ಮಲೆನಾಡುಗಳಲ್ಲಿ ತೆಂಗಿನಮರಗಳಿಲ್ಲದ ಮನೆ ತೆಂಗಿನಕಾಯಿ ಇಲ್ಲದ ಅಡುಗೆ ಇರಲಾರದು. ಪ್ರತಿದಿನ ಅಡುಗೆಗೆ ಬೇಕಾಗಿರುವ ತೆಂಗಿನಕಾಯಿಯನ್ನು ಬಹಳ ದಿನಗಳವರೆಗೆ ಹಾಳಾಗದಂತೆ ಇಟ್ಟುಕೊಳ್ಳುವುದು ಹೇಗೆ ಎಂಬುದನ್ನು ಸಂಪೂರ್ಣವಾಗಿ ಈ ಲೇಖನದಲ್ಲಿ ನೋಡೋಣ.
ತೆಂಗಿನಕಾಯಿಯನ್ನು ಒಡೆದ ನಂತರ ಬೇಗನೆ ಅಡುಗೆಗೆ ಬಳಸಲಾಗುತ್ತದೆ ಇಲ್ಲದಿದ್ದರೆ ಅದು ಹಾಳಾಗುತ್ತದೆ. ಒಡೆದ ತೆಂಗಿನಕಾಯಿಯನ್ನು ತಿಂಗಳುಗಟ್ಟಲೆ ಇಡಬಹುದು. ಮನೆಯಲ್ಲಿ ಬೆಳೆದ ತೆಂಗಿನಕಾಯಿಯನ್ನು ಬಳಸುವವರು ತೆಂಗಿನಕಾಯಿಯ ಸಿಪ್ಪೆ ತೆಗೆಯದೆ ಹಾಗೆಯೆ ಇಡುವುದರಿಂದ ಬಹಳ ದಿನಗಳವರೆಗೆ ಇಡಬಹುದು. ತೆಂಗಿನಕಾಯಿಯ ಒಳಗೆ ನೀರಿದ್ದರೆ ಬಹಳ ದಿನಗಳವರೆಗೆ ಹಾಳಾಗುವುದಿಲ್ಲ. ತೆಂಗಿನಕಾಯಿಯ ಸಿಪ್ಪೆ ತೆಗೆದರೂ ಜುಟ್ಟವನ್ನು ಇಟ್ಟು ಸಿಪ್ಪೆ ತೆಗೆಯಬೇಕು ಹಾಗೂ ನಾರನ್ನು ಹಾಗೆಯೆ ಇಡಬೇಕು ಆಗ ಬಿಸಿಲಿಗೆ ಕಾಯಿ ಒಡೆಯುವುದಿಲ್ಲ ಮತ್ತು ನೀರನ್ನು ಹಿಡಿದಿಟ್ಟುಕೊಳ್ಳುತ್ತದೆ.
ಸಿಪ್ಪೆ ತೆಗೆದಿರುವ ಕಾಯಿಯನ್ನು ಅಂಗಡಿಗಳಲ್ಲಿ ಖರೀದಿಸುವಾಗ ಬಲಿತ ಮತ್ತು ಉದ್ದ ಇರುವ ಕಾಯಿಯನ್ನು ಖರೀದಿಸಬೇಕು. ರೌಂಡ್ ಇರುವ ಕಾಯಿ ಒಳಗೆ ತೆಳು ಇದ್ದು ಹೊರಗೆ ಮಾತ್ರ ದೊಡ್ಡದಾಗಿ ಕಾಣುತ್ತದೆ. ಕಾಯಿಯನ್ನು ಒಡೆಯುವಾಗ ಸರಿಯಾಗಿ ಇಬ್ಭಾಗವಾಗುವಂತೆ ಒಡೆಯಬೇಕು ಅದಕ್ಕಾಗಿ ಒಡೆಯುವ ಮೊದಲು ತೆಂಗಿನಕಾಯಿಗೆ ನೀರು ಹಾಕಬೇಕು ಅಥವಾ ನೀರಿನಲ್ಲಿ 2 ನಿಮಿಷ ನೆನೆಸಿ ತೆಗೆಯಬೇಕು ನಂತರ ಕತ್ತಿಯಲ್ಲಿ ತೆಂಗಿನಕಾಯಿಯ ಮಧ್ಯಭಾಗದಲ್ಲಿ ಹೊಡೆಯಬೇಕು 2-3 ಬಾರಿ ಹೊಡೆದಾಗ ತೆಂಗಿನಕಾಯಿ ಸರಿಯಾಗಿ ಒಡೆಯುತ್ತದೆ. ಕಾಯಿ ಒಡೆಯುವಾಗ ಕೆಳಗಡೆ ಒಂದು ಪಾತ್ರೆಯನ್ನು ಇಟ್ಟುಕೊಳ್ಳುವುದು ಒಳ್ಳೆಯದು ಕಾಯಿ ಒಳಗಿನ ನೀರು ಪಾತ್ರೆಯ ಒಳಗೆ ಬೀಳುತ್ತದೆ. ಒಡೆದ ತೆಂಗಿನಕಾಯಿಯನ್ನು ಒಂದು ಪಾತ್ರೆಯಲ್ಲಿ ನೀರು ಹಾಕಿ ಅದರಲ್ಲಿ ನೆನೆಸಿಡಬೇಕು ಎರಡು ದಿನಕ್ಕೊಮ್ಮೆ ನೀರನ್ನು ಬದಲಾಯಿಸಬೇಕು ಆಗ ಒಡೆದ ತೆಂಗಿನಕಾಯಿ ಹಾಳಾಗದಂತೆ ತಿಂಗಳುಗಟ್ಟಲೆ ಸರಿಯಾಗಿ ಇರುತ್ತದೆ.
ಇನ್ನೊಂದು ವಿಧಾನವೆಂದರೆ ಒಂದು ಕ್ಲೋಸ್ ಮಾಡುವ ಕಂಟೇನರ್ ನಲ್ಲಿ ಒಡೆದ ತೆಂಗಿನಕಾಯಿಯನ್ನು ಇಟ್ಟು ಕ್ಲೋಸ್ ಮಾಡಿ ಫ್ರಿಜ್ ನಲ್ಲಿಟ್ಟರೆ ಬಹಳ ದಿನಗಳವರೆಗೆ ಹಾಳಾಗದಂತೆ ಇರುತ್ತದೆ. ಸಿಪ್ಪೆ ತೆಗೆದ ತೆಂಗಿನಕಾಯಿಯನ್ನು ಒಂದು ಪ್ಲಾಸ್ಟಿಕ್ ಕವರ್ ನಲ್ಲಿ ಹಾಕಿ ಮಡಚಿ ಫ್ರಿಜ್ ನಲ್ಲಿಟ್ಟರೆ ಹಾಳಾಗುವುದಿಲ್ಲ. ತೆಂಗಿನಕಾಯಿಯ ತುರಿಯನ್ನು ಪ್ಲಾಸ್ಟಿಕ್ ಕವರ್ ನಲ್ಲಿ ಹಾಕಿ ರಬ್ಬರ್ ನಿಂದ ಕ್ಲೋಸ್ ಮಾಡಿ ಫ್ರಿಜ್ ನಲ್ಲಿ ಡೀಪ್ ಫ್ರೀಜರ್ ನಲ್ಲಿ ಇಡಬೇಕು ಆಗ ತಿಂಗಳಾನುಗಟ್ಟಲೆ ಕೆಡದಂತೆ ಇಡಬಹುದು. ಬಳಸುವಾಗ ಮೊದಲೆ ತೆಂಗಿನ ಕಾಯಿ ತುರಿಯನ್ನು ಫ್ರಿಜ್ ನಿಂದ ತೆಗೆದಿಡಬೇಕು. ಈ ಮೇಲಿನ ವಿಧಾನಗಳನ್ನು ಅನುಸರಿಸಿದರೆ ಅಡುಗೆಗೆ ಹೆಚ್ಚಾಗಿ ಬಳಸುವ ತೆಂಗಿನಕಾಯಿಯನ್ನು ತಿಂಗಳಾನುಗಟ್ಟಲೆ ಹಾಳಾಗದಂತೆ ಇಟ್ಟುಕೊಳ್ಳಬಹುದು. ಈ ಮಾಹಿತಿಯನ್ನು ತಪ್ಪದೆ ಎಲ್ಲಾ ಮಹಿಳೆಯರಿಗೆ ತಿಳಿಸಿ.