ಆತ್ಮೀಯ ಓದುಗರೇ ಈ ಲೇಖನದ ಮೂಲಕ ನಾವು ಇಂದು ತಿಳಿಯಲು ಹೊರಟಿರುವ ವಿಚಾರ ಏನು ಅನ್ನೋದನ್ನ ನೋಡುವುದಾದರೆ ಕೆಲವರಿಗೆ ಚಿಕ್ಕ ವಯಸ್ಸಿನಲ್ಲೇ ಸಾವುಬರುತ್ತೆ ಇದಕ್ಕೆ ಕೆಲವು ಕಥೆ ಪುರಾಣ ಗ್ರಂಥಗಳು ಏನ್ ಹೇಳುತ್ತೆ ಅನ್ನೋದನ್ನ ಇಲ್ಲಿ ತಿಳಿಯೋಣ ಕೆಲವರು ಚಿಕ್ಕ ವಯಸ್ಸಿನಲ್ಲಿ ಆಕ್ಸಿಡೆಂಟಾಗಿ ಸತ್ತುಹೋಗುತ್ತಾರೆ, ಇನ್ನು ಕೆಲವರು ನೀರಿಗೆ ಬಿದ್ದು ಉಸಿರುಕಟ್ಟಿ ಸಾಯುತ್ತಾರೆ, ನೇಣು ಹಾಕಿಕೊಂಡು ಸಾಯುತ್ತಾರೆ.
ಹೌದು ಈ ರೀತಿಯ ಸಾವನ್ನು ನಾವು ನೋಡಿರುತ್ತೇವೆ ಆಗ ಜನರು ಸಾಮಾನ್ಯವಾಗಿ ಅಲ್ಲಿಗೆ ಹೋಗಿಲ್ಲ ಅಂದಿದ್ದರೆ ಉಳಿದುಕೊಳ್ಳುತ್ತಿದ್ದರು ಎಂಬಿತ್ಯಾದಿ ಮಾತುಗಳನ್ನು ಆಡುತ್ತಾರೆ. ನಮ್ಮ ಹಣೆಯಲ್ಲಿ ಜೀವನದಲ್ಲಿ ನಮಗೆ ಏನೇನು ಆಗುತ್ತದೆ, ಯಾವೆಲ್ಲಾ ಘಟನೆಗಳು ನಡೆಯಬೇಕು ಎಂದು ಬರೆದಿರುತ್ತದೆಯೋ ಆ ಘಟನೆಗಳು ನಡೆದೇ ನಡೆಯುತ್ತವೆ. ನಾವು ಹೀಗೆ ಸಾಯಬೇಕು ಎಂದು ಇರುತ್ತದೆ ಹಾಗೆ ನಾವು ಸಾಯುತ್ತೇವೆ ಅದನ್ನು ಬದಲಾಯಿಸಲು ಯಾರಿಂದಲೂ ಸಾಧ್ಯವಿಲ್ಲ.
ನಾವು ಹುಟ್ಟುವ ಮೊದಲೆ ಹುಟ್ಟಿದ ನಂತರ ನಮ್ಮ ಜೀವನದಲ್ಲಿ ಏನೇನು ಆಗಬೇಕು ಎಂದು ನಿಶ್ಚಯವಾಗಿರುತ್ತದೆ, ಹಾಗೆಯೇ ಸಾವು ಕೂಡ ನಿಶ್ಚಯವಾಗಿರುತ್ತದೆ. ಖಾಯಿಲೆಯಿಂದ ಸಾಯುತ್ತೇವೆ ಎಂದು ಇದ್ದರೆ ಹಾಗೆ ಸಾಯುತ್ತೇವೆ, ಸಣ್ಣಪುಟ್ಟ ದುರ್ಘಟನೆ ನಡೆದು ಸಾಯಬೇಕು ಎಂದಿದ್ದರೆ ಹಾಗೆ ಸಾಯುತ್ತೇವೆ. ಕೆಲವರಿಗೆ 30 ವರ್ಷದ ಒಳಗೆ ಸಾವು ಬರುತ್ತದೆ ಅದು ಕೂಡ ಹಣೆಬರಹದ ಪರಿಣಾಮ. ಮಹಾಭಾರತದಲ್ಲಿ ಬರುವ ಭೀಷ್ಮ ಪಿತಾಮಹರು ಬಾಣದ ಹಾಸಿಗೆಯಲ್ಲಿ ಸ್ವಲ್ಪ ದಿನಗಳ ಕಾಲ ಇದ್ದು ನಂತರ ಸಾವನ್ನಪ್ಪುತ್ತಾರೆ ಅವರು ಸಾಯುವುದು ಕೂಡ ಮೊದಲೇ ನಿಶ್ಚಿಯವಾಗಿತ್ತು ಹಾಗೆಯೇ ಅವರು ಸತ್ತರು.
ಕೆಲವರು ಅಕಾಲ ಮೃತ್ಯುವನ್ನು ಹೊಂದುತ್ತಾರೆ ಅಂದರೆ 35 ವರ್ಷ ವಯಸ್ಸಿನ ಒಳಗೆ ಸತ್ತರೆ ಅದನ್ನು ಅಕಾಲ ಮೃತ್ಯು ಎನ್ನುವರು. ಹಿಂದಿನ ಜನ್ಮದಲ್ಲಿ ಪಾಪ ಮಾಡಿದರೆ ಈ ರೀತಿಯ ಮೃತ್ಯು ಸಂಭವಿಸುತ್ತದೆ ಎಂದು ಹೇಳಲಾಗುತ್ತದೆ. ಅಕಾಲ ಮೃತ್ಯು ಹೊಂದಿದವರು ಈ ಜನ್ಮದಲ್ಲಿ ಒಳ್ಳೆಯ ಕೆಲಸ ಮಾಡಿದರೆ ಸ್ವರ್ಗಕ್ಕೆ ಹೋಗುವ ಸಂಭವವಿರುತ್ತದೆ ಎಂದು ಗ್ರಂಥಗಳಲ್ಲಿ ಉಲ್ಲೇಖವಾಗಿದೆ. ಅದೇ ಈ ಜನ್ಮದಲ್ಲಿ ಕೆಟ್ಟ ಕೆಲಸ ಮಾಡಿದರೆ, ತಂದೆ-ತಾಯಿ, ಗುರುಹಿರಿಯರಿಗೆ ಅವಮಾನ ಮಾಡಿದರೆ ನರಕ ಹಾಗೂ ಸ್ವರ್ಗಕ್ಕೆ ಹೋಗದೆ ದೆವ್ವ-ಭೂತಗಳಾಗಿ ಅಲೆದಾಡುತ್ತಾರೆ ಎಂದು ಹೇಳಬಹುದು.
ಇದರಿಂದ ನಮಗೆ ತಿಳಿಯುವುದೇನೆಂದರೆ ನಾವು ಯಾರಿಗೂ ನೋವುಂಟು ಮಾಡದೆ, ಅವಮಾನ ಮಾಡದೆ, ನಮ್ಮಿಂದ ಎಷ್ಟು ಸಾಧ್ಯವೋ ಅಷ್ಟು ಒಳ್ಳೆಯ ಕೆಲಸಗಳನ್ನು ಮಾಡಬೇಕು ಇದರಿಂದ ನಾವು ಸತ್ತ ನಂತರ ಸ್ವರ್ಗಕ್ಕೆ ಹೋಗುತ್ತೇವೆ. ನಾವು ಭೂಮಿಯ ಮೇಲೆ ಬದುಕಿರುವವರೆಗೆ ನಮ್ಮ ನಡವಳಿಕೆ ಹೇಗೆ ಇರುತ್ತದೆ ಎನ್ನುವುದರ ಮೇಲೆ ಅಂದರೆ ನಮ್ಮ ಕರ್ಮಗಳು ಹೇಗಿರುತ್ತವೆ ಎನ್ನುವುದರ ಮೇಲೆ ಸ್ವರ್ಗ-ನರಕ ಎಂಬುದು ನಿರ್ಧಾರವಾಗುತ್ತದೆ.
ಇನ್ನೊಬ್ಬರಿಗೆ ಸಹಾಯ ಮಾಡಲು ಆಗದಿದ್ದರೂ ಇನ್ನೊಬ್ಬರಿಗೆ ಕೆಟ್ಟದ್ದನ್ನು ಬಯಸುವುದು, ಕೆಟ್ಟ ಯೋಚನೆ ಮಾಡುವುದಾಗಲಿ, ಕೆಟ್ಟ ಕೆಲಸ ಮಾಡುವುದಾಗಲಿ ಮಾಡಬಾರದು. ನಮ್ಮಿಂದ ಇನ್ನೊಬ್ಬರಿಗೆ ಒಳ್ಳೆಯದಾಗದೆ ಇದ್ದರೂ ನಡೆಯುತ್ತದೆ ಆದರೆ ನಮ್ಮಿಂದ ಇನ್ನೊಬ್ಬರಿಗೆ ಕೆಟ್ಟದ್ದಾಗಬಾರದು.