ಪ್ರತಿಯೊಬ್ಬರಿಗೂ ಅವರದೇ ಆದ ವೈಯಕ್ತಿಕ ಜೀವನ ವಿರುತ್ತದೆ. ಪ್ರತಿಯೊಬ್ಬರೂ ತನ್ನ ಸಂತಾನದ ಅಭಿವೃದ್ಧಿಗೆ ಯೋಚಿಸುತ್ತಾರೆ. ಏಕೆಂದರೆ ಇದು ಸೃಷ್ಟಿಯ ನಿಯಮವಾಗಿದೆ. ಈಗಿನ ಕಾಲದಲ್ಲಿ ಮಹಿಳೆ ಮತ್ತು ಪುರುಷರು ಸಮಾನತೆಯೆಂಬ ವಿಚಾರದಿಂದ ಕಿರಿಯರ ಬಗ್ಗೆ ಹೆಚ್ಚಾಗಿ ಗಮನಹರಿಸಿ ಲೇಟಾಗಿ ಮದುವೆಯಾಗುತ್ತಾರೆ. ಇದರಿಂದ ಸಂತಾನ ಪಡೆಯುವಲ್ಲಿ ಕುಂಟಿತ ಅಥವಾ ಸಮಸ್ಯೆಗಳು ಎದುರಾಗುತ್ತವೆ.ಇದರಿಂದಾಗಿ ಅವರು ಆರ್ಟಿಫಿಶಿಯಲ್ ಮೆಥೆಡ್ ಗಳನ್ನು ಬಳಸುತ್ತಾರೆ. ಆದ್ದರಿಂದ ನಾವು ಇಲ್ಲಿ ಇದರ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಿಳಿಯೋಣ.
ಸಹಜ ಪ್ರಕೃತಿ ಕ್ರಿಯೆಯಲ್ಲಿ ಪಡೆದ ಮಕ್ಕಳ ಆರೋಗ್ಯವೂ ಸದೃಢವಾಗಿರುತ್ತದೆ. ಮನುಷ್ಯನಿಗೆ ಕರಿಯರ್ ಎಷ್ಟು ಮುಖ್ಯವೋ ಅದಕ್ಕಿಂತ ಹೆಚ್ಚಾಗಿ ಅವರ ಜೀವನದ ಸಂತತಿಯನ್ನು ಆರೋಗ್ಯ ವಾಗಿ ಪಡೆಯುವುದು ಅತಿ ಮುಖ್ಯವಾಗಿದೆ. ಸರಿಯಾದ ಸೂಕ್ತವಾದ ಸಮಯದಲ್ಲಿ ವಿವಾಹವಾಗಿ ಮಗುವನ್ನು ಪಡೆಯುವುದು ಆರೋಗ್ಯಕರ ಬೆಳವಣಿಗೆಯಾಗುತ್ತದೆ. ಸಾಮಾನ್ಯವಾಗಿ ಪುರುಷರು 22 ರಿಂದ 30 ವರ್ಷದ ಒಳಗಡೆ ಮದುವೆಯಾಗುವುದು ಆರೋಗ್ಯ ಮಗುವಿನ ಜನನಕ್ಕೆ ಕಾರಣವಾಗುತ್ತದೆ. ಆ ಸಮಯದಲ್ಲಿ ವೀರ್ಯದ ಗುಣಮಟ್ಟ ಅತ್ಯುತ್ತಮವಾಗಿರುತ್ತದೆ. ಇದರಿಂದ ಅತ್ಯುತ್ತಮ ಗುಣಮಟ್ಟದ, ಆರೋಗ್ಯಕರ ಮಗುವನ್ನು ಪಡೆಯಬಹುದು
ಪುರುಷರಿಗಿಂತ ಹೆಚ್ಚಾಗಿ ಮಹಿಳೆಯರಿಗೆ ವಯಸ್ಸು ಮಕ್ಕಳನ್ನು ಪಡೆಯಲು ಬಹು ಮುಖ್ಯ ಪಾತ್ರವಾಗುತ್ತದೆ. 18 ನೆ ವಯಸ್ಸಿನಿಂದ 28 ವಯಸ್ಸಿನ ಒಳಗಡೆ ಮದುವೆಯಾದರೆ ನೈಸರ್ಗಿಕ ವಿಧಾನದಿಂದ ಆರೋಗ್ಯಕರ ಮಗುವನ್ನು ಪಡೆಯಲು ಯೋಗ್ಯವಾಗಿರುತ್ತದೆ. ಈ ವಯಸ್ಸಿನಲ್ಲಿ ಹೆಣ್ಣಿನ ಅಂಗ ಪ್ರತ್ಯಂಗಗಳು ಬಲಿಷ್ಠವಾಗಿರುತ್ತದೆ. ಮಗುವನ್ನು ಹೆರಲು ದೇಹವು ಯೋಗ್ಯ ರೀತಿಯಲ್ಲಿ ಸ್ಪಂದಿಸುತ್ತದೆ. ಈ ವಯಸ್ಸಿನಲ್ಲಿ ಪ್ರಸವ ವೇಧನೆಯನ್ನು ಮತ್ತು ಅದರಿಂದ ಉಂಟಾಗುವ ರಕ್ತ ಸ್ರಾವ ಇದರಿಂದ ಬೇಗನೆ ಗುಣಮುಖವಾಗಲು ದೇಹವು ಸ್ಪಂದಿಸುತ್ತದೆ.
30 ವರ್ಷಗಳ ನಂತರ ಹೆಣ್ಣಿಗೆ ಮುಟ್ಟಿನ ಸಮಸ್ಯೆಗಳು ಉಂಟಾಗುತ್ತದೆ. ಜೊತೆಗೆ ಹೆಣ್ಣಿನ ಅಂಡಾಣುವು ವೀ’ರ್ಯವನ್ನು ಹಿಡಿದು ಜೀವ ಉತ್ಪತ್ತಿ ಮಾಡುವಲ್ಲಿ ಕಷ್ಟವಾಗುತ್ತದೆ. ಒಂದು ಪಕ್ಷದಲ್ಲಿ ಅಂಡಾಣು ಮತ್ತು ವೀರ್ಯಾಣು ಸೇರಿ ಮೊಟ್ಟೆ ಉತ್ಪತ್ತಿಯಾದರೂ ಸಹ ಅರೋಗ್ಯವಂತ ಮಗು ಪಡೆಯುವುದು ಕರವಾಗಿರುತ್ತದೆ. ಏನೇ ಆದರೂ ಆದುನಿಕ ತಂತ್ರಜ್ಞಾನದ ಬಳಸದೆ ಪ್ರಕೃತಿ ಸಹಜ ಲೈಂ’ಗಿಕ ಕ್ರಿಯೆಯಿಂದ ಸರಿಯಾದ ಈ ವಯಸ್ಸಿನಲ್ಲಿ ಮಗುವನ್ನು ಪಡೆದರೆ ಮಗು ಮಾನಸಿಕವಾಗಿ, ದೈಹಿಕವಾಗಿ, ಸದೃಢವಾಗಿ ಆರೋಗ್ಯವಾಗಿ ಜನಿಸುತ್ತದೆ.