ಬೆಟ್ಟದ ನೆಲ್ಲಿಕಾಯಿಯನ್ನು ಭೂ ಲೋಕದ ಅಮೃತ ಎಂದು ಕರೆಯುತ್ತಾರೆ ಬೆಟ್ಟದ ನೆಲ್ಲಿಕಾಯಿಯಲ್ಲಿ ಅನೇಕ ಪೋಷಕಾಂಶಗಳನ್ನು ಒಳಗೊಂಡಿರುತ್ತದೆ ಅನೇಕ ರೋಗಗಳ ನಿರ್ಮೂಲನೆಗೆ ಬೆಟ್ಟದ ನೆಲ್ಲಿಕಾಯಿ ಜ್ಯೂಸ್ ರಾಮಬಾಣವಾಗಿದೆ ಹಿಂದಿನ ಕಾಲದಲ್ಲಿ ಹಿರಿಯರು ಬೆಟ್ಟದ ನೆಲ್ಲಿಕಾಯಿಯನ್ನು ಬಳಸುತ್ತಿದ್ದರು ಹಾಗಾಗಿ ಅನೇಕ ರೋಗಗಳಿಂದ ಮುಕ್ತರಾಗಿದ್ದರು ಬೆಟ್ಟದ ನೆಲ್ಲಿಕಾಯಿಯಲ್ಲಿ ವಿಟಮಿನ್ ಸಿ ಅಂಶ ಯಥೇಚ್ಛವಾಗಿದೆ
ಬೆಟ್ಟದ ನೆಲ್ಲಿಕಾಯಿ ನೋಡಲು ಸಣ್ಣವಾಗಿ ಕಂಡರೂ ಸಹ ಅನೇಕ ಉಪಯೋಗವನ್ನು ಹೊಂದಿದೆ ನಮ್ಮ ದೇಹದ ಆರೋಗ್ಯವನ್ನು ಕಾಪಾಡುತ್ತದೆ .ಎಷ್ಟೇ ಒಣಗಿದರೂ ಅದರಲ್ಲಿನ ವಿಟಮಿನ್ ಸಿ ಅಂಶಕ್ಕೆ ಯಾವುದೇ ರೀತಿಯ ತೊಂದರೆಯೂ ಆಗುವುದಿಲ್ಲ ಕೂದಲು ಬಿಳಿಯಾಗುವ ಸಮಸ್ಯೆಯನ್ನು ನೆಲ್ಲಿಕಾಯಿ ಜ್ಯೂಸ್ ನಿವಾರಣೆ ಮಾಡುತ್ತದೆ ಇದನ್ನು ಪ್ರತಿನಿತ್ಯವೂ ಸೇವನೆ ಮಾಡುವ ಮೂಲಕ ಅನೇಕ ಸಮಸ್ಯೆಯಿಂದ ನಿವಾರಣೆ ಹೊಂದಬಹುದು ನಾವು ಈ ಲೇಖನದ ಮೂಲಕ ಬೆಟ್ಟದ ನೆಲ್ಲಿಕಾಯಿ ಜ್ಯೂಸ್ ನ ಉಪಯೋಗ ಮತ್ತು ಮಾಡುವ ವಿಧಾನದ ಬಗ್ಗೆ ತಿಳಿದುಕೊಳ್ಳೋಣ.
ಬೆಟ್ಟದ ನೆಲ್ಲಿಕಾಯಿ ಭೂ ಲೋಕದ ಅಮೃತವಾಗಿದೆ ಬೆಟ್ಟದ ನೆಲ್ಲಿಕಾಯಿ ಯಲ್ಲಿ ವಿಟಮಿನ್ ಸಿ ಅಂಶ ಹೇರಳವಾಗಿ ಇರುತ್ತದೆಹಾಗೆಯೇ ಕಬ್ಬಿಣಾಂಶ ಹಾಗೂ ಕ್ಯಾಲ್ಸಿಯಂ ಅಂಶ ಸಹ ಇರುತ್ತದೆ ಮಿನರಲ್ಸ್ ಗಳು ಹೇರಳವಾಗಿ ಇರುತ್ತದೆ ಆಂಟಿ ಆಕ್ಸಿಡೆಂಟ್ ಪ್ರಮಾಣ ಸಹ ಅಧಿಕವಾಗಿ ಇರುತ್ತದೆ ಫೈಬರ್ ಅಂಶ ಸಹ ಇರುತ್ತದೆ ಹಿಂದಿನ ಕಾಲದಿಂದಲೂ ನೆಲ್ಲಿಕಾಯಿಯನ್ನು ಉಪ್ಪಿನಕಾಯಿ ಮಾಡುತಿದ್ದರು ಆದರೆ ಇತ್ತೀಚಿನ ಕೆಮಿಕಲ್ ಹಾಕಿದ ಉಪ್ಪಿನ ಕಾಯಿಯನ್ನು ತಿನ್ನಬಾರದು
ನೆಲ್ಲಿಕಾಯಿ ಸೇವನೆಯಿಂದ ಜೀರ್ಣಾಂಗ ವ್ಯವಸ್ಥೆ ಸುಗಮವಾಗಿ ಇರುತ್ತದೆ. ರಕ್ತ ಶುದ್ಧಿಯಾಗುತ್ತದೆ ಕೊಲೆಸ್ಟ್ರಾಲ್ ಮಟ್ಟ ಕಡಿಮೆ ಆಗುತ್ತದೆ ಮೂರು ತಿಂಗಳ ಕಾಲ ಬೆಟ್ಟದ ನೆಲ್ಲಿಕಾಯಿ ಜ್ಯೂಸ್ ಸೇವನೆ ಮಾಡುವುದರಿಂದ ಹೊಟ್ಟೆಯ ಬೊಜ್ಜು ಕರಗುತ್ತದೆ ಮಹಿಳೆಯರಿಗೆ ಹೊಟ್ಟೆಯ ಬೊಜ್ಜು ಹೆಚ್ಚಾಗಿ ಕಂಡು ಬರುತ್ತದೆ ಹಾಗಾಗಿ ಬೆಟ್ಟದ ನೆಲ್ಲಿಕಾಯಿಯ ಜ್ಯೂಸ್ ಕುಡಿಯುವ ಮೂಲಕ ಬೊಜ್ಜನ್ನು ಕರಗಿಸುತ್ತದೆ ಹಾಗೆಯೇ ಇದರ ಸೇವನೆ ಯಿಂದ ನರನಾಡಿಗಳಲ್ಲಿ ಉಂಟಾಗುವ ಸಮಸ್ಯೆ ದೂರ ಆಗುತ್ತದೆ.
ನರಗಳಲ್ಲಿ ಪೋಷಕಾಂಶಗಳ ಕೊರತೆಯಿಂದ ಅನೇಕ ಸಮಸ್ಯೆಗಳು ಕಂಡು ಬರುತ್ತದೆ ಇತ್ತೀಚಿನ ದಿನಗಳಲ್ಲಿ ತುಂಬಾ ಜನರು ನರಗಳ ಸಮಸ್ಯೆಯಿಂದ ಬಳಲುತ್ತಿದ್ದಾರೆ ನೆಲ್ಲಿಕಾಯಿಯನ್ನು ಮೆದುಳಿನ ಜೀವಕೋಶಗಳನ್ನು ಕ್ರಿಯಾ ಶೀಲ ಗೊಳಿಸುವ ಅಂಶ ಇರುತ್ತದೆ ಆಯುರ್ವೇದದಲ್ಲಿ ಬಲ್ಯ ಎಂದರೆ ಬಲವನ್ನು ವೃದ್ಧಿಸುವುದು ಹಾಗೆಯೇ ಭ್ರುಮಣ ಅಂದರೆ ಬೆಳವಣಿಗೆಯನ್ನು ಮಾಡುತ್ತದೆ ಹಾಗೆಯೇ ಲೇಖನ ಎಂದರೆ ಶುದ್ಧೀಕರಣ ಮಾಡುವುದು ಆಗಿದೆ
ಕೆಲವೊಂದು ನೆಲ್ಲಿಕಾಯಿಯ ಔಷಧದಲ್ಲಿ ಬಲ್ಯ ಗುಣವನ್ನು ಕಾಣಬಹುದಾಗಿದೆ. ಇನ್ನು ಕೆಲವು ಔಷಧದಲ್ಲಿ ಭ್ರುಮಣ ಮತ್ತು ಲೇಖನ ಗುಣವನ್ನು ಕಾಣಬಹುದಾಗಿದೆ ಈ ಮೂರು ಗುಣ ಹೊಂದಿರುವುದು ಬೆಟ್ಟದ ನೆಲ್ಲಿಕಾಯಿ ಹಾಗೆಯೇ ಬುದು ಕುಂಬಳ ಕಾಯಿ ಹಾಗೂ ಸೋರೆ ಕಾಯಿಯಲ್ಲಿ ಸಹ ಇರುತ್ತದೆ ಶರೀರದ ಅಂಗಾಂಗವನ್ನು ಸರಿಪಡಿಸುವ ಶಕ್ತಿ ಸಹ ಇರುತ್ತದೆ ಬೆಟ್ಟದ ನೆಲ್ಲಿಕಾಯಿಯ ಜ್ಯೂಸ್ ಅನ್ನು ಕುಡಿಯುವುದರಿಂದ ರಕ್ತ ಬಹು ಬೇಗನೆ ಶುದ್ದಿ ಆಗುತ್ತದೆ ಮಲಬದ್ದತೆ ಗ್ಯಾಸ್ಟ್ರಿಕ್ ಇರುವರಿಗೆ ಇದೊಂದು ಒಳ್ಳೆಯ ಮನೆ ಮದ್ದು.
ಕರುಳನ್ನು ಸ್ವಚ್ಚಗೊಳಿಸುತ್ತದೆ ಹಾಗೆಯೇ ಬೆಟ್ಟದ ನೆಲ್ಲಿಕಾಯಿ ಜ್ಯೂಸ್ ಕುಡಿಯುದರಿಂದ ಮೆದುಳಿನ ಸಮಸ್ಯೆಯಿಂದ ದೂರ ಇರಬಹುದು ಮತ್ತು ಎಲ್ಲ ಹಾರ್ಮೋನನ್ನು ಸಮತೋಲನದಲ್ಲಿ ಇಡುತ್ತದೆ ಮಾಂಸ ಖಂಡಗಳ ಸಮಸ್ಯೆ ಯನ್ನು ನಿವಾರಿಸುತ್ತದೆ ನರಗಳ ದೌರ್ಬಲ್ಯ ದಿಂದ ಬರುವ ಹಲವು ಸಮಸ್ಯೆಯನ್ನು ದೂರ ಇರಿಸುತ್ತದೆ ಹಾಗೆಯೇ ಆಯಸ್ಸನ್ನು ವೃದ್ದಿಗೊಳಿಸುತ್ತದೆ ನರಗಳನ್ನು ಕ್ರೀಯಾ ಶೀಲ ಗೊಳಿಸುತ್ತದೆ.
ಶ್ವಾಸ ಕೋಶವನ್ನು ಬಲಿಷ್ಠಗೊಳಿಸುವ ಶಕ್ತಿ ಬೆಟ್ಟದ ನೆಲ್ಲಿಕಾಯಿ ಜ್ಯೂಸ್ ಗೆ ಇರುತ್ತದೆ ಹಾಗೆಯೇ ಮೂಳೆಗಳು ಸವಕಳಿ ಬರುವುದನ್ನು ತಪ್ಪಿಸುತ್ತದೆ ಚರ್ಮದ ಸಮಸ್ಯೆ ಬರುವುದು ಇಲ್ಲ ಹಾಗೆಯೇ ಕಣ್ಣುಗಳ ಸಮಸ್ಯೆಯನ್ನು ದೂರ ಮಾಡುವ ಶಕ್ತಿ ಬೆಟ್ಟದ ನೆಲ್ಲಿಕಾಯಿಯ ಜ್ಯೂಸ್ ಅಲ್ಲಿ ಇರುತ್ತದೆ ಬೆಟ್ಟದ ನೆಲ್ಲಿಕಾಯಿಯ ಮಲಬದ್ದತೆ ಸಮಸ್ಯೆಯನ್ನು ನಿವಾರಣೆ ಮಾಡುತ್ತದೆ ಮೂಲವ್ಯಾಧಿಯನ್ನು ನಿವಾರಣೆ ಮಾಡುವ ಗುಣ ಇರುತ್ತದೆ .
ಕರುಳಿನಲ್ಲಿ ಸಂಗ್ರಹವಾದ ಮಲ ವನ್ನು ನಿವಾರಣೆ ಮಾಡಲು ಬೆಟ್ಟದ ನೆಲ್ಲಿಕಾಯಿ ಜ್ಯೂಸ್ ಒಂದು ಶಾಶ್ವತ ಪರಿಹಾರವಾಗಿದೆ ಹಾಗೆಯೇ ಮುಖದ ಕಾಂತಿಯನ್ನು ಹೆಚ್ಚಿಸುತ್ತದೆ ಮೊಡವೆ ಮುಂತಾದ ಮುಖದ ಸಮಸ್ಯೆಯನ್ನು ಹೋಗಲಾಡಿಸಿ ಮುಖವನ್ನು ಕಾಂತಿಯುತವಾಗಿ ಇಡುತ್ತದೆ ಜ್ಯೂಸ್ ಮಾಡಲು ನಾಲ್ಕರಿಂದ ಐದು ಬೆಟ್ಟದ ನೆಲ್ಲಿಕಾಯಿಯನ್ನು ತೆಗೆದುಕೊಳ್ಳಬೇಕು ಮೊದಲು ನೆಲ್ಲಿಕಾಯಿಯ ಬೀಜವನ್ನು ತೆಗೆದು ಅರ್ಧ ಲೋಟ ನೀರಿನಲ್ಲಿ ಮಿಕ್ಸಿಗೆ ಹಾಕಬೇಕು.
ಪೇಸ್ಟ್ ತರ ಆಗುತ್ತದೆ ಅದನ್ನು ಕಾಟನ್ ಬಟ್ಟೆಯಲ್ಲಿ ಹಾಕಿ ಹಿಂಡಬೇಕು ಬಂದ ರಸಕ್ಕೆ ಒಂದು ಲೋಟ ನೀರನ್ನು ಸೇರಿಸಬೇಕು ಅದಕ್ಕೆ ಸೈದವ ಲವಣ ಅಥವಾ ಜೇನುತುಪ್ಪವನ್ನು ಸೇರಿಸಿ ಬೆಳ್ಳಿಗೆ ಖಾಲಿ ಹೊಟ್ಟೆಯಲ್ಲಿ ಸೇವನೆ ಮಾಡಬೇಕು ಹೀಗೆ ಮೂರು ತಿಂಗಳು ಬೆಟ್ಟದ ನೆಲ್ಲಿಕಾಯಿ ಜ್ಯೂಸ್ ಅನ್ನು ಕುಡಿಯುವ ಮೂಲಕ ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು ಅಷ್ಟೇ ಅಲ್ಲದೆ ಅನೇಕ ರೋಗಗಳಿಂದ ಮುಕ್ತರಾಗಬಹುದು.