ನಮ್ಮ ಸುತ್ತ ಮುತ್ತ ಅಥವಾ ನಮ್ಮ ರಾಜ್ಯ, ದೇಶದ ಬಗ್ಗೆ ಅನೇಕ ಕುತೂಹಲಕಾರಿ ವಿಷಯಗಳಿವೆ. ಬೇರೆ ದೇಶಗಳಿಗಿಂತ ನಮ್ಮ ದೇಶದಲ್ಲಿ ವಿಭಿನ್ನ ಸ್ಥಳಗಳಿವೆ. ನಮ್ಮ ದೇಶದಲ್ಲಿ ಇರುವ ರಾಜ್ಯಗಳಲ್ಲಿ ಒಂದೊಂದು ರಾಜ್ಯ ಒಂದೊಂದು ವಿಶೇಷತೆಯನ್ನು ಹೊಂದಿದೆ. ನಮ್ಮ ದೇಶದ ಬಗ್ಗೆ ಕೆಲವು ಇಂಟರೆಸ್ಟಿಂಗ್ ಮಾಹಿತಿಯನ್ನು ಈ ಲೇಖನದಲ್ಲಿ ನೋಡೋಣ.
ನಮ್ಮ ಭಾರತ ಹಾಗೂ ಕರ್ನಾಟಕ ರಾಜ್ಯದ ಬಗ್ಗೆ ಅನೇಕ ಇಂಟರೆಸ್ಟಿಂಗ್ ವಿಷಯಗಳಿವೆ. ಇದೀಗ ನಾವು ಕೆಲವು ವಿಷಯಗಳ ಬಗ್ಗೆ ತಿಳಿದುಕೊಳ್ಳೋಣ. ನಮ್ಮ ಭಾರತ ದೇಶದ ಅತಿ ವಿಸ್ತಾರವಾದ ರಾಜ್ಯ ರಾಜಸ್ಥಾನ, ಈ ರಾಜ್ಯದ ರಾಜಧಾನಿ ಜೈಪುರ್ ಅಥವಾ ಪಿಂಕ್ ಸಿಟಿ, ಜೈಪುರಕ್ಕೆ ಪಿಂಕ್ ಸಿಟಿ ಎನ್ನುವರು. ನಮ್ಮ ದೇಶದ ಅತಿದೊಡ್ಡ ಜನಸಂಖ್ಯೆ ಇರುವ ರಾಜ್ಯ ಉತ್ತರಪ್ರದೇಶ. ನಮ್ಮ ದೇಶದ ಅತಿದೊಡ್ಡ ಮೃಗಾಲಯ ಕೊಲ್ಕತ್ತಾದಲ್ಲಿದೆ ಅಲ್ಲದೆ ಇಲ್ಲಿ ಅನೇಕ ಪ್ರವಾಸಿ ಸ್ಥಳಗಳಿವೆ, ನೇತಾಜಿ ಅವರ ಮನೆ ಹಾಗೂ ಅವರು ಬಳಸುತ್ತಿರುವ ವಸ್ತುಗಳಿವೆ.
ನಮ್ಮ ದೇಶದ ಅತಿದೊಡ್ಡ ರಸ್ತೆ ಗ್ರ್ಯಾಂಡ್ ಟ್ರಂಕ್. ನಮ್ಮ ದೇಶದ ಅತಿದೊಡ್ಡ ಮರುಭೂಮಿ ರಾಜಸ್ಥಾನದ ಥಾರ್ ಮರುಭೂಮಿ ಇದು 2 ಲಕ್ಷ ಚದರ ಕಿಮೀ ವಿಸ್ತಾರವನ್ನು ಹೊಂದಿದೆ. ಈ ಮರುಭೂಮಿಯ 85% ಭಾಗ ನಮ್ಮ ದೇಶದಲ್ಲಿದೆ 15% ಭಾಗ ಪಾಕಿಸ್ತಾನದಲ್ಲಿದೆ. ನಮ್ಮ ದೇಶದ ಅತಿದೊಡ್ಡ ಮಾನವ ನಿರ್ಮಿತ ಸರೋವರ ಗೋವಿಂದ ಸಾಗರ. ಈ ಸರೋವರ ಹಿಮಾಚಲ ಪ್ರದೇಶದಲ್ಲಿದೆ ಇದು ಮಾನವ ನಿರ್ಮಿತ ಸರೋವರವಾಗಿದೆ. ನಮ್ಮ ದೇಶದ ಅತಿ ಉದ್ದವಾದ ರಾಷ್ಟ್ರೀಯ ಹೆದ್ದಾರಿ ಎನ್ ಎಚ್ 7. ರಸ್ತೆ ಜಾಲದಲ್ಲಿ ನಮ್ಮ ದೇಶ ಎರಡನೆ ಸ್ಥಾನದಲ್ಲಿದೆ, ಎನ್ ಎಚ್ 7 ನಮ್ಮ ದೇಶದ ಉದ್ದವಾದ ರಾಷ್ಟ್ರೀಯ ಹೆದ್ದಾರಿ ಆಗಿದೆ.
ನಮ್ಮ ದೇಶದ ಅತಿ ಚಿಕ್ಕ ರಾಜ್ಯ ಗೋವಾ. ಈ ರಾಜ್ಯಕ್ಕೆ ಇಂದಿನ ಯುವ ಪೀಳಿಗೆಯವರು ತಮ್ಮ ರಜೆಯನ್ನು ಕಳೆಯಲು ಹೋಗುತ್ತಾರೆ. ಗೋವಾದಲ್ಲಿ ಹಾಲಿವುಡ್ ನಿಂದ ಕಾಲಿವುಡ್ ಸಿನಿಮಾ ಶೂಟಿಂಗ್ ನಡೆಯುತ್ತದೆ. ಗೋವಾ ರಾಜ್ಯದ ರಾಜಧಾನಿ ಪಣಜಿ. ಜನಸಂಖ್ಯೆಯಲ್ಲಿ ನಮ್ಮ ದೇಶದ ಅತಿ ಚಿಕ್ಕ ರಾಜ್ಯ ಸಿಕ್ಕಿಂ, ಈ ರಾಜ್ಯ ಪರ್ವತ ಹಾಗೂ ಶಿಖರಗಳಿಂದ ಆವೃತವಾಗಿದೆ. ವಿಶ್ವದ ಮೂರನೆ ಎತ್ತರವಾದ ಶಿಖರ ಕಾಂಚನಗಂಗಾ ಈ ರಾಜ್ಯದಲ್ಲಿದೆ. ನೇಪಾಳಿ ಭಾಷೆಯನ್ನು ಈ ರಾಜ್ಯದಲ್ಲಿ ಹೆಚ್ಚಾಗಿ ಮಾತನಾಡಲಾಗುತ್ತದೆ. ನಮ್ಮ ದೇಶದಲ್ಲಿ ಅತಿ ಹೆಚ್ಚು ಎಮ್ಮೆಗಳಿರುವ ರಾಜ್ಯ ಉತ್ತರ ಪ್ರದೇಶ. ಈ ರಾಜ್ಯವು ಜನಸಂಖ್ಯೆಯಲ್ಲಿ ದೊಡ್ಡ ರಾಜ್ಯವಾಗಿದೆ. ಈ ಮಾಹಿತಿ ಉಪಯುಕ್ತ ಮಾಹಿತಿಯಾಗಿದೆ. ಅನೇಕ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಈ ಮಾಹಿತಿಯ ಬಗ್ಗೆ ಪ್ರಶ್ನೆಗಳು ಬರುತ್ತದೆ. ಈ ಮಾಹಿತಿಯನ್ನು ತಪ್ಪದೆ ಎಲ್ಲರಿಗೂ ತಿಳಿಸಿ