2022-23 ನೇ ಸಾಲಿನ ಉದ್ಯೋಗಶೀಲತಾ ಅಭಿವೃದ್ಧಿ ಯೋಜನೆ ಅಡಿಯಲ್ಲಿ ನೀವೇನಾದರೂ ಟು ವೀಲರ್ ಅಥವಾ ತ್ರೀ ವೀಲರ್ ಖರೀದಿ ಮಾಡಲು ಸರ್ಕಾರದ ಕಡೆಯಿಂದ 50,000 ಸಹಾಯಧನ ಹಾಗೂ 20,000 ಸಾಲದ ರೂಪದಲ್ಲಿ ಪಡೆಯಲು ಆನ್ಲೈನ್ ಮೂಲಕ ಅರ್ಜಿಯನ್ನು ಆಹ್ವಾನ ಮಾಡಿದ್ದಾರೆ. ಅರ್ಜಿಯನ್ನು ಸಲ್ಲಿಸುವುದು ಹೇಗೆ ಮತ್ತು ಯಾರು ಅರ್ಜಿಯನ್ನು ಸಲ್ಲಿಸಲು ಅರ್ಹರು ಎಂದು ಇಲ್ಲಿ ತಿಳಿದುಕೊಳ್ಳಬಹುದು.
ಡಾ. ಬಿ ಆರ್ ಅಂಬೇಡ್ಕರ್ ಅಭಿವೃದ್ಧಿ ನಿಗಮ ನಿಯಮಿತ ಕಡೆಯಿಂದ 2022 -23 ನೇ ಸಾಲಿನ ಒಂದು ಗುರಿ ಉದ್ಯಮಶೀಲತಾ ಅಭಿವೃದ್ಧಿ ಯೋಜನೆ ಅಡಿಯಲ್ಲಿ ತ್ರಿಚಕ್ರ ಅಥವಾ ಎರಡು ಚಕ್ರ ವಾಹನವನ್ನು ಖರೀದಿ ಮಾಡಲು 50,000 ತನಕ ಸಬ್ಸಿಡಿ 20,000 ತನಕ ಸಾಲವನ್ನು ಪಡೆಯಲು ಅರ್ಜಿಯನ್ನು ಆಹ್ವಾನ ಮಾಡಿದ್ದಾರೆ.ಅರ್ಜಿ ಸಲ್ಲಿಸಲು ಬೇಕಾದ ಅರ್ಹತೆಗಳು ಏನೆಂದರೆ
ಪರಿಶಿಷ್ಟ ಜಾತಿಗೆ ಸೇರಿರಬೇಕಾಗುತ್ತದೆ ಮತ್ತು ಕರ್ನಾಟಕದ ನಿವಾಸಿ ಆಗಿರಬೇಕಾಗುತ್ತದೆ.
ಕುಟುಂಬದ ಆದಾಯ, ಗ್ರಾಮೀಣ ಪ್ರದೇಶದಲ್ಲಿದ್ದರೆ 1,50,000 ಕ್ಕಿಂತ ಒಳಗಿರಬೇಕು ನಗರ ಪ್ರದೇಶದಲ್ಲಿದ್ದರೆ ಎರಡು ಲಕ್ಷದ ಒಳಗೆ ಇರಬೇಕು.
ಉದ್ಯಮಶೀಲತಾ ಯೋಜನೆ ಅಡಿಯಲ್ಲಿ ಅವರು ವಯಸ್ಸು ಕನಿಷ್ಠ 21 ಆಗಿರಬೇಕು ಗರಿಷ್ಠ 50 ಆಗಿರಬೇಕು.
ವಾಹನವನ್ನು ಪಡೆಯಲು ಲೈಸೆನ್ಸ್ ಕಾರ್ಡ್ ಪಡೆದಿರಬೇಕಾಗುತ್ತದೆ.
ಅರ್ಜಿಯನ್ನು ಸಲ್ಲಿಸುವುದು ಹೇಗೆಂದರೆ ಸೇವಾ ಸಿಂಧುವಿನ ಮೂಲಕ ಅರ್ಜಿಯನ್ನು ಸಲ್ಲಿಸಬೇಕಾಗುತ್ತದೆ ಅಥವಾ ಗ್ರಾಮ ಒನ್ ಕೇಂದ್ರ ದಲ್ಲೂ ಕೂಡ ಅರ್ಜಿಯನ್ನು ಸಲ್ಲಿಸಬಹುದು. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಜನವರಿ 16 ಗ್ರಾಮ ಒನ್ ಅಥವಾ ಸೇವಾ ಸಿಂಧು ವೆಬ್ಸೈಟ್ ಗೆ ಹೋಗಿ ಲಾಗಿನ್ ಆಗಬೇಕು ನಂತರ ಅಲ್ಲಿ ಕೇಳಿರುವಂತಹ ಮಾಹಿತಿಯನ್ನು ಭರ್ತಿ ಮಾಡಿ ಇದರಲ್ಲಿ ನೀವು ಯಾವುದಕ್ಕೆ ಅರ್ಜಿಯನ್ನು ಹಾಕುತ್ತೇನೆ ಎನ್ನುವುದನ್ನು ಗುರುತಿಸಬೇಕಾಗುತ್ತದೆ ಅಂದರೆ ತ್ರಿಚಕ್ರ ವಾಹನಕ್ಕಾ? ಅಥವಾ ದ್ವಿಚಕ್ರ ವಾಹನಕ್ಕಾ? ಎಂದು ಅಲ್ಲಿ ಮಾಹಿತಿಯನ್ನು ನೀಡಬೇಕಾಗುತ್ತದೆ. ಎಲ್ಲ ಮಾಹಿತಿಯನ್ನು ಭರ್ತಿ ಮಾಡಿದ ನಂತರ ಸಬ್ಮಿಟ್ ಅನ್ನು ಒತ್ತಿದ ನಂತರ ನಿಮ್ಮ ಅರ್ಜಿಸಲ್ಲಿಕೆ ಆಗಿರುತ್ತದೆ.
ನಂತರ ನಿಮ್ಮ ಅರ್ಜಿಯನ್ನು ಡಾ. ಬಿ ಆರ್ ಅಂಬೇಡ್ಕರ್ ಅಭಿವೃದ್ಧಿ ನಿಗಮ ನಿಯಮಿತಿ ಅಲ್ಲಿ ನಿಮ್ಮ ಡಾಕ್ಯುಮೆಂಟ್ ವೆರಿಫಿಕೇಷನ್ ಮಾಡಿ ನೀವು ಅರ್ಹರ್ ಇದ್ದರೆ ನಿಮಗೆ ಕರೆ ಮಾಡಿ 50,000 ಸಬ್ಸಿಡಿ ಹಾಗೂ 20,000 ಸಾಲದ ಹಣವನ್ನು ನೀಡುವುದಾಗಿ ಹೇಳುತ್ತಾರೆ.