ನೀರು ಎಲ್ಲ ಜೀವಿಗಳಿಗೆ ಅಗತ್ಯವಾದದ್ದು. ಇದು ಭೂಮಿಯ ಮೇಲ್ಮೈಯ ಶೇಕಡಾ 70 ಭಾಗಗಳಲ್ಲಿ ಕಂಡು ಬರುತ್ತದೆ. ಆದರೆ ಶುದ್ಧವಾದ ಕುಡಿಯಲು ಬಳಸಬಹುದಾದ ನೀರು ಕೇವಲ ಶೇಕಡಾ 3 ರಷ್ಟು ಮಾತ್ರವೇ ಲಭ್ಯವಿರುತ್ತದೆ. ನೀರಿನ ರಾಸಾಯನಿಕ ಸೂತ್ರ H20. ಎಂದರೆ ಒಂದು ಅಣು ನೀರಿನಲ್ಲಿ ಎರಡು ಜಲಜನಕ ಅಣುಗಳು ಹಾಗೂ ಒಂದು ಆಮ್ಲಜನಕ ಅಣು ಇರುತ್ತವೆ. ಹಾಗೆಯೇ ಕುಡಿಯಲು ನೀರು ಬೇಕೇ ಬೇಕು. ಆದ್ದರಿಂದ ನಾವು ಇಲ್ಲಿ ನಮ್ಮ ದೇಹಕ್ಕೆ ದಿನಕ್ಕೆ ಎಷ್ಟು ನೀರು ಕುಡಿಯಬೇಕು ಎನ್ನುವುದರ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಿಳಿದುಕೊಳ್ಳೋಣ
ಕರಗುವಿಕೆ, ಆವಿಯಾಗುವಿಕೆ, ಮಳೆ ಮತ್ತು ಹರಿಯುವಿಕೆಗಳ ಕಡೆಯಿಂದ ನೀರು ಒಂದು ರೂಪದಿಂದ ಇನ್ನೊಂದು ರೂಪಾಂತರ ಪಡೆಯುತ್ತಾ ಇರುತ್ತದೆ. ನಮ್ಮ ದೇಹದ ಬಹುತೇಕ ಅಂಶ ನೀರಿನಿಂದ ಕೂಡಿದೆ. ನಮ್ಮ ದೇಹ ಕನಿಷ್ಠ ಶೇಕಡಾ 50-60 ರಷ್ಟು ನೀರಿನಿಂದ ಕೂಡಿದೆ. ಸಾಮಾನ್ಯ ಸ್ಥಿತಿಯಲ್ಲಿ ಇದು ಶೇಕಡಾ 71 ರಷ್ಟಿರುತ್ತದೆ. ದೇಹದ ಎಲ್ಲಾ ಕಾರ್ಯಗಳಿಗೆ ನೀರು ಅಗತ್ಯವಾಗಿ ಬೇಕೇ ಬೇಕು. ದೇಹದ ಎಲ್ಲ ಅಂಗಗಳಿಗೂ ನೀರು ಪೂರೈಕೆಯಾಗದೆ ಇದ್ದರೆ ಅಂಗಗಳು ಒಣಗತೊಡುಗುತ್ತವೆ. ಪ್ರತಿ ಅಂಗಾಂಶ ಕಾರ್ಯನಿರ್ವಹಿಸಲು ನೀರು ಬೇಕು.
ರಕ್ತದ ಮೂಲಕ ಪೋಷಕಾಂಶಗಳು ಮತ್ತು ಆಮ್ಲಜನಕವನ್ನು ಕೊಂಡೊಯ್ಯಲೂ ನೀರು ಬೇಕು. ಒಂದು ದಿನಕ್ಕೆ ಕನಿಷ್ಠ 8 ಲೋಟ ನೀರನ್ನು ಕುಡಿಯಬೇಕು ಅಂದರೆ 2 ಲೀಟರ್ ನಷ್ಟು. ಯು.ಎಸ್.ನ್ಯಾಷನಲ್ ಆಕಾಡೆಮಿಕ್ಸ್ ಆಫ್ ಸೈನ್ಸ್, ಇಂಜಿನಿಯರಿಂಗ್ ಮತ್ತು ಮೆಡಿಸಿನ್ ಪ್ರಕಾರ ಗಂಡಸರು 15.5 ಲೋಟ ಅಂದರೆ 3.7 ಲೀಟರ್ ನೀರನ್ನು ಪ್ರತಿದಿನ ಕುಡಿಯಬೇಕು ಮತ್ತು ಹೆಂಗಸರು 11.5 ಲೋಟ ಅಂದರೆ 2.7 ಲೀಟರ್ ನೀರನ್ನು ಪ್ರತಿದಿನ ಕುಡಿಯಬೇಕು. ಪ್ರತಿ ದಿನ ನಾವು ಇದೇ ರೀತಿಯಲ್ಲಿ ನೀರು ಕುಡಿದರೆ ನಮ್ಮ ದೇಹದ ಜೀರ್ಣಶಕ್ತಿ ಸಮತೋಲನದಲ್ಲಿರುತ್ತದೆ.
ಯೋಗಾಸನ ಅಥವಾ ವ್ಯಾಯಾಮ ಮಾಡುವವರು ನೀರನ್ನು ಹೆಚ್ಚಾಗಿ ಕುಡಿಯಬೇಕು. ಏಕೆಂದರೆ ಯೋಗಾಸನ ಅಥವಾ ವ್ಯಾಯಾಮ ಮಾಡಿದಾಗ ಬೆವರಿನ ಮೂಲಕ ನಮ್ಮ ದೇಹದಲ್ಲಿರುವ ನೀರಿನ ಅಂಶ ಕಡಿಮೆಯಾಗಿರುತ್ತದೆ. ಹಾಗಾಗಿ ಯೋಗಾಸನ ಅಥವಾ ವ್ಯಾಯಾಮ ಮಾಡುವ ಮುಂಚೆ ಅಥವಾ ನಂತರ ನೀರನ್ನು ಕುಡಿಯಬೇಕು. ವಾತಾವರಣವು ಹೆಚ್ಚು ಉಷ್ಣತೆಯಿಂದ ಕೂಡಿದ್ದರೆ ನೀರನ್ನು ಹೆಚ್ಚು ಸೇವಿಸಬೇಕು. ನೀರನ್ನು ಹೆಚ್ಚು ಸೇವಿಸುವುದರಿಂದ ಮಲಬದ್ಧತೆ, ಗ್ಯಾಸ್ಟ್ರಿಕ್, ಆಸಿಡಿಟಿ ಇಂತಹ ರೋಗಗಳು ಬರುವುದಿಲ್ಲ. ಶ್ರೀ ಶಿರಡಿ ಸಾಯಿಬಾಬಾ ಜ್ಯೋತಿಷ್ಯ ಶಾಸ್ತ್ರಂ ನಂಬಿ ಕರೆ ಮಾಡಿದವರಿಗೆ ವಿಶೇಷ ಸಾಂತ್ವಾನ, ಸಮಸ್ಯೆ ಸಮಸ್ಯೆ ಸಮಸ್ಯೆ ಚಿಂತಿಸಬೇಡಿ, ಅಸಾಧ್ಯವಾದದ್ದು ಇಲ್ಲಿ ಸಾಧ್ಯ ಸಮಸ್ಯೆಗಳಾದ ವಿದ್ಯೆ ಉದ್ಯೋಗ ವ್ಯಾಪಾರ ಆರೋಗ್ಯ ದಾಂಪತ್ಯ ಗಂಡ-ಹೆಂಡತಿಯರ ಕಲಹ ಪ್ರೀತಿಯಲ್ಲಿ ನಂಬಿ ಮೋಸ ಇಷ್ಟಪಟ್ಟವರು ನಿಮ್ಮಂತೆ ಆಗಲು ಕೋರ್ಟ್ ಕೇಸ್ ಜಮೀನು ಸ್ತ್ರೀ ಮತ್ತು ಪುರುಷ ವಶೀಕರಣ ಶತ್ರು ಕಾಟ ಮಾಟ-ಮಂತ್ರ ಇನ್ನು ಮುಂತಾದ ಸಮಸ್ಯೆಗಳಿಗೆ ಅತಿ ಶೀಘ್ರದಲ್ಲಿ ಪರಿಹಾರಅಸಾಧ್ಯ ಆಗುವ ಸಮಸ್ಯೆಗಳಿಗೆ ಸಾಧ್ಯವಾಗಿ ತೋರಿಸುವುದು ಶ್ರೀ ಶಿರಡಿ ಸಾಯಿಬಾಬಾ ಜ್ಯೋತಿಷ್ಯಶಾಸ್ತ್ರನಿಮ್ಮ ನಂಬಿಕೆಗೆ ಇಲ್ಲಿ ಮೋಸವಿಲ್ಲ 9611844430