WhatsApp Group Join Now
Telegram Group Join Now

ಹಾವೇರಿಯಲ್ಲಿಯ ಸುಪ್ರಸಿದ್ದ ದೇವಾಲಯಗಳಲ್ಲಿ ಕದರಮಂಡಲಗಿಯ ಕಾಂತೇಶ ಸ್ವಾಮಿಯ ದೇವಾಲಯವು ಒಂದು ಹಾಗೆಯೇ ಈ ದೇವಾಲಯಕ್ಕೆ ಸಾವಿರಾರು ಸಂಖ್ಯೆಯಲ್ಲಿ ಭಕ್ತಾದಿಗಳು ಬಂದು ಹನುಮಂತನ ದರ್ಶನ ಪಡೆಯುತ್ತಾರೆ ಕದರಮಂಡಲಗಿ ದೇವಾಲಯವು ತುಂಬಾ ಪುರಾತನ ಕಾಲದ ದೇವಾಲಯವಾಗಿದ್ದು ಬೇರೆ ಬೇರೆ ರಾಜ್ಯಗಳಿಂದ ಸಹ ಜನರು ಬರುತ್ತಾರೆ ಈ ದೇವಾಲಯವು ಮಹಾಭಾರತದ ಕಾಲದಲ್ಲಿ ಕದರಮಂಡಲಗಿಯಲ್ಲಿ ಆಂಜನೇಯ ಸ್ವಾಮಿಯ ದೇವಾಯಲವನ್ನು ನಿರ್ಮಾಣ ಮಾಡಲಾಗಿದೆ ಹಾಗೆಯೇ ಐತಿಹಾಸಿಕ ಹಿನ್ನೆಲೆಯನ್ನು ಹೊಂದಿರುವ ದೇವಾಲಯ ಇದಾಗಿದೆ

ಪಾಂಡವರ ಕೊನೆಯ ಅರಸನಾಗಿದ್ದ ಜಯಮೇಜಯ ಈ ದೇವಸ್ಥಾನವನ್ನು ಕಟ್ಟಿಸಿದನೆಂಬ ಪ್ರತೀತಿ ಇದೆ ನಾನಾ ತರಹದ ಕಷ್ಟವೆಂದು ಬಂದ ಭಕ್ತಾದಿಗಳನ್ನು ಆಂಜನೇಯ ಸ್ವಾಮಿಯು ಕಷ್ಟಗಳನ್ನು ಪರಿಹಾರ ನೀಡುತ್ತಾನೆ ಹೀಗಾಗಿಯೇ ಅನೇಕ ಸಂಖ್ಯೆಯಲ್ಲಿ ಭಕ್ತಾದಿಗಳು ಬರುತ್ತಾರೆ ಈ ಪ್ರದೇಶದಲ್ಲಿ ಅತ್ಯಂತ ಬಲವಾದ ಮತ್ತು ಪ್ರಸಿದ್ಧವಾದ ದೇವಾಲಯವಾಗಿದೆ ನಾವು ಈ ಲೇಖನದ ಮೂಲಕ ಕಷ್ಟಗಳ ನಿವಾರಣೆ ಮಾಡುವ ಕದರಮಂಡಲಗಿ ಗ್ರಾಮದ ಕಾಂತೇಶ ಸ್ವಾಮಿಯ ಬಗ್ಗೆ ತಿಳಿದುಕೊಳ್ಳೋಣ.

ಕಾಂತೇಶ ಸ್ವಾಮಿಯ ದೇವಾಲಯವು ಹಾವೇರಿ ಜಿಲ್ಲೆಯ ಬ್ಯಾಡಗಿ ತಾಲೂಕಿನ ಕದರಮಂಡಲಗಿ ಗ್ರಾಮದಲ್ಲಿದೆ ಈ ದೇವಾಲಯವು ಸಾವಿರಾರು ವರ್ಷಗಳ ಹಿಂದೆ ಋಷಿ ಮುನಿಗಳಿಂದ ಸ್ಥಾಪಿಸಲ್ಪಟ್ಟಿದೆ ಹನುಮಂತನು ಅಂಜನಾ ದೇವಿಯ ಗರ್ಭದಿಂದ ಜನಿಸಿದ ತಕ್ಷಣ ಆದಾಗಲೇ ಉದಯಿಸಿದ ಸೂರ್ಯನನ್ನು ಕಂಡು ಹಣ್ಣು ಭಾವಿಸಿದನು ಹಾಗೆಯೇ ಆಕಾಶಕ್ಕೆ ನೆಗೆದು ಸೂರ್ಯನನ್ನು ನುಂಗಲು ಬಾಯಿ ಇಟ್ಟನು ಈ ಪ್ರಸಂಗದ ನೆನಪಿಗೋಸ್ಕರ ಈ ಗ್ರಾಮಕ್ಕೆ ಕದರಮಂಡಲಗಿ ಎಂಬ ಹೆಸರು ಬಂದಿದೆ ಕದಿರ ಎಂದರೆ ಕಿರಣ ಹಾಗೂ ಮಂಡಲ ಎಂದರೆ ಸೂರ್ಯ ಮಂಡಲ ಹಾಗೂ ಗಿ ಎಂದರೆ ಗಮನ ಮಾಡಿದ ವಾಯಿ ಎಂದರ್ಥವಾಗಿದೆ ಕದರಮಂಡಲಗಿ ಒಂದು ಜಾಗೃತ ಗ್ರಾಮವಾಗಿದೆ.

ಮಹಾಭಾರತ ಕಾಲದಲ್ಲಿ ಜನಮೆ ಜಯ ರಾಜನು ತನ್ನ ಮನೋವ್ಯಥೆಯ ನಿವಾರಣೆಗಾಗಿ ತಪಸ್ವಿಗಳ ಮೊರೆ ಹೋಗಿದ್ದರು ಆಗ ಅವರಿಗೆ ದೊರೆತ ಸೂಚನೆಯೇ ಆಂಜನೇಯ ದೇವಸ್ಥಾನದ ನಿರ್ಮಾಣ ಹಾಗೂ ಆಂಜನೇಯ ಮೂರ್ತಿ ಪ್ರತಿಷ್ಠಾಪನೆ ಮಾಡುವುದು ಆಗಿತ್ತು ಅದರಂತೆಯೇ ಮಹಾ ತಪಸ್ವಿಗಳ ಹಸ್ತದಿಂದ ಜನಮೇ ಜಯ ರಾಜ ಕಾಂತೇಶ ಸ್ವಾಮಿಯ ದೇವಾಲಯವನ್ನು ನಿರ್ಮಾಣ ಮಾಡಿದ್ದನು.

ಕದರಮಂಡಲದ ದೇವರ ಮುಖ ನೆರವಾಗಿದ್ದು ಕಣ್ಣುಗಳಲ್ಲಿ ಅಪರೂಪದ ಸೂರ್ಯ ಸಾಲಿಗ್ರಾಮವನ್ನು ತಪಸ್ವಿಗಳು ಪ್ರತಿಷ್ಠಾಪನೆ ಮಾಡಿದ್ದಾರೆ ಹಾಗಾಗಿ ಸಾಲಿಗ್ರಾಮಗಳ ಶಕ್ತಿಗಳಿಂದ ಹನುಮಂತ ಬೇಡಿ ಬಂದ ಭಕ್ತಾದಿಗಳ ಕೋರಿಕೆಗಳನ್ನು ಪೂರೈಸುತ್ತಾರೆ ಹಾಗಾಗಿ ಹನುಮಂತನ ದರ್ಶನ ಪಡೆಯುವಾಗ ಕಣ್ಣುಗಳಲ್ಲಿ ಇರುವ ಸಾಲಿಗ್ರಾಮವನ್ನು ತಪ್ಪದೆ ದರ್ಶನ ಪಡೆಯಬೇಕು ಈ ಮೇಲಿನ ಕಾರಣದಿಂದ ಕಾಂತೇಶ ಎನ್ನುವ ಹೆಸರು ಬಂದಿದೆ. ಕದರಮಂಡಲದ ಕಾಂತೇಶ ಸ್ವಾಮಿಯ ಮಹಿಮೆಯನ್ನು ಮೊಟ್ಟ ಮೊದಲಿಗೆ ಕರುನಾಡಿಗೆ ಪರಿಚಯಿಸಿದವರು ಕನಕದಾಸರು ಹಾಗೆಯೇ ಒಮ್ಮೆ ಕನಕದಾಸರು ಕದರಮಂಡಲ ಮಾರ್ಗವಾಗಿ ತಿರುಪತಿ ತಿಮ್ಮಪ್ಪನ ತೆರಳಿದರು ಅವರು ಕದರಮಂಡಲ ಕಾಂತೇಶ ಸ್ವಾಮಿಯ ದರ್ಶನ ಪಡೆಯದೆ ತಿರುಪತಿಗೆ ಹೋಗಿದ್ದರು

ಹಾಗಾಗಿ ತಿರುಪತಿ ತಿಮ್ಮಪ್ಪನ ದರ್ಶನ ಪಡೆಯಲು ಸಾಧ್ಯ ಆಗಲಿಲ್ಲ ಕನಕದಾಸರಿಗೆ ಕನಸಿನಲ್ಲಿ ಪ್ರತ್ಯಕ್ಷವಾದ ತಿರುಪತಿ ತಿಮ್ಮಪ್ಪ ಸ್ವಾಮಿ ಕದರಮಂಡಲ ಕಾಂತೇಶ ಸ್ವಾಮಿಯ ದರ್ಶನ ಪಡೆಯದೆ ಬಂದಿದ್ದರಿಂದ ಇದು ಪ್ರಾಯಶ್ಚಿತ ಹಾಗೂ ನೀನು ಈ ಕೂಡಲೇ ಕದರಮಂಡಲ ಕಾಂತೇಶ ಸ್ವಾಮಿಯ ದರ್ಶನ ಪಡೆದು ಬಂದರೆ ನನ್ನ ದರ್ಶನ ಆಗುತ್ತದೆ ಎಂದು ತಿರುಪತಿ ತಿಮ್ಮಪ್ಪ ಹೇಳಿದ್ದರು ಅದರಂತೆ ಕನಕದಾಸರು ಕದರಮಂಡಲಕ್ಕೆ ತೆರಳಿ ಕಾಂತೇಶ ಸ್ವಾಮಿಯ ದರ್ಶನ ಪಡೆದುಕೊಂಡು ತಿರುಮಲಕ್ಕೆ ತೆರಳಿದಾಗ ತಿಮ್ಮಪ್ಪನ ದರ್ಶನ ಆಯಿತು .

ಕನಕದಾಸರು ಕಾಂತೇಶ ಸ್ವಾಮಿಯ ದೇವ ಸ್ಥಾನದಲ್ಲಿ ನೆಲೆಸಿ ಮೋಹನತರಂಗಿಣಿ ಎನ್ನುವ ಕಾವ್ಯವನ್ನು ರಚಿಸಿದ್ದರು ಈ ದೇವಾಲಯಕ್ಕೆ ಭೇಟಿ ನೀಡುವುದರಿಂದ ಶನಿ ದೋಷ ನಿವಾರಣೆ ಆಗುತ್ತದೆ ಜೀವನದಲ್ಲಿ ಎದುರಾಗುವ ನಾನಾ ತರಹದ ಸಮಸ್ಯೆಯನ್ನು ಈ ದೇವರು ನಿವಾರಣೆ ಮಾಡುತ್ತಾನೆ ಈ ದೇವಸ್ಥಾನಕ್ಕೆ ಕರ್ನಾಟಕ ಮಾತ್ರವಲ್ಲದೆ ಮಹಾರಾಷ್ಟ್ರ ತಮಿಳುನಾಡು ತೆಲಂಗಾಣ ಮತ್ತು ಆಂಧ್ರಪ್ರದೇಶದ ಜನರು ಸಹ ದೇವಸ್ಥಾನಕ್ಕೆ ಭೇಟಿ ನೀಡುತ್ತಾರೆ ಕಾಂತೇಶ ದೇವಾಲಯವು 8 ಅಂತಸ್ತಿನ 101ಅಡಿಗಳ ಭವ್ಯ ದೇವಾಲಯವಾಗಿದೆ ಹಾಗೆಯೇ ದೇವಾಲಯದ ಆವರಣದಲ್ಲಿ ಪುಷ್ಕರಣಿ ಸಹ ಇರುತ್ತದೆ.

ಕಾಂತೇಶ ಸ್ವಾಮಿಯ ದೇವಾಲಯದ ಆವರಣದಲ್ಲಿ ಕನಕದಾಸರ ಹಾಗೂ ರಾಘವೇಂದ್ರ ಸ್ವಾಮಿಯ ಮಠ ಇರುತ್ತದೆ ದೇವಾಲಯದಲ್ಲಿ ನಿಗದಿತ ಸಮಯದಲ್ಲಿ ಭೋಜನದ ವ್ಯವಸ್ಥೆ ಸಹ ಇರುತ್ತದೆ ಹಾವೇರಿ ಜಿಲ್ಲೆ ರಾಣಿ ಬೆನ್ನುರಿನಿಂದ 12 ಕಿಲೋಮೀಟರ್ ಅಷ್ಟು ದೂರದಲ್ಲಿದೆ ಅಪಾರ ಸಂಖ್ಯೆಯಲ್ಲಿ ಭಕ್ತಾದಿಗಳು ಬರುತ್ತಾರೆ ಹೀಗೆ ಈ ದೇವಾಲಯವು ಸಾವಿರಾರು ವರ್ಷಗಳ ಇತಿಹಾಸವನ್ನು ಹೊಂದಿದ್ದು ತುಂಬಾ ಜನಪ್ರಿಯವಾದ ದೇವಾಲಯವಾಗಿದೆ ಹಾಗೆಯೇ ಯಾವುದೇ ಕಷ್ಟಗಳು ಬಂದಾಗ ಹನುಮಂತನನ್ನು ನೆನೆದರೆ ಕೈ ಬಿಡುವುದು ಇಲ್ಲ.

ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ ಫೋನಿನ ಮೂಲಕ ಪರಿಹಾರ 9880444450 ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 600 ವರ್ಷಗಳ ಹಳೆಯ 108 ಜ್ಯೋತಿಷ್ಯ ಮಂತ್ರಗಳಿಂದ, ಮದುವೆ ಸಂತಾನ, ದಾಂಪತ್ಯ, ಪ್ರೇಮ ವಿಚಾರ, ಮಾನಸಿಕ, ಗೃಹಶಾಂತಿ, ವಿದ್ಯೆ, ಅರೋಗ್ಯ, ವಿದೇಶ ಪ್ರಯಾಣ, ಹಣಕಾಸು, ವ್ಯಾಪಾರ ಉದ್ಯೋಗ, ಕೋರ್ಟ್ ಕೇಸು, ಸಾಲಬಾದೆ, ಮಾಟಬಾದೆ, ಶತೃಕಾಟ, ಅಷ್ಟೇ ಅಲ್ಲದೆ ರಾಜಯೋಗ ವಶ, ಅಖಂಡ ರಾಜಯೋಗವಶಗಳು ಇನ್ನಿತರ ಕಠಿಣ ನಿಗೂಢ ಹಾಗೂ ಗುಪ್ತ ಸಮಸ್ಯೆಗಳಿಗೆ ಸಲಹೆ ಮತ್ತು ಪರಿಹಾರ ಶತಸಿದ್ಧ.ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ 9880444450 ಮೈಸೂರ್ ಸರ್ಕಲ್ (ಸಿರ್ಸಿ ಸರ್ಕಲ್) ಚಾಮರಾಜಪೇಟೆ ಬೆಂಗಳೂರು

WhatsApp Group Join Now
Telegram Group Join Now

By

Leave a Reply

Your email address will not be published. Required fields are marked *

error: Content is protected !!
Footer code: