ಹೆಚ್ಚುತ್ತಿರುವ ಕೊರೋನ ಮಹಾಮಾರಿ ಸಿಎಂ ಯಡಿಯೂರಪ್ಪ, ಮಾಜಿ ಸಿಎಂ ಎಚ್ಡಿ ಕುಮಾರಸ್ವಾಮಿ ಅವರಿಗೆ ತಗುಲಿದ್ದು, ಇದೀಗ ನಿಖಿಲ್ ಕುಮಾರಸ್ವಾಮಿ ಅವರಿಗೂ ಪೊಸಿಟಿವ್ ರಿಪೋರ್ಟ್ ಬಂದಿದೆ. ಅವರು ಹೇಗಿದ್ದಾರೆ, ಯಾವ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂಬ ಮಾಹಿತಿಯನ್ನು ಈ ಲೇಖನದಲ್ಲಿ ನೋಡೋಣ.
ಎಲ್ಲರಿಗೂ ತಿಳಿದಿರುವ ಹಾಗೆ ನಿಖಿಲ್ ಕುಮಾರಸ್ವಾಮಿ ಅವರಿಗೆ ಕೊರೋನ ಪೊಸಿಟಿವ್ ಬಂದಿದೆ. ನಟ ಹಾಗೂ ರಾಜಕಾರಣಿಯಾಗಿರುವ ನಿಖಿಲ್ ಕುಮಾರಸ್ವಾಮಿ ಅವರಿಗೆ ಎಪ್ರಿಲ್ 17ರಂದು ಕೊರೋನಾ ಪೊಸಿಟಿವ್ ಬಂದಿತ್ತು ಆದರೆ ಈಗ ಅವರಿಗೆ ಉಲ್ಬಣಗೊಳಿಸಿದೆ. ನಿಖಿಲ್ ಕುಮಾರಸ್ವಾಮಿ ಹಾಗೂ ರೇವತಿ ಅವರ ಮೊದಲ ಮದುವೆ ವಾರ್ಷಿಕೋತ್ಸವದಂದು ಸಂತೋಷವಾಗಿ ಸಂಭ್ರಮಿಸಬೇಕಾದ ದಿನ ಕೊರೋನಾ ಪೊಸಿಟಿವ್ ರಿಪೋರ್ಟ್ ಬಂದಿದೆ. ಮೊದಲು ಕುಮಾರಸ್ವಾಮಿ ಅವರಿಗೆ ಸೋಂಕು ದೃಢವಾಗಿತ್ತು ನಂತರ ಅವರ ಮಗನಾದ ನಿಖಿಲ್ ಕುಮಾರಸ್ವಾಮಿ ಅವರಿಗೂ ಸೋಂಕು ದೃಢವಾಯಿತು. ಇದೀಗ ನಿಖಿಲ್ ಕುಮಾರಸ್ವಾಮಿ ಅವರಿಗೆ ಜ್ವರ ಮತ್ತು ತಲೆನೋವು ಜಾಸ್ತಿಯಾಗಿದ್ದು ನಿಂತಲ್ಲೆ ಕುಸಿದು ಬಿದ್ದಿದ್ದಾರೆ ಮತ್ತು ಅವರಿಗೆ ಹೆಚ್ಚಿನ ಆಯಾಸವಾಗಿದೆ. ತಕ್ಷಣ ನಿಖಿಲ್ ಕುಮಾರಸ್ವಾಮಿ ಅವರನ್ನು ಅಪೋಲೊ ಆಸ್ಪತ್ರೆಗೆ ದಾಖಲಿಸಿದ್ದಾರೆ.
ನಿಖಿಲ್ ಕುಮಾರಸ್ವಾಮಿಯವರ ತಂದೆ ಮಾಜಿ ಸಿಎಂ ಕುಮಾರಸ್ವಾಮಿ ಅವರನ್ನು ಅದೆ ಆಸ್ಪತ್ರೆಗೆ ದಾಖಲಿಸಲಾಯಿತು. ಮದುವೆ ವಾರ್ಷಿಕೋತ್ಸವದ ದಿನದಂದೆ ಈ ಘಟನೆ ನಡೆದಿರುವುದು ದುಃಖದ ಸಂಗತಿಯಾಗಿದೆ. ನಿಖಿಲ್ ಕುಮಾರಸ್ವಾಮಿ ಅವರ ಪತ್ನಿ ರೇವತಿ ಅವರು ಕಣ್ಣೀರು ಹಾಕಿದ್ದಾರೆ, ಸಾಫ್ಟ್ ಸ್ವಭಾವದವರಾದ ಅವರಿಗೆ ಎಲ್ಲರೂ ಸಮಾಧಾನ ಮಾಡುತ್ತಿದ್ದಾರೆ. ನಿಖಿಲ್ ಕುಮಾರಸ್ವಾಮಿ ಅವರ ಸಂಬಂಧಿಯಾಗಿರುವ ಹಿರಿಯ ಹೃದಯ ತಜ್ಞ ಜೈದೇವ್ ಆಸ್ಪತ್ರೆಯ ನಿರ್ದೇಶಕ ಮಂಜುನಾಥ ಅವರು ನಿಖಿಲ್ ಕುಮಾರಸ್ವಾಮಿ ಅವರ ಮೇಲೆ ಹೆಚ್ಚು ನಿಗಾವನ್ನು ವಹಿಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಅವರ ಸಲಹೆಯ ಮೇರೆಗೆ ಚಿಕಿತ್ಸೆ ನಡೆಯುತ್ತಿದೆ. ಸಿಎಂ ಯಡಿಯೂರಪ್ಪ ಅವರು ಅದೆ ಆಸ್ಪತ್ರೆಗೆ ದಾಖಲಾಗಿದ್ದರು. ಒಟ್ಟಿನಲ್ಲಿ ಎಚ್ ಡಿ ಕುಮಾರಸ್ವಾಮಿ ಹಾಗೂ ನಿಖಿಲ್ ಕುಮಾರಸ್ವಾಮಿ ಅವರು ಆದಷ್ಟು ಬೇಗ ಹುಷಾರಾಗಿ ಬರಲಿ ಎಂದು ಅಭಿಮಾನಿಗಳು ಬಯಸುತ್ತಿದ್ದಾರೆ ನಾವು ಕೂಡ ಅದನ್ನೆ ಆಶಿಸೋಣ.