2 ನಿಮಿಷದ ಮ್ಯಾಗಿಯನ್ನು ತಯಾರಿಸಿದ ದೇಶ ಸ್ವಿಜರ್ಲ್ಯಾಂಡ್.ಈಗ ಅದು ದೇಶದಾದ್ಯಂತ ವಿಶಾಲವಾಗಿ ಹರಡಿದೆ. ಎರಡು ನಿಮಿಷದಲ್ಲಿ ತಯಾರಿಸುವ ಈ ಮ್ಯಾಗಿಯನ್ನು ಬೆಳಿಗ್ಗೆ ಉಪಹಾರವಾಗಿ ಸೇವಿಸುತ್ತಾರೆ ಆದರೆ ಎರಡು ನಿಮಿಷದಲ್ಲಿ ತಯಾರಾಗುವ ಈ ಮ್ಯಾಗಿಯನ್ನು ತಯಾರಿಸಲು ತುಂಬಾ ಸಮಯ ತೆಗೆದುಕೊಳ್ಳುತ್ತದೆ.
ಮ್ಯಾಗಿ ಎನ್ನುವ ತಿಂಡಿಯನ್ನು ಕಂಡುಹಿಡಿದವರು ಜೂಲಿಯಸ್ ಮ್ಯಾಗಿ.ಅವರು 1884 ಇಸವಿಯಲ್ಲಿ ತಮ್ಮ ತಂದೆಯ ಹಳೆಯ ಮಿಲ್ಲನ್ನು ತಮ್ಮ ವಶಕ್ಕೆ ಪಡೆದುಕೊಳ್ಳುತ್ತಾರೆ ಆ ಸಮಯದಲ್ಲಿ ಯುರೋಪಿನಾದ್ಯಂತ ಕೈಗಾರಿಕಾ ಕ್ರಾಂತಿ ಉಂಟಾಗುತ್ತಿದ್ದ ಕಾಲ ಆಗ ಎಲ್ಲಾ ಸಮಾಜದ ಹಾಗೂ ಮಧ್ಯಮ ವರ್ಗದ ಸ್ತ್ರೀಯರೆಲ್ಲರೂ ದಿನವಿಡೀ ಹೊರಗಡೆ ದುಡಿದು ರಾತ್ರಿ ಮನೆಗೆ ಹೋಗಿ ಪರಿವಾರದವರಿಗೆ ಅಡುಗೆ ಮಾಡಬೇಕಾಗುತ್ತದೆ. ಈ ಮಹಿಳೆಯರ ಕಷ್ಟವನ್ನು ನೋಡಿ ಜೂಲಿಯಸ್ ಮ್ಯಾಗಿ ಅವರು ಮಹಿಳೆಯರಿಗೆ ಸಹಾಯವಾಗುವಂತದ್ದ ಏನಾದರೂ ಒಂದನ್ನು ಅಭಿವೃದ್ಧಿಪಡಿಸಬೇಕೆಂದು ಅವರು ನಿರ್ಧರಿಸಿದರು.
ದುಡಿದು ಬಂದ ಸ್ತ್ರೀ ಹೆಚ್ಚು ಸಮಯ ಅಡುಗೆ ಮನೆಯಲ್ಲಿ ಕಳೆಯಬಾರದು ಅತಿ ಕಡಿಮೆ ಸಮಯದಲ್ಲಿ ತಯಾರಾಗುವ ಡಿಶ್ ಅನ್ನು ಕಂಡುಹಿಡಿಯಬೇಕೆಂದು ಜೂಲಿಯಸ್ ಮ್ಯಾಗಿ ಅವರ ಕನಸಾಗಿತ್ತು. ಹಾಗೆಯೇ ಮ್ಯಾಗಿ ಅವರು ಹೊಸದಾದ ಮ್ಯಾಗಿ ಎನ್ನುವ ಆಹಾರವನ್ನು ಕಂಡು ಹಿಡಿದು ಅದಕ್ಕೆ ಸರ್ಕಾರದ ಅನುಮತಿಯನ್ನು ಕೂಡ ಪಡೆದಿದ್ದರು. ಕೆಲಸಗಾರರ ಸಹಾಯದಿಂದ ಮ್ಯಾಗಿ ಮಾರುಕಟ್ಟೆಗೆ ಬಂದಿತು ಇದಕ್ಕೂ ಮೊದಲು ಮ್ಯಾಗಿಗೆ ಬೇಕಾಗುವ ಮಸಾಲವನ್ನು ಕಂಡುಹಿಡಿದಿದ್ದರು.
1897 ಹೊತ್ತಿಗೆ ಜರ್ಮನಿಯಲ್ಲೂ ಸಹ ಮ್ಯಾಗಿಯ ಬೃಹತ್ ಶಾಖೆಯನ್ನು ನಡೆಸಲಾಯಿತು. ಈ ಮೂಲಕ ಇದರ ಬಿಸಿನೆಸ್ ಸೇಲ್ಸ್ ಹಾಗೂ ಟರ್ನ್ ಟರ್ನ್ಓವರ್ ದಿನಕ್ಕು ಎರುತ್ತಲೇ ಹೋಯಿತು. 1912ರಲ್ಲಿ ಜೂಲಿಯಸ್ ಮ್ಯಾಗಿ ವಿಧಿವಶರಾಗುತ್ತಾರೆ ,ಇವರು ಕಣ್ಮರೆಯಾದ ಬಳಿಕ ಮ್ಯಾಗಿಯ ಕಮರ್ಷಿಯಲ್ ಹಾಗೂ ಕಾರ್ಪೊರೇಟ್ ಬದಲಾವಣೆ ಜರಗಿದವು. 1947ರಲ್ಲಿ ಮ್ಯಾಗಿ ಮೊದಲ ಬಾರಿಗೆ ಭಾರತಕ್ಕೆ ಬರುತ್ತದೆ ಮ್ಯಾಗಿಗೆ ಬೇಕಾದ ಎಲ್ಲಾ ಮಸಾಲೆ ಪದಾರ್ಥವನ್ನು ಭಾರತದಿಂದ ರಫ್ತುಮಾಡಿಕೊಳ್ಳುತ್ತಾರೆ.
ಮ್ಯಾಗಿಗೆ ಬೇಕಾಗುವ ಟೆಸ್ಟಿಂಗ್ ಪೌಡರ್ಗಳನ್ನು ಹೇಗೆ ತಯಾರಿಸುತ್ತಾರೆ ಎಂದರೆ ಈ ಪೌಡರ್ಗೆ ಬೇಕಾಗುವ ಕಾರಕ್ಕಾಗಿ ಒಣಮೆಣಸಿನ ಕಾಯಿಯನ್ನು ವಿಶೇಷವಾಗಿ ಆಂಧ್ರಪ್ರದೇಶದಿಂದ ತರಿಸಿಕೊಳ್ಳಲಾಗುತ್ತದೆ ಹಾಗೂ ರಾಜಸ್ಥಾನದಿಂದ ಜೀರಿಗೆ ಮೆಣಸು, ಎಳ್ಳು ಹಾಗೂ ಮಹಾರಾಷ್ಟ್ರದಿಂದ ಅರಿಶಿನವನ್ನು ಕರೆಸಿಕೊಳ್ಳಲಾಗುತ್ತದೆ. ಮ್ಯಾಗಿಗೆ ಬೇಕಾಗುವ ಒಟ್ಟು ಮಸಾಲೆ ಪದಾರ್ಥಗಳ ಸಂಖ್ಯೆ 13. ಎಲ್ಲಾ ಇಂಗ್ರೀಡಿಯಂಟನ್ನು ಪರಿಶೀಲನೆ ಮಾಡಿ ಒಳಗೆ ತೆಗೆದುಕೊಳ್ಳಲಾಗುತ್ತದೆ.
ಗೋಧಿ ಹಿಟ್ಟನ್ನು ಕಲಿಸುವಿಕೆ ಮಷೀನ್ ಗೆ ಹಾಕಿ ನಾದಲಾಗುತ್ತದೆ ನಂತರ ಇದನ್ನು ಇನ್ನೊಂದು ಮಷೀನ್ ಗೆ ಹಾಕಿ ರುಬ್ಬಿ ಎಳೆಎಳೆಯನ್ನು ಹೊರತೆಗೆಯಲಾಗುತ್ತದೆ ಮತ್ತೊಂದು ಮಷೀನ್ ಗೆ ಹಾಕುತ್ತಾರೆ.ಅದು ನಿರ್ದಿಷ್ಟ ಆಕಾರವನ್ನು ನೀಡುತ್ತದೆ ನಂತರ ಅದನ್ನು ಕತ್ತರಿಸಿ ಮುಂದೆ ಇದನ್ನು ಸ್ಟೀಮ್ ನಲ್ಲಿ ಇಟ್ಟು ಹೀಟ್ ಮಾಡುತ್ತಾರೆ ಶೇಕಡ 80% ಅಷ್ಟು ಬೆಂದಿರುತ್ತದೆ. ಎಲ್ಲಾ ಮಸಾಲೆಯನ್ನು ಪರಿಶೀಲಿಸಿ ನಂತರ ಅದನ್ನು ನುಣ್ಣಗೆ ಪುಡಿ ಮಾಡಿ ನಿರ್ದಿಷ್ಟ ಸಮಯ ದೊಡ್ಡ ಕಾಂಟೇನರ್ ನಲ್ಲಿ ಹಾಕಿ ನಿರಂತರವಾಗಿ ಕಲಿಸುತ್ತಾ ಇರುತ್ತದೆ
ನಂತರ ಅದನ್ನು ಪ್ಯಾಕೆಟ್ ಮಾಡುತ್ತಾರೆ. ಆ ಪ್ಯಾಕೆಟ್ ಗಳಲ್ಲಿ ಅಗತ್ಯವಾದ ತಾಜಾತನ ಹಾಗೂ ಸುಗಂಧವನ್ನು ಸಹ ತುಂಬಲಾಗುತ್ತದೆ .2018 ರ ವರದಿಯ ಪ್ರಕಾರ 650 ಬಗೆಯ ಟೆಸ್ಟಿಂಗ್ ಪ್ರೋಸೆಸ್ ಅನ್ನು ದಾಟಿ ಮತ್ತು ಅದು ಮೆಟಲ್ ಡಿಟೆಕ್ಟರ್ ಅನ್ನು ಬಳಸಿ ಮ್ಯಾಗಿಯ ಪ್ಯಾಕೆಟ್ ನಿಗದಿತ ಆಕಾರದಲ್ಲಿ ಇದೆ ಇಲ್ಲವೋ ಎಂದು ಮೊದಲು ಪರಿಶೀಲನೆ ಮಾಡಲಾಗುತ್ತದೆ.
ಇಷ್ಟೆಲ್ಲ ಪರಿಶೀಲನೆ ಏಕೆ ಮಾಡುತ್ತಾರೆಂದರೆ 2015ರಲ್ಲಿ ಮ್ಯಾಗಿ ಒಳಗೆ ಲೆಡ್ ಅಂಶವಿದೆ ಎಂದು ಆರೋಪದಲ್ಲಿ ಇದನ್ನು ಅನೇಕ ಕಡೆ ಬ್ಯಾನ್ ಮಾಡಲಾಯಿತು. ಇದರಿಂದ 35 ಸಾವಿರ ಟಂಗು ಹೆಚ್ಚು ಮ್ಯಾಗಿಯನ್ನು ನಾಶ ಮಾಡಬೇಕಾಯಿತು ಮತ್ತು 500 ಕೋಟಿಗಿಂತಲೂ ಹೆಚ್ಚು ನಷ್ಟವಾಗಿತ್ತು ಇದರಿಂದಾಗಿ ಮ್ಯಾಗಿ ಕಂಪನಿಯವರು ತುಂಬಾ ನಷ್ಟವನ್ನು ಅನುಭವಿಸಿದರು ಹಾಗಾಗಿ ಮ್ಯಾಗಿ ಕಂಪನಿಯವರು ತುಂಬಾ ಜಾಗರೂಕತೆಯಿಂದ ಕೆಲಸ ಮಾಡುತ್ತಿದ್ದಾರೆ 650ಕ್ಕೂ ಹೆಚ್ಚು ಸಲ ಪರಿಶೀಲನೆ ನಡೆಸಿ ಮಾರುಕಟ್ಟೆಗೆ ಬಿಡುತ್ತಾರೆ.