ಕೇಂದ್ರ ಸರ್ಕಾರದಿಂದ ಜನರ ಕಲ್ಯಾಣಕ್ಕಾಗಿ ಅನೇಕ ಯೋಜನೆಗಳು ಜಾರಿಗೆ ಬರುತ್ತಿದೆ ಅದರಲ್ಲಿ ಪ್ರಧಾನಮಂತ್ರಿಯವರ ಆಯುಷ್ಮಾನ್ ಭಾರತ್ ಕಾರ್ಡ್ ಕೂಡ ಒಂದು. ಇದು ಆರೋಗ್ಯಕ್ಕೆ ಸಂಬಂಧಪಟ್ಟಂತೆ ತುಂಬಾ ಒಳ್ಳೆಯ ಯೋಜನೆಯಾಗಿದೆ. ಇನ್ನೂ ಯಾರು ಪ್ರಧಾನಮಂತ್ರಿಯವರ ಆಯುಷ್ಮಾನ್ ಭಾರತ್ ಕಾರ್ಡನ್ನು ಪಡೆದುಕೊಂಡಿಲ್ಲ ಅಥವಾ ಪ್ರಧಾನಮಂತ್ರಿಯವರ ಜನ ಆರೋಗ್ಯ ಕಾರ್ಡನ್ನು ಪಡೆದುಕೊಂಡಿಲ್ಲ ಅಂತವರಿಗೆ ಒಂದು ಸಿಹಿ ಸುದ್ದಿ ಇದೆ. ನಿಮಗೆ ಗೊತ್ತಿರುವ ಹಾಗೆ ಪ್ರಧಾನ ಮಂತ್ರಿ ಆಯುಷ್ಮನ್ ಕಾರ್ಡ್ ಅನ್ನು ಪಡೆಯುವುದಕ್ಕೆ ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸುವ ಯಾವುದೇ ಅವಶ್ಯಕತೆ ಇಲ್ಲ. ಹಾಗಾದರೆ ಆಯುಷ್ಮಾನ್ ಕಾರ್ಡ್ ಅನ್ನು ಯಾವ ರೀತಿಯಾಗಿ ಪಡೆದುಕೊಳ್ಳಬಹುದು ಅದರಿಂದ ಯಾವೆಲ್ಲ ರೀತಿಯ ಪ್ರಯೋಜನಗಳಿವೆ ಎಂಬುದನ್ನು ನಾವಿಂದು ನಿಮಗೆ ತಿಳಿಸಿಕೊಡುತ್ತೇವೆ.
ಜನಸಾಮಾನ್ಯರು ಈಗ ಬಹಳ ಸುಲಭವಾಗಿ ಪ್ರಧಾನಮಂತ್ರಿಯವರ ಜನ ಆರೋಗ್ಯ ಕಾರ್ಡ್ ಅಥವಾ ಆಯುಷ್ಮಾನ್ ಭರತ್ ಕಾರ್ಡ್ ಅನ್ನು ಪಡೆಯಬಹುದು ಇದಕ್ಕೆ ಸಂಬಂಧಪಟ್ಟಂತೆ ಹೊಸ ಅಪ್ಡೇಟ್ ಬಂದಿದೆ ಅದರ ಕುರಿತಾದ ಮಾಹಿತಿಯನ್ನು ನಾವಿಂದು ನಿಮಗೆ ತಿಳಿಸಿಕೊಡುತ್ತೇವೆ. ನೀವೇನಾದರು ಪ್ರಧಾನ ಮಂತ್ರಿ ಆಯುಷ್ಮಾನ್ ಕಾರ್ಡ್ ಅನ್ನು ಪಡೆಯಬೇಕೆಂದಿದ್ದರೆ ಈಗ ನಾವು ತಿಳಿಸುವ ಮಾಹಿತಿಯನ್ನು ಅನುಸರಿಸಬೇಕು.
ಅದರಿಂದ ನೀವು ಸುಲಭವಾಗಿ ಪ್ರಧಾನ ಮಂತ್ರಿ ಆಯುಷ್ಮಾನ್ ಕಾರ್ಡ್ ನ್ನು ಪಡೆದುಕೊಳ್ಳಬಹುದು. ಬಿಪಿಎಲ್ ಕಾರ್ಡ್ ಅಥವಾ ಎಪಿಎಲ್ ಕಾರ್ಡ್ ಅನ್ನು ಹೊಂದಿರುವವರಿಗೆ ನಿಮ್ಮ ಹತ್ತಿರದ ನಗರ ಅಥವಾ ಜಿಲ್ಲೆಗೆ ಸಂಬಂಧಿಸಿದ ಸರಕಾರಿ ಆಸ್ಪತ್ರೆಗಳಲ್ಲಿ ಉಚಿತವಾಗಿ ಆಯುಷ್ಮಾನ್ ಭಾರತ್ ಕಾರ್ಡ್ ಅಥವಾ ಪ್ರಧಾನಮಂತ್ರಿಯವರ ಜನ ಆರೋಗ್ಯ ಕಾರ್ಡನ್ನು ಉಚಿತವಾಗಿ ನೀಡಲಾಗುತ್ತಿದೆ.
ನೀವು ನಿಮ್ಮ ಆಧಾರ್ ಕಾರ್ಡ್ ರೇಷನ್ ಕಾರ್ಡ್ ನ್ನು ತೆಗೆದುಕೊಂಡು ನಿಮ್ಮ ಹತ್ತಿರದಲ್ಲಿರುವ ಸರ್ಕಾರಿ ಆಸ್ಪತ್ರೆಗಳಿಗೆ ಹೋಗಿ ನಮಗೆ ಆಯುಷ್ಮಾನ್ ಭಾರತ್ ಕಾರ್ಡ್ ಬೇಕು ಎಂದರೆ ಅವರು ಒಂದು ಫಾರಂ ಅನ್ನು ಕೊಡುತ್ತಾರೆ. ಅದರಲ್ಲಿ ಕೇಳುವ ಮಾಹಿತಿಯನ್ನು ತುಂಬಿ ನೀವು ಅದನ್ನು ಸಬ್ಮಿಟ್ ಮಾಡಬೇಕು ಆ ಕ್ಷಣದಲ್ಲಿಯೇ ನಿಮಗೆ ಅಲ್ಲಿ ಆಯುಷ್ಮಾನ್ ಭರತ್ ಕಾರ್ಡನ್ನು ಕೊಡಲಾಗುತ್ತದೆ. ಹಾಗಾದರೆ ಆಯುಷ್ಮಾನ್ ಭಾರತ್ ಕಾರ್ಡ್ ಅನ್ನು ಪಡೆದುಕೊಂಡ ನಂತರ ಅದನ್ನು ಯಾವ ರೀತಿಯಾಗಿ ಬಳಕೆಮಾಡಬೇಕು ಅದರಿಂದ ಯಾವ ಪ್ರಯೋಜನ ಇದೆ ಎಂಬುದನ್ನು ತಿಳಿದುಕೊಳ್ಳೋಣ.
ನಿಮ್ಮ ಬಳಿ ಬಿಪಿಎಲ್ ರೇಷನ್ ಕಾರ್ಡ್ ಇದ್ದು ಆಯುಷ್ಮಾನ್ ಭಾರತ್ ಕಾರ್ಡ್ ಅನ್ನು ಪಡೆದುಕೊಂಡಿದ್ದರೆ ನೀವು ಉಚಿತವಾಗಿ ಚಿಕಿತ್ಸೆ ಪಡೆದುಕೊಳ್ಳಬಹುದು. ಸರ್ಕಾರಿ ಆಸ್ಪತ್ರೆಗಳಾಗಿರಬಹುದು ಅಥವಾ ಖಾಸಗಿ ಆಸ್ಪತ್ರೆಗಳಾಗಿರಬಹುದು ಅಲ್ಲಿ ನಿಮಗೆ ಚಿಕಿತ್ಸೆ ಸಂಪೂರ್ಣವಾಗಿ ಉಚಿತವಾಗಿರುತ್ತದೆ. ಖಾಸಗಿ ಆಸ್ಪತ್ರೆಗಳಲ್ಲಿ ನೀವು ಉಚಿತ ಚಿಕಿತ್ಸೆ ಪಡೆದುಕೊಳ್ಳಬೇಕು ಎಂದರೆ ಸರ್ಕಾರಿ ಆಸ್ಪತ್ರೆಗಳಿಂದ ಒಂದು ಚೀಟಿಯನ್ನು ತೆಗೆದುಕೊಂಡು ಹೋಗಬೇಕು ತದನಂತರ ನಿಮಗೆ ಖಾಸಗಿ ಆಸ್ಪತ್ರೆಯಲ್ಲಿ ಉಚಿತ ಚಿಕಿತ್ಸೆ ದೊರೆಯುತ್ತದೆ. ಇದು ಬಿಪಿಎಲ್ ಕಾರ್ಡ್ ಇರುವವರಿಗೆ.
ಇನ್ನು ಎಪಿಎಲ್ ಕಾರ್ಡನ್ನು ಹೊಂದಿರುವವರು ಆಯುಷ್ಮಾನ್ ಭಾರತ್ ಕಾರ್ಡನ್ನು ಪಡೆದುಕೊಂಡಿದ್ದರೆ ಅಂತವರು ಚಿಕಿತ್ಸೆಗಾಗಿ ಕೇವಲ ಶೇಕಡಾ ಮೂವತ್ತರಷ್ಟು ಹಣ ಖರ್ಚು ಮಾಡಬೇಕು ಉಳಿದ ಶೇಕಡಾ ಎಪ್ಪತ್ತರಷ್ಟು ಹಣವನ್ನು ಕೇಂದ್ರ ಸರ್ಕಾರ ಭರಿಸುತ್ತದೆ. ಎಪಿಎಲ್ ಪಡಿತರ ಚೀಟಿಯನ್ನು ಹೊಂದಿರುವವರಿಗೂ ಕೂಡ ಆಯುಷ್ಮಾನ್ ಭಾರತ್ ಕಾರ್ಡ್ ಬಹಳ ಉಪಯೋಗವಾಗುತ್ತದೆ. ಹಾಗಾದರೆ ಈ ಕೂಡಲೇ ಯಾರು ಇನ್ನೂ ಆಯುಷ್ಮಾನ್ ಭಾರತ್ ಕಾರ್ಡನ್ನು ಪಡೆದುಕೊಂಡಿಲ್ಲ ತಕ್ಷಣವೇ ನಿಮ್ಮ ಹತ್ತಿರದ ನಗರ ಅಥವಾ ಜಿಲ್ಲೆಯಲ್ಲಿರುವ ಸರ್ಕಾರಿ ಆಸ್ಪತ್ರೆಗಳಲ್ಲಿ ಹೋಗಿ ಆಯುಷ್ಮಾನ್ ಭಾರತ್ ಕಾರ್ಡನ್ನು ಪಡೆದುಕೊಂಡು ಅದರಿಂದಾಗುವ ಲಾಭವನ್ನು ಪಡೆದುಕೊಳ್ಳಿ. ನೀವು ಈ ಮಾಹಿತಿಯನ್ನು ತಿಳಿದುಕೊಳ್ಳುವುದರ ಜೊತೆಗೆ ನಿಮ್ಮ ಪರಿಚಿತರು ಹಾಗೂ ಸ್ನೇಹಿತರಿಗೂ ಈ ಮಾಹಿತಿಯನ್ನು ತಿಳಿಸಿರಿ.
ಶಿರಡಿ ಸಾಯಿಬಾಬಾ ಜ್ಯೋತಿಷ್ಯ ಶಾಸ್ತ್ರಂ ನಂಬಿ ಕರೆ ಮಾಡಿದವರಿಗೆ ವಿಶೇಷ ಸಾಂತ್ವಾನ, ಸಮಸ್ಯೆ ಸಮಸ್ಯೆ ಸಮಸ್ಯೆ ಚಿಂತಿಸಬೇಡಿ, ಅಸಾಧ್ಯವಾದದ್ದು ಇಲ್ಲಿ ಸಾಧ್ಯ ಸಮಸ್ಯೆಗಳಾದ ವಿದ್ಯೆ ಉದ್ಯೋಗ ವ್ಯಾಪಾರ ಆರೋಗ್ಯ ದಾಂಪತ್ಯ ಗಂಡ-ಹೆಂಡತಿಯರ ಕಲಹ ಪ್ರೀತಿಯಲ್ಲಿ ನಂಬಿ ಮೋಸ ಇಷ್ಟಪಟ್ಟವರು ನಿಮ್ಮಂತೆ ಆಗಲು ಕೋರ್ಟ್ ಕೇಸ್ ಜಮೀನು ಸ್ತ್ರೀ ಮತ್ತು ಪುರುಷ ವಶೀಕರಣ ಶತ್ರು ಕಾಟ ಮಾಟ-ಮಂತ್ರ ಇನ್ನು ಮುಂತಾದ ಸಮಸ್ಯೆಗಳಿಗೆ ಅತಿ ಶೀಘ್ರದಲ್ಲಿ ಪರಿಹಾರಅಸಾಧ್ಯ ಆಗುವ ಸಮಸ್ಯೆಗಳಿಗೆ ಸಾಧ್ಯವಾಗಿ ತೋರಿಸುವುದು ಶ್ರೀ ಶಿರಡಿ ಸಾಯಿಬಾಬಾ ಜ್ಯೋತಿಷ್ಯಶಾಸ್ತ್ರನಿಮ್ಮ ನಂಬಿಕೆಗೆ ಇಲ್ಲಿ ಮೋಸವಿಲ್ಲ 9611844430