ಎಲ್ಲಿ ನೋಡಿದರೂ ಕೊರೋನ, ಕೊರೋನ ಕೊರೋನ. ಕೊರೋನ ವೈರಸ್ ನಮ್ಮೆಲ್ಲರ ಜೀವನವನ್ನು ಮುಂದೆ ಹೋಗದಂತೆ ನಿಲ್ಲಿಸಿಬಿಟ್ಟಿದೆ. ನಮ್ಮ ದೇಶದಲ್ಲಿ ಈಗಾಗಲೆ ಕೊರೋನ ವೈರಸ್ ಗೆ ಹೆಚ್ಚಿನ ಸಂಖ್ಯೆಯಲ್ಲಿ ಬಲಿಯಾಗಿದ್ದಾರೆ, ಇನ್ನು ಅದೆಷ್ಟು ಜನರು ಹೆಮ್ಮಾರಿ ವೈರಸ್ ಗೆ ಬಲಿಯಾಗಬೇಕೊ ಗೊತ್ತಿಲ್ಲ. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಕೆಲವರು ಮಾನವೀಯತೆ ಮೆರೆದಿದ್ದಾರೆ. ಒಬ್ಬರು ಕೊರೋನ ಸೋಂಕಿತರಿಗೆ ಆಹಾರ ಒದಗಿಸಿದರೆ, ಇನ್ನೊಬ್ಬರು ತಮ್ಮ ಆಟೋವನ್ನು ಆ್ಯಂಬುಲೆನ್ಸ್ ಆಗಿ ಪರಿವರ್ತನೆ ಮಾಡಿ ಸಹಾಯ ಮಾಡುತ್ತಿದ್ದಾರೆ, ಮತ್ತೊಬ್ಬರು ಆಕ್ಸಿಜನ್ ಒದಗಿಸುತ್ತಿದ್ದಾರೆ. ಅದೆ ರೀತಿ ಕನ್ನಡ ಚಿತ್ರರಂಗದ ನಟರೊಬ್ಬರು ಆ್ಯಂಬುಲೆನ್ಸ್ ಡ್ರೈವರ್ ಆಗಿ ಕೊರೋನ ರೋಗಿಗಳಿಗೆ ಆಸ್ಪತ್ರೆಗೆ ಹೋಗಲು ಮತ್ತು ಸತ್ತ ಶವಗಳನ್ನು ಅಂತ್ಯಸಂಸ್ಕಾರಕ್ಕಾಗಿ ಸ್ಮಶಾನಕ್ಕೆ ಕೊಂಡೊಯ್ಯಲು ಸಹಾಯ ಮಾಡುತ್ತಿದ್ದಾರೆ. ಇದರ ಬಗ್ಗೆ ವಿವರವನ್ನು ಈ ಲೇಖನದ ಮೂಲಕ ತಿಳಿದುಕೊಳ್ಳೋಣ
ಹೆಮ್ಮಾರಿ ಕೊರೋನ ವೈರಸ್ ಧಾಳಿಗೆ ದೇಶದ ಜನತೆ ಭಯದಿಂದಲೆ ದಿನ ಕಳೆಯುತ್ತಿದ್ದಾರೆ.
ಕೊರೋನ ವೈರಸ್ ಎಲ್ಲರ ಜೀವನದಲ್ಲೂ ಆಟ ಆಡುತ್ತಿದೆ. ಮೊದಲನೆ ಅಲೆಗೆ ಅರ್ಧ ಹೈರಾಣಾಗಿದ್ದರು, ಇದೀಗ ಅನಿರೀಕ್ಷಿತವಾಗಿ ಬಂದಿರುವ ಕೊರೋನದ ಎರಡನೆಯ ಅಲೆಗೆ ಎಲ್ಲರೂ ತತ್ತರಿಸಿ ಹೋಗಿದ್ದಾರೆ. ಪ್ರತಿದಿನ ನೂರಾರು ಜನರ ಸಾವು ಹಾಗೂ ಸೋಂಕಿತರ ಸುದ್ದಿಗಳನ್ನೆ ಕೇಳಿ ಕೇಳಿ ಜನ ಬೇಸತ್ತು ಹೋಗಿದ್ದಾರೆ. ಯಾವಾಗ ಯಾರಿಗೆ ಕೊರೋನ ವೈರಸ್ ತಗುಲುತ್ತೊ ಎಂಬ ಭಯದಲ್ಲೆ ಜನ ಬದುಕು ಸಾಗಿಸುತ್ತಿದ್ದಾರೆ. ಕೊರೋನ ವೈರಸ್ ನ ಮೊದಲ ಅಲೆ ಆರಂಭವಾದಾಗ ಸಾಕಷ್ಟು ಮಂದಿ ಸಿನಿ ಸ್ಟಾರ್ಗಳು ಸಂಕಷ್ಟದಲ್ಲಿದ್ದವರಿಗೆ ಆಹಾರ ಧಾನ್ಯ ಹಾಗೂ ಊಟ ತಲುಪಿಸುವ ಕೆಲಸ ಮಾಡಿರುವುದನ್ನು, ಇನ್ನು ಕೆಲವರು ಅಗತ್ಯ ಔಷಧಿಗಳನ್ನು ವಿತರಿಸುವ ಕಾರ್ಯ ಮಾಡಿರುವುದನ್ನು ನೋಡಿದ್ದೇವೆ.
ಒಂದು ಕಡೆ ಸೋಂಕಿತರ ಹೆಚ್ಚಳ, ಮತ್ತೊಂದು ಕಡೆ ಚಿಕಿತ್ಸೆ ಸಿಗದೆ ಪರದಾಡುತ್ತಿರುವ ಜನ. ಈ ಮಧ್ಯೆ ಆ್ಯಂಬುಲೆನ್ಸ್ ಗಳು ಸಿಗದೆ ಜನ ಒದ್ದಾಡುತ್ತಿದ್ದಾರೆ. ಈ ಸಮಯದಲ್ಲಿ ಕನ್ನಡದ ನಟ ಅರ್ಜುನ್ ಗೌಡ ಆ್ಯಂಬುಲೆನ್ಸ್ ಸೇವೆ ಒದಗಿಸುತ್ತಿದ್ದಾರೆ. ಕೊರೋನಾದಿಂದ ಸಾವನ್ನಪ್ಪಿದವರ ಅಂತ್ಯ ಸಂಸ್ಕಾರಕ್ಕೆ ನೆರವಾಗುತ್ತಿರುವ ಇವರು 20 ಕ್ಕೂ ಹೆಚ್ಚು ಶವಗಳ ಅಂತ್ಯಕ್ರಿಯೆಗೆ ಸಹಾಯ ಮಾಡಿದ್ದಾರೆ. ಕೊರೋನದ ಎರಡನೆ ಅಲೆಗೆ ಚಿತ್ರರಂಗ ಕಂಪ್ಲೀಟ್ ಬಂದ್ ಆಗಿದೆ. ಚಿತ್ರೀಕರಣವಿಲ್ಲದೆ ಖಾಲಿ ಕೂತ ನಟರೊಬ್ಬರು ಸಮಾಜಸೇವೆಗೆ ಮುಂದಾಗಿದ್ದಾರೆ ಅದರ ಬೆನ್ನಲ್ಲೆ ಅರ್ಜುನ್ ಗೌಡ ಅವರು ಆದರ್ಶ ಮೆರೆದಿದ್ದಾರೆ ಅಲ್ಲದೆ ಅವರು ಇನ್ನು ಎರಡು ತಿಂಗಳ ಕಾಲ ಇದೆ ಕೆಲಸಮಾಡುವುದಾಗಿ ಕೂಡ ಹೇಳಿಕೊಂಡಿದ್ದಾರೆ. ಅವರು ಯುವರತ್ನ, ರುಸ್ತುಂ ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. ಸದ್ಯ ಅರ್ಜುನ್ ಗೌಡ ಮಾಡುತ್ತಿರುವ ಕೆಲಸಕ್ಕೆ ಬಹಳಷ್ಟು ಜನರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಆಸ್ಪತ್ರೆಗೆ ಜನ ಹಾಗೂ ಸ್ಮಶಾನಕ್ಕೆ ಮೃತದೇಹ ಸಾಗಿಸುವ ಕೆಲಸ ಮಾಡುತ್ತಿದ್ದಾರೆ. ಇವರ ಈ ಕಾರ್ಯಕ್ಕೆ ರಕ್ಷಿತಾ ಪ್ರೇಮ್ ಕೂಡ ಶ್ಲಾಘನೆ ವ್ಯಕ್ತಪಡಿಸಿದ್ದಾರೆ. ನಿಜಕ್ಕೂ ಅರ್ಜುನ್ ಗೌಡ ಅವರನ್ನು ಮೆಚ್ಚಬೇಕು. ನಮಗ್ಯಾಕೆ ಬೇಕು ನಾವು ಚೆನ್ನಾಗಿದ್ದರೆ ಸಾಕು ಎಂದು ಯೋಚಿಸುವವರೆ ಹೆಚ್ಚು ಹೀಗಿರುವಾಗ ಅರ್ಜುನ್ ಗೌಡ ಅವರ ಕೆಲಸ ಶ್ಲಾಘನೀಯವಾಗಿದೆ. ದೇವರು ಅರ್ಜುನ್ ಗೌಡ ಅವರಿಗೆ ಆರೋಗ್ಯ, ಆಯಸ್ಸು ಕರುಣಿಸಲಿ ಎಂದು ಆಶಿಸೋಣ.