ಇವತ್ತಿನ ದಿನಮಾನದಲ್ಲಿ ಅನೇಕ ಜನರು ಉದ್ಯೋಗಕ್ಕಾಗಿ ಎಲ್ಲೆಂದರಲ್ಲಿ ಹುಡುಕಾಟವನ್ನು ನಡೆಸುತ್ತಿರುತ್ತಾರೆ. ಕೆಲವರಿಗೆ ತಾವು ಇಂತಹದೇ ಕ್ಷೇತ್ರದಲ್ಲಿ ಕೆಲಸ ಮಾಡಬೇಕು ಎಂಬ ಆಸೆ ಇರುತ್ತದೆ ಆದರೆ ಆಸೆಪಟ್ಟ ಉದ್ಯೋಗ ಸಿಗದೆ ನಿರಾಶರಾಗುತ್ತಾರೆ. ನಾವಿಂದು ವಿದ್ಯುತ್ ಪ್ರಸರಣ ಕ್ಷೇತ್ರದಲ್ಲಿ ಕೆಲಸ ಮಾಡಬೇಕು ಎಂಬ ಆಸೆಯನ್ನು ಹೊಂದಿರುವವರಿಗೆ ಸಿಹಿಸುದ್ದಿಯನ್ನು ತಿಳಿಸಿಕೊಡುತ್ತೇವೆ. ಅದೇನೆಂದರೆ ನಾವಿಂದು ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ದಲ್ಲಿ ನಡೆಯುತ್ತಿರುವ ನೇಮಕಾತಿಯ ಕುರಿತಾದ ಸಂಪೂರ್ಣ ಮಾಹಿತಿಯನ್ನು ನಿಮಗೆ ಕೊಡುತ್ತೇವೆ.
ಕರ್ನಾಟಕ ವಿದ್ಯುತ್ ಪ್ರಸರಣ ನಿಗಮದಲ್ಲಿ ಎರಡು ಸಾವಿರದ ಇಪ್ಪತ್ತೆರಡಕ್ಕೆ ಸಂಬಂಧಿಸಿದಂತೆ ಒಟ್ಟು ಖಾಲಿ ಇರುವ ಸಾವಿರದ ನಾಲ್ಕು ನೂರಾ ತೊಂಬತ್ತೆರಡು ಹುದ್ದೆಗಳ ಭರ್ಜರಿ ನೇಮಕಾತಿಗೆ ಅಧಿಸೂಚನೆ ಹೊರಡಿಸಲಾಗಿದೆ. ಕರ್ನಾಟಕ ವಿದ್ಯುತ್ ಪ್ರಸರಣ ವಿಭಾಗದಲ್ಲಿ ಯಾವ ಯಾವ ಹುದ್ದೆಗಳು ಎಷ್ಟು ಖಾಲಿ ಇವೆ ಎಂಬುದನ್ನು ನೋಡುವುದಾದರೆ ಅಸಿಸ್ಟೆಂಟ್ ಎಂಜಿನಿಯರ್ ಎಲೆಕ್ಟ್ರಿಕಲ್ ಐದು ನೂರಾ ಐದು ಹುದ್ದೆಗಳು ಅಸಿಸ್ಟೆಂಟ್ ಇಂಜಿನಿಯರ್ ಸಿವಿಲ್ ಇಪ್ಪತ್ತೈದು ಉದ್ದೆಗಳು ಜೂನಿಯರ್ ಇಂಜಿನಿಯರ್ ಎಲೆಕ್ಟ್ರಿಕಲ್ ಐದು ನೂರಾ ಎಪ್ಪತ್ತು ಹುದ್ದೆಗಳು ಜೂನಿಯರ್ ಇಂಜಿನಿಯರ್ ಸಿವಿಲ್ ಇಪ್ಪತೊಂಬತ್ತು ಹುದ್ದೆಗಳು ಕಿರಿಯ ಸಹಾಯಕ 360 ಹುದ್ದೆಗಳು ಈ ರೀತಿಯಾಗಿ ಒಟ್ಟು 1492 ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಹೊರಡಿಸಲಾಗಿದೆ.
ಈ ಹುದ್ದೆಗೆ ಮಹಿಳಾ ಅಭ್ಯರ್ಥಿಗಳು ಹಾಗೂ ಪುರುಷ ಅಭ್ಯರ್ಥಿಗಳು ಇಬ್ಬರು ಅರ್ಜಿಯನ್ನು ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಸಲು ಆಸಕ್ತ ಅಭ್ಯರ್ಥಿಗಳು ಆನ್ಲೈನ್ ಮೂಲಕ ತಮ್ಮ ಅರ್ಜಿಯನ್ನು ಸಲ್ಲಿಸಬೇಕು. ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಪ್ರತಿ ತಿಂಗಳು ಇಪ್ಪತ್ತು ಸಾವಿರ ರೂಪಾಯಿಯಿಂದ ಎಪ್ಪತ್ತೆರಡು ಸಾವಿರ ರೂಪಾಯಿಯವರೆಗೆ ಮಾಸಿಕ ವೇತನ ಇರುತ್ತದೆ.
ಈ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಯಾವ ವಿದ್ಯಾರ್ಹತೆಯನ್ನು ಹೊಂದಿರಬೇಕು ಎಂಬುದನ್ನು ನೋಡುವುದಾದರೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಹುದ್ದೆಗೆ ಅನುಗುಣವಾಗಿ ಬಿಇ ಬಿಟೆಕ್ ಪದವಿ ಅಥವಾ ಹನ್ನೆರಡನೇ ತರಗತಿ ಪಾಸ್ ಆಗಿರುವ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು. ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳನ್ನು ಯಾವ ರೀತಿಯಾಗಿ ಆಯ್ಕೆಮಾಡಿಕೊಳ್ಳಲಾಗುತ್ತದೆ ಎನ್ನುವುದನ್ನು ನೋಡುವುದಾದರೆ ಅಭ್ಯರ್ಥಿಗಳಿಗೆ ಲಿಖಿತ ಪರೀಕ್ಷೆಯನ್ನು ಏರ್ಪಡಿಸಿ ನಂತರ ವೈಯಕ್ತಿಕ ಸಂದರ್ಶನದ ಮೂಲಕ ಅಭ್ಯರ್ಥಿಗಳನ್ನು ಆಯ್ಕೆ ಮಾಡಿಕೊಳ್ಳಲಾಗುತ್ತದೆ.
ಅರ್ಜಿ ಸಲ್ಲಿಸಲು ಅಭ್ಯರ್ಥಿಗಳ ವಯೋಮಿತಿ ಎಷ್ಟಾಗಿರಬೇಕು ಎಂಬುದನ್ನು ನೋಡುವುದಾದರೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಹದಿನೆಂಟು ವರ್ಷಕ್ಕಿಂತ ಮೇಲ್ಪಟ್ಟವರು ಹಾಗೂ ಮೂವತ್ತೈದು ವರ್ಷ ಒಳಗಿನವರು ಅರ್ಜಿಯನ್ನು ಸಲ್ಲಿಸಬಹುದಾಗಿದೆ. ಈ ಒಂದು ಹುದ್ದೆಗೆ ಅರ್ಜಿ ಸಲ್ಲಿಸುವ ಪ್ರಕ್ರಿಯೆ ಫೆಬ್ರುವರಿ ಏಳು ಎರಡು ಸಾವಿರದ ಇಪ್ಪತ್ತೆರಡರಿಂದ ಪ್ರಾರಂಭವಾಗಿ ಇಪ್ಪತ್ತೆಂಟು ಫೆಬ್ರವರಿ ಎರಡು ಸಾವಿರದ ಇಪ್ಪತ್ತೆರಡರವರೆಗೆ ಅಭ್ಯರ್ಥಿಗಳು ಆನ್ ಲೈನ್ ಮೂಲಕ ತಮ್ಮ ಅರ್ಜಿಯನ್ನು ಸಲ್ಲಿಸಬಹುದಾಗಿದೆ. ನಿಮಗೂ ಕೂಡ ಕರ್ನಾಟಕ ವಿದ್ಯುತ್ ಪ್ರಸರಣ ನಿಗಮದಲ್ಲಿ ಉದ್ಯೋಗ ಮಾಡುವ ಆಸೆ ಇದ್ದರೆ ನೀವು ಕೂಡ ಒಂದು ಉದ್ಯೋಗಕ್ಕೆ ಅರ್ಜಿಯನ್ನು ಸಲ್ಲಿಸಬಹುದಾಗಿದೆ. ಈ ಮಾಹಿತಿಯನ್ನು ನೀವು ತಿಳಿದುಕೊಳ್ಳುವುದರೊಂದಿಗೆ ನಿಮ್ಮ ಪರಿಚಿತರು ಹಾಗೂ ಸ್ನೇಹಿತರಿಗೂ ತಿಳಿಸಿರಿ.