WhatsApp Group Join Now
Telegram Group Join Now

ನಾವಿಂದು ನಿಮಗೆ ಕೆಲವು ಆಶ್ಚರ್ಯವೆನಿಸುವ ಘಟನೆಗಳ ಬಗ್ಗೆ ತಿಳಿಸಿಕೊಡುತ್ತೇವೆ. ಮೊದಲನೆಯದಾಗಿ ಬುಲೇಟ್ ಹೇಗೆ ಕೆಲಸ ಮಾಡುತ್ತದೆ ಗೊತ್ತಾ ನೀವೆಲ್ಲರೂ ಸಾಮಾನ್ಯವಾಗಿ ಬುಲೇಟ್ ನೋಡಿರುತ್ತೀರಿ ಅದರ ಪೂರ್ತಿ ಭಾಗ ಬುಲೇಟ್ ಆಗಿರುವುದಿಲ್ಲ ಅದರ ಕೆಳಭಾಗವನ್ನು ಕ್ಯಾಟ್ರೀಸ್ ಕೇಸ್ ಎಂದು ಕರೆಯುತ್ತಾರೆ ಕ್ಯಾಟ್ರೀಸ್ ಕೇಸ್ನಲ್ಲಿ ಗನ್ ಪೌಡರ್ ಇರುತ್ತದೆ.

ಅಲ್ಲಿ ಒಂದು ಟೈಮರ್ ಇರುತ್ತದೆ ಬುಲೆಟ್ ಅನ್ನು ಫೈಯರ್ ಮಾಡಿದಾಗ ಗನ್ ನಲ್ಲಿರುವ ಪೈರಿಂಗ್ ಪಿನ್ ಟೈಮರ್ ಅನ್ನು ತಗಲುತ್ತದೆ ಆ ರಭಸಕ್ಕೆ ಒಳಗಿನ ಗನ್ ಪೌಡರ್ ಎಲ್ಲವೂ ಅಂಟಿಕೊಳ್ಳುತ್ತದೆ ಆಗ ಒಂದು ರಭಸ ಉಂಟಾಗಿ ಅದು ಬುಲೆಟ್ ಅನ್ನು ಮುಂದಕ್ಕೆ ದೂಡುತ್ತದೆ. ಮತ್ತು ಉಳಿದ ಕ್ಯಾಟ್ರೀಸ್ ಕೇಸ್ ಕೆಳಗಡೆ ಬೀಳುತ್ತದೆ ನೀವು ಇದನ್ನು ನೀವು ಸಿನಿಮಾದಲ್ಲಿ ನೋಡಿರುತ್ತೀರಿ.

ಎರಡನೆಯ ಘಟನೆ ಸೋಲೋ ಗಮಿ. ಸೋಫಿ ಟರ್ನರ್ ಎಂಬ ಮಹಿಳೆ ತಾನು ಮದುವೆ ಮಾಡಿಕೊಂಡರೆ ಗಂಡನ ಜೊತೆ ಜಗಳ ಮಾಡಬೇಕಾಗುತ್ತದೆ ಎಂದು ಭಯ ಪಟ್ಟುಕೊಳ್ಳುತ್ತಾಳೆ. ಆದರೂ ಕೂಡ ಧೈರ್ಯ ತಂದುಕೊಂಡು ಮದುವೆಯಾಗುತ್ತಾಳೆ ಆದರೆ ಯಾರನ್ನು ಮದುವೆಯಾಗುತ್ತಾಳೆ ಎಂದರೆ ತನ್ನನ್ನು ತಾನೇ ಮದುವೆಯಾಗುತ್ತಾಳೆ ಇದನ್ನು ಸೋಲೋ ಗಮಿ ಎಂದು ಕರೆಯುತ್ತಾರೆ.

ಆದರೆ ಆ ಮಹಿಳೆ ಎರಡು ವರ್ಷಗಳ ನಂತರ ತನಗೆ ತಾನೇ ಡೈವರ್ಸ್ ಕೊಟ್ಟುಕೊಳ್ಳುತ್ತಾಳೆ ಮತ್ತೊಬ್ಬ ವ್ಯಕ್ತಿಯನ್ನು ಮದುವೆಯಾಗುತ್ತಾಳೆ ಮತ್ತೆ ಎರಡು ವರ್ಷಗಳ ನಂತರ ಆ ವ್ಯಕ್ತಿ ಆಕೆಗೆ ವಿಚ್ಛೇದನ ನೀಡಿ ಆತನು ಕೂಡ ಸೋಲೋ ಗಮಿ ಮಾಡಿಕೊಳ್ಳುತ್ತಾನೆ. ಮೂರನೇ ಘಟನೆ 1979 ರಲ್ಲಿ ಒಂದು ಸಂಜೆ ಆರು ಗಂಟೆಗೆ ಉತ್ತರ ಪ್ರದೇಶದ ಉತ್ತರ ಹಾರ ಪೊಲೀಸ್ ಠಾಣೆಗೆ ಒಬ್ಬ ರೈತನ ಹಸು ಕಳೆದುಹೋಗಿದೆ ಎಂದು ಕಂಪ್ಲೇಂಟ್ ಕೊಡುವುದಕ್ಕೆ ಬರುತ್ತಾನೆ.

ಆದರೆ ಪೊಲೀಸ್ ಠಾಣೆಯ ಒಳಗಿನ ಪೊಲೀಸರು ರಿಪೋರ್ಟ್ ತೆಗೆದುಕೊಳ್ಳುವುದಿಲ್ಲ ಅವನಿಗೆ ಕಾಯುವಂತೆ ತಿಳಿಸುತ್ತಾರೆ. ಕೆಲಸಮಯದ ನಂತರ ಒಬ್ಬ ಕಾನ್ಸ್ಟೇಬಲ್ ಬಂದು ನಿಮ್ಮನ್ನು ಇನ್ಸ್ಪೆಕ್ಟರ್ ಕರೆಯುತ್ತಿದ್ದಾರೆ ಎಂದು ಹೇಳುತ್ತಾನೆ ಆಗ ಆ ರೈತ ಸರಿ ಎಂದು ಒಳಗೆ ಹೋಗುತ್ತಾನೆ ಇನ್ಸ್ಪೆಕ್ಟರ್ ಐದಾರು ಪ್ರಶ್ನೆಗಳನ್ನು ಕೇಳಿ ಆತನಿಗೆ ಬೈದು ರಿಪೋರ್ಟ್ ಬರೆಯುವುದಿಲ್ಲ ಎಂದು ಹೇಳಿ ಕಳಿಸುತ್ತಾರೆ.

ರೈತ ನಿರಾಶೆಯಿಂದ ಪೊಲೀಸ್ ಸ್ಟೇಷನ್ ಇಂದ ಹೊರಗೆ ಬರುತ್ತಾನೆ ಕಾನ್ಸ್ಟೇಬಲ್ ಮತ್ತೆ ರೈತನ ಬಳಿಗೆ ಓಡಿ ಬಂದು ಹೀಗೆ ಹೇಳುತ್ತಾನೆ ಬಾಬಾ ರಿಪೋರ್ಟ್ ಬರೆಯುತ್ತೇನೆ ಆದರೆ ಸ್ವಲ್ಪ ಖರ್ಚು ಬೀಳುತ್ತದೆ ಐವತ್ತು ರೂಪಾಯಿ ಕೊಡುತ್ತೀಯಾ ಎಂದು ಕೇಳುತ್ತಾನೆ. ಈಗ ಆಯ್ತು ನನಗೆ ಹಸು ಮುಖ್ಯ ಎಂದು ರೈತ ಮೂವತ್ತೈದು ರೂಪಾಯಿ ಕೊಡಲು ಒಪ್ಪಿಕೊಳ್ಳುತ್ತಾನೆ. ಕಾನ್ಸ್ಟೇಬಲ್ ರೈತನನ್ನು ಇನ್ಸ್ಪೆಕ್ಟರ್ ಬಳಿ ಕರೆದುಕೊಂಡು ಹೋಗುತ್ತಾನೆ ರಿಪೋರ್ಟನ್ನು ಬರೆದು ಬಾಬಾ ಸಹಿ ಹಾಕುತ್ತೀಯಾ ಅಥವಾ ಅಥವಾ ಹೆಬ್ಬೆಟ್ಟು ಹಾಕುತ್ತೀಯಾ ಎಂದು ರೈತನನ್ನ ಕೇಳುತ್ತಾರೆ.

ರೈತ ಸಹಿ ಮಾಡುತ್ತೇನೆ ಎಂದು ಹೇಳುತ್ತಾನೆ ರೈತನಿಗೆ ರಿಪೋರ್ಟ್ ಪೇಪರ್ ಅನ್ನು ಕೊಡುತ್ತಾರೆ ಆದರೆ ರೈತ ರಿಪೋರ್ಟ್ ಬರೆದ ಪೇಪರ್ ಮೇಲೆ ಸಹಿ ಹಾಕದೆ ಖಾಲಿ ಪೇಪರ್ ಮೇಲೆ ಸಹಿಯನ್ನು ಹಾಕಿ ತನ್ನ ಜೇಬಿನಿಂದ ಸ್ಟ್ಯಾಂಪ್ ತೆಗೆದು ಅದರ ಮೇಲೆ ಸ್ಟ್ಯಾಂಪ್ ಹಾಕುತ್ತಾನೆ ಆಗ ಪೊಲೀಸರು ಇವನ್ಯಾರು ವಿಚಿತ್ರವಾಗಿ ಇದ್ದಾನೆ ಎಂದು ಅವನ ಸಹಿಯನ್ನು ನೋಡುತ್ತಾರೆ. ಆ ಸಹಿಯನ್ನು ನೋಡಿದ ಪೊಲೀಸರು ಒಂದು ಕ್ಷಣ ಗಾಬರಿಯಾಗುತ್ತಾರೆ

ಯಾಕೆಂದರೆ ಅದು ರೈತ ಆಗಿರುವುದಿಲ್ಲ ವೇಷ ಬದಲಾಯಿಸಿಕೊಂಡು ಬಂದು ಅಂದಿನ ಪ್ರಧಾನಮಂತ್ರಿ ಆದಂತಹ ಚೌಧರಿ ಚರಣ್ ಸಿಂಗ್ ಅವರು ಆಗಿರುತ್ತಾರೆ. ಮತ್ತು ಅವರು ಸಹಿ ಮಾಡಿದ ಆ ಪೇಪರ್ ಆ ಪೊಲೀಸ್ ಸ್ಟೇಷನ್ ನ ಸಸ್ಪೆಂಡ್ ಆರ್ಡರ್ ಆಗಿರುತ್ತದೆ. ನಾಲ್ಕನೇ ಘಟನೆ ಮೈಕ್ರೋ ಆರ್ಗೆನಿಸಮ್ಸ್ ಇವು ಬಹಳ ಚಿಕ್ಕದಾಗಿರುತ್ತವೆ ಇವುಗಳನ್ನು ಬರಿಗಣ್ಣಿನಿಂದ ನೋಡುವುದಕ್ಕೆ ಆಗುವುದಿಲ್ಲ. ಇವು ಎಲ್ಲಾ ಕಡೆಗಳಲ್ಲಿ ಇರುತ್ತವೆ.

ಇವು ನಮ್ಮ ದೇಹದ ಮೇಲೆ ಕೂಡ ಇರುತ್ತವೆ ಆದರೆ ನಮ್ಮ ದೇಹದ ಮೇಲೆ ಎಷ್ಟು ಮೈಕ್ರೋ ಆರ್ಗೆನಿಸಮ್ಸ್ ಇರುತ್ತವೆ ಎಂದರೆ ನಮ್ಮ ಪ್ರಪಂಚದ ಒಟ್ಟು ಜನಸಂಖ್ಯೆಗಿಂತ ಹೆಚ್ಚಿರುತ್ತವೆ ಅಂದರೆ ನಮ್ಮ ದೇಹದ ಮೇಲೆ ಹತ್ತರಿಂದ ಹನ್ನೊಂದು ಬಿಲಿಯನ್ ಮೈಕ್ರೋ ಆರ್ಗೆನಿಸಮ್ಸ್ ಇರುತ್ತವೆ ನಾವು ಆಹಾರವನ್ನು ಸೇವಿಸುವಾಗ ಕೋಟಿ ಕೋಟಿ ಆರ್ಗೆನಿಸಮ್ಸ್ ನಮ್ಮ ದೇಹವನ್ನು ಸೇರುತ್ತವೆ.

ಐದನೇ ಘಟನೆ ಕೆಲವರ ಹೊಕ್ಕುಳು ಬೇರೆ ರೀತಿಯಲ್ಲಿ ಸ್ವಲ್ಪ ಉದಿಕೊಂಡಿರುತ್ತವೆ. ಅದನ್ನ ಅಂಬ್ಲಿಕಲ್ ಹರ್ನಿಯಾ ಎಂದು ಕರೆಯುತ್ತಾರೆ ಅದು ಯಾಕೆ ಬರುತ್ತದೆ ಎಂದರೆ ಹೆರಿಗೆ ಸಮಯದಲ್ಲಿ ವೈದ್ಯರು ಕೆಲವೊಮ್ಮೆ ತಾಯಿಯೊಂದಿಗೆ ಸೇರಿರುವ ಅಂಬ್ಲಿಕಲ್ ಕಾರ್ಡನ್ನು ಸರಿಯಾಗಿ ಕತ್ತರಿಸುವುದಿಲ್ಲ ಹೀಗೆ ಸರಿಯಾಗಿ ಕತ್ತರಿಸದ ಕಾರ್ಡ್ ಸ್ವಲ್ಪ ಹೊರಗೆ ಬೆಳೆಯುತ್ತದೆ. ಆದರೆ ಇದರಿಂದ ಯಾವುದೇ ರೀತಿಯ ಸಮಸ್ಯೆ ಬರುವುದಿಲ್ಲ ಕೆಲವು ಜನರಿಗೆ ಇದು ಅಲರ್ಜಿ ಎನಿಸುತ್ತದೆ. ಇದರಿಂದ ಹೆಚ್ಚಿನ ಸಮಸ್ಯೆ ಉಂಟಾದರೆ ಸರ್ಜರಿ ಮೂಲಕ ಅದನ್ನು ಸರಿ ಮಾಡಿಸಿಕೊಳ್ಳಬಹುದು.

ಆರನೇ ಘಟನೆ ಜಿಯೋ. ಮೊದಲೆಲ್ಲಾ ಒಂದು ಜಿಬಿ ಡಾಟಾವನ್ನು ಒಂದು ತಿಂಗಳವರೆಗೆ ಬಳಸುತ್ತಿದ್ದೆವು ಅಂತಹದ್ದನ್ನು ಒಂದು ದಿನಕ್ಕೆ ಒಂದು ಜಿಬಿ ಡೇಟಾವನ್ನು ಬಳಸುವಂತೆ ಜಿಯೋ ಮಾಡಿದೆ. ಜಿಯೋ ಭಾರತದಲ್ಲಿ ಮಾಡಿದ ರೆವಲೂಷನ್ ಬಗ್ಗೆ ಎಲ್ಲರಿಗೂ ಗೊತ್ತು ಆದರೆ ನೀವು ಗಮನಿಸಿದರೆ ಇತ್ತೀಚಿನ ದಿನಗಳಲ್ಲಿ ಜಿಯೋ ಇಂಟರ್ನೆಟ್ ಸ್ಪೀಡ್ ಕಡಿಮೆಯಾಗಿದೆ ಎಂದು ತುಂಬಾ ಆರೋಪಗಳು ಕೇಳಿಬರುತ್ತಿವೆ ಇದಕ್ಕೆ ಅನೇಕ ಕಾರಣಗಳಿವೆ ನಮಗೆಲ್ಲರಿಗೂ ತಿಳಿದಿರುವ ಪ್ರಕಾರ ಜನರು ಹೆಚ್ಚಾದಂತೆ ಎಲ್ಲರೂ ಕೂಡ ಇಂಟರ್ನೆಟ್ ಅನ್ನು ಬಳಸುತ್ತಾರೆ.

ಒಬ್ಬರು ಇಂಟರ್ನೆಟ್ ಬಳಸುವ ಪ್ರದೇಶದಲ್ಲಿ ಈಗ ನಾಲ್ಕು ಜನ ಬಳಕೆ ಮಾಡುತ್ತಾರೆ ಆದರೆ ಈ ಬೆಳವಣಿಗೆಗೆ ತಕ್ಕಂತೆ ಅವರು ಫೋರ್ ಜಿ ಸ್ಪೀಡನ್ನು ಬೆಳವಣಿಗೆ ಮಾಡಲಿಲ್ಲ. ಮುಂದಿನ ದಿನಗಳಲ್ಲಿ ಭಾರತದಲ್ಲಿ ಫೈಜಿ ಬರಲಿದೆ ಆ ಕಾರಣಕ್ಕಾಗಿ ಫೋರ್ ಜಿ ನೆಟ್ವರ್ಕ್ ಅನ್ನು ಸುಧಾರಿಸುವುದಕ್ಕೆ ಅಷ್ಟು ಗಮನ ಹರಿಸುತ್ತಿಲ್ಲ ಆ ಕಾರಣದಿಂದಾಗಿ ಜಿಯೋ ನೆಟ್ವರ್ಕ್ ವಿಧಾನವಾಗಿದೆ.

ಏಳನೇ ಘಟನೆ ಒಬ್ಬ ತಂದೆ ತನ್ನ ಸ್ವಂತ ಮಗಳನ್ನ ಮಣ್ಣಿನಿಂದ ಮುಚ್ಚಿದ್ದಾನೆ ಯಾಕೆ ಏನಾಯಿತು ಎಂದರೆ ಸಾವಿರದ ಓಂಬೈನೂರಾ ತೊಂಬತ್ತೆಂಟರಲ್ಲಿ ವೆಸ್ಟರ್ನ್ ಆಸ್ಟ್ರೇಲಿಯಾದಲ್ಲಿ ಮ್ಯಾಥ್ಯೂ ಮೈಕಲ್ ಎಂಬ ತಂದೆ ತನ್ನ ಮಗಳೊಂದಿಗೆ ಹೈವೇಯಲ್ಲಿ ಪ್ರಯಾಣಿಸುತ್ತಿದ್ದಾಗ ಮಗಳು ಅಪ್ಪ ಮರುಭೂಮಿಯಿಂದ ಹೋಗೋಣ ಗಾಡಿಯನ್ನು ಬಲಕ್ಕೆ ತಿರುಗಿಸು ಎಂದು ಹೇಳುತ್ತಾಳೆ ತಂದೆಯು ಕೂಡ ಮಗಳ ಆಸೆಯಂತೆ ಮರುಭೂಮಿಯಲ್ಲಿ ಹೋಗುವುದಕ್ಕಾಗಿ ಗಾಡಿಯನ್ನು ಬಲಗಡೆಗೆ ತಿರುಗಿಸುತ್ತಾನೆ.

ಮರುಭೂಮಿಗೆ ಹೋದ ತಕ್ಷಣ ಅವರು ಕಾರು ಒಂದು ಕಡೆ ಸಿಕ್ಕಿ ಹಾಕಿಕೊಳ್ಳುತ್ತದೆ ಕಾರಿನ ಎರಡು ಟೈಯರ್ ಗಳು ಕೂಡಾ ಪಂಚರ್ ಆಗಿರುತ್ತದೆ. ಆದರೆ ಹೇಗಾದರೂ ಮಾಡಿ ಹೊರಗಡೆ ಹೋಗಲೇ ಬೇಕಾಗಿರುತ್ತದೆ ಹಾಗಾಗಿ ಗಾಡಿಯನ್ನು ತಳ್ಳಿಕೊಂಡು ಸ್ವಲ್ಪ ದೂರ ಹೋಗುತ್ತಾರೆ ಆದರೆ ತಾಪಮಾನ ಹೆಚ್ಚಾದಂತೆ ಎಂಜಿನ್ ಸುಟ್ಟು ಕಾರಿಗೆ ಬೆಂಕಿ ಹತ್ತಿಕೊಳ್ಳುತ್ತದೆ ನಂತರ ಅವರ ಬಳಿ ಕುಡಿಯುವುದಕ್ಕೆ ತುಂಬಾ ಕಡಿಮೆ ನೀರು ಇರುತ್ತದೆ.

ಅದನ್ನು ನಾಲ್ಕೈದು ದಿನಗಳವರೆಗೆ ಕುಡಿದು ಎಲೆಗಳನ್ನು ತಿಂದು ಕೊಂಡು ಅವರು ತಮ್ಮ ಪ್ರಯಾಣವನ್ನು ಮುಂದುವರೆಸುತ್ತಾರೆ ಐದನೇ ದಿನ ಅವರ ಬಳಿ ಕುಡಿಯುವುದಕ್ಕೆ ನೀರು ಇರುವುದಿಲ್ಲ ನೀರು ಕುಡಿಯದೆ ಇರುವುದರಿಂದ ಆತನ ಮಗಳಿಗೆ ನಡೆಯುವುದಕ್ಕೆ ಸಾಧ್ಯವಾಗುವುದಿಲ್ಲ ಆಗ ಮ್ಯಾಥ್ಯು ತನ್ನ ಮಗಳ ಬಾಯಾರಿಕೆಯನ್ನು ನಿವಾರಿಸುವುದಕ್ಕೆ ತನ್ನ ಕೈಯನ್ನ ಕೊಯ್ದುಕೊಂಡು ತನ್ನ ರಕ್ತವನ್ನು ಮಗಳಿಗೆ ಕುಡಿಸಬೇಕು ಹೇಗಾದರೂ ಮಾಡಿ ತನ್ನ ಮಗಳನ್ನು ಬದುಕಿಸಿಕೊಳ್ಳಬೇಕು ಎಂದು ಯೋಚನೆ ಮಾಡುತ್ತಾನೆ.

ಆಗ ಮಗಳು ತನ್ನನ್ನು ಕರೆದಿದ್ದರಿಂದ ಸುಮ್ಮನಾಗುತ್ತಾನೆ ಸ್ವಲ್ಪ ದೂರ ನಡೆದುಕೊಂಡು ಹೋದ ಬಳಿಕ ಅವರಿಗೆ ಒಂದು ರಸ್ತೆ ಕಾಣಿಸುತ್ತದೆ ಆದರೆ ಅದರ ಮೇಲೆ ಯಾರೂ ಬರುತ್ತಿರುವುದಿಲ್ಲ ನೀರು ಇಲ್ಲದಿರುವ ಕಾರಣ ಕೆಲ ಸಮಯದ ನಂತರ ತನ್ನ ಮಗಳು ಸತ್ತುಹೋಗುತ್ತಾಳೆ ಎಂದು ತಿಳಿದು ಅವನು ಅಲ್ಲಿ ಒಂದು ಗುಂಡಿಯನ್ನು ತೋಡಿ ಮಗಳನ್ನು ಅಲ್ಲಿ ಮಲಗಿಸಿ ಅದರ ಮೇಲೆ ಮಣ್ಣಿನ್ನು ಮುಚ್ಚುತ್ತಾನೆ. ಆ ಸಮಯದಲ್ಲಿ ಅಲ್ಲಿಗೆ ಒಂದು ವಾಹನ ಬರುತ್ತದೆ ಮೈಕಲ್ ಕಷ್ಟಪಟ್ಟು ವಾಹನವನ್ನು ನಿಲ್ಲಿಸಿ ತಮಗೆ ಸಹಾಯ ಮಾಡುವಂತೆ ಕೇಳಿಕೊಳ್ಳುತ್ತಾನೆ ಆ ವ್ಯಕ್ತಿಗೆ ಇವರ ಪರಿಸ್ಥಿತಿ ಅರ್ಥವಾಗುತ್ತದೆ ಅವನು ಇವರಿಗೆ ನೀರನ್ನ ಕೊಡುತ್ತಾನೆ ಅವರು ಎಂಟು ದಿನಗಳ ನಂತರ ಮರುಭೂಮಿಯಿಂದ ಹೊರಗೆ ಬೀಳುತ್ತಾರೆ. ಇದಿಷ್ಟು ನಾವಿಂದು ನಿಮಗೆ ತಿಳಿಸುತ್ತಿರುವ ಕೆಲವೊಂದು ಆಶ್ಚರ್ಯಕರ ಘಟನೆಗಳಾಗಿವೆ.

WhatsApp Group Join Now
Telegram Group Join Now

By

Leave a Reply

Your email address will not be published. Required fields are marked *

error: Content is protected !!
Footer code: