ಕನ್ನಡ ಸಿನಿಮಾರಂಗದಲ್ಲಿ ಅದ್ಭುತ ಕಾಮಿಡಿಯನ್ ಆಗಿ ಹೊರಹೊಮ್ಮಿರುವ ನಟ ಸಾಧು ಕೋಕಿಲ ಅವರು ತಮ್ಮದೆ ಆದ ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ಸಾಧುಕೋಕಿಲ ಅವರ ಸಿನಿಮಾ ಜಗತ್ತಿನ ಬಗ್ಗೆ ಹಾಗೂ ಅವರ ಕುಟುಂಬದವರ ಬಗ್ಗೆ ಕೆಲವು ಇಂಟರೆಸ್ಟಿಂಗ್ ಮಾಹಿತಿಯನ್ನು ಈ ಲೇಖನದಲ್ಲಿ ನೋಡೋಣ.
ಸಾಧುಕೋಕಿಲ ಅವರ ನಿಜವಾದ ಹೆಸರು ಸಹಾಯ ಶೀಲ ಸದ್ರಾಚ್. ಸಾಧುಕೋಕಿಲ ಅವರು 1966 ಮಾರ್ಚ್ 24ರಂದು ಬೆಂಗಳೂರಿನಲ್ಲಿ ಜನಿಸಿದ್ದಾರೆ. ಇವರ ತಂದೆ ಹೆಸರು ನತೇಶ್ ಇವರು ವಯೊಲಿನ್ ನುಡಿಸುತ್ತಿದ್ದರು. ಇವರ ತಾಯಿಯ ಹೆಸರು ಮಂಗಳ ಇವರು ಪ್ಲೇಬ್ಯಾಕ್ ಸಿಂಗರ್ ಆಗಿದ್ದರು. ಸಾಧುಕೋಕಿಲ ಅವರಿಗೆ ಒಬ್ಬ ಸಹೋದರ ಹಾಗೂ ಒಬ್ಬಳು ಸಹೋದರಿ ಇದ್ದಾರೆ.
ಇವರು ಕ್ರಿಶ್ಚಿಯನ್ ಧರ್ಮಕ್ಕೆ ಸೇರಿದ್ದಾರೆ. ಇವರು ಅನೇಕ ಸಿನಿಮಾಗಳಲ್ಲಿ ನಟಿಸುವುದಲ್ಲದೆ ನಿರ್ದೇಶಕರಾಗಿ, ಮ್ಯೂಸಿಕ್ ಕಂಪೋಸರ್, ಸ್ಕ್ರಿಪ್ಟ್ ರೈಟರ್ ಕೆಲಸ ಮಾಡಿದ್ದಾರೆ. ಕನ್ನಡ ಚಿತ್ರರಂಗದ ಸಾಧುಕೋಕಿಲ ಪ್ರತಿಭಾನ್ವಿತ ನಟರು.
ಅವರು ಸಿನಿಮಾಕ್ಕೆ ಬರುವ ಮೊದಲು ಮ್ಯೂಸಿಕ್ ನಲ್ಲಿ ಸಾಧನೆ ಮಾಡಬೇಕು ಎಂದು ಅಂದುಕೊಂಡಿದ್ದರು. ಸಾಧುಕೋಕಿಲ ಅವರ ಸಹೋದರ ಅವರು ಕೂಡ ಮ್ಯೂಸಿಕ್ ನಲ್ಲಿ ಸಾಧನೆ ಮಾಡಿದ್ದಾರೆ. ಸಾಧು ಕೋಕಿಲ ಅವರ ಮ್ಯೂಸಿಕ್ ಪ್ರಯಾಣದಲ್ಲಿ ಉಪೇಂದ್ರ ಅವರ ಪರಿಚಯವಾಗುತ್ತದೆ. ಸಾಧುಕೋಕಿಲ ಅವರ ಯಶಸ್ಸಿನಲ್ಲಿ ಉಪೇಂದ್ರ ಅವರ ಪಾತ್ರ ಪ್ರಮುಖವಾಗಿದೆ. ಸಾಧುಕೋಕಿಲ ಅವರು ಸಾರಿ ಎಂಬ ಸಿನಿಮಾದಲ್ಲಿ ಮೊದಲ ಬಾರಿಗೆ ನಟಿಸಿದ್ದಾರೆ.
ಉಪೇಂದ್ರ ಅವರ ಶ್ ಸಿನಿಮಾದಲ್ಲಿ ಸಾಧುಕೋಕಿಲ ಮ್ಯೂಸಿಕ್ ಕಂಪೋಸರ್ ಆಗಿ ಕೆಲಸ ಮಾಡಿದ್ದಾರೆ ಅಲ್ಲದೆ ಆ ಸಿನಿಮಾದಲ್ಲಿ ಸಣ್ಣ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಅವರು ಏಕಾಂಗಿ, ಓಂ, ವಾಲಿ ಅನೇಕ ಸಿನಿಮಾಗಳಲ್ಲಿ ಕಾಮಿಡಿಯನ್ ಪಾತ್ರದಲ್ಲಿ ನಟಿಸಿದ್ದಾರೆ. ನಂತರ ರಕ್ತ ಕಣ್ಣೀರು ಸಿನಿಮಾವನ್ನು ನಿರ್ದೇಶನ ಮಾಡುತ್ತಾರೆ.
ಸಾಧುಕೋಕಿಲ ಅವರು ಕಾಮೆಡಿಯನ್ ಆಗಿ 160ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದಾರೆ ಜೊತೆಗೆ ಹಲವು ಸಿನಿಮಾಗಳನ್ನು ನಿರ್ದೇಶನ ಕೂಡ ಮಾಡಿದ್ದಾರೆ. ಸಾಧುಕೋಕಿಲ ಸೆಲಿನಾ ಎಂಬುವವರನ್ನು 1993ರಲ್ಲಿ ವಿವಾಹವಾಗಿದ್ದಾರೆ. ಅವರಿಗೆ ಇಬ್ಬರು ಗಂಡು ಮಕ್ಕಳು ಸುರಾಗ್ ಮತ್ತು ಸೃಜನ್. ಸಾಧುಕೋಕಿಲ ಅವರು ತಮ್ಮ ಕುಟುಂಬದವರೊಂದಿಗೆ ಕಾಮೆಡಿ ಮಾಡುತ್ತಿರುತ್ತಾರೆ. ಸಾಧುಕೋಕಿಲ ಅವರು ಒಂದು ಸಿನಿಮಾಕ್ಕೆ ಒಂದರಿಂದ ಮೂರು ಲಕ್ಷ ರೂಪಾಯಿ ಸಂಭಾವನೆ ಪಡೆಯುತ್ತಾರೆ. ಸಾಧುಕೋಕಿಲ ಅವರು ತಮ್ಮ ಕುಟುಂಬದವರೊಂದಿಗೆ ಸಂತೋಷವಾಗಿರಲಿ ಎಂದು ಆಶಿಸೋಣ.