ರಾಜ್ಯದ ಜನತೆ ಮೆಚ್ಚಿದ ಅಪ್ಪು, ಕರ್ನಾಟಕದ ಮನೆಮಗ ಅಪ್ಪು ಮಣ್ಣಲ್ಲಿ ಮಣ್ಣಾಗಿ ಹೋದರು. ಈ ಕ್ಷಣಕ್ಕೂ ಅಪ್ಪು ಇಲ್ಲವಾಗಿ ಒಂದು ತಿಂಗಳೇ ಕಳೆದಿದ್ದರೂ ಅಪ್ಪು ಇಲ್ಲೇ ಎಲ್ಲೋ ಇದ್ದಾರೆ, ಅಪ್ಪು ಅವರು ಇಷ್ಟು ಹೊತ್ತು ನಟನೆ ಮಾಡುತ್ತಿದ್ದರು. ಮತ್ತೆ ವಾಪಸ್ ಬರುತ್ತಾರೆ ಎಂದು ಎಲ್ಲರಿಗೂ ಭಾವನೆ ಮೂಡುತ್ತಿದೆ. ಮನಸ್ಸನ್ನು ಎಷ್ಟೇ ಗಟ್ಟಿ ಮಾಡಿಕೊಳ್ಳುವ ಪ್ರಯತ್ನ ಮಾಡಿದರು ಸಹ ಆ ನೋವನ್ನು ಭರಿಸಲು ಯಾರಿಂದಲೂ ಸಾಧ್ಯವಾಗುತ್ತಿಲ.
ರಾಜ್ಯದ ಜನತೆಗೆ ಈ ರೀತಿ ಆಗಿರಬೇಕಾದರೆ, ಅಪ್ಪು ಅವರ ಕುಟುಂಬ ಎಂತಹ ನೋವಿನಲ್ಲಿದೆ ಎಂದು ಯೋಚಿಸಲು ಸಾಧ್ಯವಿಲ್ಲ. ಪುಟ್ಟ ಮಕ್ಕಳಿಂದ ಹಿಡಿದು ವಯಸ್ಸಾದ ಮುದುಕರವರೆಗೂ ಪುನೀತ್ ರಾಜಕುಮಾರ್ ಅಂದರೆ ಅಚ್ಚುಮೆಚ್ಚು. ಪುನೀತ್ ನಿಧನರಾದ ದಿನದಿಂದ ಹಿಡಿದು ಇಲ್ಲಿಯವರೆಗೂ ಅಪ್ಪು ಅವರನ್ನು ನೆನೆದು ಕಣ್ಣೀರು ಹಾಕುತ್ತಲೇ ಇದ್ದಾರೆ.
ಎಷ್ಟೋ ಜನರು ತಮ್ಮ ಊರುಗಳಿಂದ ಬೆಂಗಳೂರಿನ ಕಂಠೀರವ ಸ್ಟುಡಿಯೋದಲ್ಲಿರುವ ಪುನೀತ್ ರಾಜಕುಮಾರ್ ಅವರ ಸಮಾಧಿಯ ದರ್ಶನ ಪಡೆಯಲು ಪಾದಯಾತ್ರೆಯ ಮೂಲಕ, ಬೈಕ್ ರಾಲಿ ಮೂಲಕ ಬರುತ್ತಿದ್ದು, ಇದೀಗ ಅಪ್ಪು ಅಪ್ಪಟ ಅಭಿಮಾನಿ ದ್ರಾಕ್ಷಾಯಿಣಿ ಪಾಟೀಲ್ ತಮ್ಮ ಊರಿನಿಂದ ಅಪ್ಪು ಸಮಾಧಿಯವರೆಗೂ ಓಡುತ್ತಾ ಬರುತ್ತಿದ್ದು, ದಾಕ್ಷಾಯಣಿಯ ಯೋಗ ಕ್ಷೇಮವನ್ನ ರಾಘಣ್ಣ ಕರೆ ಮಾಡಿ ವಿಚಾರಿಸಿದ್ದಾರೆ. ಇದರ ಕುರಿತಾಗಿ ಹೆಚ್ಚಿನ ಮಾಹಿತಿಯನ್ನು ನಾವು ಈ ಲೇಖನದ ಮೂಲಕ ತಿಳಿದುಕೊಳ್ಳೋಣ.
ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಅಭಿಮಾನಿಗಳು ಹಲವು ರೀತಿಗಳಲ್ಲಿ ತಮಗೆ ಅಪ್ಪು ಅವರ ಮೇಲಿರುವ ಅಭಿಮಾನವನ್ನು ವ್ಯಕ್ತಪಡಿಸುತ್ತಿದ್ದಾರೆ. ಹಲವೆಡೆ ಅಪ್ಪು ಅವರ ಹೆಸರಿನಲ್ಲಿ ಒಳ್ಳೆಯ ಕೆಲಸಗಳನ್ನು ಮಾಡುತ್ತಿದ್ದಾರೆ. ಜನರಿಗೆ ಸಹಾಯ ಮಾಡುತ್ತಿದ್ದಾರೆ. ಧಾರವಾಡದಲ್ಲಿರುವ ಅಪ್ಪು ಅವರ ಅಭಿಮಾನಿ ಒಬ್ಬರು ಅಲ್ಲಿಂದ ಓಟದ ಮೂಲಕ ಅಪ್ಪು ಅವರ ಸ್ಮಾರಕ ತಲುಪುತ್ತಿದ್ದಾರೆ.
ದ್ರಾಕ್ಷಾಯಿಣಿ ಇವರು ಮೂರು ಮಕ್ಕಳ ತಾಯಿ, ಅಪ್ಪು ಅವರ ಮೇಲಿನ ಅಭಿಮಾನದಿಂದ ಈ ರೀತಿ ವ್ಯಕ್ತಪಡಿಸುತ್ತಿದ್ದಾರೆ. ಧಾರವಾಡ ತಾಲೂಕಿನ ಮನಗುಂಡಿ ಗ್ರಾಮದ ದಾಕ್ಷಾಯಣಿ ಉಮೇಶ ಪಾಟೀಲ, ಮನಗುಂಡಿ ಗ್ರಾಮದಿಂದ ಬೆಂಗಳೂರಿನ ಕಂಠೀರವ ಸ್ಟುಡಿಯೋವರೆಗೂ ಓಟದ ಮೂಲಕ ನೇತ್ರದಾನ, ಅಂಗಾಂಗ ದಾನ ಕುರಿತು ಜಾಗೃತಿ ಮೂಡಿಸುತ್ತ ಬರುತ್ತಿದ್ದು, ಇಂದಿಗೆ 9 ದಿನಗಳು ಕಳೆದಿದೆ. ಇನ್ನು ಎರಡು ದಿನಗಳಲ್ಲಿ ಸಮಾಧಿ ಬಳಿ ತಲುಪಿ ಶ್ರದ್ಧಾಂಜಲಿ ಸಲ್ಲಿಸಲಿದ್ದಾರೆ.
ಈ ಹಿನ್ನೆಲೆಯಲ್ಲಿ ಅಪ್ಪು ಅಭಿಮಾನಿ ದ್ರಾಕ್ಷಾಯಿಣಿ ಪಾಟೀಲ್ ಗೆ ಫೋನ್ ಮಾಡಿದ ದೊಡ್ಮನೆ ಯ ರಾಘಣ್ಣ ಆರೋಗ್ಯ ವಿಚಾರಿಸಿದ್ದು, ಬೆಂಗಳೂರು ತಲುಪುತ್ತಿದಂತೆ ಅಪ್ಪು ಮನೆಗೆ ಕರೆದುಕೊಂಡು ಹೋಗುವೆ, ಬೆಂಗಳೂರು ತಲುಪುವರೆಗೂ ಪೋನ್ ಮಾಡುತ್ತ ಇರಿ ಎಂದು ಹೇಳಿದ್ದಾರೆ. ದ್ರಾಕ್ಷಾಯಿಣಿ ಅವರು ಈಗಾಗಲೇ ಓಡಿಕೊಂಡು ಚಿತ್ರದುರ್ಗದವರೆಗೂ ತಲುಪಿದ್ದಾರೆ. ನವೆಂಬರ್ 29ರಂದು ಓಟ ಆರಂಭಿಸಿದ್ದಾರೆ. ಆದಷ್ಟು ಬೇಗ ಪುನೀತ್ ಅವರ ಸ್ಮಾರಕದ ಬಳಿ ಬಂದು ಸೇರುವ ಭರವಸೆ ಹೊಂದಿದ್ದಾರೆ. ಹಾಗೆಯೇ ತಾವು ಬರುವ ದಾರಿಯಲ್ಲಿ ನೇತ್ರದಾನದ ಬಗ್ಗೆ ಜಾಗೃತಿ ಮೂಡಿಸುತ್ತಿದ್ದಾರೆ
ದ್ರಾಕ್ಷಾಯಿಣಿ, ಇವರು ಮಾಡುತ್ತಿರುವ ಈ ಒಳ್ಳೆಯ ಕೆಲಸಕ್ಕೆ ದಾರಿ ನಡುವೆ ಹಲವು ಸಂಘ ಸಂಸ್ಥೆಗಳು ಸನ್ಮಾನ ಮಾಡುತ್ತಿದ್ದಾರೆ. ರಾಘವೇಂದ್ರ ರಾಜ್ ಕುಮಾರ್ ಅವರು ಸಹ ದಾಕ್ಷಾಯಿಣಿ ಅವರಿಗೆ ಕರೆಮಾಡಿ ಮಾತನಾಡಿದ್ದಾರೆ. ಆರಾಮವಾಗಿ ನಿಧಾನವಾಗಿ ಬನ್ನಿ, ಆತುರ ಮಾಡಿಕೊಳ್ಳಬೇಡಿ, ಹುಷಾರಾಗಿ ಬನ್ನಿ, ಆರೋಗ್ಯ ನೋಡಿಕೊಳ್ಳಿ, ನೀವು ಬೆಂಗಳೂರಿಗೆ ಬಂದ ತಕ್ಷಣವೇ ತಿಳಿಸಿ. ಅಶ್ವಿನಿ ಪುನೀತ್ ರಾಜ್ ಕುಮಾರ್ ಅವರನ್ನು ಭೇಟಿ ಮಾಡಿಸುವ ಜವಾಬ್ದಾರಿ ನನ್ನದು ಎಂದು ದ್ರಾಕ್ಷಾಯಿಣಿ ಅವರಿಗೆ ರಾಘಣ್ಣ ಭರವಸೆ ನೀಡಿದ್ದಾರೆ.