ನಾವಿಂದು ನಿಮಗೆ ಒಂದು ವಿಶೇಷವಾದ ಮಾಹಿತಿಯನ್ನು ತಿಳಿಸಿಕೊಡುತ್ತವೆ ಅದು ಕೋಕೀಲಾಕ್ಷ ಎನ್ನುವ ಆಯುರ್ವೇದ ಔಷಧದ ಬಗ್ಗೆ. ಕೋಕೀಲಾಕ್ಷ ಎಂದರೆ ಏನು ಅದು ಹೇಗೆ ಇರುತ್ತದೆ ಅದರಲ್ಲಿ ಯಾವೆಲ್ಲಾ ಔಷಧೀಯ ಗುಣಗಳು ಇರುತ್ತವೆ ಯಾವ ಯಾವ ಸಮಸ್ಯೆಗಳಿಗೆ ಅದು ರಾಮಬಾಣವಾಗಿ ಕೆಲಸವನ್ನು ನಿರ್ವಹಿಸುತ್ತದೆ ಎಂಬುದರ ಬಗ್ಗೆ ಮಾಹಿತಿಯನ್ನು ನಿಮಗೆ ತಿಳಿಸಿಕೊಡುತ್ತೇವೆ. ಕೋಕೀಲಾಕ್ಷವನ್ನು ಬಹುತೇಕ ಜನರು ನೋಡಿರುವುದಿಲ್ಲ ಕಾರಣ ಅದು ನೀರು ನಿಲ್ಲುವಂತಹ ಪ್ರದೇಶದಲ್ಲಿ ಬೆಳೆಯುತ್ತದೆ ಹೆಚ್ಚಾಗಿ ಕರಾವಳಿ ಹಾಗೂ ಮಲೆನಾಡಿನ ಭಾಗದ ಜನರು ಇದನ್ನು ನೋಡಿರುತ್ತಾರೆ .
ಆದರೆ ಅದನ್ನು ಕಳೆ ಎಂದು ಕಿತ್ತು ಬಿಸಾಕುತ್ತಾರೆ ಇದರಲ್ಲಿ ಉದ್ದದ ಮುಳ್ಳುಗಳಿರುತ್ತವೆ ಆದರೆ ಇದರಲ್ಲಿ ಅದ್ಭುತವಾದಂತಹ ಔಷಧೀಯ ಗುಣಗಳಿರುತ್ತವೆ. ಯಾರಲ್ಲಿ ಯೂರಿಕ್ ಆಸಿಡ್ ಹೆಚ್ಚಿನ ಪ್ರಮಾಣದಲ್ಲಿರುತ್ತದೆ ಅಂಥವರಿಗೆ ಇದು ತುಂಬಾ ಉಪಯುಕ್ತವಾಗಿ ಕೆಲಸಮಾಡುತ್ತದೆ. ಈ ಗಿಡದ ಬೇರು ಮತ್ತು ಕಾಂಡಗಳು ಕೂಡ ಔಷಧಿಯ ಗುಣಗಳನ್ನು ಹೊಂದಿದೆ ಆದರೆ ಬಹುತೇಕ ಗ್ರಂಥಿಗೆ ಅಂಗಡಿಗಳಲ್ಲಿ ಇದು ಸಿಗುವಂತಹ ಸಾಧ್ಯತೆ ಕಡಿಮೆ ಆದರೆ ಅದರ ಬೀಜಗಳು ಸಿಗುತ್ತವೆ ಹಿಂದಿಯಲ್ಲಿ ಅದಕ್ಕೆ ತಾಲ್ಮಖಾನ ಎಂದು ಕರೆಯುತ್ತಾರೆ ಅಥವಾ ಕೋಕಿಲಕ್ಷದ ಬೀಜಗಳು ಎಂದರು ಸಿಗುತ್ತದೆ. ಆ ಬೀಜವನ್ನು ಅರ್ಧ ಚಮಚದಷ್ಟು ರಾತ್ರಿ ನೆನೆಸಿಟ್ಟು ಬೆಳಿಗ್ಗೆ ಅದನ್ನ ಸೇವಿಸಬೇಕು.
ನೆನೆಸಿದಂತಹ ಕೋಕಿಲಕ್ಷ ಬೀಜವು ಲೋಳೆಯಾಗಿ ಕಾಮಕಸ್ತೂರಿಯ ರೀತಿಯಲ್ಲಿ ಮುದ್ದೆಯಾಗಿರುತ್ತದೆ ಅದನ್ನು ಹಾಲಿನಲ್ಲಿ ಹಾಕಿ ಅಥವಾ ಹಾಗೆಯೆ ತೆಗೆದುಕೊಳ್ಳಬಹುದು. ಈ ರೀತಿಯಾಗಿ ಮಾಡುವುದರಿಂದ ಪುರುಷರಲ್ಲಿ ವೀರ್ಯ ವೃದ್ಧಿಯಾಗುತ್ತದೆ ಜೊತೆಗೆ ಮೂತ್ರಕ್ಕೆ ಸಂಬಂಧಪಟ್ಟಂತಹ ಸಮಸ್ಯೆಗಳ ನಿವಾರಣೆಯಾಗುತ್ತದೆ. ಪದೇ ಪದೇ ಮೂತ್ರಕೋಶದಲ್ಲಿ ಆಗುವಂತಹ ಕಲ್ಲನ್ನ ನಿವಾರಣೆ ಮಾಡುವುದಕ್ಕೆ ಇದು ಒಳ್ಳೆಯದು.
ಮೂತ್ರ ಮಾರ್ಗದಲ್ಲಿ ಆಗುವಂತಹ ಅಡೆತಡೆಗಳನ್ನು ಕಡಿಮೆ ಮಾಡುತ್ತದೆ. ಸಾಧ್ಯವಾದರೆ ಇದರ ಗಿಡ ಸಿಕ್ಕರೆ ಅದನ್ನು ಚಿಕ್ಕ ಚಿಕ್ಕ ಚೂರುಗಳನ್ನಾಗಿ ಮಾಡಿ ಅದರ ಕಷಾಯವನ್ನು ಮಾಡಿ ಕುಡಿಯುವುದರಿಂದಲೂ ಕೂಡ ತುಂಬಾ ಒಳ್ಳೆಯ ಪರಿಣಾಮವನ್ನು ಕಂಡುಕೊಳ್ಳಬಹುದು. ಹಾಗಾದರೆ ಕೋಕೀಲಾಕ್ಷ ಗಿಡದ ಕಷಾಯವನ್ನು ಯಾವ ರೀತಿಯಾಗಿ ಮಾಡಬೇಕು ಎಂಬುದನ್ನು ತಿಳಿದುಕೊಳ್ಳೋಣ.
ಕೋಕೀಲಾಕ್ಷ ಗಿಡವನ್ನು ಬೇರು ಸಮೇತ ಕಿತ್ತು ಅದನ್ನು ಸಣ್ಣ ಸಣ್ಣ ತುಂಡುಗಳನ್ನಾಗಿ ಕತ್ತರಿಸಿಕೊಳ್ಳಬೇಕು ಅದರಲ್ಲಿ ಐದು ಗ್ರಾಂನಷ್ಟು ತೆಗೆದುಕೊಂಡು ಅದನ್ನು ಒಂದು ಪಾತ್ರೆಗೆ ಹಾಕಿ ಅದಕ್ಕೆ ನಾಲ್ಕು ಲೋಟ ನೀರನ್ನು ಹಾಕಿ ಸಣ್ಣ ಉರಿಯಲ್ಲಿ ಅದನ್ನು ಕುದಿಸಿ ಅದು ಒಂದು ಲೋಟ ಆಗುವವರೆಗೆ ಕುದಿಸಬೇಕು ನಂತರ ಅದನ್ನು ಸೋಸಿ ಕುಡಿಯಬೇಕು. ಈ ರೀತಿಯಾಗಿ ಕೋಕಿಲಾಕ್ಷದ ಬೀಜವನ್ನು ನೆನೆಸಿಟ್ಟು ಸೇವಿಸುವುದರಿಂದ ಅಥವಾ ಗಿಡ ಸಿಕ್ಕರೆ ಅದರ ಕಷಾಯ ಮಾಡಿ ಸೇವಿಸುವುದರಿಂದ ಮೂತ್ರಕೋಶಕ್ಕೆ ಹಾಗೂ ಮೂತ್ರ ಮಾರ್ಗಕ್ಕೆ ಸಂಬಂಧಿಸಿದಂತೆ ಯಾವುದೇ ತೊಂದರೆಗಳಿದ್ದರೂ ಅದು ನಿವಾರಣೆಯಾಗುತ್ತದೆ.
ಜೊತೆಗೆ ಪುರುಷರಲ್ಲಿ ವೀರ್ಯ ವೃದ್ಧಿಗು ಕೂಡ ಇದು ಸಹಾಯ ಮಾಡುತ್ತದೆ. ನಿಮಗೂ ಕೂಡ ಕೋಕೀಲಾಕ್ಷದ ಗಿಡ ಸಿಕ್ಕರೆ ಅದರಲ್ಲಿಯ ಔಷಧೀಯ ಗುಣಗಳ ಉಪಯೋಗವನ್ನು ತಿಳಿದುಕೊಳ್ಳುವುದರ ಜೊತೆಗೆ ನಿಮ್ಮ ಪರಿಚಿತರು ಹಾಗೂ ಸ್ನೇಹಿತರೊಂದಿಗೆ ಈ ಮಾಹಿತಿಯನ್ನು ಹಂಚಿಕೊಳ್ಳಿ.