ಎರಡು ವರ್ಷಗಳ ಹಿಂದೆ ಕೊರೋನ ವೈರಸ್ ಎಂಬ ಹೊಸ ಖಾಯಿಲೆಯೊಂದು ಜಗತ್ತಿನ ಬಹುತೇಕ ದೇಶಗಳಲ್ಲಿ ಕಾಣಿಸಿಕೊಂಡು ಹೆಚ್ಚಿನ ಸಂಖ್ಯೆಯ ಜನರು ಸಾವನ್ನಪ್ಪಿದ್ದರು. ನಮ್ಮ ದೇಶದಲ್ಲಿ ವೇಗವಾಗಿ ಹರಡುವ ಮೂಲಕ ಅನೇಕ ಜನರು ಸತ್ತರು ಅಲ್ಲದೆ ನಮ್ಮ ಜೀವನ ಬದಲಾಗಿ ಹೋಯಿತು. ಈ ವೈರಸ್ ಚೀನಾ ದೇಶದಲ್ಲಿ ಮೊದಲು ಕಾಣಿಸಿಕೊಂಡಿದ್ದು ಇದಕ್ಕೆ ಕಾರಣ ಚೀನಾ ದೇಶವೆಂದು ಬಹುತೇಕ ಸಾಬೀತಾಗಿದೆ. ಈಗ ಮತ್ತೊಂದು ವೈರಸ್ ಬಗ್ಗೆ ಚೀನಾ ವಿಜ್ಞಾನಿಗಳು ಭೀಕರ ಮಾಹಿತಿಯನ್ನು ತಿಳಿಸಿದ್ದಾರೆ ಅದೇನೆಂದು ಈ ಲೇಖನದಲ್ಲಿ ನೋಡೋಣ.
ಚೀನಾದ ವುಹಾನ್ ಇನ್ಸ್ಟಿಟ್ಯೂಟ್ ವಿಜ್ಞಾನಿಗಳು ಹೊಸ ಬಾಂಬ್ ಸಿಡಿಸಿದ್ದು ದಕ್ಷಿಣ ಆಫ್ರಿಕಾದಲ್ಲಿ ಪತ್ತೆಯಾಗಿರೊ ನಿಯೋ-ಕೊವ್ ಎಂಬ ಹೊಸ ಕೋವಿಡ್ ವೈರಸ್ ಅತ್ಯಂತ ಮಾರಣಾಂತಿಕವಾಗಿದೆ ಎಂದು ಹೇಳಿದ್ದಾರೆ. ಈ ವೈರಸ್ ಮಾರಣಾಂತಿಕ ಮಾತ್ರವಲ್ಲದೆ ಅತ್ಯಂತ ವೇಗವಾಗಿ ಹರಡುವ ಸಾಮರ್ಥ್ಯವನ್ನು ಹೊಂದಿದೆ ಎಂದು ಅವರು ತಿಳಿಸಿದ್ದಾರೆ. ದಕ್ಷಿಣ ಆಫ್ರಿಕಾದ ಬಾವಲಿಗಳಲ್ಲಿ ಈ ವೈರಸ್ ಕಾಣಿಸಿಕೊಂಡಿದೆ, ಈ ವೈರಸ್ ಪ್ರಾಣಿಗಳಲ್ಲಿ ಹರಡುವ ಗುಣವನ್ನು ಹೊಂದಿದೆ ಆದರೆ ಇದರಲ್ಲಿ ಒಂದೆ ಒಂದು ವೈರಸ್ ರೂಪಾಂತರವಾದರೂ ಸಾಕು ಮನುಷ್ಯರಿಗೆ ಈ ಸೋಂಕು ತಗುಲಬಲ್ಲದು ಎಂದು ವುಹಾನ್ ವಿಜ್ಞಾನಿಗಳು ಹೇಳಿದ್ದಾರೆ.
ಸದ್ಯಕ್ಕೆ ಈ ವೈರಸ್ ಮನುಷ್ಯರಲ್ಲಿ ಕಂಡು ಬಂದಿಲ್ಲ ಆದರೆ ಒಂದೆ ಒಂದು ಮ್ಯೂಟೇಷನ್ ಆದರೂ ಕತೆ ಮುಗಿದಂತೆ ಎಂದು ಚೀನಾದ ವಿಜ್ಞಾನಿಗಳು ಬಾಂಬ್ ಸಿಡಿಸಿದ್ದಾರೆ. ಕೋವಿಡ್-19 ವೈರಸ್ ಹರಡುವ ರೀತಿಗೂ ಈ ನಿಯೋ-ಕೋವಿಡ್ ಹರಡುವ ರೀತಿಗೂ ಸಾಕಷ್ಟು ವ್ಯತ್ಯಾಸವಿದೆ ಎಂಬ ಮಾಹಿತಿ ಲಭ್ಯವಾಗಿದೆ. ಮನುಷ್ಯನಲ್ಲಿರುವ ಎಸಿಇ-2 ರಿಸೆಪ್ಟರ್ಗೆ ಈ ವೈರಸ್ ವಿಭಿನ್ನವಾಗಿ ಬೈಂಡ್ ಆಗುತ್ತೆ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ. ಹೀಗಾಗಿ ಈಗ ಯಾರಿಗಾದರೂ ಕೋವಿಡ್ ಸೋಂಕು ಬಂದು ಹೋಗಿ ರೋಗನಿರೋಧಕ ಶಕ್ತಿ ಬೆಳೆದಿದ್ದರೂ ಹಾಗೂ ವ್ಯಾಕ್ಸಿನ್ ಪಡೆದು ಆ್ಯಂಟಿಬಾಡಿಗಳನ್ನು ಹೊಂದಿದ್ದರೂ ಹೊಸ ಕೊರೋನ ಸೋಂಕು ತಡೆಗಟ್ಟಲು ಸಾಧ್ಯವಿಲ್ಲ ಎಂಬ ಭಯಾನಕ ಸುದ್ದಿಯೊಂದನ್ನು ಚೀನಿ ವಿಜ್ಞಾನಿಗಳು ತಿಳಿಸಿದ್ದಾರೆ.
ನಿಯೋ ಕೋವ್ನಲ್ಲಿ ಮರ್ಸ್-ಕೋವ್ ವೈರಸ್ನಲ್ಲಿ ಇರುವಂಥ ಮಾರಣಾಂತಿಕ ಗುಣವಿದೆ ಎಂದಿರುವ ಚೀನಿ ವಿಜ್ಞಾನಿಗಳು ಇದರಲ್ಲಿ ಮೂರು ಜನ ಸೋಂಕಿಗೆ ಒಳಗಾದವರಲ್ಲಿ ಒಬ್ಬರು ಸಾಯುತ್ತಾರೆ. ಮರ್ಸ್-ಕೋವ್ ಜೊತೆಗೆ ಕೋವಿಡ್-19ನಷ್ಟು ವೇಗವಾಗಿಯೂ ಇದು ಹರಡುವ ಸಾಮರ್ಥ್ಯ ಹೊಂದಿದೆ. ಹೀಗಾಗಿ ಇದು ನಿಜಕ್ಕೂ ಅತ್ಯಂತ ಮಾರಣಾಂತಿಕವಾಗಲಿದೆ ಎಂದು ಚೀನಿ ವಿಜ್ಞಾನಿಗಳು ತಿಳಿಸಿದ್ದಾರೆ. ಇಂದು ಇಡಿ ಜಗತ್ತನ್ನೆ ತಲೆಕೆಳಗಾಗಿಸಿರುವ ಕೊರೋನ ವೈರಸ್ ಚೀನಾದ ವುಹಾನ್ ಲ್ಲ್ಯಾಬ್ ನಲ್ಲಿಯೆ ಹುಟ್ಟಿದ್ದು ಅನ್ನುವ ವಾದ ಇಂದಿಗೂ ಬಲವಾಗಿದೆ. ಇದಕ್ಕೆ ಪೂರಕ ಅನ್ನುವಂತೆ ಹೊಸ ವೈರಸ್ ಬಗ್ಗೆ ಚೀನಿ ವಿಜ್ಞಾನಿಗಳು ಮಾತನಾಡುತ್ತಿದ್ದಾರೆ ಅಷ್ಟೆ ಅಲ್ಲದೆ ಒಂದೆ ಒಂದು ಮ್ಯೂಟೇಷನ್ ಸಾಕು ಅಂತಿದ್ದಾರೆ. ಹೀಗಾಗಿ ಅವರೆ ಏನಾದರೂ ಆ ಮ್ಯೂಟೇಷನ್ ಅನ್ನು ಲ್ಯಾಬ್ ನಲ್ಲಿ ಮಾಡಿ ಪ್ರಯೋಗ ಮಾಡಿದ್ದಾರಾ ಎಂಬ ಪ್ರಶ್ನೆ ಇದೀಗ ಕಾಡುತ್ತಿದೆ.
ಬೈ ಮಿಸ್ಟೇಕ್ ಆಗಿ ಅಥವಾ ಬೇಕಂತಲೆ ಆ ವೈರಸ್ ಅನ್ನು ಹೊರಗೆ ಬಿಟ್ಟರೆ ಏನು ಗತಿ ಹಾಗೂ ಈ ಮೂಲಕ ಚೀನಾ ಹೊಸ ಹುನ್ನಾರ ಏನಾದರೂ ಮಾಡುತ್ತಿದೆಯಾ ಅನ್ನುವ ಆತಂಕ ಭರಿತ ಪ್ರಶ್ನೆ ಸಹಜವಾಗಿ ಜನರಲ್ಲಿ ಈಗ ಮೂಡುತ್ತಿದೆ. ಕೊರೋನ ವೈರಸ್ ನ ಪರಿಣಾಮದಿಂದ ಇದೀಗ ಸುಧಾರಿಸಿಕೊಳ್ಳುತ್ತಿದ್ದೇವೆ. ಈಗ ಮತ್ತೊಂದು ಅಂತದ್ದೆ ವೈರಸ್ ನಮ್ಮನ್ನು ಕಾಡುವ ಭೀತಿಯಲ್ಲಿ ಬದುಕಬೇಕಾಗಿದೆ. ಒಟ್ಟಾರೆಯಾಗಿ ಚೀನಾ ವಿಜ್ಞಾನಿಗಳು ಹೇಳುವ ವೈರಸ್ ಹೊರಗೆ ಬಾರದಿರಲಿ ಭೂಮಿ ಮೇಲಿನ ಯಾವುದೆ ಜೀವ ಸಂಕುಲಕ್ಕೆ ತೊಂದರೆಯಾಗದಿರಲಿ ಎಂದು ಆಶಿಸೋಣ.