ಗೌತಮಬುದ್ಧನನ್ನು ಏಷ್ಯಾದ ಬೆಳಕು ಎಂದು ಕರೆಯಲಾಗುತ್ತದೆ. ಇವನ ಸಿದ್ಧಾಂತಗಳು ಸತ್ಯದ ಆಧಾರವಾಗಿವೆ. ಇವನು ತನ್ನ ಶ್ರಮ ಮತ್ತು ತಪಸ್ಸಿನಿಂದ ಜ್ಞಾನೋದಯವನ್ನು ಪಡೆದಿದ್ದಾನೆ. ಇವನು ಶಾಕ್ಯ ಕುಲದವನಾಗಿದ್ದನು. ಇವನ ಶುದ್ಧೋದನ ಹಾಗೂ ತಾಯಿ ಮಾಯಾದೇವಿ. ಯಶೋಧರಾ ಎಂಬ ಪತ್ನಿಯಿದ್ದಳು. ಹಾಗೆಯೇ ರಾಹುಲ ಎಂಬ ಮಗನಿದ್ದನು. ಆದ್ದರಿಂದ ನಾವು ಇಲ್ಲಿ ಗೌತಮ ಬುದ್ಧ ನೀಡಿದ ಸಂದೇಶವನ್ನು ನಾವು ಇಲ್ಲಿ ತಿಳಿಯೋಣ.
ಒಬ್ಬ ಯುವಕ ದಿನನಿತ್ಯ ಬಂದು ಬುದ್ಧನ ಬೋಧನೆಗಳನ್ನು ಮತ್ತು ಪ್ರವಚನವನ್ನು ಕೇಳುತ್ತಿದ್ದನು. ಆದರೆ ಎಷ್ಟೋ ಬೋಧನೆಗಳನ್ನು ಕೇಳಿದರೂ ಅವನ ಮುಖದಲ್ಲಿ ಒಂದು ರೀತಿಯ ದುಃಖ ಮತ್ತು ಏನನ್ನೋ ಪ್ರಶ್ನೆ ಮಾಡಬೇಕೆಂಬ ಹಂಬಲವಿತ್ತು. ಇದನ್ನು ತಿಳಿದ ಬುದ್ಧನು ಒಂದು ದಿನ ಬೆಳಿಗ್ಗೆ ಕರೆದು ಏನು ಕೇಳಬೇಕೆಂದು ಇದ್ದೀಯೋ ಅದನ್ನು ಕೇಳು ಎಂದು ಹೇಳಿದನು. ಆಗ ಆ ಯುವಕ ನನ್ನ ಬಳಿ ಎಲ್ಲವೂ ಸರಿಯಾಗಿ ಇದ್ದಾಗ ಎಲ್ಲರೂ ಜೊತೆಗೆ ಇದ್ದರು. ಆದರೆ ಈಗ ನನ್ನ ಪರಿಸ್ಥಿತಿ ಬಹಳ ಭೀಕರವಾಗಿ ಇದೆ.
ನನ್ನ ಜೊತೆಯಲ್ಲಿ ಇರಬೇಕಾದವರು ನನ್ನ ಜೊತೆಯಲ್ಲಿ ಇಲ್ಲ. ಬಹಳ ದುಃಖ ಆಗುತ್ತದೆ. ನಾನು ಸಹಾಯ ಕೇಳುತ್ತೇನೆ ಎಂದು ಎಲ್ಲರೂ ನನ್ನ ಜೊತೆ ಮಾತನಾಡುವುದನ್ನು ನಿಲ್ಲಿಸಿದ್ದಾರೆ. ಈ ಒಂಟಿತನವನ್ನು ಸಹಿಸಲು ಆಗುತ್ತಿಲ್ಲ ಎಂದು ಬಿಕ್ಕಳಿಸಿ ಅಳುತ್ತಾನೆ. ಆಗ ಬುದ್ಧನು ಬಾಧೆ ಪಡಬೇಡ ಮಗು. ಜೀವನದಲ್ಲಿ ಕಷ್ಟ ನಷ್ಟ ಎಲ್ಲರಿಗೂ ಸಹಜ. ಸ್ವಲ್ಪ ತಾಳ್ಮೆಯಿಂದ ಇದ್ದರೆ ನಿನ್ನ ಕಷ್ಟ ನಿನಗೆ ನಿನ್ನವರು ಯಾರು ಎನ್ನುವುದನ್ನು ಸೂಚಿಸುತ್ತದೆ. ನಿನ್ನಲ್ಲಿ ಕಳೆದುಹೋದ ಧೈರ್ಯವನ್ನು ಮತ್ತೆ ತಂದುಕೋ ಎಂದು ಒಂದು ಕಥೆಯನ್ನು ಹೇಳಿದನು.
ಒಂದು ದೊಡ್ಡ ಬೃಹತ್ ಆಕಾರದ ಮರವಿತ್ತು. ಅದಕ್ಕೆ ಹಕ್ಕಿಗಳು ಗೂಡನ್ನು ಕಟ್ಟುತ್ತಿದ್ದವು. ಆದರೆ ಒಂದು ಬಾರಿ ಮರ ಒಣಗಿ ಹೋಯಿತು. ಆಗ ಗೂಡು ಕಟ್ಟಿದ ಹಕ್ಕಿಗಳೆಲ್ಲ ಹಾರಿ ಹೋಗಿ ನೋಡುವ ಜನರೆಲ್ಲ ಇದನ್ನು ಕಡಿದು ಕಟ್ಟಿಗೆ ಮಾಡಬೇಕು ಎಂದುಕೊಳ್ಳುತ್ತಿದ್ದರು. ಆಗ ಆ ಮರ ದೇವರನ್ನು ನನ್ನನ್ನು ಉಳಿಸು ಎಂದು ಬೇಡಿಕೊಳ್ಳುತ್ತಿತ್ತು. ನಂತರದಲ್ಲಿ ಮಳೆ ಬಂದು ಮತ್ತೆ ಚಿಗುರಿ ಮತ್ತೆ ಹಕ್ಕಿಗಳು ಗೂಡು ಕಟ್ಟಿದವು. ಜನರೆಲ್ಲ ನೆರಳಿನಲ್ಲಿ ವಿಶ್ರಾಂತಿ ಪಡೆದರು. ಇದರಿಂದ ತಿಳಿಯುವುದೇನೆಂದರೆ ಕಾಯಬೇಕು. ತಾಳ್ಮೆಯನ್ನು ಕಳೆದುಕೊಳ್ಲದಿದ್ದಾರೆ ಸುಖ ಖಂಡಿತವಾಗಿಯೂ ದೊರೆಯುತ್ತದೆ ಎಂದು ಬುದ್ಧ ಹೇಳಿದನು.