ಹಳೆಯ ಕೃಷಿ ಪದ್ಧತಿಯನ್ನೆ ಅನುಸರಿಸಿ ನಷ್ಟ ಅನುಭವಿಸಿ ಸಾಲದ ಬಾಧೆಯಿಂದ ನರಳುತ್ತಿರುವ ರೈತರ ನಡುವೆ ಕೃಷ್ಣಪ್ಪ ಎಂಬ ಮೈಸೂರಿನ ರೈತ ಕೃಷಿಯಲ್ಲಿ ಹೊಸ ಪದ್ಧತಿಯನ್ನು ಅನುಸರಿಸಿ ಹೆಚ್ಚಿನ ಆದಾಯ ಗಳಿಸಿದ್ದಾರೆ. ಅವರ ಕೃಷಿಯ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಈ ಲೇಖನದ ಮೂಲಕ ತಿಳಿಯೋಣ.
ಕೊರೋನ ವೈರಸ್ ನಮ್ಮನ್ನು ಬಿಡದೆ ಕಾಡುತ್ತಿದೆ, ಇದೀಗ ಹೊಸ ಹೊಸ ರೂಪಾಂತರಿ ವೈರಸ್ ಓಮಿಕ್ರಾನ್ ಹೆಸರಿನಲ್ಲಿ ನಮ್ಮ ಮುಂದೆ ಕಾಡುತ್ತಿದೆ. ಇಂತಹ ಇಕ್ಕಟ್ಟಿನ ಸಮಯದಲ್ಲಿ ನಮ್ಮನ್ನು ಕಾಪಾಡುವ ಏಕೈಕ ದಾರಿ ವ್ಯವಸಾಯ. ಮನುಷ್ಯನಿಗೆ ಬೇಕಾಗುವ ಗಾಳಿ, ನೀರು, ಅನ್ನ ಕೊಡುವುದು ವ್ಯವಸಾಯ ಮಾತ್ರ. ಮೈಸೂರಿನ ಪನ್ನೂರು ಗ್ರಾಮದ ಕೃಷ್ಣಪ್ಪ ಎಂಬ ರೈತ ತಮ್ಮ 5 ಎಕರೆ ಜಮೀನಿನಲ್ಲಿ ಕೆಮಿಕಲ್ ಗೊಬ್ಬರ ಬಳಸಿ ಭತ್ತ ಬೆಳೆಯುತ್ತಿದ್ದರು. ಒಮ್ಮೆ ಅವರು ಕೃಷಿಯಲ್ಲಿ ಸಾಕಷ್ಟು ಜ್ಞಾನ ಹೊಂದಿರುವ ಸುಭಾಷ್ ಪಾಲೇಕರ್ ಅವರನ್ನು ಭೇಟಿ ಮಾಡಿ ಅವರಿಂದ ಮಾಹಿತಿ ಪಡೆದು ಕೆಮಿಕಲ್ ಗೊಬ್ಬರ ಬಿಟ್ಟು ಖರ್ಚಿಲ್ಲದೆ ನ್ಯಾಚುರಲ್ ಫಾರ್ಮಿಂಗ್ ಮಾಡಲು ಮುಂದಾದರು.
ಕೃಷ್ಣಪ್ಪ ಅವರು ತಮ್ಮ ಜಮೀನಿನಲ್ಲಿ ಯಾವುದೆ ಕೆಮಿಕಲ್ ಗೊಬ್ಬರ ಬಳಸದೆ ಫಾರೆಸ್ಟ್ ರೀತಿಯಲ್ಲಿ ವ್ಯವಸಾಯ ಮಾಡುವ ಹಾಗೂ ಫೈವ್ ಲೇಯರ್ ಮೆಥಡ್ ಅನುಸರಿಸುವ ಯೋಚನೆ ಮಾಡಿದರು. ಭತ್ತ ಬೆಳೆಯುತ್ತಿದ್ದ ಕೃಷ್ಣಪ್ಪ ಅವರಿಗೆ ಹೊಸ ಪದ್ದತಿ ಮೊದಲು ಕಷ್ಟವಾಯಿತು ಆದರೆ ಹಿಡಿದ ಪಟ್ಟು ಬಿಡದ ಕೃಷ್ಣಪ್ಪ ಅವರು ಮೊದಲ ಲೇಯರ್ ನಲ್ಲಿ 30 ತೆಂಗಿನ ಗಿಡ ಬೆಳೆದರು, ಎರಡನೆ ಲೇಯರ್ ನಲ್ಲಿ 30 ಮೂಸಂಬಿ ಗಿಡ ಬೆಳೆದರು, ಮೂರನೆ ಲೇಯರ್ ನಲ್ಲಿ ಇನ್ನೂರು ಬಾಳೆಗಿಡ, ನಾಲ್ಕನೇ ಲೇಯರ್ ನಲ್ಲಿ ಇನ್ನೂರು ಕಾಫಿ ಗಿಡ, ಐದನೇ ಲೇಯರ್ ನಲ್ಲಿ ಶುಂಠಿ ಬೆಳೆದರು.
ಕೃಷ್ಣಪ್ಪ ಅವರು ತಾವು ಬೆಳೆದ ಬೆಳೆಗಳಿಗೆ ಯಾವುದೆ ರೀತಿಯ ಕೆಮಿಕಲ್ ಗೊಬ್ಬರ ಹಾಕದೆ ಸಗಣಿ ಮತ್ತು ಗೋಮೂತ್ರ ಸೇರಿಸಿ ಜೀವಾಮೃತ ತಯಾರಿಸಿ ತಿಂಗಳಿಗೊಮ್ಮೆ ಬೆಳೆಗೆ ಉಣಿಸುತ್ತಾರೆ. 5 ಎಕರೆ ಜಮೀನಿಗೆ 10 ಕೆಜಿ ಸಗಣಿ ಸಾಕಾಗುತ್ತದೆ ಸಾಮಾನ್ಯವಾಗಿ ಒಂದು ಹಸು ದಿನಕ್ಕೆ 11ಕೆಜಿ ಸಗಣಿ ಹಾಕುತ್ತದೆ. 0 ಬಜೆಟ್ ನ್ಯಾಚುರಲ್ ಫಾರ್ಮಿಂಗ್ ಹಾಗೂ ಫೈವ್ ಲೇಯರ್ ವ್ಯವಸಾಯ ಪದ್ಧತಿಯಲ್ಲಿ ಕೃಷಿ ಮಾಡಿ ಕೃಷ್ಣಪ್ಪ ಅವರು ವರ್ಷಕ್ಕೆ 25 ಲಕ್ಷ ರೂಪಾಯಿ ಆದಾಯ ಗಳಿಸುತ್ತಾರೆ. ಕೃಷಿಯಲ್ಲಿ ಹೊಸ ಪದ್ಧತಿಯನ್ನು ಅಳವಡಿಸಿ ಯಶಸ್ಸು ಪಡೆದ ಕೃಷ್ಣಪ್ಪ ಅವರು ಇತರ ರೈತರಿಗೆ ಮಾದರಿಯಾಗಿದ್ದಾರೆ. ರೈತರು ಹೊಸ ಹೊಸ ಕೃಷಿ ಪದ್ಧತಿಯನ್ನು ಅನುಸರಿಸಿ ಖರ್ಚಿಲ್ಲದೆ ಹೆಚ್ಚಿನ ಆದಾಯ ಗಳಿಸಬಹುದು. ಈ ಮಾಹಿತಿಯನ್ನು ತಪ್ಪದೆ ಎಲ್ಲಾ ರೈತ ಬಾಂಧವರಿಗೆ ತಿಳಿಸಿ.