WhatsApp Group Join Now
Telegram Group Join Now

ಸೂಕ್ತವಾದ ಮಿಶ್ರ ಬೆಳೆ ಪದ್ಧತಿಗಳನ್ನು ಅನುಸರಿಸುವುದರಿಂದ ಅಧಿಕ ಲಾಭವನ್ನು ಪಡೆಯುಬಹುದು ಅಲ್ಲದೆ ಮಳೆಯ ಏರುಪೇರುಗಳಿಂದಾಗಿ ಆಗಬಹುದಾದ ಬೆಳೆ ಹಾನಿಯನ್ನು ಕೂಡ ಕಡಿಮೆ ಮಾಡಿಕೊಳ್ಳಬಹುದಾಗಿದೆ ಎರಡು ಅಥವಾ ಹೆಚ್ಚು ಬೆಳೆಗಳನ್ನು ಮಿಶ್ರಮಾಡಿ ಬಿತ್ತಿ ಬೆಳೆಯುವುದಕ್ಕೆ ಮಿಶ್ರಬೆಳೆಯಾಗಿದೆ ರೈತರು ಜಮೀನಿನಲ್ಲಿ ಒಮ್ಮೆ ಬೆಳೆದ ಬೆಳೆ ಮತ್ತೆ ಪುನರಾವರ್ತನೆ ಆಗುವುದಿಲ್ಲ ಪ್ರತಿ ಭಾರಿಯು ಹೊಸ ಫಸಲು ಬರುತ್ತಲೇ ಇರುತ್ತದೆ

ಬೆಳೆದ ಬೆಳೆಯನ್ನೇ ಮತ್ತೆ ಬೆಳದು ನಷ್ಟಕ್ಕೆ ಒಳಗಾಗುವ ರೈತರಿಗೆ ಈ ವಿನೂತನ ವಿಧಾನದ ಮೂಲಕ ಅಧಿಕ ಲಾಭ ಪಡೆಯಬಹುದು. ಬೆಲೆಯಲ್ಲಿನ ಏರುಪೇರು ಹವಾಮಾನ ವೈಪರೀತ್ಯ ಹೀಗೆ ಹತ್ತು ಹಲವು ಕಾರಣಗಳ ನಡುವೆಯೂ ರೈತರು ಅಧಿಕ ಇಳುವರಿ ಹಾಗೂ ಅಧಿಕ ಲಾಭವನ್ನು ಮಿಶ್ರ ಬೆಳೆ ಬೆಳೆಯುವ ಮೂಲಕ ಪಡೆಯಬಹುದು ನಾವು ಈ ಲೇಖನದ ಮೂಲಕ ಪ್ಲಾನಿಂಗ್ ಕೃಷಿ ಯ ಬಗ್ಗೆ ತಿಳಿದುಕೊಳ್ಳೋಣ .

ರೈತರಿಗೆ ಯಾವ ಬ್ಯಾಂಕ್ ಸಹ ಸಾಲ ಕೊಡುವುದಿಲ್ಲ ರೈತರ ಮಕ್ಕಳಿಗೆ ಹೆಣ್ಣು ಕೇಳೋಕೆ ಹೋದರೆ ಹೆಣ್ಣು ಕೊಡುವುದಿಲ್ಲ ರೈತರ ಜೀವನ ಎಂದರೆ ಲಾಟರಿ ಇದ್ದ ಹಾಗೆ ಕೆಲವೊಮ್ಮೆ ಬೆಳೆದ ಬೆಳೆಗೆ ಬೆಲೆ ಸಿಗದೆ ಬೆಳೆದ ಬೆಳೆಯನ್ನು ತಿಪ್ಪೆಗೆ ಚೆಲ್ಲ ಬೇಕಾಗುತ್ತದೆ ಮಗುವಂತೆ ಬೆಳೆಸಿದ ಬೆಳೆಯನ್ನು ತಿಪ್ಪೆಗೆ ಎಸೆಯ ಬೇಕಾಗುತ್ತದೆ ಆದರೆ ಇವೆಲ್ಲ ವಿಷಯಗಳನ್ನು ಅಲ್ಲಗಳೆದು ರೈತ ಎಂದರೆ ಪ್ಲಾನರ್ ಎಂದು ತಿಳಿಸಿದವರು ಬೀದರ್ ಜಿಲ್ಲೆಯ ವೈದ್ಯನಾಥ ಎಂಬುವರು ಸರಿಯಾದ ಪ್ಲಾನ್ ಮಾಡಿದರೆ

ಎಲ್ಲದರಲ್ಲಿಯೂ ಯಶಸ್ಸು ಕಾಣಬಹುದು ಎಂದು ದೃಢವಾಗಿ ನಂಬಿ ಸಾಧನೆ ಮಾಡಿದ್ದಾರೆ. ತಮಗಿರುವ ಆರು ಎಕರೆ ಜಾಗದಲ್ಲಿ ಪ್ರತಿಯೊಂದು ಅಡಿ ಜಾಗದಲ್ಲಿ ಬೇರೆ ಬೇರೆ ಬೆಳೆಯನ್ನು ಬೆಳೆದಿದ್ದಾರೆ. ಆರು ಎಕರೆ ಜಮೀನಿನಲ್ಲಿ ಹನ್ನೊಂದು ಬೆಳೆಯನ್ನು ಬೆಳೆಯುತ್ತಾರೆ ವ್ಯವಸಾಯದ ಜೊತೆಗೆ ಹೈನುಗಾರಿಕೆ ಸಹ ಮಾಡುತ್ತಿದ್ದಾರೆ ಆರು ಎಕರೆ ಭೂಮಿಯಲ್ಲಿ ಹನ್ನೊಂದು ಬೆಳೆ ಬೆಳೆಯುತ್ತಾರೆ ಹಾಗೂ ಸರಿಯಾದ ಪ್ಲಾನಿಂಗ್ ಮಾಡುವ ಮೂಲಕ ಅಧಿಕ ಇಳುವರಿ ಪಡೆಯಬಹುದು .

ಒಂದು ಬೆಳೆಯಲ್ಲಿ ನಷ್ಟ ಆದರೆ ಇನ್ನೊಂದು ಬೆಲೆಯಲ್ಲಿ ಅಧಿಕ ಲಾಭ ಬರುತ್ತದೆ ಶುಂಠಿ ಕಲ್ಲಂಗಡಿ ಬಾಳೆ ಲಿಂಬು ಮೂಸಂಬಿ ಬದನೆಕಾಯಿ ಕೊತುಂಬರಿ ಹೀಗೆ ಅನೇಕ ಬೆಳೆಯನ್ನು ಬೆಳೆದು ಅಧಿಕ ಲಾಭಗಳಿಸುತ್ತಾರೆ ಎರಡು ಏಕರೆ ಭೂಮಿಯಲ್ಲಿ ಶುಂಠಿಯನ್ನು ಬೆಳೆದು ಇಪ್ಪತ್ತೈದು ಲಕ್ಷದಷ್ಟು ಲಾಭಗಳಿಸುತ್ತಿದ್ದಾರೆ

ಅವರ ಪ್ರಕಾರ ಒಂದು ರೂಪಾಯಿ ನಾಲ್ಕು ಭಾಗಗಳಾಗಿ ವಿಂಗಡಿಸಿ ಆದಾಯ ಗಳಿಸುವ ಮಾರ್ಗ ವಾಗಿದೆ ಒಂದು ಎಕರೆಯಲ್ಲಿ ನಾಲ್ಕು ಬೆಳೆಯನ್ನು ಬೆಳೆಯುತ್ತಾರೆ ಈ ಮೂಲಕ ಅಧಿಕ ಲಾಭವನ್ನು ಪಡೆಯಬಹುದು .ಮಳೆಯ ಏರುಪೇರುಗಳಿಂದಾಗಿ ಆಗಬಹುದಾದ ಬೆಳೆ ಹಾನಿಯನ್ನು ಕೂಡ ಕಡಿಮೆ ಮಾಡಿಕೊಳ್ಳಬಹುದಾಗಿದೆ ಹೇಗೆಂದರೆ ಒಂದು ಬೆಳೆಯಲ್ಲಿ ನಷ್ಟ ಆದರೆ ಇನ್ನೊಂದು ಬೆಲೆಯಲ್ಲಿ ಲಾಭವನ್ನು ಲಾಭವನ್ನು ಪಡೆಯಬಹುದು.

WhatsApp Group Join Now
Telegram Group Join Now

By

Leave a Reply

Your email address will not be published. Required fields are marked *

error: Content is protected !!
Footer code: