ಬಂಧನ ಈ ಸಂಬಂಧವನ್ನು ಹಾಳು ಮಾಡಿಕೊಳ್ಳದೆ ಇದ್ದರೆ ಜೀವನ ಸುಗಮವಾಗಿ ಸಾಗುತ್ತದೆ. ನಮ್ಮ ಮಾತು ಅಥವಾ ಪದಗಳು ಸಂಬಂಧವನ್ನು ಅಥವಾ ಸ್ನೇಹವನ್ನು ಹಾಳು ಮಾಡುತ್ತದೆ ಎಂದಾದರೆ ಆ ಸಮಯದಲ್ಲಿ ಮೌನವಾಗಿರುವುದು ಲೇಸು.
ಅನುಚಿತವಾದಂತಹ ಮಾತುಗಳು ಸಂಬಂಧವನ್ನು ಬಹುಬೇಗ ಹಾಳುಮಾಡುತ್ತವೆ. ಸ್ನೇಹಪರ ಅಥವಾ ಉತ್ತಮ ಮಾತುಗಳು ಇಲ್ಲ ಎಂದಾಗ ಮೌನದಿಂದ ಇದ್ದರೆ ಸಂಬಂಧಗಳು ಉಳಿದುಕೊಳ್ಳುತ್ತದೆ. ಸ್ನೇಹ ಅಥವಾ ಸ್ನೇಹಿತರು ಇಲ್ಲವೆಂದಾದರೆ ಜೀವನವು ಚೈತನ್ಯವನ್ನು ಕಳೆದುಕೊಂಡಂತೆ ಇರುತ್ತದೆ ಹಾಗಾಗಿ ಸಂಬಂಧವನ್ನು ಮಾತಿನಿಂದ ಹಾಳುಮಾಡಿಕೊಳ್ಳಬೇಡಿ.
ಕೊನೆಯದಾಗಿ ಒಂದೇ ಸಂಗತಿಯನ್ನು ಹತ್ತು ಬಾರಿ ಹೇಳುವುದಕ್ಕಿಂತ ಮೌನವಾಗಿ ಇದ್ದು ಬಿಡಿ ಎಂದು ಹೇಳುತ್ತಾರೆ ಆಚಾರ್ಯ ಚಾಣಕ್ಯ ಸಂಭಾಷಣೆ ನಡೆಸುವಾಗ ಅಥವಾ ಯಾವುದೋ ಒಂದು ಗುಂಪಿನಲ್ಲಿ ಮಾತನಾಡುತ್ತಿರುವಾಗ ಒಂದೇ ವಿಷಯವನ್ನು ಹತ್ತು ಬಾರಿ ಹೇಳುವ ಬದಲು ತಿಳಿದ ವಿಷಯವನ್ನು ಸರಳವಾಗಿ ಸಣ್ಣದಾಗಿ ಹೇಳುವುದು ಉತ್ತಮ ಹೇಳಿದ್ದನ್ನೇ ಹೇಳುತ್ತಿದ್ದರೆ ಅದು ಸುಳ್ಳು ಹೇಳುತ್ತಿದ್ದಾರೆ ಎಂಬ ಸಂದೇಹವನ್ನು ಮೂಡಿಸುತ್ತದೆ.
ಉರುಳಿಲ್ಲದ ಸಂಗತಿಯನ್ನು ಉದ್ದವಾಗಿ ಹೇಳುತ್ತಾ ಹೋದರೆ ಯಾವುದೇ ಅರ್ಥ ಇರುವುದಿಲ್ಲ ಅಂತಹ ಸಂದರ್ಭದಲ್ಲಿ ತಿಳಿದಷ್ಟು ವಿಷಯವನ್ನು ಹೇಳಿ ಮೌನವಾಗಿದ್ದರೆ ನಿಮ್ಮ ಬಗ್ಗೆ ಇತರರಿಗೆ ಗೌರವ ಉಳಿದುಕೊಳ್ಳುತ್ತದೆ. ನಿಮ್ಮ ಮಾತಿಗೂ ಒಂದಷ್ಟು ಗೌರವ ದೊರೆಯುತ್ತದೆ. ಹೀಗೆ ಆಚಾರ್ಯ ಚಾಣಕ್ಯ ಮಾತನ್ನು ಎಲ್ಲಿ ಬಳಸಬೇಕು ಮೌನವನ್ನು ಎಲ್ಲಿ ಬಳಸಬೇಕು ಮಾತನ್ನ ಎಷ್ಟು ಬಳಸಬೇಕು ಮೌನವನ್ನು ಎಷ್ಟು ಬಳಸಬೇಕು ಎನ್ನುವುದನ್ನು ಹೇಳಿದ್ದಾರೆ ಇದನ್ನು ಅರಿತುಕೊಂಡರೆ ಜೀವನದಲ್ಲಿ ಯಶಸ್ಸು ಸುಲಭ.