ಇಂದಿನ ದಿನಮಾನಗಳಲ್ಲಿ ಎಲ್ಲರೂ ಕಂಪನಿ ಮತ್ತು ನಗರ ಪ್ರದೇಶಗಳಲ್ಲಿ ಕೆಲಸ ಮಾಡಲು ಇಚ್ಛಿಸುತ್ತಾರೆ ಹಾಗೆಯೇ ಎಲ್ಲರೂ ತಿಳಿದುಕೊಳ್ಳಬೇಕಾದ ವಿಷಯವೇನೆಂದರೆ ರೈತರಿಂದಲೇ ಇಂದು ನಾವು ಬದುಕಿದ್ದೇವೆ ರೈತರಿಲ್ಲ ಎಂದರೆ ನಮ್ಮ ಜೀವನ ನಶ್ವರ ಕೃಷಿ ಚಟುವಟಿಕೆಯ ಜೊತೆ ರೈತ ಹೈನುಗಾರಿಕೆ ಮಾಡುವುದನ್ನು ಕಲಿತರು ಇದರಿಂದ ರೈತರಿಗೆ ಹೆಚ್ಚು ಆದಾಯಗಳಿಸುತ್ತಾರೆ.
ಹೈನುಗಾರಿಕೆ ಮಾಡುವುದರಿಂದ ಬರಿ ಹಾಲು ಮಾರಾಟ ಮಾಡುವುದು ಒಂದೇ ಅಲ್ಲದೆ ಗೊಬ್ಬರ ಮತ್ತು ಹಸುಗಳನ್ನು ಮಾರಾಟ ಮಾಡುವ ಮೂಲಕ ರೈತರು ಸಹ ಆದಾಯಗಳಿಸುವಂತೆ ಆಗಿದೆ ಬಹುಪಾಲು ಹೈನು ಕೇಂದ್ರಗಳು ತಮ್ಮ ಹಸುಗಳಿಂದ ಹುಟ್ಟಿದ ಗಂಡು ಕರುಗಳನ್ನು ಮಾರಾಟಮಾಡುತ್ತದೆ ಕೃಷಿಯಾಧರಿತ ಗ್ರಾಮೀಣ ಪದೇಶದಲ್ಲಿ ಕಡಿಮೆ ಜಮೀನು ಮತ್ತು ಸಣ್ಣ ಉದ್ದಿಮೆಗಳಲ್ಲಿ ಹೆಚ್ಚು ಹೈನುಗಾರಿಕೆಯನ್ನು ಮಾಡುವ ಮೂಲಕ ಹೆಚ್ಚು ಆದಾಯಗಳಿಸಬಹುದು ನಾವು ಈ ಲೇಖನದ ಮೂಲಕ ಹೈನುಗಾರಿಕೆ ಬಗ್ಗೆ ತಿಳಿದುಕೊಳ್ಳೋಣ.
ಹೈನುಗಾರಿಕೆ ಎಂಬುದು ಒಂದು ರೀತಿಯಲ್ಲಿ ಹಸುವನ್ನು ಮಗು ನೋಡಿಕೊಂಡ ಹಾಗೆ ಕರ್ತವ್ಯ ನಿರ್ವಹಿಸುವ ಮೂಲಕ ಆದಾಯವನ್ನು ಪಡೆಯಬಹುದು ಎಷ್ಟು ಶ್ರಮ ವಹಿಸುತ್ತಾರೆ ಅಷ್ಟು ಆದಾಯವನ್ನು ಗಳಿಸಬಹುದು ಹರೀಶ ಎನ್ನುವರು ಹೈನುಗಾರಿಕೆಯನ್ನು ಮಾಡುತ್ತಿದ್ದು ಸುಮಾರು ಆರು ವರ್ಷದಿಂದ ಹೈನುಗಾರಿಕೆಯನ್ನು ಮಾಡುತ್ತಿದ್ದು ಅವರು ಡಿಪ್ಲೊಮೊ ಮಾಡಿ ಹೈನುಗಾರಿಕೆ ವೃತ್ತಿಯಲ್ಲಿ ತೊಡಗಿದ್ದಾರೆ ಮೊದಲು ಶೇಡ್ ಗಳನ್ನೂ ಮಾಡಿ ಹಸು ಸಾಕಾಣಿಕೆಯನ್ನು ಮಾಡಿದರು ಈಗ ಹತ್ತು ದೊಡ್ಡ ಹಸುಗಳನ್ನು ಸಾಕಿದ್ದಾರೆ ಹಾಗೆಯೇ ಒಟ್ಟು ಹದಿನೈದು ಹಸುಗಳನ್ನು ಸಾಕಿದ್ದಾರೆ ಹಾಗೆಯೇ ಬೇಳ್ಳಿಗ್ಗೆ ಮತ್ತು ಸಂಜೆಯಿಂದ ಸುಮಾರು ಎಂಬತ್ತು ಲೀಟರ್ ನಸ್ಟು ಹಾಲನ್ನು ಕರೆಯುತ್ತಾರೆ
ಎರಡರಿಂದ ಮೂರು ಲಕ್ಷದವರೆಗೆ ಶೇಡ್ ನಿರ್ಮಿಸಲು ಖರ್ಚು ಮಾಡಿದ್ದಾರೆ ಹಾಗೂ ಹೈನುಗಾರಿಕೆ ಮಾಡುವವರು ಸ್ವಚ್ಛತೆಯ ಬಗ್ಗೆ ಗಮನ ಹರಿಸಬೇಕು ಹಾಗೆಯೇ ಹೈನುಗಾರಿಕೆ ಮಾಡಲು ಮೊದಲು ಕೆಲಸದ ಬಗ್ಗೆ ಪ್ರೀತಿ ಇದ್ದಾಗ ಮಾತ್ರ ಹೈನುಗಾರಿಕೆಯಿಂದ ಲಾಭಗಳಿಸುತ್ತದೆ ಮೇವು ಮತ್ತು ನೀರನ್ನು ಸರಿಯಾದ ಸಮಯಕ್ಕೆ ನೀಡಬೇಕುbಹದಿನೈದು ದಿನಕ್ಕೊಮ್ಮೆ ಮೂವತ್ತು ಸಾವಿರದ ವರೆಗೆ ಆದಾಯವನ್ನು ಗಳಿಸುತ್ತಾರೆ.
ಹರೀಶ ಅವರು ಹೈನುಗಾರಿಕೆಯನ್ನು ತಂದೆ ತಾಯಿಗಳು ಸೇರಿ ಹೈನುಗಾರಿಕೆಯನ್ನು ಮಾಡುತ್ತಿದ್ದಾರೆ ಹಾಗೆಯೇ ದಿನಕ್ಕೆ ಎಂಬತ್ತು ಲೀಟರ್ ಹಾಲು ಕರೆದರೆ ಅದರ ಅರ್ಧದಷ್ಟು ಆದಾಯ ಬರುತ್ತದೆ ಹಾಗೆಯೇ ಹೈನುಗಾರಿಕೆ ಮಾಡುವುದರಿಂದ ಹಾಲು ಮಾರಾಟ ಮಾಡಬಹುದು ಹಾಗೆಯೇ ಗೊಬ್ಬರ ಸಹ ಮಾರಾಟ ಮಾಡುವ ಮೂಲಕ ಆದಾಯಾಗಳಿಸಬಹುದು ಹಾಗೆಯೇ ಹರೀಶ ರವರು ವಾರ್ಷಿಕವಾಗಿ ಎಪ್ಪತ್ತು ಸಾವಿರದವರೆಗೆ ಗೊಬ್ಬರದಿಂದ ಆದಾಯಗಳಿಸುತ್ತಿದ್ದಾರೆ ಹಾಗೆಯೇ ಗಂಡು ಕರುವನ್ನು ಮಾರಾಟ ಮಾಡುತ್ತಾರೆ ಇದರಿಂದಲೂ ಸಹ ಅದಾಯಾಗಳಿಸುತ್ತಾರೆ
ಹೆಚ್ಚು ಶ್ರಮವಹಿಸಿ ಕೆಲಸ ಮಾಡುವುದರ ಮೂಲಕ ಅದಾಯಗಳಿಸಬಹುದು ಎಲ್ಲ ಹಸುವಿಗೆ ಕೆಚ್ಚಲು ಬಾಹು ಕಂಡು ಬರುವುದಿಲ್ಲ ಮತ್ತು ರೋಗ ನಿರೋಧಕ ಶಕ್ತಿ ಕಡಿಮೆ ಇದ್ದರೆ ಕೆಚ್ಚಲು ಬಾಹು ಕಂಡುಬರುತ್ತದೆ ಮತ್ತು ಹಾಲು ಕರೆಯುವಾಗ ಪೂರ್ತಿ ಹಾಲನ್ನು ಕರೆಯಬೇಕು ಇಲ್ಲವಾದರೆ ಕೆಚ್ಚಲು ಬಾಹು ಕಂಡುಬರುತ್ತದೆ ಮತ್ತು ಆಕಳು ಮಲಗುವ ಸ್ಥಳ ಸ್ವಚ್ಚವಾಗಿರಬೇಕು.
ಒಂದು ಹಸುವಿಗೆ ನಲವತ್ತರಿಂದ ಐವತ್ತು ಕೆಜಿಯಷ್ಟು ಮೇವನ್ನು ನೀಡಬೇಕು ಹಸು ಕರು ಹಾಕಿದ ಎರಡೂವರೆ ತಿಂಗಳಿಗೇ ಹಿಟಿ ಬರುತ್ತದೆ ಒಂದು ವೇಳೆ ಎರಡೂವರೆ ಮೂರು ತಿಂಗಳಿಗೆ ಹಿಟಿ ಬರಲಿಲ್ಲವೆಂದು ಖನಿಜ ಮಿಶ್ರಣವನ್ನು ಹಸುವಿಗೆ ನೀಡುವುದರಿಂದ ಹಿಟಿ ಬರುತ್ತದೆ ಹೈನುಗಾರಿಕೆಯಿಂದ ಉತ್ತಮ ಜೀವನ ನಡೆಸಲು ಸಾಧ್ಯವಾಗುತ್ತದೆ ಹೈನುಗಾರಿಕೆ ಮಾಡಲು ಸ್ವಲ್ಪವಾದರು ಜಮೀನು ಇರಬೇಕು ಏಕೆಂದರೆ ಹಸುವಿಗೆ ಬೇಕಾದ ಹುಲ್ಲನ್ನು ಬೆಳೆಯಬಹುದು
ಹಾಗೆಯೇ ನೀರಿನ ವ್ಯವಸ್ಥೆಯು ಇರಬೇಕು ರಸ್ತೆ ವ್ಯವಸ್ಥೆ ಸಹ ಚೆನ್ನಾಗಿ ಇದ್ದರೆ ಹೈನುಗಾರಿಕೆ ಮಾಡಲು ಯೋಗ್ಯವಾಗುತ್ತದೆ ಅನುಕೂಲಕ್ಕೆ ತಕ್ಕಂತೆ ಶೇಡ್ ಅನ್ನು ಮಾಡಿಕೊಳ್ಳಬಹುದು ಮತ್ತು ಶೇಡ್ ನಲ್ಲಿ ಗಾಳಿ ಮತ್ತು ಬೆಳಕು ಬೀಳಬೇಕು. ಹಸುವಿಗೆ ಬುಸಾ ಮತ್ತು ಹಿಂಡಿಯನ್ನು ಕಾಲಕಾಲಕ್ಕೆ ನೀಡಬೇಕು ಹಾಲಿನ ಪ್ರಮಾಣವನ್ನು ನೋಡಿ ಹಿಂಡಿ ಮತ್ತು ಬುಸಾವನ್ನು ನೀಡಬೇಕು.ಹೀಗೆ ಹೈನುಗಾರಿಕೆ ಮಾಡುವುದರಿಂದ ಹೆಚ್ಚು ಆದಾಯವನ್ನು ಗಳಿಸಬಹುದು.